Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ರಸ್ತೆಯಲ್ಲಿ ಹೋಗ್ತಿದ್ದ ವಿದ್ಯಾರ್ಥಿನಿ ತಲೆ ಮೇಲೆ ವಿದ್ಯುತ್​ ತಂತಿ ಬಿದ್ದು ಗಾಯ; ಆಸ್ಪತ್ರೆಗೆ ದಾಖಲು

ಕ್ರೈಸ್ಟ್​​ ಕಾಲೇಜಿನಲ್ಲಿ ಪಿಯು ವ್ಯಾಸಂಗ ಮಾಡುತ್ತಿರುವ ಪ್ರಿಯಾ ಎಂಬುವವರು ಕಾಲೇಜು ಮುಗಿಸಿ ಮನೆಗೆ ತೆರೆಳುತ್ತಿದ್ದ ವೇಳೆ, ಕ್ಯಾಂಟರ್​ ವಾಹನಕ್ಕೆ ಇಂಟರ್​ನೆಟ್ ಕೇಬಲ್​ ಸಿಲುಕಿಕೊಂಡು ಬಿದ್ದಿದೆ. ಈ ವೇಳೆ ವಿದ್ಯಾರ್ಥಿನಿ ತಲೆಯ ಮೇಲೆ ವಿದ್ಯುತ್​ ತಂತಿ ಬಿದ್ದು ಶೇಕಡಾ 40 ಪ್ರತಿಶತ ಸುಟ್ಟಿದೆ.

ಬೆಂಗಳೂರು: ರಸ್ತೆಯಲ್ಲಿ ಹೋಗ್ತಿದ್ದ ವಿದ್ಯಾರ್ಥಿನಿ ತಲೆ ಮೇಲೆ ವಿದ್ಯುತ್​ ತಂತಿ ಬಿದ್ದು ಗಾಯ; ಆಸ್ಪತ್ರೆಗೆ ದಾಖಲು
ಪ್ರಾತಿನಿಧಿಕ ಚಿತ್ರ
Follow us
Jagadisha B
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 22, 2023 | 5:10 PM

ಬೆಂಗಳೂರು, ಆ.22: ರಸ್ತೆಯಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿ(Student) ತಲೆ ಮೇಲೆ ವಿದ್ಯುತ್​ ತಂತಿ ಬಿದ್ದು ಗಾಯವಾದ ಘಟನೆ ಬೆಂಗಳೂರಿನ (Bengaluru)ಸುದ್ದಗುಂಟೆ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದೆಹಲಿ ಮೂಲದ ವಿದ್ಯಾರ್ಥಿನಿ ಪ್ರಿಯಾ ಎಂಬುವವರು ಗಾಯಗೊಂಡ ವಿದ್ಯಾರ್ಥಿ. ಕ್ರೈಸ್ಟ್​​ ಕಾಲೇಜಿನಲ್ಲಿ ಪಿಯು ವ್ಯಾಸಂಗ ಮಾಡುತ್ತಿರುವ ಪ್ರಿಯಾ ಎಂಬುವವರು ಕಾಲೇಜು ಮುಗಿಸಿ ಮನೆಗೆ ತೆರೆಳುತ್ತಿದ್ದರು. ಅದೇ ಸಮಯಕ್ಕೆ ಚಲಿಸುತ್ತಿದ್ದ ಕ್ಯಾಂಟರ್​ಗೆ ರಸ್ತೆ ಮೇಲೆ ಬಿದ್ದಿದ್ದ ಇಂಟರ್​ನೆಟ್ ಕೇಬಲ್​ ಸಿಲುಕಿಕೊಂಡು, ಇದನ್ನು ಗಮನಿಸದ ಚಾಲಕ ವೇಗವಾಗಿ ಹೋಗಿದ್ದಾನೆ. ಬಳಿಕ ಕೇಬಲ್ ಕಂಬ ಕೆಳಗೆ ಬಿದ್ದಿದೆ. ಈ ವೇಳೆ ರಸ್ತೆಯಲ್ಲಿ ತೆರಳುತಿದ್ದ ಪ್ರಿಯಾ ತಲೆ ಮೇಲೆ ವಿದ್ಯುತ್​ ತಂತಿ ಬಿದ್ದು ಅವಘಡ ಸಂಭವಿಸಿದೆ. ಶೇ.40ರಷ್ಟು ಸಟ್ಟಗಾಯವಾಗಿದ್ದು, ಸಾಗರ್ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿ ಪ್ರಿಯಾಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು, ಬೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಕೊಲೆ ಆರೋಪಿ ತಂದೆ ತಾಯಿ ಸಾವು ಪ್ರಕರಣ; ಅಂತ್ಯಕ್ರಿಯೆ ನಡೆಸಲು ಅನುಮತಿ ನೀಡಿದ ಕೋರ್ಟ್

ಮೈಸೂರು: ಕೊಲೆ ಆರೋಪಿ ತಂದೆ ತಾಯಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅಂತ್ಯಕ್ರಿಯೆ ನಡೆಸಲು ಮೈಸೂರು ನ್ಯಾಯಾಲಯ ಅನುಮತಿ ನೀಡಿದೆ. ಆರೋಪಿ ತೇಜಸ್‌ ಎಂಬಾತ ಸ್ನೇಹಿತ ಬಾಲರಾಜ್‌ ಎಂಬುವವನನ್ನು ಕೊಲೆ ಮಾಡಿ ಜೈಲು ಸೇರಿದ್ದ. ಜೊತೆಗೆ ತೇಜಸ್ ಜೊತೆ ತಂದೆ ಸಾಮ್ರಾಟ್ ಸಹ ಜೈಲು ಸೇರಿದ್ದರು. ಈ ಆಘಾತದಿಂದ ಮನನೊಂದು ತಾಯಿ ಇಂದ್ರಾಣಿ ನೇಣಿಗೆ ಶರಣಾಗಿದ್ದರು. ಬಳಿಕ ಪತ್ನಿ ಸಾವಿನ ಸುದ್ದಿ ಕೇಳಿ ಪತಿ ಸಾಮ್ರಾಟ್ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇದೀಗ ಚಾಮುಂಡಿ ಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ತಂದೆ ತಾಯಿ ಅಂತ್ಯಕ್ರಿಯೆ ನಡೆಸಲು ಕೋರ್ಟ್​ ಅನುಮತಿ ಕೊಟ್ಟಿದೆ.

ಇದನ್ನೂ ಓದಿ:ಹೈ ವೋಲ್ಟೇಜ್​ ವಿದ್ಯುತ್​ ತಂತಿ ತಗುಲಿ ಸಹೋದರರಿಬ್ಬರ ದುರ್ಮರಣ; ರಕ್ಷಣೆಗೆ ಬಂದ ಮೂರನೇಯವನಿಗೂ ಶಾಕ್​

ಪೊಲೀಸರ ಮೇಲೆಯೇ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಲು ಯತ್ನಿಸಿದ ಮಹಿಳೆ

ಉಡುಪಿ: ಜಿಲ್ಲೆಯ ಕುಂದಾಪುರದ ಬೈಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಅಂಗಡಿ ವಸ್ತುಗಳನ್ನು ಇಟ್ಟುಕೊಂಡು ಜನರ ಓಡಾಟಕ್ಕೆ ತೊಂದರೆ ನೀಡುತ್ತಿದ್ದಾರೆ ಎಂಬ ದೂರಿನನ್ವಯ ಪ್ರಶ್ನಿಸಲು ಬಂದ ಪೊಲೀಸರ ಮೇಲೆ ಅಂಗಡಿ ಮಾಲಕಿ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಲು ಯತ್ನಿಸಿದ ಘಟನೆ ನಡೆದಿತ್ತು. ಕೋಟೇಶ್ವರ ಮುಖ್ಯರಸ್ತೆಯಲ್ಲಿ ಟೈಲರ್ ಮತ್ತು ಫ್ಯಾನ್ಸಿ ಸ್ಟೋರ್ ನಡೆಸುತ್ತಿದ್ದ ಸರೋಜಾ ದಾಸ್ ಎಂಬ ಮಹಿಳೆಯಿಂದ ಈ ಕೃತ್ಯ ನಡೆದಿತ್ತು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ