AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಟ್ಟುಹಬ್ಬದ ದಿನ ಹೂವಿನ ಹಾರದ ಬದಲು ಕುತ್ತಿಗೆಗೆ ಹಾವು ಸುತ್ತಿಕೊಂಡ ಕಾಂಗ್ರೆಸ್ ಶಾಸಕ

ತನ್ನ ಬೆಂಬಲಿಗರು ನೀಡಿದ ಗಂಧದ ಹಾರಗಳು, ಹೂವಿನ ಹಾರಗಳನ್ನು ಸ್ವೀಕರಿಸಲು ನಿರಾಕರಿಸಿದ ಕಾಂಗ್ರೆಸ್ ಶಾಸಕ ಬಾಬು ಜಂಡೆಲ್ ಹಾರದ ಬದಲಾಗಿ ತಮ್ಮ ಕುತ್ತಿಗೆಗೆ ಜೀವಂತ ಹಾವನ್ನು ಸುತ್ತಿಕೊಂಡು ಕೇಕ್ ಕಟ್ ಮಾಡಿದರು.ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಹುಟ್ಟುಹಬ್ಬದ ದಿನ ಹೂವಿನ ಹಾರದ ಬದಲು ಕುತ್ತಿಗೆಗೆ ಹಾವು ಸುತ್ತಿಕೊಂಡ ಕಾಂಗ್ರೆಸ್ ಶಾಸಕ
ಕುತ್ತಿಗೆಗೆ ಹಾವು ಸುತ್ತಿಕೊಂಡಿರುವ ಕಾಂಗ್ರೆಸ್ ಶಾಸಕ ಬಾಬು ಜಂಡೇಲ್
ಸುಷ್ಮಾ ಚಕ್ರೆ
|

Updated on:Sep 09, 2023 | 2:23 PM

Share

ನವದೆಹಲಿ: ಮಧ್ಯಪ್ರದೇಶದ ಶಿಯೋಪುರದ ಕಾಂಗ್ರೆಸ್ ಶಾಸಕ ಬಾಬು ಜಂಡೆಲ್ (Babu Jandel) ಶುಕ್ರವಾರ ತಮ್ಮ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡರು. ತನ್ನ ಬೆಂಬಲಿಗರು ನೀಡಿದ ಗಂಧದ ಹಾರಗಳು, ಹೂವಿನ ಹಾರಗಳನ್ನು ಸ್ವೀಕರಿಸಲು ನಿರಾಕರಿಸಿದ ಬಾಬು ಜಂಡೆಲ್ ಹಾರದ ಬದಲಾಗಿ ತಮ್ಮ ಕುತ್ತಿಗೆಗೆ ಜೀವಂತ ಹಾವನ್ನು ಸುತ್ತಿಕೊಂಡು ಕೇಕ್ ಕಟ್ ಮಾಡಿದರು.ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಲ್ಲಿ ಬಾಬು ಜಂಡೆಲ್ ಕುತ್ತಿಗೆಗೆ ಹಾವು ಸುತ್ತಿಕೊಂಡು ತನ್ನ ಬೆಂಬಲಿಗರನ್ನು ಸ್ವಾಗತಿಸುತ್ತಿರುವುದನ್ನು ಕಾಣಬಹುದು. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಬಾಬು ಜಂಡೇಲ್, “ನನ್ನ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸುತ್ತೇನೆ. ಪ್ರಾಣಿಗಳು ನನ್ನ ಸ್ನೇಹಿತರಂತೆ. ನನ್ನ ಹಿತ್ತಲಿನಲ್ಲಿ ರಾತ್ರಿ ಮಲ್ಲಿಗೆ ಗಿಡವಿದೆ. ಅಲ್ಲಿಗೆ ಹಾವುಗಳು ಆಗಾಗ ಬರುತ್ತವೆ. ಹಾವು ಶಿವನನ್ನು ಪ್ರತಿನಿಧಿಸುತ್ತದೆ, ಆದ್ದರಿಂದ ನಾನು ಅದನ್ನು ನನ್ನ ಕತ್ತಿನ ಸುತ್ತಲೂ ಸುತ್ತಿಕೊಂಡಿದ್ದೇನೆ. ನನ್ನ ಜನ್ಮದಿನದ ಸಂದರ್ಭದಲ್ಲಿ ದೇವತೆಗೆ ನನ್ನ ಭಕ್ತಿಯ ಒಂದು ರೂಪವಾಗಿ ಕುತ್ತಿಗೆಗೆ ಹಾವನ್ನು ಸುತ್ತಿಕೊಂಡಿದ್ದೇನೆ” ಎಂದಿದ್ದಾರೆ.

ಇದನ್ನೂ ಓದಿ: Dream Astrology: ಕನಸಿನಲ್ಲಿ ಹಾವನ್ನು ನೋಡುವುದು ಮಂಗಳಕರವೇ ಅಥವಾ ಅಶುಭವೇ? ಈ ಕನಸು ಭವಿಷ್ಯ ನಿರ್ಧಾರ ಮಾಡುತ್ತದೆಯೇ?

ತಮ್ಮ ವಿಚಿತ್ರ ಹೇಳಿಕೆಗಳು ಮತ್ತು ವರ್ತನೆಗಳಿಂದಾಗಿ ಕಾಂಗ್ರೆಸ್ ನಾಯಕರು ರಾಜಕೀಯ ಮತ್ತು ಆಡಳಿತ ವಲಯದಲ್ಲಿ ಚರ್ಚೆಯ ವಿಷಯವಾಗಿದ್ದಾರೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಸಂಸದ ವಿಧಾನಸಭೆಯಲ್ಲಿ ಪ್ರವಾಹದ ವಿಚಾರವಾಗಿ ಕುರ್ತಾ ಹರಿದುಕೊಂಡು ಪ್ರತಿಭಟನೆ ನಡೆಸಿದ್ದರು. ಕಳೆದ ವರ್ಷ ನವೆಂಬರ್‌ನಲ್ಲಿ ವಿದ್ಯುತ್ ಸರಬರಾಜು ಮಾಡದಿರುವ ಕುರಿತು ವಿದ್ಯುತ್ ಕಂಬ ಏರಿದ್ದರು.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ರಾಜಕೀಯ ನಾಯಕರು ಸಾರ್ವಜನಿಕರನ್ನು ಓಲೈಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಸಾರ್ವಜನಿಕರ ಸಂತೋಷಕ್ಕಾಗಿ ನಾಯಕರು ಅನೇಕ ವಿಚಿತ್ರಗಳನ್ನು ಮಾಡುತ್ತಿದ್ದಾರೆ. ಅದರ ಒಂದು ರೂಪವೇ ಈ ಹಾವಿನ ಹಾರ. ಕೊರಳಲ್ಲಿ ಹಾವು ನೇತು ಹಾಕಿಕೊಂಡು ಶಾಸಕರು ಕುಳಿತಿರುವ ವಿಡಿಯೋ ಶುಕ್ರವಾರ ಹೊರಬಿದ್ದಿದೆ. ಶಾಸಕ ಬಾಬು ಜಂಡೆಲ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿಯವರೆಗೆ ಸಾವಿರಾರು ಜನರು ಇದನ್ನು ನೋಡಿದ್ದಾರೆ ಮತ್ತು ಲೈಕ್, ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:22 pm, Sat, 9 September 23

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More