ಭಾನುವಾರ ದೆಹಲಿಯ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ ಬ್ರಿಟನ್ ಪ್ರಧಾನಿ ರಿಷಿ ಸುನಕ್

ಶನಿವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ, ಯುಕೆ ಪ್ರಧಾನಿ ರಿಷಿ ಸುನಕ್ ಅವರೊಂದಿಗೆ ಭಾರತದ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆಯ ಹಿನ್ನಲೆಯಲ್ಲಿ ದ್ವಿಪಕ್ಷೀಯ ಸಭೆ ನಡೆಸಿದರು. ಶೃಂಗಸಭೆಯ ಸ್ಥಳವಾದ ಪ್ರಗತಿ ಮೈದಾನದಲ್ಲಿರುವ ಭಾರತ ಮಂಟಪದಲ್ಲಿ ಉಭಯ ನಾಯಕರ ನಡುವೆ ಸಭೆ ನಡೆಯಿತು.

ಭಾನುವಾರ ದೆಹಲಿಯ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ ಬ್ರಿಟನ್ ಪ್ರಧಾನಿ ರಿಷಿ ಸುನಕ್
ರಿಷಿ ಸುನಕ್- ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on: Sep 09, 2023 | 5:27 PM

ದೆಹಲಿ ಸೆಪ್ಟೆಂಬರ್ 09: ಜಿ20 ಶೃಂಗಸಭೆಗಾಗಿ (G20  Summit) ಭಾರತಕ್ಕೆ ಆಗಮಿಸಿರುವ ಬ್ರಿಟನ್ ಪ್ರಧಾನಿ ರಿಷಿ ಸುನಕ್ (Rishi Sunak) ಅವರು ಭಾನುವಾರ (ಸೆಪ್ಟೆಂಬರ್ 10) ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ (Akshardham temple) ಭೇಟಿ ನೀಡಲಿದ್ದಾರೆ.ಎಎನ್‌ಐ ಜೊತೆ ಮಾತನಾಡಿದ ರಿಷಿ ಸುನಕ್ ನಾಳೆ ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ. ತನ್ನ ‘ಹಿಂದೂ’ ಬೇರುಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ರಿಷಿ ಸುನಕ್ G20 ಶೃಂಗಸಭೆಗಾಗಿ ಭಾರತಕ್ಕೆ ಬಂದಿರುವ ಹೊತ್ತಲ್ಲಿ ಇಲ್ಲಿನ ದೇವಾಲಯಕ್ಕೆ ಭೇಟಿ ನೀಡಲು ಸಮಯವನ್ನು ಕಂಡುಕೊಳ್ಳುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

ಶುಕ್ರವಾರ  ಎನ್‌ಐಗೆ ಜತೆ ಮಾತನಾಡಿದ ರಿಷಿ ಸುನಕ್, “ನಾನು ಹೆಮ್ಮೆಯ ಹಿಂದೂ. ನಾನು ಬೆಳೆದದ್ದು ಹೀಗೆ, ಮತ್ತು ನಾನು ಹೀಗೇ ಇದ್ದೇನೆ. ನಾನು ಇಲ್ಲಿರುವಾಗ ಮುಂದಿನ ಒಂದೆರಡು ದಿನ ಮಂದಿರಕ್ಕೆ ಭೇಟಿ ನೀಡಬಹುದು. ನಾವು ರಕ್ಷಾಬಂಧನವನ್ನು ಆಚರಿಸುತ್ತೇವೆ. ನನ್ನ ಸಹೋದರಿ ಮತ್ತು ನನ್ನ ಸೋದರಸಂಬಂಧಿಗಳು ಕಟ್ಟಿದ ರಾಖಿ ನನ್ನ ಬಳಿ ಇದೆ ಎಂದಿದ್ದಾರೆ.  ನನಗೆ ಜನ್ಮಾಷ್ಟಮಿಯನ್ನು ಆಚರಿಸಲು ಸಮಯವಿರಲಿಲ್ಲ. ಆದರೆ ನಾನು ಹೇಳಿದಂತೆ, ನಾವು ಈ ಬಾರಿ ಮಂದಿರಕ್ಕೆ ಭೇಟಿ ನೀಡಿದರೆ ನಾನು ಅದನ್ನು ಸರಿದೂಗಿಸಬಹುದು” ಎಂದು ಅವರು ಹೇಳಿದರು.

ನಂಬಿಕೆಯು ಬಹಳ ಮುಖ್ಯವಾದುದು, ಏಕೆಂದರೆ ಅದು ಒತ್ತಡದ ಸಮಯದಲ್ಲಿ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವವನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.

ಶನಿವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ, ಯುಕೆ ಪ್ರಧಾನಿ ರಿಷಿ ಸುನಕ್ ಅವರೊಂದಿಗೆ ಭಾರತದ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆಯ ಹಿನ್ನಲೆಯಲ್ಲಿ ದ್ವಿಪಕ್ಷೀಯ ಸಭೆ ನಡೆಸಿದರು. ಶೃಂಗಸಭೆಯ ಸ್ಥಳವಾದ ಪ್ರಗತಿ ಮೈದಾನದಲ್ಲಿರುವ ಭಾರತ ಮಂಟಪದಲ್ಲಿ ಉಭಯ ನಾಯಕರ ನಡುವೆ ಸಭೆ ನಡೆಯಿತು.

ಈ ವರ್ಷದ ಮೇನಲ್ಲಿ ಹಿರೋಷಿಮಾದಲ್ಲಿ ನಡೆದ ಜಿ7 ಶೃಂಗಸಭೆಯ ಹಿನ್ನೆಲೆಯಲ್ಲಿ ಉಭಯ ನಾಯಕರ ನಡುವೆ ಮಾತುಕತೆಗಳು ನಡೆದಿವೆ. ಇದರಲ್ಲಿ ಅವರು ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದ, ನಾವೀನ್ಯತೆ ಮತ್ತು ವಿಜ್ಞಾನ, ಜೊತೆಗೆ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದ್ದಾರೆ. ಉಭಯ ದೇಶಗಳು ಮುಕ್ತ ವ್ಯಾಪಾರ ಒಪ್ಪಂದವನ್ನು ಮಾತುಕತೆ ನಡೆಸುತ್ತಿದ್ದು, ಮಾತುಕತೆಗಳು 2022 ರಲ್ಲಿ ಪ್ರಾರಂಭವಾಯಿತು. ಯುಕೆ-ಭಾರತ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) 12 ನೇ ಸುತ್ತಿನ ಮಾತುಕತೆಗಳು ಈ ವರ್ಷ ಆಗಸ್ಟ್ 8 ರಿಂದ 31 ರವರೆಗೆ ನಡೆದವು. ಈ ವರ್ಷದ ಆಗಸ್ಟ್‌ನಲ್ಲಿ, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮತ್ತು ಯುಕೆಯ ವ್ಯಾಪಾರದ ಕಾರ್ಯದರ್ಶಿ ಕೆಮಿ ಬಡೆನೊಚ್ ಮಾತುಕತೆ ನಡೆಸಿದ್ದರು. 13ನೇ ಸುತ್ತಿನ ಮಾತುಕತೆ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ.

ಶನಿವಾರ ಮೋದಿ ಮತ್ತು ರಿಷಿ ಸುನಕ್ ಜಿ 20 ಶೃಂಗಸಭೆಯ ಸಂದರ್ಭದಲ್ಲಿ ‘ಒನ್ ಅರ್ಥ್’ ಸೆಷನ್ 1 ರಲ್ಲಿ ಭಾಗವಹಿಸಿದ್ದರು. ನಾಯಕತ್ವವನ್ನು ಒದಗಿಸಲು ಜಗತ್ತು ಜಿ 20 ಗೆ ನೋಡುತ್ತಿದೆ. ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ನಾವು ಭೇಟಿಯಾಗುತ್ತಿದ್ದೇವೆ ಎಂದು ಸುನಕ್ ಹೇಳಿದರು.

ಇದನ್ನೂ ಓದಿ: G20 Summit: ನಾಯಕರ ಘೋಷಣೆಗೆ ಜಿ20 ಒಮ್ಮತ: ಪ್ರಧಾನಿ ಮೋದಿ

X ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಸುನಕ್ ಅವರು, “15 ವರ್ಷಗಳ ಹಿಂದೆ, ಆರ್ಥಿಕ ಬಿಕ್ಕಟ್ಟಿನ ನಂತರ ಜಾಗತಿಕ ಬೆಳವಣಿಗೆಯನ್ನು ಪುನಃಸ್ಥಾಪಿಸಲು ಜಿ20 ನಾಯಕರು ಮೊದಲ ಬಾರಿಗೆ ಒಟ್ಟು ಸೇರಿದ್ದಾರೆ. ನಾವು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಹೊತ್ತಲ್ಲಿ ಇದು ನಡೆಯುತ್ತಿದೆ. ಜಗತ್ತು ಒಮ್ಮೆ G20 ಕಡೆಗೆ ನೋಡುತ್ತಿದೆ. ನಾವುಒಟ್ಟಾಗಿ, ನಾವು ಈ ಸವಾಲುಗಳನ್ನು ಎದುರಿಸಬಹುದು ಎಂದು ನಾನು ನಂಬುತ್ತೇನೆ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ