ಜೈಪುರದ ಬಾಲಾಪರಾಧಿ ಗೃಹದ ಕಿಟಕಿ ಒಡೆದು 22 ಕ್ರಿಮಿನಲ್​ಗಳು ಪರಾರಿ

ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ರಾಜ್ಯ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ನಡೆಸುತ್ತಿರುವ ಬಾಲಾಪರಾಧಿಗೃಹದಿಂದ 22 ಅಪ್ರಾಪ್ತರು ಕಿಟಕಿ ಕತ್ತರಿಸಿ ಪರಾರಿಯಾಗಿದ್ದಾರೆ. ಈ ಪೈಕಿ ಎಂಟು ಮಂದಿ ಅತ್ಯಾಚಾರ ಪ್ರಕರಣಗಳು ಮತ್ತು 14 ಕೊಲೆ ಅಥವಾ ಕೊಲೆ ಯತ್ನದಲ್ಲಿ ಭಾಗಿಯಾದ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ.

ಜೈಪುರದ ಬಾಲಾಪರಾಧಿ ಗೃಹದ ಕಿಟಕಿ ಒಡೆದು 22 ಕ್ರಿಮಿನಲ್​ಗಳು ಪರಾರಿ
ಜೈಲು

Updated on: Feb 13, 2024 | 11:50 AM

ರಾಜಸ್ಥಾನದ ರಾಜಧಾನಿ ಜೈಪುರದಲ್ಲಿರುವ ಬಾಲಾಪರಾಧಿ ಗೃಹ(Juvenile Home) ದಿಂದ ಏಕಕಾಲಕ್ಕೆ 22 ಕ್ರಿಮಿನಲ್​ಗಳು ಪರಾರಿಯಾಗಿರುವ ಘಟನೆ ವರದಿಯಾಗಿದೆ. 22 ಮಕ್ಕಳ ಪೈಕಿ 13 ಜನರ ವಿರುದ್ಧ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಇದುವರೆಗೂ ಅವರನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಬೆಳಗಿನ ಜಾವ 4 ರಿಂದ 5 ಗಂಟೆ ವೇಳೆಗೆ ಕಿಟಕಿಯನ್ನು ಒಡೆದು ಪರಾರಿಯಾಗಿದ್ದಾರೆ. ಬಾಲಾಪರಾಧಿಗಳು ಕಟ್ಟಡದ ಕಿಟಕಿಯನ್ನು ಒಡೆದು ಅಲ್ಲಿಂದ ಪರಾರಿಯಾಗಿದ್ದಾರೆ. ವಿಷಯ ತಿಳಿದ ಕೂಡಲೇ ಜೈಲು ಆಡಳಿತ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

ಬಾಲಾಪರಾಗೃಹದ ಅಧಿಕಾರಿಗಳು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ಎಲ್ಲರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಪ್ರತಿಯೊಬ್ಬರ ವಯಸ್ಸು 12 ರಿಂದ 16 ವರ್ಷಗಳು ಎಂದು ಹೇಳಲಾಗುತ್ತದೆ. ಕಬ್ಬಿಣದ ಜಾಲರಿಯನ್ನು ಕತ್ತರಿಸಿ ಮಕ್ಕಳೆಲ್ಲ ಪರಾರಿಯಾಗಿದ್ದಾರೆ.

ಪೊಲೀಸರು ಮಕ್ಕಳ ದಾಖಲಾತಿಗಳನ್ನು ಬಾಲಾಪರಾಧಿಗೃಹದಿಂದ ಪಡೆದುಕೊಂಡಿದ್ದಾರೆ. ಈ ಕುರಿತು ಮಕ್ಕಳ ಮನೆಗಳ ಸುತ್ತಲಿನ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ. ಮಕ್ಕಳ ಪತ್ತೆಗೆ ತಂಡ ರಚಿಸಲಾಗಿದೆ. ಓಡಿಹೋದ ಮಕ್ಕಳು ಸುಮಾರು ಎರಡು ವರ್ಷಗಳಿಂದ ಬಾಲಾಪರಾಧಿಗೃಹದಲ್ಲಿ ವಾಸಿಸುತ್ತಿದ್ದರು.

ಮತ್ತಷ್ಟು ಓದಿ: ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ 4 ಮಹಿಳೆಯರು ಹಿಂಡಲಗಾ ಜೈಲಿಗೆ ಶಿಫ್ಟ್

ಹೊರಗಿನವರು ಮಕ್ಕಳನ್ನು ತಪ್ಪಿಸಿಕೊಳ್ಳಲು ಸಹಾಯ ಮಾಡಿರಬಹುದು
ಪೊಲೀಸರ ಪ್ರಕಾರ, ಈವರೆಗಿನ ತನಿಖೆಯ ಪ್ರಕಾರ ಹೊರಗಿನವರು ಮಕ್ಕಳು ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮೊದಲು ಗ್ಯಾಸ್ ಕಟರ್ ನಿಂದ ಕಿಟಕಿಯ ಸರಳುಗಳನ್ನು ಕತ್ತರಿಸಿದ ಮಕ್ಕಳು ನಂತರ ಓಡಿ ಹೋಗಿದ್ದಾರೆ. ಗ್ಯಾಸ್ ಕಟರ್ ಮಕ್ಕಳಿಗೆ ಹೇಗೆ ತಲುಪಿತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಜುವೆನೈಲ್ ಹೋಮ್‌ನ ಯಾವುದೇ ಉದ್ಯೋಗಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ