G20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಂದೆ ಇಂಡಿಯಾ ಬದಲು ಭಾರತ್ ನಾಮಫಲಕ

ಶುಕ್ರವಾರ, ವಿಶ್ವಸಂಸ್ಥೆಯು ದಾಖಲೆಗಳಲ್ಲಿ ಇಂಡಿಯಾ ಹೆಸರನ್ನು ಭಾರತ್ ಎಂದು ಬದಲಾಯಿಸುವುದಾಗಿ ಹೇಳಿದೆ. ಭಾರತ ಸರ್ಕಾರ ಇದಕ್ಕೆ ಸಂಬಂಧಿಸಿದ ಎಲ್ಲಾ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ ಈ ಕೆಲಸ ಮಾಡುತ್ತೇವೆ ಎಂದು ವಿಶ್ವಸಂಸ್ಥೆಯ ವಕ್ತಾರರು ಹೇಳಿದ್ದಾರೆ. ಇಂಡಿಯಾ ಹೆಸರನ್ನು ಬದಲಾಯಿಸುವ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದಾಗ, ಅವರು ನಮಗೆ ತಿಳಿಸುತ್ತಾರೆ. ನಾವು ಯುಎನ್ ದಾಖಲೆಗಳಲ್ಲಿ ಹೆಸರನ್ನು ಬದಲಾಯಿಸುತ್ತೇವೆ ಎಂದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ಮುಖ್ಯ ವಕ್ತಾರ

G20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಂದೆ ಇಂಡಿಯಾ ಬದಲು ಭಾರತ್ ನಾಮಫಲಕ
ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on: Sep 09, 2023 | 12:50 PM

ದೆಹಲಿ ಸೆಪ್ಟೆಂಬರ್ 09: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶನಿವಾರ ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ (G20 Summit) ಉದ್ಘಾಟನಾ ಭಾಷಣ ಮಾಡಿದ್ದಾರೆ.ಅಲ್ಲಿನ ವಿಡಿಯೊ ನೋಡಿದರೆ ಪ್ರಧಾನಿಯ ಮುಂದೆ ಇಡಲಾದ ನಾಮಫಲಕದಲ್ಲಿ ಇಂಡಿಯಾ ಬದಲಿಗೆ ಭಾರತ್  (Bharat)ಎಂದು ಬರೆಯಲಾಗಿದೆ. ಈ ವಾರಾಂತ್ಯದಲ್ಲಿ G20 ಶೃಂಗಸಭೆಯಲ್ಲಿ ಭಾಗವಹಿಸುವ ವಿದೇಶಿ ನಾಯಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕಚೇರಿ ನೀಡಿದ ಭೋಜನಕೂಟದ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲು ಪ್ರೆಸಿಡೆಂಟ್ ಆಫ್ ಭಾರತ್ ಎಂದ ಬರೆದಿದ್ದು, ಇದು ಭಾರೀ ಚರ್ಚೆಗೀಡಾಗಿತ್ತು.

ಶುಕ್ರವಾರ, ವಿಶ್ವಸಂಸ್ಥೆಯು ದಾಖಲೆಗಳಲ್ಲಿ ಇಂಡಿಯಾ ಹೆಸರನ್ನು ಭಾರತ್ ಎಂದು ಬದಲಾಯಿಸುವುದಾಗಿ ಹೇಳಿದೆ. ಭಾರತ ಸರ್ಕಾರ ಇದಕ್ಕೆ ಸಂಬಂಧಿಸಿದ ಎಲ್ಲಾ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ ಈ ಕೆಲಸ ಮಾಡುತ್ತೇವೆ ಎಂದು ವಿಶ್ವಸಂಸ್ಥೆಯ ವಕ್ತಾರರು ಹೇಳಿದ್ದಾರೆ. ಇಂಡಿಯಾ ಹೆಸರನ್ನು ಬದಲಾಯಿಸುವ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದಾಗ, ಅವರು ನಮಗೆ ತಿಳಿಸುತ್ತಾರೆ. ನಾವು ಯುಎನ್ ದಾಖಲೆಗಳಲ್ಲಿ ಹೆಸರನ್ನು ಬದಲಾಯಿಸುತ್ತೇವೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ಮುಖ್ಯ ವಕ್ತಾರ ಸ್ಟೀಫನ್ ಡುಜಾರಿಕ್ ಎನ್​​​ಡಿಟಿವಿಗೆ ತಿಳಿಸಿದ್ದಾರೆ.

ಮುಂಬರುವ ಸಂಸತ್ ವಿಶೇಷ ಅಧಿವೇಶನಕ್ಕೆ ಮುಂಚಿತವಾಗಿ ಇಂಡಿಯಾ- ಭಾರತ್ ಚರ್ಚೆ ನಡೆದಿದೆ. ಅಂದಹಾಗೆ ಅಧಿವೇಶನದ ರ ಕಾರ್ಯಸೂಚಿಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ, ಹಾಗಾಗಿ ಅಧಿವೇಶನದಲ್ಲಿ ಹೆಸರು ಬದಲಾವಣೆ ಮಸೂದೆ ಇಲ್ಲಿ ಅಂಗೀಕರಿಸಬಹುದು ಎಂಬ ವದಂತಿ ಹರಡಿದ. ಆಡಳಿತಾರೂಢ ಬಿಜೆಪಿಯ ಸದಸ್ಯರು ಭಾರತ್ ಎಂಬ ಹೆಸರಿಗೆ ಇಂಡಿಯಾಗಿಂತ ಪ್ರಾಮುಖ್ಯತೆ ನೀಡಬೇಕು ಎಂದು ಸೂಚಿಸಿದರೆ, ವಿರೋಧ ಪಕ್ಷದ ನಾಯಕರು ಇದನ್ನು ಸಂವಿಧಾನದಲ್ಲಿ ‘ಭಾರತ್’ ಎಂದು ಈಗಾಗಲೇ ಉಲ್ಲೇಖಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ:  G20 Summit 2023: ಇದು ಜನರ ಜಿ20 ಎಂದ ಪ್ರಧಾನಿ ಮೋದಿ, ಆಫ್ರಿಕನ್ ಯೂನಿಯನ್​ಗೆ ಸದಸ್ಯತ್ವ ಘೋಷಣೆ

‘ಭಾರತ್’ ವಿಚಾರದಲ್ಲಿ ರಾಜಕೀಯ ಗಲಾಟೆ ತಪ್ಪಿಸುವಂತೆ ಸಚಿವರಿಗೆ ಮೋದಿ ಸೂಚನೆ

ಮೋದಿ ಅವರು ಬುಧವಾರ ತಮ್ಮ ಸಚಿವ ಸಹೋದ್ಯೋಗಿಗಳಿಗೆ ‘ಭಾರತ್’ ವಿಷಯದ ಸುತ್ತಲಿನ ರಾಜಕೀಯ ಗದ್ದಲವನ್ನು ತಪ್ಪಿಸಲು ಹೇಳಿದ್ದು, ಇದು ದೇಶದ ಪ್ರಾಚೀನ ಹೆಸರಾಗಿದೆ ಎಂದು ಹೇಳಿದ್ದಾರೆ. ಸಂವಿಧಾನದ ಇಂಗ್ಲಿಷ್ ಆವೃತ್ತಿಯ ಪೀಠಿಕೆಯು ” We, the people of India… ಎಂಬ ಪದಗಳೊಂದಿಗೆ ಪ್ರಾರಂಭವಾಗುತ್ತದೆ. ಸಂವಿಧಾನದಲ್ಲಿ “India, that is Bharat, shall be a Union of States” ಎಂದು ಹೇಳುತ್ತದೆ.

ಸಂವಿಧಾನ ಹಿಂದಿಯಲ್ಲಿ ಇಂಡಿಯಾ ಇರುವಲ್ಲೆಲ್ಲ ಭಾರತ್ ಎಂದು ಇದೆ. ದೇಶದ ಹೆಸರುಗಳನ್ನು ವ್ಯಾಖ್ಯಾನಿಸುವ ಭಾಗವನ್ನು ಹೊರತುಪಡಿಸಿ, ಹಿಂದಿಯಲ್ಲಿ Bharat, that is India, shall be a Union of States ಎಂದು ಇದರಲ್ಲಿ ಇದೆ. ಇಂಡಿಯಾ ಹೆಸರನ್ನು ಭಾರತ್ ಎಂದು ಬದಲಾಯಿಸಲು ಸಂವಿಧಾನದ ತಿದ್ದುಪಡಿಯ ಅಗತ್ಯವಿರುತ್ತದೆ, ಇದನ್ನು ಸಂಸತ್ತಿನ ಎರಡೂ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತದಿಂದ ಅಂಗೀಕರಿಸಬೇಕಾಗುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ