ಲಕ್ಷದ್ವೀಪದಲ್ಲಿ ಮೋದಿ: ಅದ್ಭುತ ಕ್ಷಣಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ, ಇಲ್ಲಿದೆ ಫೋಟೋ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪಕ್ಕೆ ಭೇಟಿ ನೀಡಿದರು. ತಾವು ಕಳೆದ ಸುಂದರ ಕ್ಷಣದ ಬಗ್ಗೆ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಲಕ್ಷದ್ವೀಪ ಸ್ವಾಗತಿಸಿದಕ್ಕೆ ಅಲ್ಲಿನ ಜನರಿಗೆ ಪ್ರಧಾನಿ ಮೋದಿ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಅಲ್ಲಿನ ಜನರು ಸನ್ಮಾನ ಹಾಗೂ ಉಡೊಗೆರೆಗಳನ್ನು ನೀಡಿ ಗೌವರಸಿದರು.
Updated on:Jan 04, 2024 | 4:29 PM

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪಕ್ಕೆ ಭೇಟಿ ನೀಡಿದರು. ತಾವು ಕಳೆದ ಸುಂದರ ಕ್ಷಣದ ಬಗ್ಗೆ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.

ದ್ವೀಪಗಳ ರಮಣೀಯ ಸೌಂದರ್ಯದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಮತ್ತು ಸಾಹಸಿ ಪ್ರವಾಸಗಳನ್ನು ಮಾಡುವವರು ಲಕ್ಷದ್ವೀಪವನ್ನು ತಮ್ಮ ಆಯ್ಕೆಯಲ್ಲಿ ಇಟ್ಟುಕೊಂಡಿರಬೇಕು ಎಂದು ಹೇಳಿದರು.

ಲಕ್ಷದ್ವೀಪ ಸ್ವಾಗತಿಸಿದಕ್ಕೆ ಅಲ್ಲಿನ ಜನರಿಗೆ ಪ್ರಧಾನಿ ಮೋದಿ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಅಲ್ಲಿನ ಜನರು ಸನ್ಮಾನ ಹಾಗೂ ಉಡೂಗೆರೆಗಳನ್ನು ನೀಡಿ ಗೌವರಸಿದರು.

ತಂತ್ರಜ್ಞಾನ, ಇಂಧನ, ಜಲಸಂಪನ್ಮೂಲ, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 1,150 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಅವರು ಚಾಲನೆ ನೀಡಿದರು.

ದ್ವೀಪಗಳ ಅದ್ಭುತ ಸೌಂದರ್ಯ ಮತ್ತು ಇಲ್ಲಿನ ಜನರ ಆಚರಣೆ, ಬದುಕನ್ನು ಕಂಡು ವಿಸ್ಮಯಗೊಂಡಿದ್ದೇನೆ. ಇಲ್ಲಿ ನನಗೆ ಒಂದು ಅದ್ಭುತ ಅವಕಾಶ ಸಿಕ್ಕಿದೆ. ಒಂದು ಅದ್ಭುತ ಕ್ಷಣವನ್ನು ನಾನು ಇಲ್ಲಿ ಕಳೆದಿದ್ದೇನೆ ಎಂದು ಮೋದಿ ಹೇಳಿದ್ದಾರೆ.

140 ಕೋಟಿ ಭಾರತೀಯರ ಕಲ್ಯಾಣಕ್ಕಾಗಿ ಇನ್ನಷ್ಟು ಶ್ರಮಿಸುವುದು ಹೇಗೆ ಎಂದು ಪ್ರತಿಬಿಂಬಿಸಲು ಇದು ನನಗೆ ಅವಕಾಶವನ್ನು ನೀಡಿದೆ ಎಂದು ಪ್ರಧಾನಿ ಮೋದಿ ಅವರು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.

ಪ್ರಧಾನಿ ಮೋದಿ ಅವರು ಅಲ್ಲಿ ಸ್ನಾರ್ಕ್ಲಿಂಗ್ ಕೂಡ ಮಾಡಿದ್ದಾರೆ. ಇಂದು ಒಂದು ಅದ್ಭುತ ಸಾಹಸ ಹಾಗೂ ಒಂದು ಒಳ್ಳೆಯ ಅನುಭವ ಎಂದು ಹೇಳಿದ್ದಾರೆ. ಇದು ಎಂತಹ ರೋಮಾಂಚನಕಾರಿ ಅನುಭವ, ಖಂಡಿತ ನೀವು ಒಮ್ಮೆ ಇಲ್ಲಿಗೆ ಭೇಟಿ ನೀಡಲೇಬೇಕು ಎಂದು ಹೇಳಿದ್ದಾರೆ.

ಕಡಲತೀರದಲ್ಲಿ ಕುಳಿತಿರುವ ಛಾಯಾಚಿತ್ರವನ್ನು ಪ್ರಧಾನಿ ಮೋದಿ ಅವರು ಹಂಚಿಕೊಂಡಿದ್ದಾರೆ. ಪ್ರಾಚೀನ ಕಡಲತೀರಗಳ ಉದ್ದಕ್ಕೂ ಆ ಮುಂಜಾನೆ ನಡಿಗೆಗಳು ಶುದ್ಧ ಆನಂದದ ಕ್ಷಣಗಳಾಗಿವೆ. ರಮಣೀಯ ಸೌಂದರ್ಯದ ಜೊತೆಗೆ, ಲಕ್ಷದ್ವೀಪದ ಶಾಂತಿಯು ಸಹ ಮೋಡಿ ಮಾಡುತ್ತದೆ ಎಂದು ಹೇಳಿದ್ದಾರೆ.

ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಜೊತೆಗಿನ ಸಂವಾದದ ವೇಳೆ ತೆಗೆದ ಫೋಟೋಗಳನ್ನೂ ಪ್ರಧಾನಿ ಹಂಚಿಕೊಂಡಿದ್ದಾರೆ.

ಲಕ್ಷದ್ವೀಪವು ಕೇವಲ ದ್ವೀಪಗಳ ಸಮೂಹವಲ್ಲ; ಇದು ಸಂಪ್ರದಾಯಗಳ ಕಾಲಾತೀತ ಪರಂಪರೆಯಾಗಿದೆ ಮತ್ತು ಅದರ ಜನರ ಆತ್ಮಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
Published On - 4:27 pm, Thu, 4 January 24



















