ಜಿ20 ಶೃಂಗಸಭೆ: ಅಕ್ಷರಧಾಮಕ್ಕೆ ಭೇಟಿಕೊಟ್ಟ ಬ್ರಿಟನ್ ಪ್ರಧಾನಿ ರಿಷಿ ಸುನಕ್ ದಂಪತಿ
ಜಿ20 ಶೃಂಗಸಭೆಗಾಗಿ ದೆಹಲಿಗೆ ಆಗಮಿಸಿರುವ ಬ್ರಿಟನ್ ಪ್ರಧಾನಿ ರಿಷಿ ಸುನಕ್ ದಂಪತಿ ಇಂದು ಅಕ್ಷರಧಾಮಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ರಿಷಿ ದಂಪತಿ ಸುಮಾರು 45 ನಿಮಿಷಗಳ ಕಾಲ ದೇವಸ್ಥಾನದಲ್ಲಿಯೇ ಇರಲಿದ್ದಾರೆ, ಅಕ್ಷರಧಾಮಕ್ಕೆ ರಿಷಿ ಸುನಕ್ ಭೇಟಿಯನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಪೊಲೀಸರು ದೇವಾಲಯದ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕಲ್ಪಿಸಿದ್ದಾರೆ. ಈ ಪ್ರದೇಶಗಳಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದ್ದು, ಜಿ20 ಶೃಂಗಸಭೆಯ ದೃಷ್ಟಿಯಿಂದ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಿ20 ಶೃಂಗಸಭೆಗಾಗಿ ದೆಹಲಿಗೆ ಆಗಮಿಸಿರುವ ಬ್ರಿಟನ್ ಪ್ರಧಾನಿ ರಿಷಿ ಸುನಕ್(Rishi Sunak) ದಂಪತಿ ಇಂದು ಅಕ್ಷರಧಾಮಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ರಿಷಿ ದಂಪತಿ ಸುಮಾರು 45 ನಿಮಿಷಗಳ ಕಾಲ ದೇವಸ್ಥಾನದಲ್ಲಿಯೇ ಇರಲಿದ್ದಾರೆ, ಅಕ್ಷರಧಾಮಕ್ಕೆ ರಿಷಿ ಸುನಕ್ ಭೇಟಿಯನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಪೊಲೀಸರು ದೇವಾಲಯದ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕಲ್ಪಿಸಿದ್ದಾರೆ. ಈ ಪ್ರದೇಶಗಳಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದ್ದು, ಜಿ20 ಶೃಂಗಸಭೆಯ ದೃಷ್ಟಿಯಿಂದ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತನ್ನ ‘ಹಿಂದೂ’ ಬೇರುಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ರಿಷಿ ಸುನಕ್, ಜಿ20 ಶೃಂಗಸಭೆಯ ನಡುವೆ ಭಾರತದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಲು ಸಮಯ ಸಿಗಬಹುದು ಎಂದು ಶನಿವಾರ ಭರವಸೆ ವ್ಯಕ್ತಪಡಿಸಿದ್ದರು. ಸುನಕ್ ದೇವಸ್ಥಾನದಲ್ಲಿ 1 ಗಂಟೆ ಇರುತ್ತಾರೆ ಎಂದು ಹೇಳಲಾಗುತ್ತಿದೆ.
ದೇವಾಲಯದ ಸುತ್ತಲೂ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಲಾಗಿದ್ದು, ಹಲವಾರು ಪೊಲೀಸ್ ಅಧಿಕಾರಿಗಳನ್ನು ಅಲ್ಲಿ ನಿಯೋಜಿಸಲಾಗಿದೆ. ಶುಕ್ರವಾರ, ರಕ್ಷಾ ಬಂಧನವನ್ನು ಆಚರಿಸಿದೆವು, ಆದರೆ ಕೃಷ್ಣ ಜನ್ಮಾಷ್ಟಮಿ ಆಚರಣೆ ಸಾಧ್ಯವಾಗಲಿಲ್ಲ ಹಾಗಾಗಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಇದಕ್ಕೂ ಮುನ್ನ ಶನಿವಾರ ಸುನಕ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಾಕಷ್ಟು ಹೊಗಳಿದ್ದರು .
#WATCH | G 20 in India | On UK Prime Minister Rishi Sunak’s visit to Akshardham Temple, Director of Akshardham Temple, Jyotindra Dave says,”…His experience was extraordinary…He performed the Pooja and Aarti with a lot of faith…We showed him the temple and also gave him a… pic.twitter.com/DQFylPCo8m
— ANI (@ANI) September 10, 2023
ಹಿಂದೂ ಎಂಬ ಅಭಿಮಾನ ವ್ಯಕ್ತಪಡಿಸಿದ ರಿಷಿ ಮಾಧ್ಯಮದವರೊಂದಿಗೆ ಮಾತನಾಡಿದ ರಿಷಿ ಸುನಕ್, ನಾನು ಹಿಂದೂ ಎಂದು ಹೆಮ್ಮೆಪಡುತ್ತೇನೆ. ಇದು ನನ್ನನ್ನು ಬೆಳೆಸಿದ ರೀತಿ ಮತ್ತು ನಾನು ಹೀಗೆಯೇ ಇದ್ದೇನೆ.
ಮತ್ತಷ್ಟು ಓದಿ: ಭಾನುವಾರ ದೆಹಲಿಯ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ ಬ್ರಿಟನ್ ಪ್ರಧಾನಿ ರಿಷಿ ಸುನಕ್
ಈ ದೇವಾಲಯದ ವಿಶೇಷತೆ ಏನು? ಅಕ್ಷರಧಾಮ ದೇವಾಲಯವು ಸ್ವಾಮಿನಾರಾಯಣನ ದೇವಾಲಯವಾಗಿದೆ. ಇದು ಸಾಹಿತ್ಯಿಕ-ಸಾಂಸ್ಕೃತಿಕ ಸ್ಥಳವಾಗಿದೆ. ಈ ದೇವಾಲಯವನ್ನು ಸ್ವಾಮಿನಾರಾಯಣ ಅಕ್ಷರಧಾಮ ಎಂದೂ ಕರೆಯುತ್ತಾರೆ.
ಲಕ್ಷಾಂತರ ಹಿಂದೂ ಸಾಹಿತ್ಯ, ಸಂಸ್ಕೃತಿ ಮತ್ತು ಕಲಾಕೃತಿಗಳ ಆಕರ್ಷಕ ನೋಟವನ್ನು ಈ ದೇವಾಲಯದಲ್ಲಿ ಕಾಣಬಹುದು. ಯಮುನಾ ನದಿಯ ದಡದಲ್ಲಿರುವ ಈ ದೇವಾಲಯವನ್ನು ವಾಸ್ತು ಶಾಸ್ತ್ರ ಮತ್ತು ಪಂಚರಾತ್ರ ಶಾಸ್ತ್ರದ ಪ್ರಕಾರ ನಿರ್ಮಿಸಲಾಗಿದೆ.
ಇಲ್ಲಿ ಅಭಿಷೇಕ ಮಂಟಪ, ಸಹಜ್ ಆನಂದ್ ವಾಟರ್ ಶೋ, ಥೀಮ್ ಗಾರ್ಡನ್ ಮತ್ತು ಮೂರು ಪ್ರದರ್ಶನಗಳು (ಸಹಜ್ ಆನಂದ ದರ್ಶನ, ನೀಲಕಂಠ ದರ್ಶನ ಮತ್ತು ಸಂಸ್ಕೃತಿ ದರ್ಶನ) ಜನರನ್ನು ಆಕರ್ಷಿಸುತ್ತವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:27 am, Sun, 10 September 23