Sign In

By signing in or creating an account, you agree with Associated Broadcasting Company's Terms & Conditions and Privacy Policy.

West Bengal State Song: ಪಶ್ಚಿಮ ಬಂಗಾಳಕ್ಕೆ ‘ನಾಡಗೀತೆ’: ಬೆಂಗಾಲಿ ಅಸ್ಮಿತೆಗಾಗಿ ಮಮತಾ ಹೊಸ ಹೆಜ್ಜೆ

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ನಾಡಗೀತೆಗಳಿವೆ, ಈ ಬಾರಿ ಪಶ್ಚಿಮ ಬಂಗಾಳ ಸರ್ಕಾರವು ನಾಡಗೀತೆಯನ್ನು ಜಾರಿಗೆ ತರುವ ಹೊಸ ಮಸೂದೆಯನ್ನು ಮಂಡಿಸಲು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಹೊರಟಿದೆ. ಇತರ ರಾಜ್ಯಗಳ ನಾಡಗೀತೆಯು ರಾಜ್ಯದ ಸಂಪ್ರದಾಯ, ಇತಿಹಾಸ, ಸಂಸ್ಕೃತಿಯನ್ನು ಹೇಗೆ ಹೇಳುತ್ತದೆಯೋ, ಈ ಹಾಡು ಇಲ್ಲೂ ಅದನ್ನೇ ಹೇಳುತ್ತದೆ. ಈಗಾಗಲೇ ಹೆಚ್ಚಿನ ಹಾಡುಗಳ ಚರ್ಚೆ ನಡೆದಿದೆ ಎಂದು ವರದಿಯಾಗಿದೆ.

West Bengal State Song:	ಪಶ್ಚಿಮ ಬಂಗಾಳಕ್ಕೆ ‘ನಾಡಗೀತೆ’: ಬೆಂಗಾಲಿ ಅಸ್ಮಿತೆಗಾಗಿ ಮಮತಾ ಹೊಸ ಹೆಜ್ಜೆ
Follow us
ನಯನಾ ರಾಜೀವ್
|

Updated on: Aug 22, 2023 | 1:30 PM

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ನಾಡಗೀತೆಗಳಿವೆ, ಈ ಬಾರಿ ಪಶ್ಚಿಮ ಬಂಗಾಳ ಸರ್ಕಾರವು ನಾಡಗೀತೆಯನ್ನು ಜಾರಿಗೆ ತರುವ ಹೊಸ ಮಸೂದೆಯನ್ನು ಮಂಡಿಸಲು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಹೊರಟಿದೆ. ಇತರ ರಾಜ್ಯಗಳ ನಾಡಗೀತೆಯು ರಾಜ್ಯದ ಸಂಪ್ರದಾಯ, ಇತಿಹಾಸ, ಸಂಸ್ಕೃತಿಯನ್ನು ಹೇಗೆ ಹೇಳುತ್ತದೆಯೋ, ಈ ಹಾಡು ಇಲ್ಲೂ ಅದನ್ನೇ ಹೇಳುತ್ತದೆ. ಈಗಾಗಲೇ ಹೆಚ್ಚಿನ ಹಾಡುಗಳ ಚರ್ಚೆ ನಡೆದಿದೆ ಎಂದು ವರದಿಯಾಗಿದೆ.

ರಾಜ್ಯ ಸಂಗೀತಾ ಅಥವಾ ನಾಡಗೀತೆಯ ಪರಿಕಲ್ಪನೆ ಹೊಸದೇನಲ್ಲ, ಪಶ್ಚಿಮ ಬಂಗಾಳದ ನೆರೆಯ ರಾಜ್ಯಗಳಾದ ಅಸ್ಸಾಂ, ಬಿಹಾರ ಮತ್ತು ಒಡಿಶಾ ತಮ್ಮದೇ ಆದ ಹಾಡುಗಳನ್ನು ಹೊಂದಿವೆ. ದಾಹರಣೆಗೆ, ‘ಬಂದೇ ಉತ್ಕಲ ಜನನಿ’ ಅನ್ನು 2020 ರಲ್ಲಿ ಒಡಿಶಾದ ರಾಜ್ಯ ಗೀತೆಯಾಗಿ ಅಳವಡಿಸಿಕೊಳ್ಳಲಾಗಿದೆ. ಮತ್ತೆ 2012 ರಲ್ಲಿ ಮೇರೆ ಭಾರತ್ ಕೆ ಕಂಠಹಾರ್ ಅನ್ನು ಬಿಹಾರದ ರಾಜ್ಯಗೀತೆಯಾಗಿ ಅಳವಡಿಸಲಾಯಿತು. ಮತ್ತೆ ಅಸ್ಸಾಂನ ರಾಜ್ಯ ಗೀತೆ ಓ ಮೂರ್ ಅಪುನರ್ ದೇಶ್. ಕರ್ನಾಟಕದಲ್ಲಿ ಜೈ ಭಾರತ ಜನನಿಯ ತನುಜಾತೆ ಎಂಬ ನಾಡಗೀತೆ ಇದೆ.

ಮೊದಲ ಬೈಸಾಖ್ ದಿನವನ್ನು ಪಶ್ಚಿಮ ಬಂಗಾಳದ ದಿನವನ್ನಾಗಿ ಆಚರಿಸಲು ವಿಧಾನಸಭೆಯ ಸ್ಪೀಕರ್ ನೇಮಿಸಿದ ಸಮಿತಿಯು ಈಗಾಗಲೇ ಪ್ರಸ್ತಾಪಿಸಿದೆ. ಮುಂದಿನ ದಿನಗಳಲ್ಲಿ ವಿಧಾನಸಭೆಯಲ್ಲಿ ಮಸೂದೆ ತರಲಾಗುವುದು. ಮತ್ತು ಇದೆಲ್ಲದರ ನಡುವೆ, ಪಶ್ಚಿಮ ಬಂಗಾಳಕ್ಕೆ ನಾಡಗೀತೆಯನ್ನು ನಿರ್ದಿಷ್ಟಪಡಿಸುವ ಪ್ರಸ್ತಾಪವು ರಾಜ್ಯ ವಿಧಾನಸಭೆಯಲ್ಲಿ ಬರಲಿದೆ.

ಮತ್ತಷ್ಟು ಓದಿ: ಇಂಡಿಯಾ ವಿಪಕ್ಷಗಳ ಮೈತ್ರಿಕೂಟದ ವಿರುದ್ಧದ ಅಮಿತ್ ಶಾ ಆರೋಪಗಳಿಗೆ ಉತ್ತರಕೊಟ್ಟ ಮಮತಾ ಬ್ಯಾನರ್ಜಿ

ಅಲ್ಲದೆ, ಛತ್ತೀಸ್‌ಗಢ, ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ತಮಿಳುನಾಡು, ಪುದುಚೇರಿ, ಉತ್ತರಾಖಂಡದಂತಹ ರಾಜ್ಯಗಳೂ ತಮ್ಮದೇ ಆದ ನಾಡಗೀತೆಗಳನ್ನು ಹೊಂದಿವೆ.

ವಿಧಾನಸಭೆ ಸ್ಪೀಕರ್ ಬಿಮನ್ ಬ್ಯಾನರ್ಜಿ ಮಾತನಾಡಿ, ವಿವಿಧ ರಾಜ್ಯಗಳಿಗೆ ಅದರದ್ದೇ ಆದ ಸಂಗೀತವಿದೆ. ಪಶ್ಚಿಮ ಬಂಗಾಳದಲ್ಲಿ ನಾಡಗೀತೆ ಇಲ್ಲ, ರಾಷ್ಟ್ರಗೀತೆ ಇಡೀ ಭಾರತಕ್ಕೆ ಅನ್ವಯಿಸುತ್ತದೆ. ಆದರೆ ಇತರ ರಾಜ್ಯಗಳು ತಮ್ಮದೇ ಆದ ಸಂಗೀತವನ್ನು ಹೊಂದಿವೆ. ಪಶ್ಚಿಮ ಬಂಗಾಳ ರಾಜ್ಯಕ್ಕೆ ನಿರ್ದಿಷ್ಟವಾದ ಸಂಗೀತವಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ