AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಕ್ಷದ್ವೀಪಕ್ಕೆ ಪ್ರಧಾನಿ ಮೋದಿ ಭೇಟಿ; ಗೂಗಲ್ ಸರ್ಚ್ ಮಾಡಿ ಜನ ಕೇಳಿದ ಪ್ರಶ್ನೆ ಅಲ್ಲಿಗೆ ಹೋಗುವುದು ಹೇಗೆ?

ಲಕ್ಷದ್ವೀಪಕ್ಕೆ ದೇಶೀಯ ಪ್ರವಾಸಿಗರು ಭೇಟಿ ಕೊಟ್ಟಿದ್ದು ಕೂಡಾ ಕಮ್ಮಿ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ನಾರ್ಕ್ಲಿಂಗ್, ಬಿಳಿ ಮರಳಿನ ಮೇಲೆ ನಡೆಯುವುದು ಅಥವಾ ವಿಶಾಲವಾದ ನೀಲಿ ಸಾಗರದ ಮುಂದೆ ವರ್ಜಿನ್ ಬೀಚ್‌ನಲ್ಲಿ ವಿಶ್ರಮಿಸುವ ಫೋಟೋಗಳು ಭಾರತದಲ್ಲಿ ವೈರಲ್ ಆಗಿದ್ದು, ಜನರು ಗೂಗಲ್​​ನಲ್ಲಿ ಲಕ್ಷದ್ವೀಪದ ಬಗ್ಗೆ ಹೆಚ್ಚು ಹುಡುಕಾಟ ನಡೆಸಿದ್ದಾರೆ.

ಲಕ್ಷದ್ವೀಪಕ್ಕೆ ಪ್ರಧಾನಿ ಮೋದಿ ಭೇಟಿ; ಗೂಗಲ್ ಸರ್ಚ್ ಮಾಡಿ ಜನ ಕೇಳಿದ ಪ್ರಶ್ನೆ ಅಲ್ಲಿಗೆ ಹೋಗುವುದು ಹೇಗೆ?
ಲಕ್ಷದ್ವೀಪದಲ್ಲಿ ಮೋದಿ
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on: Jan 05, 2024 | 4:46 PM

Share

ದೆಹಲಿ ಜನವರಿ 05: 2021ರಲ್ಲಿ ಕೋವಿಡ್ -19 (Covid 19) ಸಾಂಕ್ರಾಮಿಕದ ಭಾರತದ ಪ್ರವಾಸೋದ್ಯಮ ವ್ಯವಹಾರ ಮೇಲೆ ಭಾರೀ ಪರಿಣಾಮ ಬೀರಿತ್ತು. ಆಗ ಜಮ್ಮು ಮತ್ತು ಕಾಶ್ಮೀರದ (Jammu and kashmir) ಜಬರ್ವಾನ್ ಶ್ರೇಣಿಯ ತಪ್ಪಲಿನಲ್ಲಿರುವ ಟುಲಿಪ್ ಗಾರ್ಡನ್‌ಗೆ ಎಲ್ಲರೂ ಭೇಟಿ ನೀಡಿ, ಕೇಂದ್ರಾಡಳಿತ ಪ್ರದೇಶದ ಜನರ ಆತ್ಮೀಯ ಆತಿಥ್ಯವನ್ನು ಆನಂದಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್‌ನಲ್ಲಿ ಒತ್ತಾಯಿಸಿದ್ದರು, ಕಾಶ್ಮೀರ ಟುಲಿಪ್‌ಗಳ ಮೇಲಿನ ಒಂದು ಟ್ವೀಟ್ ಪ್ರವಾಸಿಗರನ್ನು ಅಲ್ಲಿಗೆ ಕರೆತಂದಿತ್ತು. ಇದೀಗ 2024 ರ ಆರಂಭದಲ್ಲಿ ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ (Lakshadweep) ಭೇಟಿ ನೀಡಿದ್ದು, ಇಲ್ಲಿಯೂ ಪ್ರವಾಸಿಗರು ಹೆಚ್ಚಳವಾಗುವ ಸಾಧ್ಯತೆ ಇದೆ.

ಲಕ್ಷದ್ವೀಪದ ಪ್ರಕೃತಿ ರಮಣೀಯ ದೃಶ್ಯಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ. ಪ್ರಶಾಂತವಾದ ಕಡಲತೀರಗಳು, ನೀಲಿ ನೀರು, ಬಿಳಿ ಮರಳುಗಳು, ಸ್ನೇಹಪರ ಜನರನ್ನು ಹೊಂದಿರುವ ಈ ಜಾಗ ಭಾರತದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ.

ಭೇಟಿಗಳ ಮೇಲಿನ ನಿರ್ಬಂಧಗಳು, ತೊಡಕಿನ ಪ್ರಕ್ರಿಯೆಗಳು ಮತ್ತು ಕಡಿಮೆ ಜ್ಞಾನವು ಪ್ರವಾಸಿಗರನ್ನು ದೂರವಿಟ್ಟಿತ್ತು. 2022 ರಲ್ಲಿ ಲಕ್ಷದ್ವೀಪವು 1,00,000 ವಿದೇಶಿ ಪ್ರಯಾಣಿಕರನ್ನು ಸ್ವೀಕರಿಸಿದೆ ಎಂದು ಡೇಟಾ ಸೂಚಿಸುತ್ತದೆ. ಈ ದಾಖಲೆಯು 2021 ರಲ್ಲಿ ಕೇವಲ 4,000 ರ ಹಿಂದಿನ ಸಂಖ್ಯೆಯಿಂದ ಹೆಚ್ಚಳವಾಗಿದೆ. ಲಕ್ಷದ್ವೀಪಕ್ಕೆ ದೇಶೀಯ ಪ್ರವಾಸಿಗರು ಭೇಟಿ ಕೊಟ್ಟಿದ್ದು ಕೂಡಾ ಕಮ್ಮಿ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ನಾರ್ಕ್ಲಿಂಗ್, ಬಿಳಿ ಮರಳಿನ ಮೇಲೆ ನಡೆಯುವುದು ಅಥವಾ ವಿಶಾಲವಾದ ನೀಲಿ ಸಾಗರದ ಮುಂದೆ ವರ್ಜಿನ್ ಬೀಚ್‌ನಲ್ಲಿ ವಿಶ್ರಮಿಸುವ ಫೋಟೋಗಳು ಭಾರತದಲ್ಲಿ ವೈರಲ್ ಆಗಿದ್ದು, ಜನರು ಗೂಗಲ್​​ನಲ್ಲಿ ಲಕ್ಷದ್ವೀಪದ ಬಗ್ಗೆ ಹೆಚ್ಚು ಹುಡುಕಾಟ ನಡೆಸಿದ್ದಾರೆ.

ಲಕ್ಷದ್ವೀಪದ ಬಗ್ಗೆ ಗೂಗಲಿಸಿದ ನೆಟ್ಟಿಗರು

ಬುಧವಾರ ಪ್ರಧಾನಿ ಮೋದಿ ದ್ವೀಪದಲ್ಲಿದ್ದಾಗ, ಭಾರತದ ಜನರು ಹೊಸ ಪ್ರಯಾಣದ ತಾಣವನ್ನು ಗೂಗಲ್ ಮಾಡುತ್ತಿದ್ದರು. ಬುಧವಾರ, ‘ಲಕ್ಷದ್ವೀಪ’ ಭಾರತದಲ್ಲಿ ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಪದಗಳ ಪೈಕಿ ಒಂಬತ್ತನೇ ಸ್ಥಾನದಲ್ಲಿದೆ. ಆ ದಿನ 50,000 ಕ್ಕೂ ಹೆಚ್ಚು ಹುಡುಕಾಟಗಳು ನಡೆದಿವೆ.

ಕೊಚ್ಚಿ-ಲಕ್ಷದ್ವೀಪ ದ್ವೀಪಗಳ ಸಬ್‌ಮೆರಿನ್ ಆಪ್ಟಿಕಲ್ ಫೈಬರ್ ಸಂಪರ್ಕವನ್ನು ಉದ್ಘಾಟಿಸಲು ಜನವರಿ 2 ಮತ್ತು 3 ರಂದು ಮೋದಿ ಲಕ್ಷದ್ವೀಪಕ್ಕೆ ಬಂದಿದ್ದು ಅನೇಕ ಅಭಿವೃದ್ಧಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಅವರು ದ್ವೀಪದ ಸೌಂದರ್ಯವನ್ನು ಆಸ್ವಾದಿಸಿದ್ದು, ಅದನ್ನು ಸವಿಯುವಂತೆ ಪ್ರಯಾಣಿಕರನ್ನು ಒತ್ತಾಯಿಸಿದರು. ಸಾಹಸ ಕ್ರೀಡೆ ಬಯಸುವವರಿಗೆ ಲಕ್ಷದ್ವೀಪ ನಿಮ್ಮ ಪಟ್ಟಿಯಲ್ಲಿರಲೇಬೇಕು ಎಂದರು. ಲಕ್ಷದ್ವೀಪ್ ಕೇವಲ ದ್ವೀಪಗಳ ಸಮೂಹವಲ್ಲ; ಇದು ಸಂಪ್ರದಾಯಗಳ ಕಾಲಾತೀತ ಪರಂಪರೆ ಮತ್ತು ಅದರ ಜನರ ಆತ್ಮಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ ಮೋದಿ.

ಇದನ್ನೂ ಓದಿ: ಲಕ್ಷದ್ವೀಪದಲ್ಲಿ ಮೋದಿ: ಅದ್ಭುತ ಕ್ಷಣಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ, ಇಲ್ಲಿದೆ ಫೋಟೋ

ಬಂಡೆಗಳು ಮತ್ತು ಸಮುದ್ರ ಜೀವಿಗಳನ್ನು ಅನ್ವೇಷಿಸಲು ಪ್ರಧಾನಿ ನೀರಿನ ಅಡಿಯಲ್ಲಿ ಹೋದರು ಮತ್ತು ಸ್ನಾರ್ಕೆಲಿಂಗ್ ಗೇರ್ ಧರಿಸಿ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದರು. ಫೋಟೋಗಳನ್ನು ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದೆ. ಲಕ್ಷದ್ವೀಪದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹುಡುಕುತ್ತಿರುವಾಗ ಭಾರತವು ಹೆಚ್ಚು ಹುಡುಕಿದ ಪದಗಳೆಂದರೆ ‘Lakshadweep island’, ‘Andaman’, ‘Lakshadweep flight, ‘Lakshadweep airport’ ಮತ್ತು ‘Kochi to Lakshadweep’.

ಗೂಗಲ್ ಟ್ರೆಂಡ್ ನೋಡಿದರೆ ಜನವರಿ 4ರಂದು ಅತೀ ಹೆಚ್ಚು ಜನರು ಗೂಗಲ್ ನಲ್ಲಿ ಲಕ್ಷದ್ವೀಪ ಬಗ್ಗೆ ಹುಡುಕಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Rashmi Kallakatta
Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!