India Weather: ದೆಹಲಿ, ಪಂಜಾಬ್, ಬಿಹಾರದಲ್ಲಿ ಮುಂದಿನ 2 ದಿನ ಸುರಿಯಲಿದೆ ಭಾರಿ ಮಳೆ, ಆರೆಂಜ್ ಅಲರ್ಟ್
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಗಳವಾರ ಮುಂಜಾನೆ ತಾಪಮಾನ ಕುಸಿತ ಕಂಡಿದ್ದು, ಮಧ್ಯರಾತ್ರಿ ನಗರದಲ್ಲಿ ಲಘು ಮಳೆ ಸುರಿದಿದೆ. ಮಂಡಿ ಹೌಸ್, ಆರ್‌ಕೆ ಪುರಂ, ನಿಜಾಮುದ್ದೀನ್ ಮೇಲ್ಸೇತುವೆ ಬಳಿಯ ಇಂದ್ರಪ್ರಸ್ಥ ರಸ್ತೆ ಸೇರಿದಂತೆ ಭೈರೋನ್ ಮಾರ್ ಕಡೆಗೆ, ಕರ್ತವ್ಯ ಪಥ್, ಇತ್ಯಾದಿ ಪ್ರದೇಶಗಳಲ್ಲಿ ಹೊಸ ತುಂತುರು ಮಳೆಯಾಗಿದೆ. ಇನ್ನು ಪಂಜಾಬ್ ಹಾಗೂ ಬಿಹಾರದಲ್ಲಿ ಕೂಡ ಮಳೆಯಾಗಿದೆ.
ದೆಹಲಿ, ಪಂಜಾಬ್, ಬಿಹಾರದಲ್ಲಿ ಮುಂದಿನ 2 ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಹಿಮಾಚಲ ಪ್ರದೇಶದ ಶಿಖರಗಳಲ್ಲಿ ದಿನವಿಡೀ ಭಾರೀ ಹಿಮಪಾತವಾಗಿತ್ತು. ಪಂಜಾಬ್ ಮತ್ತು ಉತ್ತರಾಖಂಡದ ಹೆಚ್ಚಿನ ಪ್ರದೇಶಗಳಲ್ಲಿ ಮಳೆ ಮತ್ತು ಗುಡುಗು ಸಹಿತ ಮಳೆಯಾಗಿದೆ.
ಪಶ್ಚಿಮ ಮತ್ತು ಪೂರ್ವ ರಾಜಸ್ಥಾನ ಮತ್ತು ಪಶ್ಚಿಮ ಉತ್ತರ ಪ್ರದೇಶದ ಕೆಲವು ಪ್ರದೇಶಗಳಲ್ಲಿ ಬಲವಾದ ಗಾಳಿ ಬೀಸಿತು ಮತ್ತು ಕೆಲವು ಸ್ಥಳಗಳಲ್ಲಿ ಮೋಡಕವಿದ ವಾತಾವರಣವಿದೆ. ವಿಶೇಷವಾಗಿ ಮಂಗಳವಾರ, ಪಂಜಾಬ್, ಹರಿಯಾಣ, ಉತ್ತರಾಖಂಡ ಮತ್ತು ಪಶ್ಚಿಮ ಯುಪಿಯಲ್ಲಿ ಕೆಲವು ಸ್ಥಳಗಳಲ್ಲಿ ಮಳೆಯಾಗಬಹುದು ಮತ್ತು ಕೆಲವು ಸ್ಥಳಗಳಲ್ಲಿ ಬಲವಾದ ಗಾಳಿಯೊಂದಿಗೆ ಆಲಿಕಲ್ಲು ಮಳೆ ಬೀಳಬಹುದು ಎಂದು ಹೇಳಲಾಗಿದ್ದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಭಾರೀ ಹಿಮಪಾತದಿಂದಾಗಿ, ಅಟಲ್ ಟನಲ್ ರೋಹ್ಟಾಂಗ್ ಮತ್ತು ಜಲೋರಿ ಪಾಸ್‌ನಲ್ಲಿ ಸೋಮವಾರ ಸಂಚಾರ ಸ್ಥಗಿತಗೊಂಡಿತು. ಲಾಹೌಲ್ ಕಣಿವೆಯಲ್ಲಿ 30 ರಿಂದ 60 ಸೆಂ.ಮೀ ಹಿಮ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಮತ್ತು ಬುಧವಾರದಂದು ಲಾಹೌಲ್‌ನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದೆ. ಹಿಮಾಚಲದ ಹಲವು ಪ್ರದೇಶಗಳಲ್ಲಿ ಹಿಮಕುಸಿತದ ಅಪಾಯವಿದೆ . ರಾಜಧಾನಿ ಶಿಮ್ಲಾ, ಧರ್ಮಶಾಲಾ ಸೇರಿದಂತೆ ರಾಜ್ಯದ ಬಹುತೇಕ ತಗ್ಗು ಪ್ರದೇಶಗಳಲ್ಲಿ ಸೋಮವಾರ ಮಧ್ಯಾಹ್ನ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸಿದೆ. ಮನಾಲಿಯಲ್ಲಿ ಮಳೆ ಸುರಿಯಿತು. ಬಾರಾಮುಲ್ಲಾ ಜಿಲ್ಲೆಯ ಗುಲ್ಮಾರ್ಗ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ಸುಮಾರು 1.5 ಅಡಿಗಳಷ್ಟು ಹಿಮಪಾತವಾಗಿದೆ. ದೆಹಲಿ, ಎನ್ಸಿಆರ್ನಲ್ಲೂ ಮಳೆಯಾಗಲಿದೆ.
ಮತ್ತಷ್ಟು ಓದಿ: India Weather: ಉತ್ತರ ಭಾರತದಲ್ಲಿ ಮುಂದಿನ 3 ದಿನ ಭಾರಿ ಮಳೆಯ ಮುನ್ಸೂಚನೆ
ಕರ್ನಾಟಕ ಹವಾಮಾನ ಕರ್ನಾಟಕದ ವಿಜಯಪುರದಲ್ಲಿ 14.0 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನಲ್ಲಿ ಶುಭ್ರ ಆಕಾಶವಿರಲಿದೆ, ಎಚ್ಎಎಲ್ನಲ್ಲಿ 32.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 16.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 32.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 33.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 17.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 31.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಧಾರವಾಡದಲ್ಲಿ 34.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಹಾವೇರಿಯಲ್ಲಿ 33.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಚಿಕ್ಕಮಗಳೂರಿನಲ್ಲಿ 30.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 14.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ