Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಂದ್ರಯಾನ-3 ಕುರಿತು ನಟನ​ ಟ್ವೀಟ್: ಸಿನಿಮಾ ರೀತಿ ನಿಜ ಜೀವನದಲ್ಲೂ ಪ್ರಕಾಶ್​​ ರಾಜ್​ ವಿಲನ್, ವಿಕೃತ ಮನುಷ್ಯ – ಆರ್ ಅಶೋಕ್​​​​

ಬಹುನಿರೀಕ್ಷಿತ ಚಂದ್ರಯಾನ-3ರ ವಿಕ್ರಮ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿಯುವುದನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಈ ಚಂದ್ರಯಾನ-3 ವಿಚಾರವಾಗಿ ನಟ ಪ್ರಕಾಶ್​​ ರಾಜ್​​ ಮಾಡಿದ ಕಾರ್ಟೂನ್​​ ಟ್ವೀಟ್​​ ದೇಶವ್ಯಾಪಿ ಸಾಕಷ್ಟು ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ಪ್ರಕಾಶ್​​ ರಾಜ್​ ವಿರುದ್ಧ ಮಾಜಿ ಸಚಿವ ಆರ್​ ಅಶೋಕ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಂದ್ರಯಾನ-3 ಕುರಿತು ನಟನ​ ಟ್ವೀಟ್: ಸಿನಿಮಾ ರೀತಿ ನಿಜ ಜೀವನದಲ್ಲೂ ಪ್ರಕಾಶ್​​ ರಾಜ್​ ವಿಲನ್, ವಿಕೃತ ಮನುಷ್ಯ - ಆರ್ ಅಶೋಕ್​​​​
ಬಿಜೆಪಿ ಶಾಸಕ ಆರ್​ ಅಶೋಕ್
Follow us
ಪ್ರಸನ್ನ ಗಾಂವ್ಕರ್​
| Updated By: ವಿವೇಕ ಬಿರಾದಾರ

Updated on: Aug 22, 2023 | 3:35 PM

ಬೆಂಗಳೂರು: ಬಹುನಿರೀಕ್ಷಿತ ಚಂದ್ರಯಾನ-3ರ (Chandrayana 3) ವಿಕ್ರಮ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿಯುವುದನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಈ ಚಂದ್ರಯಾನ-3 ವಿಚಾರವಾಗಿ ನಟ ಪ್ರಕಾಶ್​​ ರಾಜ್ (Prakash Raj)​​ ಮಾಡಿದ ಕಾರ್ಟೂನ್​​ ಟ್ವೀಟ್​​ ದೇಶವ್ಯಾಪಿ ಸಾಕಷ್ಟು ಚರ್ಚೆಯಾಗುತ್ತಿದೆ. ಪ್ರಕಾಶ್​​ ರಾಜ್​ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈ ಕುರಿತು ಬಿಜೆಪಿ ಶಾಸಕ ಆರ್​ ಅಶೋಕ್​ (R Ashok) ಮಾತನಾಡಿ “ಪ್ರಕಾಶ್ ರೈ ಒಬ್ಬ ವಿಕೃತ ಮನುಷ್ಯ. ನಾನು ಕೂಡ ಕಾರ್ಟೂನ್ ನೋಡಿದ್ದೇನೆ. ಟೀ ಮಾರುವ ಮೂಲಕ ವಿಜ್ಞಾನಿಗಳನ್ನು ಟೀಕೆ ಮಾಡುವುದನ್ನು ನೋಡಿದರೇ ಇದು ಕೀಳು ಪ್ರವೃತ್ತಿ ಅನಿಸುತ್ತೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು “ಸಾಕಷ್ಟು ಕಲಾವಿದರನ್ನು ನೋಡಿದ್ದೇನೆ. ಇತನೂ ಸಹ ಕಲಾವಿದ. ಆದರೆ ಡಾ.ರಾಜಕುಮಾರ್ ಹಾಗೂ ರಜನಿಕಾಂತ್ ಅವರೆಲ್ಲಾ ಉತ್ತಮ ಕಲಾವಿದರು. ಆದರೆ ಇವರನ್ನು ಕಲಾವಿದ ಅಂತ ಕರೆಯೋಕೆ ಆಗಲ್ಲ. ಸಿನಿಮಾ ರೀತಿಯಲ್ಲೇ ನಿಜ ಜೀವನದಲ್ಲೂ ಪ್ರಕಾಶ್ ರೈ ವಿಲನ್ ಆಗಿದ್ದಾನೆ” ಎಂದು ವಾಗ್ದಾಳಿ ಮಾಡಿದರು.

ಇನ್ನು ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರವಾಗಿ ಸರ್ಕಾರ ಸರ್ವ ಪಕ್ಷ ಸಭೆ ಕರೆದ ವಿಚಾರವಾಗಿ ಮಾತನಾಡಿದ ಅವರು ಕೊನೆಗೂ ಸಭೆ ಕರೆದಿದ್ದಾರೆ. ಸ್ಟಾಲಿನ್ ಜೊತೆಗೆ ಒಳ ಒಪ್ಪಂದ ಇದು. ನೀರು ಬಿಟ್ಟ ಮೇಲೆ ಸಭೆ ಕರೆದಿದ್ದಾರೆ. ಮೇಕೆ ದಾಟು ವಿಚಾರವಾಗಿ ಪ್ರತಿಭಟನೆ ಮಾಡಿದರು. ಅಧಿಕಾರ ಬಂದ ಮೇಲೆ ಕಾವೇರಿನೂ ಇಲ್ಲ ಮೇಕೆದಾಟು ಇಲ್ಲ. ಸರ್ಕಾರ ನೀರು ಬಿಟ್ಟು ಕರ್ನಾಟಕದ ರೈತರಿಗೆ ಸರ್ಕಾರ ಅನ್ಯಾಯ ಮಾಡಿದೆ ಎಂದು ಗರಂ ಆದರು.

ಇದನ್ನೂ ಓದಿ: ಚಂದ್ರಯಾನ 3’ ಬಗ್ಗೆ ಪ್ರಕಾಶ್​ ರಾಜ್​ ಮಾಡಿದ ಹಾಸ್ಯದ ಹಿಂದೆ ಬೇರೆಯದೇ ಕಥೆ ಇದೆ; ವಿವರಿಸಿದ ನಟ

ಪ್ರಕಾಶ್ ರಾಜ್ ಭಾರತದಲ್ಲಿ ಇರಲು ಅರ್ಹರಲ್ಲ: ಮುನಿಸ್ವಾಮಿ

​​​​ಪ್ರಕಾಶ್ ರಾಜ್​ಗೆ ಭಾರತ ಸೂಕ್ತವಾದ ಸ್ಥಳ ಅಲ್ಲ. ಅವರಿಗೆ ಪಾಕಿಸ್ತಾನ, ಆಫ್ಘಾನಿಸ್ತಾನ ಸೂಕ್ತವಾದ ಸ್ಥಳ. ಪ್ರಕಾಶ್ ರಾಜ್ ಭಾರತದಲ್ಲಿ ಇರಲು ಅರ್ಹರಲ್ಲ. ಭಾರತದ ಪ್ರಜೆಗಳಿಗೆ ಇರಬೇಕಾದ ಕನಿಷ್ಠ ಜ್ಞಾನವೂ ಇಲ್ಲ. ಜನರ ಮುಂದೆ ಹೀರೋ ಆಗಲು ಹೋಗಿ ಜೀರೋ ಆಗಿದ್ದಾರೆ ಎಂದು ನಟ ಪ್ರಕಾಶ್ ರಾಜ್ ವಿರುದ್ಧ ಸಂಸದ ಮುನಿಸ್ವಾಮಿ ವಾಗ್ದಾಳಿ ಮಾಡಿದರು.

ಚಂದ್ರಯಾನ ಯಶಸ್ಸಿಗೆ ವಿಜಯಪುರದಲ್ಲಿ ಯುವ ಭಾರತ ಸಮಿತಿ ಹಾಗೂ ಸರ್ವಜ್ಞವಿಹಾರ ವಿದ್ಯಾಪೀಠ ಸಂಯಕ್ತಾಶ್ರಯದಲ್ಲಿ ಹೋಮ-ಹವನ ಆಯೋಜಸಲಾಗಿದೆ. ವಿಜಯಪುರ ನಗರದ ಸರ್ವಜ್ಞ ವಿದ್ಯಾಪೀಠದಲ್ಲಿ ಚಂದ್ರನ ಅಂಗಳಕ್ಕೆ ವಿಕ್ರಮ್ ಲ್ಯಾಂಡರ್ ಸೇಫ್ ಆಗಿ ತಲುಪಲಿ ಎಂದು ಸರ್ವಾರ್ಥ ಸಿದ್ಧಿಯಾಗ ನಡೆದಿದೆ. ಅಲ್ಲದೇ ಲ್ಯಾಂಡಿಂಗ್‌ಗೆ ಯಾವುದೇ ಅಡೆತಡೆಯಾಗದಂತೆ ನರಸಿಂಹ ಸ್ವಾಮಿಗೆ ಹೋಮ ಹವನ ಮಾಡಲಾಗಿದೆ.

ಚಂದ್ರಯಾನ ಸಕ್ಸಸ್​​ಗಾಗಿ ಸಿಲಿಕಾನ್ ಸಿಟಿಯ ವಿಶ್ವ ಪ್ರಸಿದ್ಧ ಬಸವನಗುಡಿ ದೇವಾಲಯದಲ್ಲಿ ವಿಘ್ನ ವಿನಾಯಕನಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ದೊಡ್ಡ ಗಣೇಶನ ಮುಂದೆ ಚಂದ್ರಯಾನ- 3 ರಾಕೇಟ್ ಪೋಸ್ಟರ್ ಇಟ್ಟು ಪೂಜೆ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ