ಕೋಟಾ: ನಾಪತ್ತೆಯಾಗಿ 9 ದಿನಗಳ ಬಳಿಕ ಅರಣ್ಯದಲ್ಲಿ ವಿದ್ಯಾರ್ಥಿಯ ಶವ ಪತ್ತೆ

|

Updated on: Feb 20, 2024 | 8:25 AM

ರಾಜಸ್ಥಾನದ ಕೋಟಾದಲ್ಲಿ ಜೆಇಇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ 16 ವರ್ಷದ ವಿದ್ಯಾರ್ಥಿ ರಚಿತ್ ಸೋಂಧಿಯಾ ನಾಪತ್ತೆಯಾದ ಎಂಟು ದಿನಗಳ ನಂತರ ಸಮೀಪದ ಕಾಡಿನಲ್ಲಿ ಶವ ಪತ್ತೆಯಾಗಿದೆ. ಒಂದು ವಾರದಲ್ಲಿ ಇದು ಎರಡನೇ ಪ್ರಕರಣವಾಗಿದೆ. ಕೋಟಾದಲ್ಲಿ ನೀಟ್​ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುತ್ತಿರುವ ಹಲವು ವಿದ್ಯಾರ್ಥಿಗಳು ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಾಗಿದೆ.

ಕೋಟಾ: ನಾಪತ್ತೆಯಾಗಿ 9 ದಿನಗಳ ಬಳಿಕ ಅರಣ್ಯದಲ್ಲಿ ವಿದ್ಯಾರ್ಥಿಯ ಶವ ಪತ್ತೆ
ವಿದ್ಯಾರ್ಥಿ ಸಾವು
Follow us on

ನಾಪತ್ತೆಯಾಗಿ 9 ದಿನಗಳ ಬಳಿಕ ಅರಣ್ಯದಲ್ಲಿ ಕೋಟಾ ವಿದ್ಯಾರ್ಥಿಯ ಶವ ಪತ್ತೆಯಾಗಿದೆ. ಕೋಟಾದಿಂದ ನಾಪತ್ತೆಯಾಗಿದ್ದ 16 ವರ್ಷದ ಪ್ರವೇಶ ತರಬೇತಿ ವಿದ್ಯಾರ್ಥಿಯ ಶವ ಸಮೀಪದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಜಂಟಿ ಪ್ರವೇಶ ಪರೀಕ್ಷೆಗೆ (ಜೆಇಇ) ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿ ರಚಿತ್ ಸೋಂಧಿಯಾ ಫೆಬ್ರವರಿ 11 ರಿಂದ ಕೋಚಿಂಗ್ ಸೆಂಟರ್‌ಗೆ ಹಾಸ್ಟೆಲ್‌ನಿಂದ ಹೊರಟು ನಾಪತ್ತೆಯಾಗಿದ್ದರು.

ಗಾರ್ಡಿಯಾ ಮಹಾದೇವ ಮಂದಿರದ ಬಳಿಯ ಅರಣ್ಯ ಪ್ರದೇಶಕ್ಕೆ ಅವರು ಪ್ರವೇಶಿಸುತ್ತಿರುವುದು ಸಿಸಿಟಿವಿಯಲ್ಲಿ ಕೊನೆಯದಾಗಿ ಸೆರೆಯಾಗಿದೆ.
ಸಿಸಿಟಿವಿ ಫೂಟೇಜ್ ಅವರು ದೇವಾಲಯದ ಪ್ರದೇಶಕ್ಕೆ ಕ್ಯಾಬ್ ತೆಗೆದುಕೊಂಡು ಹೋಗುವುದನ್ನು ತೋರಿಸಿದೆ, ಅಲ್ಲಿಂದ ಅವರು ಕೊನೆಯದಾಗಿ ಅರಣ್ಯ ಪ್ರದೇಶಕ್ಕೆ ಪ್ರವೇಶಿಸುತ್ತಿರುವುದು ಕಂಡುಬಂದಿದೆ ಎಂದು ಪೊಲೀಸರು ಮೊದಲು ತಿಳಿಸಿದ್ದಾರೆ.

ಪೊಲೀಸರು ಸೋಂಧಿಯಾ ಅವರ ಕೊಠಡಿಯಿಂದ ದೇವಸ್ಥಾನಕ್ಕೆ ಹೋಗುವ ಯೋಜನೆಯನ್ನು ಉಲ್ಲೇಖಿಸಿರುವ ಟಿಪ್ಪಣಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಹಿಂದೆ ದೇವಸ್ಥಾನದ ಬಳಿ ಸೋಂಧಿಯಾ ಅವರ ಬ್ಯಾಗ್, ಮೊಬೈಲ್ ಫೋನ್, ಕೊಠಡಿಯ ಕೀಗಳು ಮತ್ತು ಇತರ ವಸ್ತುಗಳು ಪೊಲೀಸರಿಗೆ ಪತ್ತೆಯಾಗಿವೆ.

ಮೂಲತಃ ಮಧ್ಯಪ್ರದೇಶದ ವಿದ್ಯಾರ್ಥಿಯ ಪತ್ತೆಗಾಗಿ ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ತಂಡಗಳಿಂದ ತೀವ್ರ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಸೋಂಡಿಯಾ ಒಂದು ವರ್ಷದಿಂದ ಪ್ರವೇಶ ಕೋಚಿಂಗ್ ಹಬ್‌ನಲ್ಲಿ ಓದುತ್ತಿದ್ದ. ಒಂದು ವಾರದಲ್ಲಿ ಕಂಡುಬಂದ ಎರಡನೇ ಪ್ರಕರಣ ಇದಾಗಿದೆ.

ಮತ್ತಷ್ಟು ಓದಿ: ಕೋಟಾ: ವಿದ್ಯಾರ್ಥಿಗಳ ಆತ್ಮಹತ್ಯೆಗೆ ಪೋಷಕರೇ ಕಾರಣ ಎಂದ ಸುಪ್ರೀಂಕೋರ್ಟ್​

ಅನಾರೋಗ್ಯದಿಂದ ನೀಟ್ ಆಕಾಂಕ್ಷಿ ಸಾವು
ರಾಜಸ್ಥಾನದ ಕೋಟಾದಲ್ಲಿ ನೀಟ್​ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ನಿವಾಸಿ ಶಿವಂ ರಾಘವ ಎಂಬುವವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ಅಧಿಕ ರಕ್ತದೊತ್ತಡ ಮತ್ತು ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಾಗಿದ್ದ ಕಾರಣ ಶಿವಂ ಅವರನ್ನು ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿವಂ ಅವರು ಕಳೆದ ಮೂರು ವರ್ಷಗಳಿಂದ ಕೋಟಾದಲ್ಲಿ ವಿದ್ಯಾರ್ಥಿ ನಿಲಯದಲ್ಲಿದ್ದುಕೊಂಡು ನೀಟ್​ಗೆ ತಯಾರಿ ನಡೆಸುತ್ತಿದ್ದರು. ಕೋಟಾದಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಮೃತಪಟ್ಟ ಎರಡನೇ ವಿದ್ಯಾರ್ಥಿ ಇವರಾಗಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ