G20 summit: ಜಿ20 ಶೃಂಗಸಭೆಗೆ ಬಂದ ವಿದೇಶಿ ಅತಿಥಿಗಳಿಗೆ ವಿಶೇಷ ಸ್ಮರಣಿಕೆ, ಹಿತ್ತಾಳೆ ನಾಡಿನಿಂದ ದೆಹಲಿಗೆ ಬಂತು ಕಮಲ
ಜಿ20 ಶೃಂಗಸಭೆಗೆ ಬಂದ ಗಣ್ಯರಿಗೆ ಮೋದಿ ಅವರು ವಿಶೇಷ ಉಡುಗೊರೆ ನೀಡಲು ನಿರ್ಧಾರಿಸಿದ್ದಾರೆ. ಜಿ20ಗೆ ಬಂದ ಗಣ್ಯರಿಗೆ ಹಿತ್ತಾಳೆಯಿಂದ ತಯಾರಿಸಿದ ಉತ್ತರ ಪ್ರದೇಶ ಬುಂದೇಲ್‌ಖಂಡ್‌ನ ಮಹೋಬಾದ ಕಮಲ ಕಲಾಕೃತಿಯನ್ನು ನೀಡಲಿದ್ದಾರೆ.
ಕಾನ್ಪುರ, ಸೆ.9: ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಗೆ (G20 summit) ಬಂದಿರುವ ಅತಿಥಿಗಳಿಗೆ ವಿಶೇಷ ಸ್ಮರಣಿಕೆಯೊಂದು ತಯಾರಾಗಿದೆ, ಪ್ರಧಾನಿ ಮೋದಿ ಅವರು ಭಾರತಕ್ಕೆ ಯಾವುದೇ ದೇಶದ ಪ್ರಧಾನಿ, ಅಧ್ಯಕ್ಷ, ನಾಯಕರು ಯಾರೇ ಬಂದರು ಅವರಿಗೆ ದೇಶದ ಸಂಸ್ಕೃತಿಯನ್ನು ಸೂಚಿಸುವ ಸ್ಮರಣಿಕೆಗಳನ್ನೇ ನೀಡುತ್ತಾರೆ. ಈ ಬಾರಿಯ ಜಿ20 ಶೃಂಗಸಭೆಗೆ ಬಂದ ಗಣ್ಯರಿಗೆ ಮೋದಿ ಅವರು ವಿಶೇಷ ಉಡುಗೊರೆ ನೀಡಲು ನಿರ್ಧಾರಿಸಿದ್ದಾರೆ. ಜಿ20ಗೆ ಬಂದ ಗಣ್ಯರಿಗೆ ಹಿತ್ತಾಳೆಯಿಂದ ತಯಾರಿಸಿದ ಉತ್ತರ ಪ್ರದೇಶ ಬುಂದೇಲ್‌ಖಂಡ್‌ನ ಮಹೋಬಾದ ಕಮಲ ಕಲಾಕೃತಿಯನ್ನು ನೀಡಲಿದ್ದಾರೆ.
ಇನ್ನು ಈ ಕಲಾಕೃತಿಯನ್ನು ಉತ್ತರ ಪ್ರದೇಶ ಬುಂದೇಲ್‌ಖಂಡ್‌ನ ಮಹೋಬಾದ ಲೋಹದ ಕುಶಲಕರ್ಮಿ, ರಾಷ್ಟ್ರ ಪ್ರಶಸ್ತಿ ವಿಜೇತ ಮನಮೋಹನ್ ಸೈನಿ ರಚಿಸಿದ್ದಾರೆ. ಈ ಶೃಂಗಸಭೆಗೆ ಯುಪಿ ಕರಕುಶಲ ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ಎಂಟು ತಿಂಗಳ ಹಿಂದೆ 50 ಹಿತ್ತಾಳೆ ಕಮಲಗಳನ್ನು ಸಿದ್ಧಪಡಿಸುವಂತೆ ಹೇಳಿತ್ತು. ಈ ಬಗ್ಗೆ ಮಾತನಾಡಿದ ಮನಮೋಹನ್ ಸೈನಿ ಅವರು ಇಷ್ಟು ದೊಡ್ಡ ಕಾರ್ಯಕ್ಕೆ ನನ್ನ ಈ ಸೇವೆ ತುಂಬಾ ಧನ್ಯತಾ ಭಾವನೆಯನ್ನು ಉಂಟು ಮಾಡಿದೆ. ಇದು ನನಗೆ ಹೊಸ ಜೀವನವನ್ನು ನೀಡಿದೆ ಎಂದು ಹೇಳಿದ್ದಾರೆ.
ಈ ಕಮಲದ ಕಲಾಕೃತಿ 16 ದಳ ಹಾಗೂ ಐದು ಇಂಚು ಎತ್ತರವಾಗಿದೆ. ಇದರಲ್ಲಿ ಎಂಟು ದೊಡ್ಡ ದಳ ಮತ್ತು ಎಂಟು ಚಿಕ್ಕ ದಳಗಳನ್ನು ಹೊಂದಿದೆ. ಇದನ್ನು ಮುಚ್ಚಳು ಮತ್ತು ತೆರೆಯಲು ಆಗುವಂತೆ ವಿನ್ಯಾಸ ಮಾಡಲಾಗಿದೆ. (ಈ ಕಮಲವನ್ನು ಒಂದು ಬಾರಿ ಅರಳಿಸಲು ಮತ್ತು ಮೊಗ್ಗಿನ ಕಮಲದಂತೆ ಮಾಡಲು ಇದನ್ನು ವಿನ್ಯಾಸ ಮಾಡಲಾಗಿದೆ) ಇನ್ನು ಮಹೋಬಾವನ್ನು ಹಿತ್ತಾಳೆ ನಾಡು ಎಂದು ಕರೆಯುವ ಕಾರಣ ಈ ಸ್ಮರಣಿಕೆ ಇನ್ನು ವಿಶೇಷವಾಗಿದೆ.
ಇದನ್ನೂ ಓದಿ:ಆಕಾಶದಲ್ಲಿ ತೇಲಾಡಿದ ಜಿ20 ಶೃಂಗಸಭೆ ಧ್ವಜ, ಸಭೆಗೆ ಸ್ಕೈಡೈವಿಂಗ್ ಮೂಲಕ ಶುಭಕೋರಿದ ವ್ಯಕ್ತಿ
2016ರಲ್ಲಿ ಬಿಜೆಪಿ ಸಂಸದ ಕುನ್ವರ್ ಪುಷ್ಪೇಂದ್ರ ಚಾಂಡೆಲ್ ಅವರು ಪರಿವರ್ತನ್ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಉಡುಗೊರೆಯಾಗಿ ಈ ಕಲಾಕೃತಿಯನ್ನು ನೀಡಿದರು. ಜತೆಗೆ ಈ ಕಲಾಕೃತಿ ಬಗ್ಗೆ ಮೋದಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದರು. ಮನಮೋಹನ್ ಸೈನಿ ಅವರು ಈ ಕಲಾಕೃತಿಯನ್ನು ಅವರ ತಂದೆಯಿಂದ ಕಲಿತ್ತಿದ್ದರೆ ಎಂದು ಹೇಳಿದ್ದಾರೆ. ಇನ್ನು ನನ್ನ ಈ ಕೆಲಸಕ್ಕೆ ಕುಟುಂಬದವರು ತುಂಬಾ ಸಹಾಯ ಮಾಡುತ್ತಾರೆ. ನನ್ನ ಇಬ್ಬರು ಸಹೋದರರಾದ ಆಜಾದ್ ಸೋನಿ ಮತ್ತು ಶಿವಕುಮಾರ್ ಸೋನಿ ಅವರು ಕೂಡ ಇಂತಹ ಕಲಾಕೃತಿಯನ್ನು ತಯಾರಿಸುತ್ತಾರೆ. ಅವರ ಈ ಶ್ರಮಕ್ಕೆ ರಾಜ್ಯಪ್ರಶಸ್ತಿ ಕೂಡ ದೊರಕಿದೆ ಎಂದು ಹೇಳಿದ್ದಾರೆ.
ಈ ಕಮಲದ ಕಲಾಕೃತಿಗಳು ಈಗಾಗಲೇ ದೆಹಲಿಗೆ ತಲುಪಿದ್ದು, ಜಿ20 ಶೃಂಗಸಭೆಯಲ್ಲಿ ಭಾಗವಹಿಸಿದ ವಿದೇಶಿ ಗಣ್ಯರಿಗೆ ನೀಡಲು ಸಿದ್ದವಾಗಿದೆ. ಇಂದು ನಮ್ಮ ರಾಜ್ಯಕ್ಕೂ ಒಂದು ಹೆಮ್ಮೆಯ ವಿಚಾರ ಎಂದು ಬುಂದೇಲ್‌ಖಂಡ್ ಜಿಲ್ಲಾಧಿಕಾರಿ ಮೃದುಲ್ ಚೌಧರಿ ಹೇಳಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ