G20 Summit: ತಾಜ್ ಮಹಲ್‌ಗೆ ಭೇಟಿ ನೀಡಿದ ಇಂಡೋನೇಷ್ಯಾ ಅಧ್ಯಕ್ಷರ ಮಗ-ಸೊಸೆ
ಜಿ20 ಶೃಂಗಸಭೆ 2023: ಜಿ20 ಶೃಂಗಸಭೆಗೆ ಭಾಗವಹಿಸಲು ಬಂದಿರುವ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ ಜತೆಗೆ ಅವರ ಕುಟುಂಬವು ಕೂಡ ಭಾರತಕ್ಕೆ ಭೇಟಿ ನೀಡಿದ್ದಾರೆ. ದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯುತ್ತಿದ್ದರೆ, ಜೋಕೊ ವಿಡೋಡೊ ಮಗ ಮತ್ತು ಸೊಸೆ ಆಗ್ರಾದ ತಾಜ್ ಮಹಲ್‌ಗೆ ಭೇಟಿ ನೀಡಿ ಫೋಟೋ ಕ್ಲಿಕಿಸಿಕೊಂಡಿದ್ದಾರೆ.
ದೆಹಲಿ, ಸೆ.9: ರಾಷ್ಟ್ರರಾಜಧಾನಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ (G20 Summit) ವಿದೇಶಿ ನಾಯಕರು ಭಾಗಿಯಾಗಿದ್ದು, ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಹಲವು ಒಪ್ಪಂದಗಳಿಗೆ ಈ ಸಭೆ ಸಾಕ್ಷಿಯಾಗಲಿದೆ. ಇನ್ನು ಈ ಶೃಂಗಸಭೆಗೆ ಬರುವ ವಿವಿಧ ದೇಶದ ನಾಯಕರುಗಳ ಜತೆಗೆ ಅವರ ಕುಟುಂಬದ ಸದಸ್ಯರು ಕೂಡ ಬರುತ್ತಾರೆ. ಭಾರತದ ಅನೇಕ ಐತಿಹಾಸಿಕ ಪ್ರದೇಶಗಳಿಗೆ ಭೇಟಿ ನೀಡಿ. ಅಲ್ಲಿಯ ವೈಭವಗಳನ್ನು ಅಭವಿಸುತ್ತಾರೆ. ಇದೀಗ ಜಿ20 ಶೃಂಗಸಭೆಗೆ ಭಾಗವಹಿಸಲು ಬಂದಿರುವ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ ಜತೆಗೆ ಅವರ ಕುಟುಂಬವು ಕೂಡ ಭಾರತಕ್ಕೆ ಭೇಟಿ ನೀಡಿದ್ದಾರೆ. ದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯುತ್ತಿದ್ದರೆ, ಜೋಕೊ ವಿಡೋಡೊ ಅವರ ಮಗ ಮತ್ತು ಸೊಸೆ ಆಗ್ರಾದ ತಾಜ್ ಮಹಲ್‌ಗೆ ಭೇಟಿ ನೀಡಿ ಫೋಟೋ ಕ್ಲಿಕಿಸಿಕೊಂಡಿದ್ದಾರೆ. ಜೋಕೊ ವಿಡೋಡೊ ಅವರ ಮಗ ಕೇಸಾಂಗ್ ಪಂಗರೆಪ್ ಮತ್ತು ಸೊಸೆ ಎರಿನಾ ಗುಡೋನೊ ತಾಜ್ ಮಹಲ್ ಸ್ಮಾರಕದ ಮುಂದೆ ಒಂದಿಷ್ಟು ಸಮಯವನ್ನು ಕಳೆದಿರುವ ವಿಡಿಯೊವನ್ನು ಸುದ್ದಿಸಂಸ್ಥೆ ANI ಟ್ವಿಟರ್ನಲ್ಲಿ ಹಂಚಿಕೊಂಡಿದೆ.
ಜೋಕೊ ವಿಡೋಡೊ ಅವರ ಮೂರನೇ ಮಗ ಉದ್ಯಮಿ ಮತ್ತು ಯೂಟ್ಯೂಬರ್ ಕೇಸಾಂಗ್ ಪಂಗರೆಪ್ ಅವರು ಹೆಂಡತಿ ಹಾಗೂ ಮಗುವಿನೊಂದಿಗೆ ತಾಜ್ ಮಹಲ್‌ಗೆ ಭೇಟಿ ನೀಡಿದ್ದಾರೆ. ಇನ್ನು ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲು ಜೋಕೊ ವಿಡೋಡೊ ಅವರು ತಮ್ಮ ಕುಟುಂಬದ ಜತೆಗೆ ಶುಕ್ರವಾರ ಭಾರತಕ್ಕೆ ಆಗಮಿಸಿದ್ದರು. ಅವರನ್ನು ಸಚಿವ ಶಾಂತನು ಠಾಕೂರ್ ಅವರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದಾರೆ.
ತಾಜ್ ಮಹಲ್‌ಗೆ ಭೇಟಿ ನೀಡಿದ ಇಂಡೋನೇಷ್ಯಾ ಅಧ್ಯಕ್ಷರ ಮಗ-ಸೊಸೆ
#WATCH | Uttar Pradesh | Indonesian President Joko Widodo’s son Kaesang Pangarep and his wife Erina Gudono visit the Taj Mahal in Agra. pic.twitter.com/e0IjSFDugR
— ANI (@ANI) September 9, 2023
ಭಾರತದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಗೂ ಮುನ್ನ ಪ್ರಧಾನಿ ಮೋದಿ ಅವರು ಇಂಡೋನೇಷ್ಯಾದ ಜಕಾರ್ತಾದಲ್ಲಿ 18ನೇ ಪೂರ್ವ-ಏಷ್ಯಾ ಶೃಂಗಸಭೆ ಮತ್ತು 20ನೇ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು, ಇದೀಗ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ ಅವರು ಭಾರತದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ.
ಇದನ್ನೂ ಓದಿ: ಜಿ20 ಶೃಂಗಸಭೆಗೆ ಬಂದ ವಿದೇಶಿ ಅತಿಥಿಗಳಿಗೆ ವಿಶೇಷ ಸ್ಮರಣಿಕೆ, ಹಿತ್ತಾಳೆ ನಾಡಿನಿಂದ ದೆಹಲಿಗೆ ಬಂತು ಕಮಲ
ಸೆಪ್ಟೆಂಬರ್ 9 ಮತ್ತು 10 ರಂದು ನವದೆಹಲಿಯ ಅತ್ಯಾಧುನಿಕ ಭಾರತ್ ಮಂಟಪಂ ಕನ್ವೆನ್ಷನ್ ಸೆಂಟರ್‌ನಲ್ಲಿ 18ನೇ ಜಿ 20 ಶೃಂಗಸಭೆ ನಡೆಯುತ್ತಿದೆ. ಭಾರತದ ಅಧ್ಯಕ್ಷತೆಯಲ್ಲಿ ಜಿ 20 ಶೃಂಗಸಭೆ ಇದೇ ಮೊದಲ ಬಾರಿಗೆ ನಡೆಯುತ್ತಿದೆ. ಇನ್ನು ಈ ಶೃಂಗಸಭೆಯಲ್ಲಿ “ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ” ವಿಚಾರದಡಿಯಲ್ಲಿ ಹಲವು ವಿಚಾರದ ಬಗ್ಗೆ ಚರ್ಚೆ ನಡೆಯಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:10 pm, Sat, 9 September 23