ಚಂದ್ರಯಾನ-3 ಯಶಸ್ವಿಯಾದರೆ ಭಾರತದ ಆರ್ಥಿಕತೆ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

2023 ರ ಎರಡನೇ ತ್ರೈಮಾಸಿಕದಲ್ಲಿ ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯು ಈಗಾಗಲೇ US $ 546 ಶತಕೋಟಿಯನ್ನು ತಲುಪಿದೆ ಎಂದು ಸ್ಪೇಸ್ ಫೌಂಡೇಶನ್ ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ. ಕಳೆದ ದಶಕದಲ್ಲಿ, ಬಾಹ್ಯಾಕಾಶ ಆರ್ಥಿಕತೆಯಲ್ಲಿ 91 ಪ್ರತಿಶತದಷ್ಟು ಹೆಚ್ಚಳವಾಗಿದೆ.

ಚಂದ್ರಯಾನ-3 ಯಶಸ್ವಿಯಾದರೆ ಭಾರತದ ಆರ್ಥಿಕತೆ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಚಂದ್ರಯಾನ-3
Follow us
ನಯನಾ ಎಸ್​ಪಿ
|

Updated on: Aug 22, 2023 | 2:33 PM

ರಷ್ಯಾದ ಲೂನಾ 25 ರ (Luna 25) ಪತನದ ನಂತರ, ಇಡೀ ಪ್ರಪಂಚದ ಕಣ್ಣು ಭಾರತದ ಚಂದ್ರಯಾನ 3 (Chandrayaan 3) ಮೇಲೆ ನೆಟ್ಟಿದೆ. ನಾಳೆಯ (ಆಂಗುಸ್ಟ್ 23) ಅಂತ್ಯದ ವೇಳೆಗೆ, ಚಂದ್ರಯಾನ 3 ಚಂದ್ರನ ಮೇಲ್ಮೈಯಲ್ಲಿ ಯಶಸ್ವಿ ಲ್ಯಾಂಡಿಂಗ್ ಅನ್ನು ಪ್ರಯತ್ನಿಸುತ್ತದೆ. ಹೀಗಾದರೆ ದೇಶದ ಆರ್ಥಿಕತೆಗೂ ಸಾಕಷ್ಟು ಲಾಭವಾಗಲಿದೆ. ದೇಶದ ಬಾಹ್ಯಾಕಾಶ ಆರ್ಥಿಕತೆಗೆ ಉತ್ತೇಜನ ನೀಡುವುದರೊಂದಿಗೆ ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಭಾರತದ ಪಾಲನ್ನು ಹೆಚ್ಚಿಸಲಿದೆ. ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯು 550 ಶತಕೋಟಿ ಡಾಲರ್‌ಗಳನ್ನು ತಲುಪಿದೆ ಮತ್ತು ಭಾರತದ ಬಾಹ್ಯಾಕಾಶ ಆರ್ಥಿಕತೆಯು ಪ್ರಸ್ತುತ 10 ರಿಂದ 11 ಶತಕೋಟಿ ಡಾಲರ್‌ಗಳ ಸಮೀಪದಲ್ಲಿದೆ. ಚಂದ್ರಯಾನ 3 ರ ಯಶಸ್ಸಿನೊಂದಿಗೆ, ಈ ಆರ್ಥಿಕತೆಯಲ್ಲಿ ನಂಬಲಾರದ ಹೆಚ್ಚಳವನ್ನು ಕಾಣಬಹುದು.

ಭಾರತ ಮತ್ತು ಜಾಗತಿಕ ಬಾಹ್ಯಾಕಾಶ ಆರ್ಥಿಕತೆ:

ಡೆಲಾಯ್ಟ್‌ನ ವರದಿಯ ಪ್ರಕಾರ, 2013 ರಿಂದ, 1,791 ಕಂಪನಿಗಳಲ್ಲಿ ಖಾಸಗಿ ಷೇರುಗಳ ಮೂಲಕ US $ 272 ಶತಕೋಟಿಗಿಂತ ಹೆಚ್ಚು ಹಣ ಸಂಗ್ರಹಿಸಲಾಗಿದೆ. 2023 ರ ಎರಡನೇ ತ್ರೈಮಾಸಿಕದಲ್ಲಿ ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯು ಈಗಾಗಲೇ US $ 546 ಶತಕೋಟಿಯನ್ನು ತಲುಪಿದೆ ಎಂದು ಸ್ಪೇಸ್ ಫೌಂಡೇಶನ್ ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ.

ಕಳೆದ ದಶಕದಲ್ಲಿ, ಬಾಹ್ಯಾಕಾಶ ಆರ್ಥಿಕತೆಯಲ್ಲಿ 91% ಹೆಚ್ಚಳವಾಗಿದೆ. ಇನ್ನು ಭಾರತದ ಬಗ್ಗೆ ಹೇಳುವುದಾದರೆ, ಭಾರತದ ಬಾಹ್ಯಾಕಾಶ ಆರ್ಥಿಕತೆಯು 2025 ರ ವೇಳೆಗೆ US $13 ಶತಕೋಟಿ ಆಗುವ ನಿರೀಕ್ಷೆಯಿದೆ. ಇದು 2020 ರ ವೇಳೆಗೆ 9 ಶತಕೋಟಿ ಡಾಲರ್ ಆಗಿತ್ತು. ಇದರರ್ಥ ಪ್ರಸ್ತುತ ಭಾರತದ ಬಾಹ್ಯಾಕಾಶ ಆರ್ಥಿಕತೆಯ ಜಾಗತಿಕ ಪಾಲು ತುಂಬಾ ಕಡಿಮೆಯಾಗಿದೆ.

ಚಂದ್ರಯಾನ 3 ಹೇಗೆ ಪ್ರಯೋಜನಕಾರಿಯಾಗಲಿದೆ?

ಬಾಹ್ಯಾಕಾಶ ಕಾರ್ಯಾಚರಣೆಗಳು ವಿಶ್ವಾದ್ಯಂತ ಹಲವು ಪ್ರದೇಶಗಳಲ್ಲಿ ನಡೆಸಲಾಗಿದೆ, ಇದರಿಂದ ಆರ್ಥಿಕತೆ ಮಾತ್ರವಲ್ಲದೆ, ಸಾಮಾನ್ಯ ಜನರಿಗೆ ಲಾಭದಾಯಕವಾಗಿದೆ. ಉದಾಹರಣೆಗೆ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಶುದ್ಧ ನೀರಿನ ಮರುಬಳಕೆ ಮತ್ತು ಸ್ಟರ್ಲಿಂಕ್ ಮೂಲಕ ಜಾಗತಿಕ ಇಂಟರ್ನೆಟ್ ಸೇವೆಗಳು ಸೇರಿವೆ. ಬಾಹ್ಯಾಕಾಶ ತಂತ್ರಜ್ಞಾನವು ಸೌರ ಉತ್ಪಾದನೆ, ಆರೋಗ್ಯ ಮತ್ತು ಇತರ ಕ್ಷೇತ್ರಗಳಲ್ಲಿಯೂ ಸಹಾಯ ಮಾಡುತ್ತದೆ. ಉಪಗ್ರಹ ಮಾಹಿತಿಯ ಬೇಡಿಕೆ ವೇಗವಾಗಿ ಬೆಳೆಯುತ್ತಿದೆ. ಬಾಹ್ಯಾಕಾಶ ಆರ್ಥಿಕತೆಯು ಅಭಿವೃದ್ಧಿ ಹೊಂದುತ್ತಿದೆ ಎಂದು ವರದಿಗಳು ಹೇಳುತ್ತವೆ. ಭಾರತ ಚಂದ್ರನ ಮೇಲೆ ಇಳಿದರೆ ಅದು ನಮ್ಮ ತಾಂತ್ರಿಕ ಕೌಶಲ್ಯವನ್ನು ತೋರಿಸುತ್ತದೆ.

ಆಸ್ಟ್ರೇಲಿಯಾದ ಬಾಹ್ಯಾಕಾಶ ಆರ್ಥಿಕತೆ:

ಅನೇಕ ದೇಶಗಳು ಇತ್ತೀಚೆಗೆ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಪ್ರವೇಶ ಪಡೆದಿವೆ. ಅಂತಹ ದೇಶಗಳು ಮುಂದಿನ ದಿನಗಳಲ್ಲಿ ತಮ್ಮ ಆರ್ಥಿಕತೆಯಿಂದ ಸಾಕಷ್ಟು ಪ್ರಯೋಜನ ಪಡೆಯಬಹುದು. ಇದರೊಂದಿಗೆ, ಇತರ ದೇಶಗಳು ಸಹ ಈ ಆರ್ಥಿಕತೆಯನ್ನು ಪ್ರವೇಶಿಸಲು ನಿರಂತರವಾಗಿ ಸ್ಫೂರ್ತಿ ಪಡೆಯುತ್ತಿವೆ. ಆಸ್ಟ್ರೇಲಿಯಾದಲ್ಲಿ, ಆಸ್ಟ್ರೇಲಿಯನ್ ಸಿವಿಲ್ ಸ್ಪೇಸ್ ಸ್ಟ್ರಾಟಜಿ 2019-2028, ಆರ್ಥಿಕತೆಗೆ ಬಾಹ್ಯಾಕಾಶ ಕ್ಷೇತ್ರದ ಕೊಡುಗೆಯನ್ನು ಮೂರು ಪಟ್ಟು ಅಂದರೆ A$12 ಬಿಲಿಯನ್‌ಗೆ ಅಷ್ಟು ಹೆಚ್ಚಿಸುವ ಮೂಲಕ 2030 ರ ವೇಳೆಗೆ 20,000 ಉದ್ಯೋಗಗಳನ್ನು ಸೃಷ್ಟಿಸಲು ಪ್ಲಾನ್ ಮಾಡಿದೆ.

ಇದನ್ನೂ ಓದಿ: ಲ್ಯಾಂಡಿಂಗ್ ನಂತರ ಚಂದ್ರಯಾನ-3 ಲ್ಯಾಂಡರ್ ಏನು ಮಾಡಲಿದೆ? ಪ್ರಮುಖ ಕಾರ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ

ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಉತ್ತೇಜನ ಸಿಗಲಿದೆ

ಭಾರತ ಮತ್ತು ದಕ್ಷಿಣ ಏಷ್ಯಾದ ವ್ಯವಸ್ಥಾಪಕ ಪಾಲುದಾರರಾದ ಅರ್ಥರ್ ಡಿ. ಲಿಟಲ್ ಮತ್ತು ಬಾರ್ನಿಕ್ ಚಿತ್ರನ್ ಮೈತ್ರಾ ಇತ್ತೀಚೆಗೆ ತಮ್ಮ ವರದಿಯನ್ನು ಮಂಡಿಸಿದರು. ಭಾರತದಲ್ಲಿ ಬಾಹ್ಯಾಕಾಶಕ್ಕೆ ಸರ್ಕಾರದ ವೆಚ್ಚ ನಿರಂತರವಾಗಿ ಹೆಚ್ಚುತ್ತಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ. ದೇಶದ ಖಾಸಗಿ ಬಾಹ್ಯಾಕಾಶ ಕ್ಷೇತ್ರವೂ ತನ್ನ ಹೂಡಿಕೆಯನ್ನು ವೇಗವಾಗಿ ಹೆಚ್ಚಿಸುತ್ತಿದೆ. ಇದರೊಂದಿಗೆ ಸರ್ಕಾರದ ನೀತಿಗಳು ಸಹ ವಾಣಿಜ್ಯ ಬಾಹ್ಯಾಕಾಶ ಉದ್ಯಮಗಳನ್ನು ಪ್ರೋತ್ಸಾಹಿಸುತ್ತಿವೆ. ಇದರಿಂದಾಗಿ ಭಾರತೀಯ ಬಾಹ್ಯಾಕಾಶ ಉದ್ಯಮವು ದೊಡ್ಡ ಬದಲಾವಣೆಯತ್ತ ಸಾಗುತ್ತಿದೆ. ಭಾರತದಲ್ಲಿ ಖಾಸಗಿ ಕಂಪನಿಗಳು ಈ ವಲಯದಲ್ಲಿ ಪ್ರಗತಿ ಸಾಧಿಸಲು ವಿಶಾಲವಾದ ಮುಕ್ತ ಅವಕಾಶವನ್ನು ಹೊಂದಿವೆ.

ಇನ್ನಷ್ಟು ಕ್ಷಣ ಕ್ಷಣದ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ