Rajasthan: ರಾಜಸ್ಥಾನದ ಭಾರತ-ಪಾಕ್ ಗಡಿಯಲ್ಲಿ ಡ್ರಗ್ಸ್ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ಪಾಕಿಸ್ತಾನಿಗಳ ಹತ್ಯೆ

ರಾಜಸ್ಥಾನದ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಡ್ರಗ್ಸ್ ಕಳ್ಳಸಾಗಣೆಯಲ್ಲಿ ತೊಡಗಿರುವ ಶಂಕಿತ ಇಬ್ಬರು ಪಾಕಿಸ್ತಾನಿ ವ್ಯಕ್ತಿಗಳನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹತ್ಯೆ ಮಾಡಿದೆ

Rajasthan: ರಾಜಸ್ಥಾನದ ಭಾರತ-ಪಾಕ್ ಗಡಿಯಲ್ಲಿ ಡ್ರಗ್ಸ್ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ಪಾಕಿಸ್ತಾನಿಗಳ ಹತ್ಯೆ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:May 02, 2023 | 11:04 AM

ಬಾರ್ಮರ್: ರಾಜಸ್ಥಾನ(Rajasthan) ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಡ್ರಗ್ಸ್ ಕಳ್ಳಸಾಗಣೆಯಲ್ಲಿ ತೊಡಗಿರುವ ಶಂಕಿತ ಇಬ್ಬರು ಪಾಕಿಸ್ತಾನಿ ವ್ಯಕ್ತಿಗಳನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹತ್ಯೆ ಮಾಡಿದೆ ಎಂದು ಅಧಿಕೃತ ಮೂಲಗಳು ಮಂಗಳವಾರ ತಿಳಿಸಿವೆ.

ಸೋಮವಾರ ರಾತ್ರಿ ಬಾರ್ಮರ್ ಮುಂಭಾಗದಲ್ಲಿ ಈ ಘಟನೆ ನಡೆದಿದೆ ಎಂದು ಬಿಎಸ್‌ಎಫ್ ಯೋಧರು ತಿಳಿಸಿದ್ದಾರೆ. ತಪಾಸಣೆ ಮಾಡುವ ವೇಳೆ ಸುಮಾರು 3 ಕೆಜಿ ಶಂಕಿತ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ರಾಜಸ್ಥಾನವು ಭಾರತದ ಪಶ್ಚಿಮ ಪಾರ್ಶ್ವದಲ್ಲಿ ಪಾಕಿಸ್ತಾನದೊಂದಿಗೆ ಸುಮಾರು 1,036 ಕಿಮೀ ಉದ್ದದ ಗಡಿಯನ್ನು ಹಂಚಿಕೊಂಡಿದೆ.

Published On - 11:04 am, Tue, 2 May 23