Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಂಬ್​ನ್ನು ಬಾಲ್​​ ಎಂದು ತಿಳಿದು ಗೋಡೆಗೆ ಎಸೆದ ವಿದ್ಯಾರ್ಥಿ ಸಾವು

ಪಶ್ಚಿಮ ಬಂಗಾಳದ ಮುರ್ಷಿಬಾದ್​​​ನ ಶಾಲೆಯೊಂದರ ಬಳಿ ಗುರುವಾರ ಮಧ್ಯಾಹ್ನ ಊಟದ ವೇಳೆ ಬಾಂಬಾ ಸ್ಫೋಟಗೊಂಡು 2 ನೇ ತರಗತಿಯ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಈ ಸ್ಫೋಟದಿಂದ ಅನೇಕರಿಗೆ ಗಾಯಗಳಾಗಿವೆ. ದೌಲತಾಬಾದ್ ಪೊಲೀಸ್​​​ ಠಾಣೆ ಬಳಿ ಈ ಘಟನೆ ನಡೆದಿದೆ.

ಬಾಂಬ್​ನ್ನು ಬಾಲ್​​ ಎಂದು ತಿಳಿದು ಗೋಡೆಗೆ ಎಸೆದ ವಿದ್ಯಾರ್ಥಿ ಸಾವು
Follow us
ಅಕ್ಷಯ್​ ಪಲ್ಲಮಜಲು​​
|

Updated on: Jan 05, 2024 | 3:41 PM

ದೌಲತಾಬಾದ್, ಜ.5: ಪಶ್ಚಿಮ ಬಂಗಾಳದ (West Bengal) ಮುರ್ಷಿಬಾದ್​​​ನ ಶಾಲೆಯೊಂದರ ಬಳಿ ಗುರುವಾರ ಮಧ್ಯಾಹ್ನ ಊಟದ ವೇಳೆ ಬಾಂಬಾ ಸ್ಫೋಟಗೊಂಡು 2 ನೇ ತರಗತಿಯ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಈ ಸ್ಫೋಟದಿಂದ ಅನೇಕರಿಗೆ ಗಾಯಗಳಾಗಿವೆ. ದೌಲತಾಬಾದ್ ಪೊಲೀಸ್​​​ ಠಾಣೆ ಬಳಿ ಈ ಘಟನೆ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಮಕ್ಲೇಸೂರ್​​ ರೆಹಮಾನ್​​​​ (7) ಎಂದು ಗುರುತಿಸಲಾಗಿದೆ.

ಇನ್ನು ಪೊಲೀಸರು ಹಾಗೂ ಸ್ಥಳೀಯ ಪ್ರಕಾರ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಊಟ ಮಾಡಿ ಹೊರಗಡೆ ಬರಬೇಕಾದರೆ ಚೆಂಡಿನಂತಿರುವ ಬಾಂಬ್​​​ ಕೈಯಲ್ಲಿ ಹಿಡಿದು, ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ಈ ವೇಳೆ ರೆಹಮಾನ್​​​​ ಚೆಂಡಿನಂತಿರುವ ಬಾಂಬ್ ಗೋಡೆ ಎಸೆದಿದ್ದಾನೆ, ಈ ವೇಳೆ ಬಾಂಬ್​​​ ಸ್ಫೋಟಗೊಂಡಿದೆ. ಈ ವೇಳೆ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಬಾಂಬ್​​​ ಸ್ಫೋಟದ ಶಬ್ದ ಕೇಳಿ ಸ್ಥಳೀಯರು ಶಾಲೆಯತ್ತ ಬಂದಿದ್ದಾರೆ. ಸ್ಫೋಟದಿಂದ ಬಾಲಕ ಸಾವನ್ನಪ್ಪಿದ್ದಾನೆ. ಹಾಗೂ ಅನೇಕರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ. ಇನ್ನು ಬಾಲಕನ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ.

ಇದನ್ನೂ ಓದಿ:ಪಶ್ಚಿಮ ಬಂಗಾಳದಲ್ಲಿ ಬಾಂಬ್ ಸ್ಫೋಟ, ಒಬ್ಬರಿಗೆ ಗಾಯ 

ಇನ್ನು ಪೋಷಕರು ಶಾಲಾ ಮಂಡಳಿಯ ವಿರುದ್ಧ ಆಕ್ರೋಶಗೊಂಡಿದ್ದಾರೆ. ಶಾಲೆಯಲ್ಲಿ ಬಾಂಬ್​​​​ ಹೇಗೆ ಬಂತು, ಯಾರು ತಂದ್ದದು, ಮಕ್ಕಳ ಬಗ್ಗೆ ಶಾಲಾ ಶಿಕ್ಷಕರು ಕಾಳಜಿ ವಹಿಸಬೇಕಿತ್ತು ಎಂದು ಹೇಳಿದ್ದಾರೆ. ಪೊಲೀಸರು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದು, ಗಾಯಾಳು ವಿದ್ಯಾರ್ಥಿಗಳಲ್ಲಿ ಮೂವರ ಪರಿಸ್ಥಿತಿ ಗಂಭೀರವಾಗಿದೆ.

ಹಂದಿ ಬೇಟೆಗೆ ಬಳಸುವ ಸ್ಫೋಟಕ ಉಂಡೆಯನ್ನು ಬಾಲ್ ಎಂದು ಆಟವಾಡಿದ ಮಕ್ಕಳು, ಸಾವನ್ನಪ್ಪಿದ್ದು ನಾಯಿ

ಶಾಲೆ ಪಕ್ಕದಲ್ಲೇ ಎಸೆದಿದ್ದ ಸಿಡಿಮದ್ದಿನ ಉಂಡೆ ಮಕ್ಕಳ ಕೈಗೆ ಸಿಕ್ಕಿದ್ದು, ಅದೃಷ್ಟವಶಾತ್ ಸಂಭಾವ್ಯ ದುರಂತ ಸ್ವಲ್ಪದರಲ್ಲೇ ತಪ್ಪಿದೆ. ತುಮಕೂರು (Tumkur) ಜಿಲ್ಲೆ ಚಿಕ್ಕನಾಯನಕನಹಳ್ಳಿ ತಾಲ್ಲೂಕಿನ ಮಾದೇನಹಳ್ಳಿಯಲ್ಲಿ ಹಂದಿ ಬೇಟೆಗೆ ಬಳಸುವ ಸಿಡಿ ಮದ್ದಿನ ಉಂಡೆಯನ್ನು (Explosive) ಶಾಲೆಯೊಂದರ ಪಕ್ಕದಲ್ಲಿ ಎಸೆಯಲಾಗಿತ್ತು. ಇದನ್ನು ಬಾಲ್ ಅಂತ ಭಾವಿಸಿದ್ದ ಬಾಲಕನೊಬ್ಬ ಎತ್ತಿಕೊಂಡು ಶಾಲೆಯತ್ತ ತೆರಳಿದ್ದ. ಬಳಿಕ ಆ ಸಿಡಿ ಮದ್ದಿನ ಉಂಡೆಯನ್ನು ಕೈಯಲ್ಲಿ ಹಿಡಿದುಕೊಂಡು ಮಕ್ಕಳು ಓಡಾಡಿದ್ದರು. ಯುವರಾಜ ಎಂಬ ಬಾಲಕನಿಗೆ ಸ್ಫೋಟಕ ಸಿಕ್ಕಿದ್ದು, ಆತ ಅದನ್ನು ಶ್ರೀನಿವಾಸ್ ಎಂಬ ಹುಡುಗನಿಗೆ ನೀಡಿದ್ದ. ಆ ಸ್ಫೋಟಕ ಉಂಡೆಯನ್ನು ಮನೆಗೆ ತೆಗೆದುಕೊಂಡು ಹೋಗಿದ್ದ ಶ್ರೀನಿವಾಸ್ ತಂದೆಗೆ ನೀಡಿದ್ದ. ಇದು ಯಾವುದೋ ಮಾಟ ಮಂತ್ರದ ಬಾಲ್ ಇರಬೇಕೆಂದು ಭಾವಿಸಿದ ಶ್ರೀನಿವಾಸ್ ತಂದೆ ಅದನ್ನು ದೂರಕ್ಕೆ ಎಸೆದಿದ್ದರು. ಶ್ರೀನಿವಾಸ್ ತಂದೆ ಎಸೆದಿದ್ದ ಬಾಲ್​ ಅನ್ನು ಬೀದಿನಾಯಿಯೊಂದು ಕಚ್ಚಿದ್ದು, ಅಷ್ಟರಲ್ಲಿ ಅದು ಸ್ಫೋಟಗೊಂಡಿದೆ. ಬಾಯಿ ಛಿದ್ರಗೊಂಡು ನಾಯಿ ಸ್ಥಳದಲ್ಲೇ ಪ್ರಾಣ ಬಿಟ್ಟಿದೆ. ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು