ರಾಜಸ್ಥಾನದಲ್ಲಿ ಕಾಂಗ್ರೆಸ್ ಕೋಟೆ ಕೆಡವಲು ಪ್ಲ್ಯಾನ್?

|

Updated on: Jul 13, 2020 | 6:46 AM

ದೆಹಲಿ: ಒಂದ್ಕಡೆ ಕೊರೊನಾ ದೇಶವನ್ನೇ ನಡುಗಿಸುತ್ತಿದೆ. ಆದರೆ ಇನ್ನೊಂದು ಕಡೆ ರಾಜಸ್ಥಾನದಲ್ಲಿ ಬೇರೆಯದ್ದೇ ಚಟುವಟಿಕೆ ಆರಂಭವಾಗಿದೆ. ಕೊರೊನಾ ಕಷ್ಟಕಾಲದಲ್ಲೂ ಕಾಂಗ್ರೆಸ್​ಗೆ ಶಾಕ್ ನೀಡಲು ಕಮಲ ಕಲಿಗಳು ದಾಳ ಉರುಳಿಸಿದ್ದಾರೆ. ‘ಕೈ’ಪಡೆಗೆ ಉಳಿದಿರುವ ಕೆಲವೇ ರಾಜ್ಯಗಳ ಪೈಕಿ ರಾಜಸ್ಥಾನವೂ ಈ ಬಾರಿ ಕೈತಪ್ಪಿ ಹೋಗುವ ಆತಂಕ ಎದುರಾಗಿದೆ. ಸತತ 2 ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋಲುಂಡು ಪರಿತಪಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಶಾಕ್ ಮೇಲೆ ಶಾಕ್ ಸಿಗುತ್ತಿದೆ. ಬೆರಳೆಣಿಕೆಯಷ್ಟು ರಾಜ್ಯಗಳಲ್ಲಿ ಅಧಿಕಾರದ ಗದ್ದುಗೆ ಏರಿರುವ ಕಾಂಗ್ರೆಸ್ ಕೈಯಿಂದ ಒಂದೊಂದೇ ರಾಜ್ಯಗಳು […]

ರಾಜಸ್ಥಾನದಲ್ಲಿ ಕಾಂಗ್ರೆಸ್ ಕೋಟೆ ಕೆಡವಲು ಪ್ಲ್ಯಾನ್?
Follow us on

ದೆಹಲಿ: ಒಂದ್ಕಡೆ ಕೊರೊನಾ ದೇಶವನ್ನೇ ನಡುಗಿಸುತ್ತಿದೆ. ಆದರೆ ಇನ್ನೊಂದು ಕಡೆ ರಾಜಸ್ಥಾನದಲ್ಲಿ ಬೇರೆಯದ್ದೇ ಚಟುವಟಿಕೆ ಆರಂಭವಾಗಿದೆ. ಕೊರೊನಾ ಕಷ್ಟಕಾಲದಲ್ಲೂ ಕಾಂಗ್ರೆಸ್​ಗೆ ಶಾಕ್ ನೀಡಲು ಕಮಲ ಕಲಿಗಳು ದಾಳ ಉರುಳಿಸಿದ್ದಾರೆ. ‘ಕೈ’ಪಡೆಗೆ ಉಳಿದಿರುವ ಕೆಲವೇ ರಾಜ್ಯಗಳ ಪೈಕಿ ರಾಜಸ್ಥಾನವೂ ಈ ಬಾರಿ ಕೈತಪ್ಪಿ ಹೋಗುವ ಆತಂಕ ಎದುರಾಗಿದೆ.

ಸತತ 2 ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋಲುಂಡು ಪರಿತಪಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಶಾಕ್ ಮೇಲೆ ಶಾಕ್ ಸಿಗುತ್ತಿದೆ. ಬೆರಳೆಣಿಕೆಯಷ್ಟು ರಾಜ್ಯಗಳಲ್ಲಿ ಅಧಿಕಾರದ ಗದ್ದುಗೆ ಏರಿರುವ ಕಾಂಗ್ರೆಸ್ ಕೈಯಿಂದ ಒಂದೊಂದೇ ರಾಜ್ಯಗಳು ಜಾರಿ ಹೋಗ್ತಿವೆ. ಈ ಪಟ್ಟಿಗೆ ಈಗ ಹೊಸ ಎಂಟ್ರಿಯೇ ರಾಜಸ್ಥಾನ.

ಆಪರೇಷನ್ ಕಮಲಕ್ಕೆ ಬಲಿಯಾಗುತ್ತಾ ಗೆಹ್ಲೋಟ್ ಸರ್ಕಾರ?
ಅಂದಹಾಗೆ ಕೊರೊನಾ ಬಿಕ್ಕಟ್ಟಿನ ನಡುವೆ ಬಿಜೆಪಿ‌ ಮತ್ತೆ ಆಪರೇಷನ್ ಕಮಲಕ್ಕೆ ಸಜ್ಜಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಬಾರಿ ರಾಜಸ್ಥಾನದಲ್ಲಿ ‘ಕೈ’ ಸರ್ಕಾರಕ್ಕೆ ಖೆಡ್ಡಾ ತೋಡಲಾಗಿದೆ ಎನ್ನಲಾಗ್ತಿದೆ.

ಇದಕ್ಕೆ ಪೂರಕವಾಗಿ ಸಚಿನ್ ಪೈಲೆಟ್ ರೊಚ್ಚಿಗೆದ್ದಿದ್ದು ಗೆಹ್ಲೋಟ್ ವಿರುದ್ಧ ಬಂಡಾಯದ ಬಾವುಟ ಹಾರಿಸಿ 30 ಶಾಸಕರ ಜೊತೆ ಮಾಯವಾಗಿದ್ದಾರೆ. ಈಗಾಗ್ಲೇ ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಯಶಸ್ವಿಯಾಗಿ ಆಪರೇಷನ್ ಕಮಲ ನಡೆಸಿ ಅಧಿಕಾರಕ್ಕೆ ಬಂದ ಬಿಜೆಪಿ ಕಣ್ಣು ಸದ್ಯ ರಾಜಸ್ಥಾನದ ಮೇಲೆ ನೆಟ್ಟಿದೆ. ಇದೇ ಕಾರಣಕ್ಕೆ ರಾಜಸ್ಥಾನದಲ್ಲಿ ತಮ್ಮ ಸರ್ಕಾರ ಬೀಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಅಂತಾ ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ.

ಕಾಂಗ್ರೆಸ್ ಶಾಸಕರಿಗೆ ₹15 ಕೋಟಿ ಆಫರ್?
ಅಷ್ಟಕ್ಕೂ ರಾಜಸ್ಥಾನದಲ್ಲಿ ಸಚಿನ್ ಪೈಲಟ್ ಹಾಗೂ ಸಿಎಂ ಅಶೋಕ್ ಗೆಹ್ಲೋಟ್ ನಡುವೆ ಅಸಮಾಧಾನ ಇರೋದು ಹೊಸ ಸುದ್ದಿಯೇನಲ್ಲ. ಯಾಕಂದ್ರೆ ರಾಜಸ್ಥಾನದಲ್ಲಿ ಎದ್ದು, ಬಿದ್ದು ಸರ್ಕಾರ ರಚಿಸಿದ್ದ ಕಾಂಗ್ರೆಸ್ ನಾಯಕರು, ಹಿರಿಯ ಕಾಂಗ್ರೆಸ್ ನಾಯಕ ಗೆಹ್ಲೋಟ್​ಗೆ ಮತ್ತೆ ಮಣೆ ಹಾಕಿದ್ದರು. ಆದ್ರಿದು ಪಕ್ಷದಲ್ಲಿ ಭಿನ್ನಮತ ಭುಗಿಲೇಳುವಂತೆ ಮಾಡಿತ್ತು. ಬೂದಿ ಮುಚ್ಚಿದ ಕೆಂಡದಂತಿದ್ದ ಪರಿಸ್ಥಿತಿ ಇದೀಗ ಸ್ಫೋಟಗೊಂಡಿದೆ.

ಗೆಹ್ಲೋಟ್ ವಿರುದ್ಧ ಪೈಲೆಟ್ ನೇರಾನೇರ ಯುದ್ಧ ಮಾಡಲು ಸಿದ್ಧರಾಗಿದ್ದಾರೆ. ಆದರೆ ಇದರ ಹಿಂದೆ ಬಿಜೆಪಿ ನಾಯಕರ ಕೈವಾಡವಿದೆ, ಆಪರೇಷನ್ ಕಮಲದ ಮೂಲಕ ಸರ್ಕಾರ ಕೆಡವಲಾಗುತ್ತಿದೆ ಅನ್ನೋದು ಕಾಂಗ್ರೆಸ್ ಆರೋಪ. ಅಲ್ಲದೆ ರಾಜಸ್ಥಾನದ ಕಾಂಗ್ರೆಸ್ ಶಾಸಕರಿಗೆ ತಲಾ ₹15 ಕೋಟಿ ರೂಪಾಯಿ ಆಫರ್ ನೀಡಲಾಗಿದೆ ಅಂತಾ ಕೈ’ಪಾಳಯದ ನಾಯಕರು ಗಂಭೀರ ಆರೋಪ ಮಾಡುತ್ತಿದ್ದಾರೆ.

ಸರ್ಕಾರ ಕಾಪಾಡಲು ಸೋನಿಯಾ ಸರ್ಕಸ್!
ಸದ್ಯದ ಬೆಳವಣಿಗೆ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಾಹಿತಿ ಪಡೆದಿದ್ದಾರೆ. ಆದರೆ ಶಾಸಕರೊಂದಿಗೆ ದೆಹಲಿ ತಲುಪಿರುವ ಸಚಿನ್ ಪೈಲಟ್ ಫೋನ್ ಕರೆಗೂ ಉತ್ತರಿಸುತ್ತಿಲ್ಲ. ಸಾಮಾನ್ಯವಾಗಿ ಸುಲಭಕ್ಕೆ ಸಿಗುತ್ತಿದ್ದ ಪೈಲಟ್ ಹತ್ತಾರು ಗಂಟೆಗಳಿಂದ ಕಾಲ್ ರಿಸೀವ್ ಮಾಡುತ್ತಿಲ್ಲ.

ಇದು ಸರ್ಕಾರ ಅಸ್ಥಿರದಲ್ಲಿರುವುದರ ಸೂಚನೆಯೇ ಎಂಬ ಪ್ರಶ್ನೆ ಹುಟ್ಟುಹಾಕುತ್ತಿದೆ. ಮತ್ತೊಂದ್ಕಡೆ ಪೈಲಟ್ ಬಂಡಾಯ ಏಳುತ್ತಿದ್ದಂತೆ ನಿನ್ನೆ ಗೆಹ್ಲೋಟ್ ಸಭೆ ನಡೆಸಿದ್ದಾರೆ. ಜೈಪುರದಲ್ಲಿ 75 ಶಾಸಕರ ಜೊತೆ ಗೆಹ್ಲೋಟ್ ಸಭೆ ನಡೆಸಿದ್ದಾರೆ. ಆದರೆ ಪೈಲಟ್ ಎಲ್ಲಿದ್ದಾರೆ ಅನ್ನೋದರ ಸುಳಿವು ಇನ್ನೂ ಸಿಕ್ಕಿಲ್ಲ.

ಒಟ್ನಲ್ಲಿ ರಾಜಸ್ಥಾನದಲ್ಲಿ ರಾಜಕೀಯ ಸ್ಥಿತಿ ತೀರಾ ಬಿಗಡಾಯಿಸಿದೆ. ಇಷ್ಟೆಲ್ಲದರ ಮಧ್ಯೆ ಇಂದು ಗೆಹ್ಲೋಟ್ ಶಾಸಕಾಂಗ ಸಭೆ ಕರೆದಿದ್ದಾರೆ. ಬಲಾಬಲ ಪ್ರದರ್ಶನ ಮಾಡಲು ಇಂದು ಗೆಹ್ಲೋಟ್​ಗೆ ಅವಕಾಶ ಸಿಗಲಿದ್ದು, ಬಹುತೇಕ ಕಾಂಗ್ರೆಸ್ ಶಾಸಕರು ಕೈಕೊಡುವ ಸಾಧ್ಯತೆ ದಟ್ಟವಾಗಿದೆ‌. ಇನ್ನೊಂದ್ಕಡೆ ಸಚಿನ್ ಪೈಲೆಟ್ ಬಿಜೆಪಿಗೆ ಹೋಗಲು ಕಮಿಟ್ ಆಗಿದ್ದು, ಕಾಂಗ್ರೆಸ್ ಸರ್ಕಾರ ಪತನವಾಗೋದು ಪಕ್ಕಾ ಎಂಬ ಮಾತುಗಳು ಕೇಳಿಬರುತ್ತಿವೆ.

ಆದರೆ ರಾಹುಲ್ ಗಾಂಧಿ ಮಾತ್ರ ಸರ್ಕಾರ ಉಳಿಸಿಕೊಳ್ಳಲು ಶತಾಯಗತಾಯ ಹೋರಾಡ್ತಿದ್ದಾರೆ. ಇನ್ನು 30 ಶಾಸಕರ ಜತೆ ದೆಹಲಿಯಲ್ಲಿರುವ ಸಚಿನ್ ಪೈಲೆಟ್ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದು, ಸಿಎಂ ಸ್ಥಾನ ನೀಡಿದರೆ ಬಿಜೆಪಿಯಲ್ಲೇ ಉಳಿಯುವ ಸಾಧ್ಯತೆ ದಟ್ಟವಾಗಿದೆ. ಬಿಜೆಪಿ ಪ್ಲ್ಯಾನ್ ಈಬಾರಿಯೂ ಸಕ್ಸಸ್ ಆದ್ರೆ, ಕಾಂಗ್ರೆಸ್ ಕೈಯಿಂದ ಮತ್ತೊಂದು ರಾಜ್ಯ ಮಿಸ್ ಆಗೋದು ಪಕ್ಕಾ.

Published On - 6:45 am, Mon, 13 July 20