AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಸ್ಥಾನ ಸಚಿವ ಸಂಪುಟ ವಿಸ್ತರಣೆ: ರಾಜ್ಯವರ್ಧನ್ ರಾಥೋಡ್, ಕಿರೋಡಿ ಲಾಲ್ ಮೀನಾಗೆ ಸಚಿವ ಸ್ಥಾನ

ಪ್ರಮಾಣವಚನ ಸ್ವೀಕರಿಸಿದವರಲ್ಲಿ ಕಿರೋಡಿ ಲಾಲ್ ಮೀನಾ, ರಾಜ್ಯವರ್ಧನ್ ಸಿಂಗ್ ರಾಥೋಡ್ ಮತ್ತು ಗಜೇಂದ್ರ ಸಿಂಗ್ ಖಿಮ್ಸರ್ ಸೇರಿದ್ದಾರೆ. ಜೈಪುರದ ರಾಜಭವನದಲ್ಲಿ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರು ಬಿಜೆಪಿ ಶಾಸಕರಿಗೆ ಪ್ರಮಾಣ ವಚನ ಬೋಧಿಸಿದ್ದು, 22 ಶಾಸಕರು ಸಚಿವರಾಗಿ ಸಂಪುಟಕ್ಕೆ ಸೇರ್ಪಡೆ ಆಗಿದ್ದಾರೆ.

ರಾಜಸ್ಥಾನ ಸಚಿವ ಸಂಪುಟ ವಿಸ್ತರಣೆ: ರಾಜ್ಯವರ್ಧನ್ ರಾಥೋಡ್, ಕಿರೋಡಿ ಲಾಲ್ ಮೀನಾಗೆ ಸಚಿವ ಸ್ಥಾನ
ರಾಜಸ್ಥಾನ ಸಚಿವ ಸಂಪುಟ ವಿಸ್ತರಣೆ
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on:Dec 30, 2023 | 5:38 PM

Share

ದೆಹಲಿ ಡಿಸೆಂಬರ್ 30: ರಾಜಸ್ಥಾನದಲ್ಲಿ (Rajasthan)ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಸುಮಾರು ಒಂದು ತಿಂಗಳ ನಂತರ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ (Bhajan Lal Sharma)ಅವರ ಸಂಪುಟಕ್ಕೆ (Rajasthan cabinet) ಶನಿವಾರ 22 ಶಾಸಕರು ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರಲ್ಲಿ 12 ಮಂದಿ ಸಂಪುಟ ಸಚಿವರಾಗಿ, ಐವರು ರಾಜ್ಯ ಸಚಿವರಾಗಿ (ಸ್ವತಂತ್ರ ಉಸ್ತುವಾರಿ) ಮತ್ತು ಐವರು ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣವಚನ ಸ್ವೀಕರಿಸಿದವರಲ್ಲಿ ಕಿರೋಡಿ ಲಾಲ್ ಮೀನಾ, ರಾಜ್ಯವರ್ಧನ್ ಸಿಂಗ್ ರಾಥೋಡ್ ಮತ್ತು ಗಜೇಂದ್ರ ಸಿಂಗ್ ಖಿಮ್ಸರ್ ಸೇರಿದ್ದಾರೆ. ಜೈಪುರದ ರಾಜಭವನದಲ್ಲಿ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರು ಬಿಜೆಪಿ ಶಾಸಕರಿಗೆ ಪ್ರಮಾಣ ವಚನ ಬೋಧಿಸಿದರು. ಹಿಂದಿನ ದಿನ, ಭಜನ್ ಲಾಲ್ ಶರ್ಮಾ ಅವರು ರಾಜಭವನದಲ್ಲಿ ಮಿಶ್ರಾ ಅವರನ್ನು ಭೇಟಿ ಮಾಡಿ, ಪ್ರಮಾಣವಚನ ಸಮಾರಂಭಕ್ಕೆ ಅನುಮತಿ ಕೋರಿದ್ದರು.

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಶಾಸಕರ ಪಟ್ಟಿ

ಕಿರೋಡಿ ಲಾಲ್ ಮೀನಾ, ಮದನ್ ದಿಲಾವರ್, ರಾಜ್ಯವರ್ಧನ್ ಸಿಂಗ್ ರಾಥೋಡ್, ಗಜೇಂದ್ರ ಸಿಂಗ್ ಖಿಮ್ಸರ್, ಬಾಬುಲಾಲ್ ಖರಾಡಿ,ಜೋಗರಾಮ್ ಪಟೇಲ್, ಸುರೇಶ್ ಸಿಂಗ್ ರಾವತ್, ಅವಿನಾಶ್ ಗೆಹ್ಲೋಟ್,ಜೋರಾರಾಮ್ ಕುಮಾವತ್, ಹೇಮಂತ್ ಮೀನಾ, ಕನ್ಹಯ್ಯಾ ಲಾಲ್ ಚೌಧರಿ,  ಸುಮಿತ್ ಗೋದಾರ

ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದವರು (ಸ್ವತಂತ್ರ ಉಸ್ತುವಾರಿ):

ಸಂಜಯ್ ಶರ್ಮಾ, ಗೌತಮ್ ಕುಮಾರ್,ಜಬರ್ ಸಿಂಗ್ ಖರ್ರಾ, ಸುರೇಂದ್ರ ಪಾಲ್ ಸಿಂಗ್, ಹೀರಾಲಾಲ್ ನಗರ

ಅದೇ ವೇಳೆ ಒಟ್ಟಾರಂ ದೇವಸಿ, ಮಂಜು ಬಾಗ್ಮಾರ್, ವಿಜಯ್ ಸಿಂಗ್ ಚೌಧರಿ, ಕೆ ಕೆ ಬಿಷ್ಣೋಯ್ ಮತ್ತು ಜವಾಹರ್ ಸಿಂಗ್ ಬೇಡಮ್ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಡಿಸೆಂಬರ್ 3 ರಂದು ರಾಜಸ್ಥಾನ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, 199 ಕ್ಷೇತ್ರಗಳಲ್ಲಿ ಬಿಜೆಪಿ 115 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪಕ್ಷವು ಶಾಸಕಾಂಗ ಸಭೆಗೆ ಹೊಸಬರಾದ ಶರ್ಮಾ ಅವರನ್ನು ಮುಖ್ಯಮಂತ್ರಿಯನ್ನಾಗಿ ಹೆಸರಿಸಿತು. ಡಿಸೆಂಬರ್ 12 ರಂದು ಅವರ ಉಪಮುಖ್ಯಮಂತ್ರಿ ಆಗಿ ದಿಯಾ ಕುಮಾರಿ ಮತ್ತು ಪ್ರೇಮ್ ಚಂದ್ ಬೈರ್ವಾ ಅವರನ್ನು ನೇಮಿಸಿತು.

ಇದನ್ನೂ ಓದಿ:ಕಾರವಾರಕ್ಕೆ ವಂದೇ ಭಾರತ್​ ರೈಲು; ಮೊಳಗಿದ ಮೋದಿ ಘೋಷ; ಇಲ್ಲಿದೆ ವಿಡಿಯೋ 

ಸಚಿವ ಸಂಪುಟ ರಚನೆ ವಿಳಂಬದ ಬಗ್ಗೆ ಕಾಂಗ್ರೆಸ್ ತಗಾದೆ

ಅಧಿಕಾರಕ್ಕೆ ಬಂದ 26 ದಿನಗಳ ನಂತರವೂ ರಾಜಸ್ಥಾನದಲ್ಲಿ ಸಚಿವ ಸಂಪುಟವನ್ನು ರಚಿಸುವಲ್ಲಿ ವಿಳಂಬ ಮಾಡಿದ್ದಕ್ಕಾಗಿ ಬಿಜೆಪಿಯನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿತು. ರಾಜಸ್ಥಾನದಲ್ಲಿ ಅಸೆಂಬ್ಲಿ ಚುನಾವಣೆಯ ಫಲಿತಾಂಶಗಳನ್ನು ಡಿಸೆಂಬರ್ 3, 2023 ರಂದು ಪ್ರಕಟಿಸಲಾಯಿತು. ಬಿಜೆಪಿಯು ಸಿಎಂ ಮತ್ತು ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಘೋಷಿಸಲು 12 ದಿನಗಳನ್ನು (ಡಿಸೆಂಬರ್ 15, 2023 ರವರೆಗೆ) ತೆಗೆದುಕೊಂಡಿತ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ. “26 ದಿನಗಳು ಕಳೆದಿವೆ. ರಾಜಸ್ಥಾನವು ಇನ್ನೂ ಕ್ಯಾಬಿನೆಟ್ ಮತ್ತು ಕೌನ್ಸಿಲ್ ಆಫ್ ಮಂತ್ರಿಗಳನ್ನು ಹೊಂದಿಲ್ಲ” ಎಂದು ಜೈರಾಮ್ ರಮೇಶ್ ವಾಗ್ದಾಳಿ ನಡೆಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:37 pm, Sat, 30 December 23

Follow Us
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!
ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಸಿಪಿಐಎಂ ಕಾರ್ಯಕರ್ತರ ದಾಂಧಲೆ
ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಸಿಪಿಐಎಂ ಕಾರ್ಯಕರ್ತರ ದಾಂಧಲೆ
ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆಯ ಪರಿಣಾಮ ಭೀಕರ: ಅನ್ನದಾತರು ಕಂಗಾಲು
ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆಯ ಪರಿಣಾಮ ಭೀಕರ: ಅನ್ನದಾತರು ಕಂಗಾಲು