G20 Summit 2023: ಇದು ಜನರ ಜಿ20 ಎಂದ ಪ್ರಧಾನಿ ಮೋದಿ, ಆಫ್ರಿಕನ್ ಯೂನಿಯನ್​ಗೆ ಸದಸ್ಯತ್ವ ಘೋಷಣೆ

ಜಿ 20 ಶೃಂಗಸಭೆಯಉದ್ಘಾಟನಾ ಭಾಷಣ ಮಾಡಿದ ಪ್ರಧಾನಿ ಮೋದಿ, ಭಾರತದ ಗಮನವು ಮಾನವ ಕೇಂದ್ರಿತ ಮತ್ತು ಅಂತರ್ಗತ ಅಭಿವೃದ್ಧಿಯ ಮೇಲಿದೆ ಎಂದು ಹೇಳಿದರು. ಶೃಂಗಸಭೆಯನ್ನು ಅವರು ‘ಜನರ G20' ಎಂದು ಬಣ್ಣಿಸಿದರು. ಜತೆಗೆ, ಆಫ್ರಿಕನ್ ಯೂನಿಯನ್ ಕೂಡ ಸದಸ್ಯ ರಾಷ್ಟ್ರಗಳ ಶಾಶ್ವತ ಸದಸ್ಯತ್ವವನ್ನು ಪಡೆಯುತ್ತಿದೆ ಎಂದು ಘೋಷಿಸಿದರು.

G20 Summit 2023: ಇದು ಜನರ ಜಿ20 ಎಂದ ಪ್ರಧಾನಿ ಮೋದಿ, ಆಫ್ರಿಕನ್ ಯೂನಿಯನ್​ಗೆ ಸದಸ್ಯತ್ವ ಘೋಷಣೆ
ಪ್ರಧಾನಿ ನರೇಂದ್ರ ಮೋದಿ
Follow us
|

Updated on:Sep 09, 2023 | 11:35 AM

ನವದೆಹಲಿ, ಸೆಪ್ಟೆಂಬರ್ 9: ಜಿ 20 ಸದಸ್ಯ (G20 Nations) ರಾಷ್ಟ್ರಗಳ ಅನುಮೋದನೆಯ ನಂತರ, ಆಫ್ರಿಕನ್ ಯೂನಿಯನ್ ಕೂಡ ಸದಸ್ಯ ರಾಷ್ಟ್ರಗಳ ಶಾಶ್ವತ ಸದಸ್ಯತ್ವವನ್ನು ಪಡೆಯುತ್ತಿದೆ ಮತ್ತು ಯುರೋಪಿಯನ್ ಒಕ್ಕೂಟದಲ್ಲಿಯೂ ಇದೇ ಸ್ಥಾನಮಾನವನ್ನು ಪಡೆಯುತ್ತದೆ ಪ್ರಧಾನಿ ನರೇಂದ್ರ ಮೋದಿ (Narendra Modi) ಘೋಷಿಸಿದರು. ಜಿ 20 ಶೃಂಗಸಭೆಯ (G20 Summit) ಉದ್ಘಾಟನಾ ಭಾಷಣ ಮಾಡಿದ ಅವರು, ಭಾರತದ ಗಮನವು ಮಾನವ ಕೇಂದ್ರಿತ ಮತ್ತು ಅಂತರ್ಗತ ಅಭಿವೃದ್ಧಿಯ ಮೇಲಿದೆ ಎಂದು ಹೇಳಿದರು. ಶೃಂಗಸಭೆಯನ್ನು ಅವರು ‘ಜನರ G20′ ಎಂದು ಬಣ್ಣಿಸಿದರು.

ಮೊರಾಕೊದಲ್ಲಿ ಸಂಭವಿಸಿದ ಭೂಕಂಪದ ಬಗ್ಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದರು. ಸಂತ್ರಸ್ತರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ ಮೋದಿ, ಇಡೀ ಜಾಗತಿಕ ಸಮುದಾಯವು ಮೊರಾಕೊದ ಜನರೊಂದಿಗೆ ನಿಂತಿದೆ ಎಂದು ಹೇಳಿದರು. ಎಲ್ಲಾ ಗಾಯಾಳುಗಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇವೆ. ಈ ಕಷ್ಟದ ಸಮಯದಲ್ಲಿ ಮೊರಾಕೊಗೆ ಸಾಧ್ಯವಿರುವ ಎಲ್ಲ ನೆರವು ನೀಡಲು ಭಾರತ ಸಿದ್ಧವಾಗಿದೆ ಎಂದು ಮೋದಿ ಹೇಳಿದರು.

ಆಫ್ರಿಕನ್ ಯೂನಿಯನ್ ಸದಸ್ಯಸತ್ವದ ಬಗ್ಗೆ ಪ್ರಸ್ತಾಪಿಸಿದ ಮೋದಿ, ನಿಮ್ಮೆಲ್ಲರ ಒಪ್ಪಿಗೆಯೊಂದಿಗೆ ಆಫ್ರಿಕನ್ ಯೂನಿಯನ್ ಇಂದಿನಿಂದ ಜಿ20 ಖಾಯಂ ಸದಸ್ಯತ್ವ ಪಡೆಯಲಿದೆ ಎಂದು ಘೋಷಿಸಿದರು. ಇದಕ್ಕೆ ಎಲ್ಲ ನಾಯಕರು ಚಪ್ಪಾಳೆಯೊಂದಿಗೆ ಸಹಮತ ವ್ಯಕ್ತಪಡಿಸಿದರು. ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಆಫ್ರಿಕನ್ ಯೂನಿಯನ್ ಅಧ್ಯಕ್ಷ ಅಜಾಲಿ ಅಸ್ಸೌಮಾನಿ ಅವರನ್ನು ವೇದಿಕೆಗೆ ಕರೆತಂದರು ಮತ್ತು ಪ್ರಧಾನಿ ಮೋದಿ ಅವರನ್ನು ತಬ್ಬಿ ಅಭಿನಂದಿಸಿದರು.

ಇದನ್ನೂ ಓದಿ: G20 Summit 2023: ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆ 2023 ನೇರಪ್ರಸಾರ

ಆಹಾರ ಮತ್ತು ಇಂಧನ ನಿರ್ವಹಣೆ, ಭಯೋತ್ಪಾದನೆ, ಸೈಬರ್ ಭದ್ರತೆ, ಆರೋಗ್ಯ, ಇಂಧನ ಅಥವಾ ನೀರಿನ ಭದ್ರತೆಯ ನಡುವಿನ ಸಮಸ್ಯೆಗಳನ್ನು ಪರಿಹರಿಸಲು ಜಾಗತಿಕ ಸಮುದಾಯವು ಒಗ್ಗೂಡಲು ಮತ್ತು ಪರಿಹಾರವನ್ನು ಕಂಡುಕೊಳ್ಳುವ ಸಮಯ ಕೂಡಿಬಂದಿದೆ. ಉತ್ತರ ಮತ್ತು ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಒದಾಗಬೇಕಿದೆ ಎಂದು ಮೋದಿ ಹೇಳಿದರು.

ಸಬ್​ ಕಾ ಸಾಥ್ ಸಬ್​ ಕಾ ವಿಶ್ವಾಸ್; ಮೋದಿ ಭಾಷಣದ ಮುಖ್ಯಾಂಶಗಳು

  • ‘ಸಬ್​ ಕಾ ಸಾಥ್, ಸಬ್​ ಕಾ ವಿಕಾಸ್, ಸಬ್​ ಕಾ ವಿಶ್ವಾಸ್, ಸಬ್​ ಕಾ ಪ್ರಯಾಸ್’ ಎಂಬ ಕಲ್ಪನೆಯು ಜಗತ್ತಿಗೆ ಮಾರ್ಗದರ್ಶಿಯಾಗಬಹುದು.
  • ಹಳೆಯ ಸಮಸ್ಯೆಗಳಿಗೆ ಉತ್ತರಗಳನ್ನು ಹುಡುಕುತ್ತಿರುವ ಕಾಲದಲ್ಲಿ ನಾವು ವಾಸಿಸುತ್ತಿದ್ದೇವೆ. ಮಾನವ ಕೇಂದ್ರಿತ ವಿಧಾನದೊಂದಿಗೆ ನಮ್ಮ ಜವಾಬ್ದಾರಿಗಳನ್ನು ಪೂರೈಸುವ ಅಗತ್ಯವಿದೆ.
  • ಕಳೆದ ಒಂದು ವರ್ಷದಲ್ಲಿ, ಭಾರತದಾದ್ಯಂತ ಹಲವಾರು ನಗರಗಳಲ್ಲಿ 60 ದೇಶಗಳು 200 ಸಭೆಗಳಲ್ಲಿ ಭಾಗವಹಿಸಿದ್ದವು.
  • ನಮ್ಮ ಧ್ಯೇಯವಾಕ್ಯ, ‘ಸಬ್​ ಕಾ ಸಾಥ್ ಸಬ್​ ಕಾ ವಿಶ್ವಾಸ್’ ರೀತಿಯಲ್ಲಿ ನಾವು ಆಫ್ರಿಕನ್ ಯೂನಿಯನ್ ಅನ್ನು ಜಿ-20 ನಲ್ಲಿ ಶಾಶ್ವತ ಸದಸ್ಯರನ್ನಾಗಿ ಸೇರಿಸಲು ಪ್ರಸ್ತಾಪಿಸಿದ್ದೇವೆ.
  • ನಾವು ಕೋವಿಡ್ ಅನ್ನು ಸೋಲಿಸಲು ಸಾಧ್ಯವಾಗಿದೆ ಎಂದರೆ, ಯುದ್ಧದಿಂದ ಉಂಟಾದ ನಂಬಿಕೆಯ ಕೊರತೆಯನ್ನು ದೂರ ಮಾಡಲೂ ನಮ್ಮಿಂದ ಸಾಧ್ಯವಾಗಬಹುದು.
  • ಕೋವಿಡ್ ನಂತರದ ಪ್ರಪಂಚವು ನಂಬಿಕೆಯ ಕೊರತೆಯಿಂದ ಬಳಲುತ್ತಿದೆ ಮತ್ತು ಯುದ್ಧವು ಅದನ್ನು ಮತ್ತಷ್ಟು ಹೆಚ್ಚಾಗಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:20 am, Sat, 9 September 23