ಅಂದರೆ ಮೂರು ಸೀಸನ್ಗಳಲ್ಲಿ ಆರ್ಸಿಬಿ ತಂಡದಲ್ಲಿದ್ದ ಫಿನ್ ಅಲೆನ್ 45 ಪಂದ್ಯಗಳ ವೇಳೆಯೂ ಬೆಂಚ್ ಕಾದಿದ್ದರು. ಪರಿಣಾಮ ಈ ಬಾರಿಯ ಹರಾಜಿನಲ್ಲಿ ನ್ಯೂಝಿಲೆಂಡ್ ಆಟಗಾರನ ಖರೀದಿಗೆ ಯಾವುದೇ ಫ್ರಾಂಚೈಸಿ ಮುಂದಾಗಲಿಲ್ಲ. ಆದರೀಗ ಸೂಪರ್ ಸ್ಮ್ಯಾಶ್ ಲೀಗ್ನಲ್ಲಿ ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ಫಿನ್ ಅಲೆನ್ ಅಬ್ಬರಿಸಿದ್ದಾರೆ. ಆರ್ಸಿಬಿ ಫ್ರಾಂಚೈಸಿಯ ನಡೆಗೆ ಇದೀಗ ತನ್ನ ಬ್ಯಾಟ್ ಮೂಲಕವೇ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ.