ಜಿ20 ಶೃಂಗಸಭೆ ದಿನ 2: ಮಹಾತ್ಮ ಗಾಂಧಿಗೆ ಗೌರವ ಸಲ್ಲಿಸಲು ರಾಜ್​ಘಾಟ್ ತೆರಳಿದ ಜಿ20 ನಾಯಕರು, ಪ್ರಧಾನಿ ಮೋದಿ ಜತೆ ದ್ವಿಪಕ್ಷೀಯ ಸಭೆ

|

Updated on: Sep 10, 2023 | 8:50 AM

ದೆಹಲಿಯಲ್ಲಿ 2 ದಿನಗಳ ಜಿ20 ಶೃಂಗಸಭೆ ನಿನ್ನೆಯಿಂದ ಶುರುವಾಗಿದೆ, ಎರಡನೇ ದಿನವಾದ ಇಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ದಂಪತಿ ಅಕ್ಷರಧಾಮಕ್ಕೆ ತೆರಳಿದ್ದರೆ, ಇತ್ತ ಜಿ20 ನಾಯಕರು ಮಹಾತ್ಮ ಗಾಂಧಿಗೆ ಗೌರವ ಸಲ್ಲಿಸಲು ರಾಜ್​ಘಾಟ್​ಗೆ ಹೋಗಿದ್ದಾರೆ. ಸ್ಪೇನ್‌ನ ವೈಸ್​ಪ್ರೆಸಿಡೆಂಟ್ ನಾಡಿಯಾ ಕ್ಯಾಲ್ವಿನೋ, ಸಿಂಗಾಪುರದ ಪ್ರಧಾನಿ ಲೀ ಸಿಯೆನ್ ಲೂಂಗ್, ನೆದರ್ಲ್ಯಾಂಡ್ಸ್ ಪ್ರಧಾನಿ ಮಾರ್ಕ್ ರುಟ್ಟೆ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ, ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ, ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನಾಥ್, ಓಮನ್​ನ ಅಸ್ಸಾದ್ ಬಿನ್ ತಾರಿಕ್ ಬಿನ್ ತೈಮೂರ್ ಅಲ್ ಸೈದ್ ತೆರಳಿದ್ದಾರೆ.

ಜಿ20 ಶೃಂಗಸಭೆ ದಿನ 2: ಮಹಾತ್ಮ ಗಾಂಧಿಗೆ ಗೌರವ ಸಲ್ಲಿಸಲು ರಾಜ್​ಘಾಟ್ ತೆರಳಿದ ಜಿ20 ನಾಯಕರು, ಪ್ರಧಾನಿ ಮೋದಿ ಜತೆ ದ್ವಿಪಕ್ಷೀಯ ಸಭೆ
ಮಹಾತ್ಮ ಗಾಂಧಿ
Follow us on

ದೆಹಲಿಯಲ್ಲಿ 2 ದಿನಗಳ ಜಿ20 ಶೃಂಗಸಭೆ ನಿನ್ನೆಯಿಂದ ಶುರುವಾಗಿದೆ, ಎರಡನೇ ದಿನವಾದ ಇಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ದಂಪತಿ ಅಕ್ಷರಧಾಮಕ್ಕೆ ತೆರಳಿದ್ದರೆ, ಇತ್ತ ಜಿ20 ನಾಯಕರು ಮಹಾತ್ಮ ಗಾಂಧಿಗೆ ಗೌರವ ಸಲ್ಲಿಸಲು ರಾಜ್​ಘಾಟ್​ಗೆ ಹೋಗಿದ್ದಾರೆ. ಸ್ಪೇನ್‌ನ ವೈಸ್​ಪ್ರೆಸಿಡೆಂಟ್ ನಾಡಿಯಾ ಕ್ಯಾಲ್ವಿನೋ, ಸಿಂಗಾಪುರದ ಪ್ರಧಾನಿ ಲೀ ಸಿಯೆನ್ ಲೂಂಗ್, ನೆದರ್ಲ್ಯಾಂಡ್ಸ್ ಪ್ರಧಾನಿ ಮಾರ್ಕ್ ರುಟ್ಟೆ
ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ, ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ, ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನಾಥ್, ಓಮನ್​ನ ಅಸ್ಸಾದ್ ಬಿನ್ ತಾರಿಕ್ ಬಿನ್ ತೈಮೂರ್ ಅಲ್ ಸೈದ್ ತೆರಳಿದ್ದಾರೆ.

ಜಿ20 ಶೃಂಗಸಭೆಯ ಎರಡನೇ ದಿನದ ವೇಳಾಪಟ್ಟಿ

8.15 ರಿಂದ 9 ರವರೆಗೆ – ಜಾಗತಿಕ ನಾಯಕರು ಮತ್ತು ನಿಯೋಗಗಳ ಮುಖ್ಯಸ್ಥರು ರಾಜ್‌ಘಾಟ್ ತಲುಪುತ್ತಾರೆ. ರಾಜ್‌ಘಾಟ್‌ನಲ್ಲಿರುವ ಲೀಡರ್ಸ್ ಲಾಂಜ್‌ನಲ್ಲಿ ಶಾಂತಿ ಗೋಡೆಗೆ ಸಹಿ ಹಾಕಲಿದ್ದಾರೆ.
ಬೆಳಿಗ್ಗೆ 9 ರಿಂದ 9.20 ರವರೆಗೆ – ಮಹಾತ್ಮ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವರು. ಮಹಾತ್ಮ ಗಾಂಧೀಜಿಯವರ ನೆಚ್ಚಿನ ಭಕ್ತಿಗೀತೆಗಳ ನೇರಪ್ರಸಾರ ನಡೆಯಲಿದೆ.

ಮತ್ತಷ್ಟು ಓದಿ: ಜಿ20 ಶೃಂಗಸಭೆ: ಅಕ್ಷರಧಾಮಕ್ಕೆ ಭೇಟಿಕೊಟ್ಟ ಬ್ರಿಟನ್ ಪ್ರಧಾನಿ ರಿಷಿ ಸುನಕ್ ದಂಪತಿ

9.20 – ಜಾಗತಿಕ ನಾಯಕರು ಮತ್ತು ನಿಯೋಗಗಳ ಮುಖ್ಯಸ್ಥರು ಲೀಡರ್ಸ್ ಲಾಂಜ್‌ಗೆ ತೆರಳುತ್ತಾರೆ ಮತ್ತು ನಂತರ ಭಾರತ್ ಮಂಟಪಕ್ಕೆ ತೆರಳುತ್ತಾರೆ.
9.40 ರಿಂದ 10.15 ರವರೆಗೆ – ಜಾಗತಿಕ ನಾಯಕರು ಮತ್ತು ನಿಯೋಗಗಳ ಮುಖ್ಯಸ್ಥರು ಭಾರತ ಮಂಟಪವನ್ನು ತಲುಪುತ್ತಾರೆ.
10.15 ರಿಂದ 10.28 ರವರೆಗೆ ಭಾರತ ಮಂಟಪದ ದಕ್ಷಿಣ ಪ್ಲಾಜಾದಲ್ಲಿ ಸಸಿ ನೆಡುವ ಸಮಾರಂಭ ನಡೆಯಲಿದೆ.
ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 12.30 ರವರೆಗೆ – ಜಿ 20 ಸಭೆಯ ಮೂರನೇ ಅಧಿವೇಶನ ಒನ್ ಫ್ಯೂಚರ್ ಪ್ರಾರಂಭವಾಗುತ್ತದೆ.
ಸೆಪ್ಟೆಂಬರ್ 10 ರಂದು (ಭಾನುವಾರ) ಜಿ-20 ಸಭೆಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ 9 ದೇಶಗಳ ಮುಖ್ಯಸ್ಥರನ್ನು ಭೇಟಿ ಮಾಡಲಿದ್ದಾರೆ. ಜಿ20 ಶೃಂಗಸಭೆಯ ಸಮಾರೋಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ನಡುವೆ ಭಾನುವಾರ ಮಧ್ಯಾಹ್ನ 1 ಗಂಟೆಗೆ ಸಭೆ ನಡೆಯಲಿದೆ.
ಪ್ರಧಾನಿ ಮೋದಿ ಅವರು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ ಮತ್ತು ಕೊಮೊರೊಸ್, ಟರ್ಕಿ, ಯುಎಇ, ದಕ್ಷಿಣ ಕೊರಿಯಾ, ಇಯು/ಇಸಿ, ಬ್ರೆಜಿಲ್ ಮತ್ತು ನೈಜೀರಿಯಾ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಅಂತಾರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಫ್ರಾನ್ಸ್ ಅಧ್ಯಕ್ಷರು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ