Dream Astrology: ಕನಸಿನಲ್ಲಿ ಹಾವನ್ನು ನೋಡುವುದು ಮಂಗಳಕರವೇ ಅಥವಾ ಅಶುಭವೇ? ಈ ಕನಸು ಭವಿಷ್ಯ ನಿರ್ಧಾರ ಮಾಡುತ್ತದೆಯೇ?

ಪ್ರತಿಯೊಂದು ಕನಸಿಗೂ ವಿಭಿನ್ನ ಅರ್ಥವಿದೆ. ಅಂತೆಯೇ, ಶ್ರಾವಣ ಮಾಸದಲ್ಲಿ ನಿಮ್ಮ ಕನಸಿನಲ್ಲಿ ಹಾವುಗಳನ್ನು ನೋಡಿದರೆ, ಅದು ಹಣವನ್ನು ಪಡೆಯಲು ಸಂಬಂಧಿಸಿದ ಸೂಚನೆಗಳನ್ನು ನೀಡುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Dream Astrology: ಕನಸಿನಲ್ಲಿ ಹಾವನ್ನು ನೋಡುವುದು ಮಂಗಳಕರವೇ ಅಥವಾ ಅಶುಭವೇ? ಈ ಕನಸು ಭವಿಷ್ಯ ನಿರ್ಧಾರ ಮಾಡುತ್ತದೆಯೇ?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 05, 2023 | 9:57 AM

ಪ್ರತಿಯೊಬ್ಬ ವ್ಯಕ್ತಿಯು ಮಲಗಿದಾಗ ವಿವಿಧ ರೀತಿಯ ಕನಸುಗಳು ಬೀಳುತ್ತವೆ. ಈ ಕನಸುಗಳು ಖಂಡಿತವಾಗಿಯೂ ಹಲವು ಅರ್ಥವನ್ನು ಹೊಂದಿರುತ್ತದೆ. ಅದರಲ್ಲಿ ಕೆಲವು ಕನಸುಗಳನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ, ಅವು ಭವಿಷ್ಯದ ಘಟನೆಗಳತ್ತ ಬೊಟ್ಟು ಮಾಡುತ್ತವೆ. ಅದೇ ರೀತಿ ಹಿಂದೂ ಧರ್ಮದಲ್ಲಿ ಒಳ್ಳೆಯ ಹಾವನ್ನು ಪೂಜನೀಯ ಎಂದು ಪರಿಗಣಿಸಲಾಗುತ್ತದೆ. ಈ ಹಾವು ಶಿವನ ಕುತ್ತಿಗೆಯ ಸುತ್ತಲಿನ ಹಾರವು ಹೌದು. ಅದರಿಂದಾಗಿಯೇ ಶಿವನನ್ನು ಹಾವುಗಳ ದೇವರು ಎಂದೂ ಕರೆಯಲಾಗುತ್ತದೆ. ಹಾಗಾಗಿ ನಿಮ್ಮ ಕನಸಿನಲ್ಲಿ ಹಾವನ್ನು ನೋಡಿದರೆ, ಅದಕ್ಕೆ ವಿಶೇಷ ಮಹತ್ವ ಮತ್ತು ಅರ್ಥವಿದೆ. ಕನಸಿನ ವಿಜ್ಞಾನದ ಪ್ರಕಾರ, ಶ್ರಾವಣ ಮಾಸದಲ್ಲಿ ವಿವಿಧ ರೀತಿಯ ಹಾವಿನ ನೋಟವು ವಿಭಿನ್ನ ಅರ್ಥಗಳನ್ನು ಹೊಂದಿದೆ.

ಕನಸಿನಲ್ಲಿ ವಿನೋದದಲ್ಲಿರುವ ಹಾವನ್ನು ನೋಡಿದರೆ: ಒಬ್ಬ ವ್ಯಕ್ತಿಯು ಶ್ರಾವಣ ಮಾಸದಲ್ಲಿ (ಹಿಂದೂ ಕ್ಯಾಲೆಂಡರ್​​ನ ಐದನೇ ತಿಂಗಳು) ತನ್ನ ಕನಸಿನಲ್ಲಿ ಹಾವು ಹೆಡೆಯನ್ನು ಎತ್ತುವುದನ್ನು ನೋಡಿದರೆ, ಅಂತಹ ಕನಸು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ರೀತಿಯ ಕನಸು ನಿಮಗೆ ಶೀಘ್ರದಲ್ಲೇ ಕೆಲವು ದೊಡ್ಡ ವಿತ್ತೀಯ ಲಾಭವನ್ನು ಪಡೆಯುವ ಸೂಚನೆಯಾಗಿರಬಹುದು ಅಥವಾ ಇದರೊಂದಿಗೆ, ಆಸ್ತಿಯಲ್ಲಿ ಅನೇಕ ರೀತಿಯ ಲಾಭಗಳನ್ನು ಪಡೆಯುವ ಸಾಧ್ಯತೆಯೂ ಇದೆ ಎಂಬುದನ್ನು ಸೂಚಿಸುವ ಕನಸಾಗಿರಬಹುದು.

ಹಳದಿ ಹಾವು ಕನಸಿನಲ್ಲಿ ಬಂದರೆ: ಶ್ರಾವಣ ಮಾಸದಲ್ಲಿ, ರಾತ್ರಿ ಸಮಯದಲ್ಲಿ ನಿಮ್ಮ ಕನಸಿನಲ್ಲಿ ಹಳದಿ ಬಣ್ಣದ ಹಾವು ಕಂಡರೆ, ಕೆಲಸ ಅಥವಾ ವ್ಯವಹಾರಕ್ಕಾಗಿ ಮತ್ತೊಂದು ನಗರಕ್ಕೆ ಹೋಗಬೇಕಾಗಬಹುದು ಎಂಬುದನ್ನು ನಿಮಗೆ ತೋರ್ಪಡಿಸಲಿದೆ.

ಕನಸಿನಲ್ಲಿ ಹಸಿರು ಹಾವನ್ನು ನೋಡಿದರೆ: ಶ್ರಾವಣ ಮಾಸದಲ್ಲಿ ಒಬ್ಬ ವ್ಯಕ್ತಿಯು ತನ್ನ ಕನಸಿನಲ್ಲಿ ಹಸಿರು ಹಾವನ್ನು ನೋಡಿದರೆ, ನಿಮ್ಮ ಜೀವನದಲ್ಲಿ ಉತ್ತಮ ಅವಕಾಶಗಳನ್ನು ಪಡೆಯಲಿದ್ದೀರಿ ಎಂದರ್ಥ. ಈ ರೀತಿಯ ಕನಸನ್ನು ಶ್ರಾವಣ ಮಾಸದಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: Dream Astrology: ಕನಸಿನಲ್ಲಿ ಈ ಸಂಕೇತಗಳು ಕಂಡುಬಂದರೆ ಮದುವೆ ನಿಶ್ಚಯವಾಗುತ್ತದೆ, ಶ್ರೀಮಂತ ವರನೇ ಸಿಗುತ್ತಾನಂತೆ!

ಬಿಳಿ ಹಾವನ್ನು ಕನಸಿನಲ್ಲಿ ನೋಡಿದರೆ: ಕನಸಿನ ಭವಿಷ್ಯದ ಪ್ರಕಾರ, ಕನಸಿನಲ್ಲಿ ಬಿಳಿ ಬಣ್ಣದ ಹಾವನ್ನು ನೋಡುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಬಿಳಿ ಬಣ್ಣದ ಹಾವನ್ನು ನೋಡುವುದು ನೀವು ಶೀಘ್ರದಲ್ಲೇ ಸಾಕಷ್ಟು ಹಣವನ್ನು ಪಡೆಯಲಿದ್ದೀರಿ ಎಂಬುದನ್ನು ಸೂಚಿಸುತ್ತದೆ. ಜೊತೆಗೆ ನೀವು ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಕಷ್ಟು ಲಾಭವನ್ನು ಪಡೆಯಬಹುದು.

ಹಾವನ್ನು ಹಿಡಿಯುವ ಕನಸು ಬಿದ್ದರೆ: ಅನೇಕ ಬಾರಿ ಒಬ್ಬ ವ್ಯಕ್ತಿಯು ಕನಸಿನಲ್ಲಿ ಹಾವನ್ನು ಹಿಡಿಯುವುದನ್ನು ಕನಸನ್ನು ಕಾಣುತ್ತಾನೆ. ನಾವು ಅಂತಹ ಕನಸು ಕಂಡಾಗ ಹೆದರುತ್ತೇವೆ. ಆದರೆ ಕನಸಿನ ಭವಿಷ್ಯದ ಪ್ರಕಾರ, ಅಂತಹ ಕನಸನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಕನಸು ಮುಂಬರುವ ಸಮಯದಲ್ಲಿ ನೀವು ಅತೀ ಹೆಚ್ಚು ಹಣವನ್ನು ಪಡೆಯುತ್ತೀರಿ. ಇದರೊಂದಿಗೆ, ನೀವು ಜೀವನದ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಲಿದ್ದೀರಿ ಎಂಬುದನ್ನು ನಿಮಗೆ ತಿಳಿಸುವ ಮಾರ್ಗವಾಗಿದೆ.

ಈ ಲೇಖನದಲ್ಲಿ ಒದಗಿಸಲಾದ ಮಾಹಿತಿ ಸತ್ಯಾಸತ್ಯತೆ ಅಥವಾ ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗುವುದಿಲ್ಲ

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್