ರಾಜಸ್ಥಾನದ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾಗೆ 8 ಖಾತೆ; ದಿಯಾ ಕುಮಾರಿ ಹಣಕಾಸು ಸಚಿವೆ

|

Updated on: Jan 05, 2024 | 5:53 PM

ಜೈಪುರದ ಹಿಂದಿನ ರಾಜಮನೆತನಕ್ಕೆ ಸೇರಿದ ಉಪಮುಖ್ಯಮಂತ್ರಿ ದಿಯಾ ಕುಮಾರಿ  ಅವರಿಗೆ ಹಣಕಾಸು ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ಆರು ಇಲಾಖೆಗಳು ಮತ್ತು ಉಪ ಮುಖ್ಯಮಂತ್ರಿ ಪ್ರೇಮ್ ಚಂದ್ ಬೈರ್ವಾ ಅವರಿಗೆ ಉನ್ನತ ಶಿಕ್ಷಣ ಇಲಾಖೆ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸೇರಿದಂತೆ ನಾಲ್ಕು ಇಲಾಖೆ ಜವಾಬ್ದಾರಿ ನೀಡಲಾಗಿದೆ.

ರಾಜಸ್ಥಾನದ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾಗೆ 8 ಖಾತೆ; ದಿಯಾ ಕುಮಾರಿ ಹಣಕಾಸು ಸಚಿವೆ
ಭಜನ್ ಲಾಲ್ ಶರ್ಮಾ
Follow us on

ಜೈಪುರ ಜನವರಿ 05: ರಾಜಸ್ಥಾನದ (Rajasthan) ನೂತನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ (Bhajan Lal Sharma) ಅವರು ಗೃಹ ಸೇರಿದಂತೆ ಎಂಟು ಖಾತೆಗಳ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಹೊಸ ಬಿಜೆಪಿ (BJP) ಆಡಳಿತದಲ್ಲಿ ಯಾರು ಯಾವ ಜವಾಬ್ದಾರಿಗಳನ್ನು ನಿಭಾಯಿಸುತ್ತಾರೆ ಎಂಬುದನ್ನು ರಾಜ್ಯ ಸರ್ಕಾರ ಅಂತಿಮಗೊಳಿಸಿದೆ. ಬಹುತೇಕ ನಾಯಕರು ಮೊದಲ ಬಾರಿಗೆ ಸಚಿವರಾಗಿದ್ದಾರೆ. ಕಾಂಗ್ರೆಸ್ (Congress) ಅನ್ನು ಕೆಳಗಿಳಿಸಿ ಹೊಸ ಬಿಜೆಪಿ ಸರ್ಕಾರ ರಚನೆಯಾದ 15 ದಿನಗಳ ನಂತರ ಖಾತೆಗಳ ಘೋಷಣೆ ಕೂಡ ಬಂದಿದೆ.

ಬಿಜೆಪಿ ಎಚ್ಚರಿಕೆಯಿಂದ ನೀಡಬೇಕಾದ ಜವಾಬ್ದಾರಿಗಳ ಪಟ್ಟಿ ಮಾಡಿದ್ದು, ಅದಕ್ಕಾಗಿಯೇ ಬಹು ನಿರೀಕ್ಷಿತ ಘೋಷಣೆ ಮಾಡಲು ಇಷ್ಟು ಸಮಯ ತೆಗೆದುಕೊಂಡಿತು ಎನ್ನಲಾಗುತ್ತಿದೆ.

ಜೈಪುರದ ಹಿಂದಿನ ರಾಜಮನೆತನಕ್ಕೆ ಸೇರಿದ ಉಪಮುಖ್ಯಮಂತ್ರಿ ದಿಯಾ ಕುಮಾರಿ  ಅವರಿಗೆ ಹಣಕಾಸು ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ಆರು ಇಲಾಖೆಗಳು ಮತ್ತು ಉಪ ಮುಖ್ಯಮಂತ್ರಿ ಪ್ರೇಮ್ ಚಂದ್ ಬೈರ್ವಾ ಅವರಿಗೆ ಉನ್ನತ ಶಿಕ್ಷಣ ಇಲಾಖೆ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸೇರಿದಂತೆ ನಾಲ್ಕು ಇಲಾಖೆ ಜವಾಬ್ದಾರಿ ನೀಡಲಾಗಿದೆ.

ಕ್ಯಾಬಿನೆಟ್ ಸಚಿವ ಕಿರೋಡಿ ಲಾಲ್ ಮೀನಾ ಅವರಿಗೆ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರನ್ನು ಕೈಗಾರಿಕೆ ಮತ್ತು ವಾಣಿಜ್ಯ, ಕ್ರೀಡೆ ಮತ್ತು ಯುವ ವ್ಯವಹಾರಗಳ ಸಚಿವರನ್ನಾಗಿ ಮಾಡಲಾಗಿದೆ.

ಇದನ್ನೂ ಓದಿ:ರಾಜಸ್ಥಾನ ಸಚಿವ ಸಂಪುಟ ವಿಸ್ತರಣೆ: ರಾಜ್ಯವರ್ಧನ್ ರಾಥೋಡ್, ಕಿರೋಡಿ ಲಾಲ್ ಮೀನಾಗೆ ಸಚಿವ ಸ್ಥಾನ 

ಗಜೇಂದ್ರ ಸಿಂಗ್ ಖಿಮ್ಸರ್ ಅವರಿಗೆ ವೈದ್ಯಕೀಯ ಆರೋಗ್ಯ ಮತ್ತು ವಿಜ್ಞಾನ (ಇಎಸ್ಐ) ಮತ್ತು ಮದನ್ ದಿಲಾವರ್ ಶಿಕ್ಷಣ ( ಪ್ರಾಥಮಿಕ ಮತ್ತು ಪ್ರೌಢ), ಸಂಸ್ಕೃತ ಶಿಕ್ಷಣ ಮತ್ತು ಪಂಚಾಯತ್ ರಾಜ್ ಸಚಿವರ ಖಾತೆ ನೀಡಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ