G20 Summit 2023 in Delhi, Day 2 Highlights: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ: ದೆಹಲಿಯಲ್ಲೇ ಉಳಿದ ಕೆನಡಾ ನಿಯೋಗ
Delhi G20 Summit 2023, Day 2 Highlights Updates in Kannada: ದೆಹಲಿಯಲ್ಲಿ ಎರಡು ದಿನದಿಂದ ನಡೆಯುತ್ತಿದ್ದ ಜಿ20 ಶೃಂಗಸಭೆ ಭಾನುವಾರ ಅಂತ್ಯವಾಗಿದೆ. ನವೆಂಬರ್ನಲ್ಲಿ ವರ್ಚ್ಯುವಲ್ ಸಭೆ ನಡೆಸುವುದರ ಕುರಿತಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ. ಮುಂದಿನ ವರ್ಷ ಬ್ರೆಜಿಲ್ನಲ್ಲಿ ಜಿ20 ಸಮ್ಮೇಳನ ಆಯೋಜಿಸಲಾಗುತ್ತಿದ್ದು, ಹಾಗಾಗಿ ಜಿ20 ಅಧ್ಯಕ್ಷ ಸ್ಥಾನವನ್ನು ಬ್ರೆಜಿಲ್ ಅಧ್ಯಕ್ಷ ಲುಲಾಗೆ ಪ್ರಧಾನಿ ಮೋದಿ ಹಸ್ತಾಂತರಿಸಿದ್ದಾರೆ. G20 ಶೃಂಗಸಭೆಗೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿ ಇಲ್ಲಿ ಲಭ್ಯ.

ಬಹು ನಿರೀಕ್ಷಿತ G20 ಶೃಂಗಸಭೆ ಭಾನುವಾರ ಅಂತ್ಯವಾಗಿದೆ. ನವೆಂಬರ್ನಲ್ಲಿ ವರ್ಚ್ಯುವಲ್ ಸಭೆ ನಡೆಸುವುದರ ಕುರಿತಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ. ಮುಂದಿನ ವರ್ಷ ಬ್ರೆಜಿಲ್ನಲ್ಲಿ ಜಿ20 ಸಮ್ಮೇಳನ ಆಯೋಜಿಸಲಾಗುತ್ತಿದ್ದು, ಹಾಗಾಗಿ ಜಿ20 ಅಧ್ಯಕ್ಷ ಸ್ಥಾನವನ್ನು ಬ್ರೆಜಿಲ್ ಅಧ್ಯಕ್ಷ ಲುಲಾಗೆ ಪ್ರಧಾನಿ ಮೋದಿ ಹಸ್ತಾಂತರಿಸಿದ್ದಾರೆ. ವಿಶ್ವದ ಬಲಿಷ್ಠ ದೇಶಗಳ ನಾಯಕರು ದೆಹಲಿಯಲ್ಲಿ ಠಿಕಾಣಿ ಹೂಡಿದ್ದರು. ಮೊದಲ ದಿನ ಜಿ20 ಒಕ್ಕೂಟಕ್ಕೆ ಆಫ್ರೀಕನ್ ಯೂನಿಯನ್ ಸೇರಿದ್ದು, ಬಳಿಕ ನಡೆದ ಅಧಿವೇಶಗಳಲ್ಲಿ ಒನ್ ಅರ್ಥ್ ಮತ್ತು ಒನ್ ಫ್ಯಾಮಿಲಿ ಬಗ್ಗೆ ಚರ್ಚೆ ನಡೆದಿತ್ತು. ಮೊದಲ ದಿನ ವಿದೇಶಿ ಗಣ್ಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅದ್ಧೂರಿ ಔತನ ನೀಡಿದ್ದರು. ದೆಹಲಿಯ ಪ್ರಗತಿ ಮೈದಾನ್ ನಲ್ಲಿರುವ ಭಾರತ್ ಮಂಟಪ್‌ನಲ್ಲಿ ಸಭೆ ಆಯೋಜಿಸಲಾಗಿತ್ತು.
LIVE NEWS & UPDATES
-
G20 Summit 2023 in Delhi, Day 2 Live: ಕೆನಡಾ ಪ್ರಧಾನಿ ವಿಮಾನದಲ್ಲಿ ತಾಂತ್ರಿಕ ದೋಷ
ಕೆನಡಾ ಪ್ರಧಾನಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಎಂಜಿನಿಯರಿಂಗ್ ತಂಡವು ಸಮಸ್ಯೆಯನ್ನು ಸರಿಪಡಿಸುತ್ತಿದ್ದಾರೆ. ಅಲ್ಲಿಯವರೆಗೂ ಕೆನಡಾದ ನಿಯೋಗವು ಭಾರತದಲ್ಲಿಯೇ ಉಳಿಯಲಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಎಎನ್ಐಗೆ ತಿಳಿಸಿದ್ದಾರೆ.
Technical snag on special plane forces Canada PM, delegation to stay in India
Read @ANI Story | https://t.co/vQvYo88uTO#India #CanadaPM #JustinTrudeau #G20India2023 pic.twitter.com/0xGlefIdeJ
— ANI Digital (@ani_digital) September 10, 2023
-
G20 Summit 2023 in Delhi, Day 2 Live: ಡಿಜಿಟಲ್ ಇಂಡಿಯಾ ಪೆವಿಲಿಯನ್ಗೆ ಮೋದಿ ಭೇಟಿ
ದೆಹಲಿಯ ಭಾರತ್ ಮಂಟಪದಲ್ಲಿ ಡಿಜಿಟಲ್ ಇಂಡಿಯಾ ಪೆವಿಲಿಯನ್ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ.
#WATCH | G 20 in India | Prime Minister Narendra Modi visits Digital India Pavilion at the Bharat Mandapam in Delhi pic.twitter.com/8AFFzrFbsk
— ANI (@ANI) September 10, 2023
-
-
G20 Summit 2023 in Delhi, Day 2 Live: ವಸ್ತುಪ್ರದರ್ಶನಕ್ಕೆ ಪ್ರಧಾನಿ ಮೋದಿ ಭೇಟಿ
ಭಾರತದಲ್ಲಿ ಜಿ 20 ಹಿನ್ನೆಲೆ ದೆಹಲಿಯ ಭಾರತ್ ಮಂಟಪದಲ್ಲಿ ‘ಕರಕುಶಲ ಮೇಳ’ ವಸ್ತುಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿ ನೀಡಿ, ವಿಕ್ಷಣೆ ಮಾಡಿದ್ದಾರೆ.
#WATCH | G 20 in India | Prime Minister Narendra Modi visits ‘Crafts Bazaar’ exhibition set up at the Bharat Mandapam in Delhi pic.twitter.com/a8ycJEHoLo
— ANI (@ANI) September 10, 2023
-
G20 Summit 2023 in Delhi, Day 2 Live: ಅಮೆರಿಕ ಅಧ್ಯಕ್ಷ ಜೋ ಬೈಡನ್ ಟ್ವೀಟ್
ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಸಹಭಾಗಿತ್ವವು ಮಹಾತ್ಮ ಗಾಂಧಿಯವರ ಧರ್ಮದರ್ಶಿತ್ವದ ಪ್ರಧಾನ ತತ್ವದಲ್ಲಿ ಬೇರೂರಿದೆ. ಇಂದು ನಮ್ಮನ್ನು ಇಲ್ಲಿಗೆ ಕರೆತಂದಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಟ್ವೀಟ್ ಮಾಡಿದ್ದಾರೆ.
US President Joe Biden tweets, “The partnership between India and the United States is rooted in Mahatma Gandhi’s principal of trusteeship – trusteeship that is shared between our countries and for our shared planet. Thank you, Prime Minister for bringing us here today.” pic.twitter.com/gLBAPw2O4d
— ANI (@ANI) September 10, 2023
-
G20 Summit 2023 in Delhi, Day 2 Live: ಮಾಧ್ಯಮಗಳಿಗೆ ಧನ್ಯವಾದ ಹೇಳಿದ ಪ್ರಧಾನಿ ನರೇಂದ್ರ ಮೋದಿ
ದೆಹಲಿಯಲ್ಲಿ 2 ದಿನಗಳ ಕಾಲ ನಡೆದ ಜಿ20 ಶೃಂಗಸಭೆ ಮುಕ್ತಾಯವಾಗಿದೆ. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತುಕತೆ ಮಾಡಿ, ಧನ್ಯವಾದ ಹೇಳಿದ ಹೇಳಿದ್ದಾರೆ.
#WATCH | G 20 in India | Prime Minister Narendra Modi greets people at the Bharat Mandapam in Delhi pic.twitter.com/pUEPXJllgw
— ANI (@ANI) September 10, 2023
-
-
G20 Summit 2023 in Delhi, Day 2 Live: ಪ್ರಧಾನಿ ಮೋದಿಯೊಂದಿಗೆ ನೆದರ್ಲ್ಯಾಂಡ್ ಪ್ರಧಾನಿ ಮಾರ್ಕ್ ರುಟ್ಟೆ ಮಾತು
ನೆದರ್ಲ್ಯಾಂಡ್ ಪ್ರಧಾನಿ ಮಾರ್ಕ್ ರುಟ್ಟೆ ಅವರೊಂದಿಗೆ ಅತ್ಯುತ್ತಮ ಭೇಟಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ನಮ್ಮ ರಾಷ್ಟ್ರಗಳ ನಡುವಿನ ಸ್ನೇಹವನ್ನು ಹೆಚ್ಚಿಸುವ ಮಾರ್ಗಗಳ ಬಗ್ಗೆ ನಾವು ಮಾತನಾಡಿದ್ದೇವೆ. ನಮ್ಮ ವ್ಯವಹಾರಗಳಿಗೆ ಸಹಕಾರದ ವ್ಯಾಪ್ತಿ ಅಪಾರವಾಗಿದೆ. ಶುದ್ಧ ಇಂಧನ, ಅರೆವಾಹಕಗಳು, ಡಿಜಿಟಲ್ ತಂತ್ರಜ್ಞಾನ ಮತ್ತು ಹೆಚ್ಚಿನವುಗಳಲ್ಲಿ ಬಲವಾದ ಸಂಬಂಧಗಳನ್ನು ನಾವು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ.
PM Narendra Modi tweets, “Excellent meeting with Netherlands Prime Minister Mark Rutte. We talked about ways to enhance friendship between our nations. The scope of cooperation for our businesses is immense. We also look forward to strong ties in clean energy, semiconductors,… https://t.co/iOlVioMKDH pic.twitter.com/JIoKfiAzmP
— ANI (@ANI) September 10, 2023
-
G20 Summit 2023 in Delhi, Day 2 Live: ಯುರೋಪ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೆಯೆನ್ ಹೇಳಿದ್ದಿಷ್ಟು
ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೆಯೆನ್ ಟ್ವೀಟ್ ಮಾಡಿದ್ದು, ಭಾರತದೊಂದಿಗಿನ ಬಲವಾದ ಪಾಲುದಾರಿಕೆ ಯುರೋಪ್ಗೆ ಉಪಯುಕ್ತವಾಗಲಿದೆ. ನಮ್ಮ ಟ್ರೇಡ್ & ಟೆಕ್ ಕೌನ್ಸಿಲ್ ಕಾರ್ಯರೂಪಕ್ಕೆ ಬಂದಿರುವುದನ್ನು ನೋಡಿ ಸಂತೋಷವಾಗಿದೆ. ಭಾರತ – ಮಧ್ಯಪ್ರಾಚ್ಯ – ಯುರೋಪ್ ಆರ್ಥಿಕ ಕಾರಿಡಾರ್ ಎಂಬ ಐತಿಹಾಸಿಕ ಯೋಜನೆಯನ್ನು ಪ್ರಾರಂಭಿಸಿದ್ದೇನೆ. ನಾವು ಮುಕ್ತ ವ್ಯಾಪಾರ ಒಪ್ಪಂದದ ಪ್ರಗತಿಯನ್ನು ಎದುರು ನೋಡುತ್ತಿದ್ದೇವೆ. ಜಿ 20 ಯ ನಿಮ್ಮ ಕೌಶಲ್ಯಯುತ ನಾಯಕತ್ವಕ್ಕೆ ಧನ್ಯವಾದಗಳು ಎಂದಿದ್ದಾರೆ.
European Commission President Ursula von der Leyen tweets, “A strong partnership with India is paramount for Europe. Glad to see our Trade & Tech Council in action. And to have launched with you a historic project, the India – Middle East – Europe Economic Corridor. We also look… pic.twitter.com/tq5wQBCfnj
— ANI (@ANI) September 10, 2023
-
G20 Summit 2023 in Delhi, Day 2 Live: ಜಿ20 ಶೃಂಗಸಭೆ ಮುಕ್ತಾಯ
ದೆಹಲಿಯಲ್ಲಿ ನಿನ್ನೆಯಿಂದ ಆರಂಭವಾಗಿರುವ ಜಿ20 ಶೃಂಗಸಭೆ ಭಾನುವಾರ ಮುಕ್ತಾಯಗೊಂಡಿದೆ. ಕೆಲವೇ ಕ್ಷಣಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸುದ್ದಿಗೋಷ್ಠಿ ಮಾಡಲಿದ್ದಾರೆ.
-
G20 Summit 2023 in Delhi, Day 2 Live: ಜರ್ಮನ್ ಚಾನ್ಸಲರ್ ಒಲಾಫ್ ಶೋಲ್ಜ್ ಅವರನ್ನು ಭೇಟಿಯಾದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜರ್ಮನಿಯ ಚಾನ್ಸಲರ್ ಒಲಾಫ್ ಶೋಲ್ಜ್ ಅವರನ್ನು ಜಿ 20 ಶೃಂಗಸಭೆಯ ಹೊರತಾಗಿ ಭೇಟಿಯಾಗಿದ್ದಾರೆ. ಒಲಾಫ್ ಶೋಲ್ಜ್ ಅವರೊಂದಿಗೆ ಸಭೆ ಮಾಡಿದ್ದು, ತಮ್ಮ ಅಭಿಪ್ರಾಯಗಳಿಂದ ಜಿ -20 ಶೃಂಗಸಭೆಯನ್ನು ಶ್ರೀಮಂತಗೊಳಿಸಿದ್ದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸಿದರು. ಭಾರತ ಮತ್ತು ಜರ್ಮನಿ ಶುದ್ಧ ಇಂಧನ, ನಾವೀನ್ಯತೆ ಮತ್ತು ಉತ್ತಮ ಗ್ರಹದ ಕಡೆಗೆ ಹೇಗೆ ಒಟ್ಟಾಗಿ ಕೆಲಸ ಮಾಡಬಹುದು ಎಂಬುದರ ಬಗ್ಗೆಯೂ ಚರ್ಚಿಸಲಾಯಿತು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
Very good meeting with @Bundeskanzler @OlafScholz in Delhi. Thanked him for enriching the G20 Summit with his views. Also discussed how India and Germany can continue working together in clean energy, innovation and work towards a better planet. pic.twitter.com/g62rUXEVDc
— Narendra Modi (@narendramodi) September 10, 2023
-
G20 Summit 2023 in Delhi, Day 2 Live: ಜಸ್ಟಿನ್ ಟ್ರುಡೋ, ಎರ್ಡೊಗನ್ರನ್ನು ಭೇಟಿ ಮಾಡಿದ ಮೋದಿ
ಜಿ -20 ಶೃಂಗಸಭೆಯ ಹೊರತಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ, ಟರ್ಕಿ ಅಧ್ಯಕ್ಷ ಎರ್ಡೊಗನ್ ಅವರನ್ನು ಭೇಟಿ ಮಾಡಿದ್ದಾರೆ. ನಾವು ವಿವಿಧ ಕ್ಷೇತ್ರಗಳಲ್ಲಿ ಭಾರತ-ಕೆನಡಾ ಸಂಬಂಧಗಳ ಪೂರ್ಣ ಶ್ರೇಣಿಯ ಬಗ್ಗೆ ಚರ್ಚಿಸಿದ್ದೇವೆ ಎಂದು ಪ್ರಧಾನಿ ಮೋದಿ ಭಾನುವಾರ ಟ್ವೀಟ್ ಮಾಡಿದ್ದಾರೆ.
Met PM @JustinTrudeau on the sidelines of the G20 Summit. We discussed the full range of India-Canada ties across different sectors. pic.twitter.com/iP9fsILWac
— Narendra Modi (@narendramodi) September 10, 2023
-
G20 Summit 2023 in Delhi, Day 2 Live: ನವದೆಹಲಿಯ ಜಿ 20 ಶೃಂಗಸಭೆ ಬಗ್ಗೆ ಜಪಾನ್ ಪ್ರಧಾನಿ ಕಿಶಿಡಾ ಮೆಚ್ಚುಗೆ
ಜಿ 20 ಶೃಂಗಸಭೆಯಲ್ಲಿ ಭಾಗವಹಿಸಿದ್ದ ಜಪಾನ್ ಪ್ರಧಾನಿ ಕಿಶಿಡಾ ಮೆಚ್ಚು ವ್ಯಕ್ತಪಡಿಸಿದ್ದಾರೆ. ನಿಜವಾಗಿಯೂ ಅರ್ಥಪೂರ್ಣ ಸಾಧನೆ. ನವದೆಹಲಿಯ ಜಿ 20 ಶೃಂಗಸಭೆಯ ಹಲವು ನಿರ್ಣಯಗಳನ್ನು ಸಮರ್ಥವಾಗಿ ಒಪ್ಪಿಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.
Truly meaningful achievement, we were able to agree on New Delhi G20 declaration: Japan PM Kishida
Read @ANI Story | https://t.co/6z5i3o2oiY#Japan #PMKishida #G20India2023 #G20SummitDelhi #NewDelhiLeadersDeclaration pic.twitter.com/3vmn9fIKR8
— ANI Digital (@ani_digital) September 10, 2023
-
G20 Summit 2023 in Delhi, Day 2 Live: ಅಂತರರಾಷ್ಟ್ರೀಯ ಸಂಸ್ಥೆಗಳ ಸುಧಾರಣೆಗೆ ಫ್ರಾನ್ಸ್ ಬೆಂಬಲ
ಅಂತರರಾಷ್ಟ್ರೀಯ ಸಂಸ್ಥೆಗಳ ಸುಧಾರಣೆಯನ್ನು ಬೆಂಬಲಿಸುತ್ತೇವೆ. ಇದರಿಂದ ಅವು ಪ್ರಪಂಚದ ಪ್ರಸ್ತುತ ವಾಸ್ತವತೆಯನ್ನು ಪ್ರತಿಬಿಂಬಿಸುತ್ತವೆ. ಉಕ್ರೇನ್ ಯುದ್ಧವನ್ನು ಉಲ್ಲೇಖಿಸಿದ ಅವರು, ಜಿ 20 ದೇಶಗಳು ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ತತ್ವಗಳನ್ನು ಕಾಪಾಡಿಕೊಳ್ಳುವ ಬಗ್ಗೆ ಮಾಡಿದರು.
-
G20 Summit 2023 in Delhi, Day 2 Live: ಶಾಂತಿ, ಏಕತೆಯ ಸಂದೇಶ ಸಾರಿದ ಭಾರತ: ಮ್ಯಾಕ್ರನ್
ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಬಂದಿದ್ದ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮಾತನಾಡಿದ್ದು, ನಾನು ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳುತ್ತೇನೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ್ದಾಗ ಭಾರತವು ಶಾಂತಿ ಮತ್ತು ಏಕತೆಯ ಸಂದೇಶವನ್ನು ರವಾನಿಸಲು ಪ್ರಯತ್ನಿಸಿತ್ತು ಎಂದು ಹೇಳಿದ್ದಾರೆ.
-
G20 Summit 2023 in Delhi, Day 2 Live: ಜಿ 20 ಶೃಂಗಸಭೆ ಒಂದು ಮೈಲಿಗಲ್ಲು
ಜಿ 20 ಶೃಂಗಸಭೆ ಒಂದು ಮೈಲಿಗಲ್ಲು. ಸಭೆಯಲ್ಲಿ ಸಾಕಷ್ಟು ಉತ್ತಮ ಚರ್ಚೆಗಳಾಗಿದ್ದು, ಆರೋಗ್ಯಕರ ಪರಿಹಾರ ಕಂಡುಬಂದಿದೆ ಎಂದು ರಷ್ಯಾದ ವಿದೇಶಾಂಗ ಸಚಿವ ಲಾವ್ರೊವ್ ಹೇಳಿದ್ದಾರೆ.
“G20 Summit has been a milestone… healthy solution found in declaration”: Russian Foreign Minister Lavrov
Read @ANI Story | https://t.co/PJNHzLpcye#G20SummitDelhi #Russia #Lavrov pic.twitter.com/EbKDbmix5T
— ANI Digital (@ani_digital) September 10, 2023
-
G20 Summit 2023 in Delhi, Day 2 Live: ಜಿ 20 ಬ್ರೆಜಿಲ್ ಅಧ್ಯಕ್ಷ ಸ್ಥಾನಕ್ಕೆ 3 ಆದ್ಯತೆ: ಲುಲಾ ಡಾ ಸಿಲ್ವಾ
ಜಿ 20 ಬ್ರೆಜಿಲ್ ಅಧ್ಯಕ್ಷ ಸ್ಥಾನಕ್ಕೆ 3 ಆದ್ಯತೆಗಳಿವೆ ಎಂದು ಬ್ರೆಜಿಲ್ ಅಧ್ಯಕ್ಷ ಲುಲಾ ಡಾ ಸಿಲ್ವಾ ಹೇಳಿದ್ದಾರೆ.
Brazilian Presidency of G20 has 3 priorities: Lula da Silva
Read @ANI Story | https://t.co/2hDxi9X5Yw#Brazil #BrazilPresident #G20 #G20Presidency #LuizInacioLuladaSilva pic.twitter.com/1pQAzxR1th
— ANI Digital (@ani_digital) September 10, 2023
-
G20 Summit 2023 in Delhi, Day 2 Live: ಜಿ 20 ಶೃಂಗಸಭೆ ಮುಕ್ತಾಯ ಘೋಷಿಸಿದ ಪ್ರಧಾನಿ ಮೋದಿ, ನವೆಂಬರ್ನಲ್ಲಿ ವರ್ಚುವಲ್ ಅಧಿವೇಶನ
ನವೆಂಬರ್ನಲ್ಲಿ ಜಿ 20 ವರ್ಚುವಲ್ ಅಧಿವೇಶನ ಆಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದಾರೆ. “ನವೆಂಬರ್ವರೆಗೆ ಜಿ 20 ಅಧ್ಯಕ್ಷತೆ ಜವಾಬ್ದಾರಿ ಭಾರತಕ್ಕೆ ಇದೆ. ಈ ಎರಡು ದಿನಗಳಲ್ಲಿ, ನೀವು (ವಿಶ್ವ ನಾಯಕರು) ಹಲವಾರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೀರಿ ಮತ್ತು ವಿವಿಧ ಪ್ರಸ್ತಾಪಗಳನ್ನು ತಿಳಿಸಲಾಗಿದೆ.
PM Modi announces conclusion of G20 Summit, proposes virtual review session in November
Read @ANI Story | https://t.co/iAKlQn9b8Z#G20SummitDelhi #G20India2023 #PMModi pic.twitter.com/0EamNX8wV2
— ANI Digital (@ani_digital) September 10, 2023
-
G20 Summit 2023 in Delhi, Day 2 Live: ಜಿ20 ಶೃಂಗಸಭೆಯ ಜವಾಬ್ದಾರಿ ಬ್ರೆಜಿಲ್ ಅಧ್ಯಕ್ಷ ಲುಲಾಗೆ ಹಸ್ತಾಂತರ
ಪ್ರಧಾನಿ ನರೇಂದ್ರ ಮೋದಿ ಅವರು ಜಿ20 ಶೃಂಗಸಭೆಯ ಜವಾಬ್ದಾರಿ ಬ್ರೆಜಿಲ್ ಅಧ್ಯಕ್ಷ ಲುಲಾಗೆ ಹಸ್ತಾಂತರಿಸುವ ಮೂಲಕ ನವದೆಹಲಿಯಲ್ಲಿ ಜಿ20 ಶೃಂಗಸಭೆಯನ್ನು ಮುಕ್ತಾಯಗೊಳಿಸಿದರು. ಹೀಗಾಗಿ ಮುಂದಿನ ಜಿ20 ದೇಶಗಳ ಶೃಂಗಸಭೆ ಬ್ರೆಜಿಲ್ನಲ್ಲಿ ನಡೆಯಲಿದೆ. ಇನ್ನು “ನಾನು ಬ್ರೆಜಿಲ್ ಅಧ್ಯಕ್ಷ ಮತ್ತು ನನ್ನ ಸ್ನೇಹಿತ ಲುಲಾ ಡಾ ಸಿಲ್ವಾ ಅವರನ್ನು ಅಭಿನಂದಿಸುತ್ತೇನೆ ಮತ್ತು ಅವರಿಗೆ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸಲು ಬಯಸುತ್ತೇನೆ” ಎಂದು ಜಿ20 ಶೃಂಗಸಭೆಯ ಜವಾಬ್ದಾರಿಯನ್ನು ಹಸ್ತಾಂತರಿಸಿದರು.
ನರೇಂದ್ರ ಮೋದಿ
-
G20 Summit 2023 in Delhi, Day 2 Live: ಎಕನಾಮಿಕ್ ಕಾರಿಡಾರ್ ಪ್ರಾಜೆಕ್ಟ್ ಘೋಷಿಸಿದ ಮೋದಿ
ಜಗತ್ತಿನ 65 ದೇಶಗಳನ್ನು ಸಂಪರ್ಕಿಸುವ ಚೀನಾದ ಮಹತ್ವಾಕಾಂಕ್ಷಿ ಒನ್ ಬೆಲ್ಟ್ ಒನ್ ರೋಡ್ ಪ್ರಾಜೆಕ್ಟ್ ಅನ್ನ ಜಿ20 ಸಭೆಯಲ್ಲಿ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿರುವ ಭಾರತ, ಅದಕ್ಕೆ ಪರ್ಯಾಯವಾದ ಎಕನಾಮಿಕ್ ಕಾರಿಡಾರ್ ಪ್ರಾಜೆಕ್ಟ್ ಅನ್ನು ಘೋಷಿಸಿದೆ.
-
G20 Summit 2023 in Delhi, Day 2 Live: ದಕ್ಷಿಣ ಆಫ್ರಿಕಾದ ಜೊಡ್ವಾ ಲಲ್ಲಿ ಪ್ರತಿನಿಧಿ ಭಾರತ್ ಮಂಟಪದ ಕ್ರಾಫ್ಟ್ ಎಕ್ಸ್‌ಪೋಗೆ ಭೇಟಿ
ದಕ್ಷಿಣ ಆಫ್ರಿಕಾದ ಜೊಡ್ವಾ ಲಲ್ಲಿಯ ಪ್ರತಿನಿಧಿ ಭಾರತ್ ಮಂಟಪದ ಕ್ರಾಫ್ಟ್ ಎಕ್ಸ್‌ಪೋಗೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, ಇದು ಅದ್ಭುತವಾಗಿದೆ. ಇದು ಕರಕುಶಲತೆಯ ಸಂಪೂರ್ಣ ಪ್ರದರ್ಶನ ಮತ್ತು ಕೈಯಿಂದ ತಯಾರಿಸಿದ ವಸ್ತುಗಳ ಸೌಂದರ್ಯ ನೋಡಿ ಖುಷಿಯಾಯಿತು ಎಂದರು.
#WATCH | G 20 in India | A delegate from South Africa Zodwa Lallie visited the craft expo at the Bharat Mandapam, She says, "I think it is absolutely marvellous. It is an absolute showcase of craftsmanship and the beauty of handmade items from India…What is great is the way it… pic.twitter.com/B5384mD8Fk
— ANI (@ANI) September 10, 2023
-
G20 Summit 2023 in Delhi, Day 2 Live: G20 ಬಗ್ಗೆ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಮಾತು
G20 ಬಗ್ಗೆ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಮಾತು.
#WATCH | G 20 in India | Chief Co-ordinator of India's G 20 presidency Harsh Vardhan Shringla says, "It was momentous because, in a normal multilateral process, you have to go to the end of any Summit to attain a consensus on an outcome document…The fact that we have come up… pic.twitter.com/IeeymDmVKH
— ANI (@ANI) September 10, 2023
-
G20 Summit 2023 in Delhi, Day 2 Live: ‘ಒಂದು ಭವಿಷ್ಯ’ ವಿಚಾರವಾಗಿ ಜಿ20 ಶೃಂಗಸಭೆಯ ನಾಯಕರ ಸಭೆ
ದೆಹಲಿಯಲ್ಲಿ ಜಿ20 ಶೃಂಗಸಭೆಯ 3ನೇ ಸಭೆ ನಡೆಯುತ್ತಿದೆ. ಒಂದು ಭವಿಷ್ಯ ವಿಚಾರವಾಗಿ ಸಭೆ ನಡೆಯಲಿದ್ದು ಜಗತ್ತಿನ ಬಲಿಷ್ಠ ನಾಯಕರು ಚರ್ಚಿಸಲಿದ್ದಾರೆ. ಜಿ20 ಶೃಂಗಸಭೆಯ ಅಂತ್ಯದಲ್ಲಿ ನಿರ್ಣಯ ಮಂಡನೆ ಆಗಲಿದ್ದು ಹಲವು ಒಪ್ಪಂದಗಳಿಗೆ ಒಪ್ಪಿಗೆ ಸಿಗಲಿದೆ. ಮುಂದಿನ G20 ಶೃಂಗಸಭೆ ನಡೆಯುವ ದೇಶಕ್ಕೆ ಅಧ್ಯಕ್ಷೀಯ ಜವಾಬ್ದಾರಿ ಹಸ್ತಾಂತರ ಆಗಲಿದೆ.
#WATCH | G 20 in India | "Productive discussions at the G20 Summit for a better planet," tweets Prime Minister Narendra Modi pic.twitter.com/UGrrYVXuyi
— ANI (@ANI) September 10, 2023
-
G20 Summit 2023 in Delhi, Day 2 Live: ದೆಹಲಿಯಿಂದ ತೆರಳಿದ ಯುಎಸ್ ಅಧ್ಯಕ್ಷ ಜೋ ಬಿಡನ್
ಜಿ20 ಶೃಂಗಸಭೆ ಮುಗಿಸಿದ ನಂತರ ಯುಎಸ್ ಅಧ್ಯಕ್ಷ ಜೋ ಬಿಡನ್ ಅವರು ದೆಹಲಿಯಿಂದ ವಿಯೆಟ್ನಾಂಗೆ ತೆರಳಿದರು.
G 20 in India | US President Joe Biden departs from Delhi to Vietnam, after concluding the G20 Summit.
(Source: Reuters) pic.twitter.com/ng4zJvRDz0
— ANI (@ANI) September 10, 2023
-
G20 Summit 2023 in Delhi, Day 2 Live: ದೆಹಲಿಯ ಅಕ್ಷರಧಾಮದಲ್ಲಿ ರಿಷಿ ಸುನಕ್ ದಂಪತಿ
ಇಂದು ಮುಂಜಾನೆ ಅಕ್ಷರಧಾಮಕ್ಕೆ ರಿಷಿ ಸುನಕ್ ದಂಪತಿ ಭೇಟಿ ನೀಡಿದರು.
G 20 in India | United Kingdom Prime Minister Rishi Sunak and his wife Akshata Murthy at Delhi's Akshardham temple.
(Source: Akshardham temple) pic.twitter.com/yvIc8CXdhI
— ANI (@ANI) September 10, 2023
-
G20 Summit 2023 in Delhi, Day 2 Live: ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ನೀಡಿದ ರಿಷಿ ಸುನಕ್, ಅಕ್ಷತಾ ಮೂರ್ತಿ
ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಪತ್ನಿ ಅಕ್ಷತಾ ಮೂರ್ತಿ ಅವರು ಭೇಟಿ ನೀಡಿದ್ದಾರೆ. ಅಕ್ಷರಧಾಮದಲ್ಲಿ ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಅತಿಥಿಗಳನ್ನು ಸ್ವಾಗತಿಸಿದರು. ಆತಿಥ್ಯದ ಸಂಕೇತವಾಗಿ ರುದ್ರಾಕ್ಷಿ, ಭಗವದ್ಗೀತೆಯ ಪ್ರತಿ ಮತ್ತು ಹನುಮಾನ್ ಚಾಲೀಸಾ ನೀಡಿ ಗೌರವಿಸಲಾಯಿತು. ರಿಷಿ ಸುನಕ್ ದಂಪತಿ ದೇವಸ್ಥಾನದಲ್ಲಿ ಆರತಿ ಮಾಡಿದರು. ಅಕ್ಷರಧಾಮದ ಸಂತರನ್ನು ಭೇಟಿ ಮಾಡಿ ಕೆಲ ಹೊತ್ತು ಸಮಾಲೋಚನೆ ನಡೆಸಿದರು.
G 20 in India | United Kingdom Prime Minister Rishi Sunak and his wife Akshata Murthy at Delhi's Akshardham temple.
(Source: Swaminarayan Akshardham's Twitter) pic.twitter.com/I8dwecv7pk
— ANI (@ANI) September 10, 2023
-
G20 Summit 2023 in Delhi, Day 2 Live: ರಾಜ್ಘಾಟ್ನಲ್ಲಿರುವ ಮಹಾತ್ಮ ಗಾಂಧೀಜಿ ಸಮಾಧಿಗೆ ನಮನ
ದೆಹಲಿಯ ರಾಜ್ಘಾಟ್ಗೆ ಜಿ20 ದೇಶಗಳ ನಾಯಕರು ಭೇಟಿ ನೀಡಿದ್ದು ರಾಜ್ಘಾಟ್ನಲ್ಲಿರುವ ಮಹಾತ್ಮ ಗಾಂಧೀಜಿ ಸಮಾಧಿಗೆ ನಮನ ಸಲ್ಲಿಸಿದರು. ರಾಜ್ಘಾಟ್ನ ಗಾಂಧೀಜಿ ಸಮಾಧಿ ಬಳಿ ಶಾಂತಿಗೀತೆ ಗಾಯನದಲ್ಲಿ ಭಾಗಿಯಾದ್ರು.
#WATCH | G 20 in India: Prime Minister Narendra Modi, US President Joe Biden, UK PM Rishi Sunak, Australian PM Anthony Albanese, Canadian PM Justin Trudeau, Premier of the People's Republic of China Li Qiang, Russian Foreign Minister Sergey Lavrov and other Heads of state and… pic.twitter.com/jKX5RnW8CV
— ANI (@ANI) September 10, 2023
-
G20 Summit 2023 in Delhi, Day 2 Live: ರಾಜ್ಘಾಟ್ಗೆ ಜಿ20 ದೇಶಗಳ ನಾಯಕರ ಆಗಮನ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜಿ20 ದೇಶಗಳ ಶೃಂಗಸಭೆ ನಡೆಯುತ್ತಿದೆ. ರಾಜ್ಘಾಟ್ಗೆ ಜಿ20 ದೇಶಗಳ ನಾಯಕರು ಆಗಮಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜಿ20 ದೇಶಗಳ ನಾಯಕರನ್ನು ಸ್ವಾಗತಿಸುತ್ತಿದ್ದಾರೆ. ರಾಜ್ಘಾಟ್ನಲ್ಲಿರುವ ಮಹಾತ್ಮ ಗಾಂಧಿ ಸಮಾಧಿಗೆ ಅತಿಥಿಗಳು ನಮಿಸಿದ್ದಾರೆ.
#WATCH | G 20 in India | European Commission President Ursula von der Leyen arrives at Delhi's Rajghat to pay homage to Mahatma Gandhi and lay a wreath. pic.twitter.com/8Mxdjn2Y0z
— ANI (@ANI) September 10, 2023
-
G20 Summit 2023 in Delhi, Day 2 Live: ದೆಹಲಿಯ ಅಕ್ಷರಧಾಮಕ್ಕೆ ಪತ್ನಿ ಅಕ್ಷತಾ ಜೊತೆ ರಿಷಿ ಸುನಕ್ ಭೇಟಿ
ದೆಹಲಿಯ ಅಕ್ಷರಧಾಮಕ್ಕೆ ಇಂದು ಪತ್ನಿ ಅಕ್ಷತಾ ಜೊತೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಭೇಟಿ ನೀಡಿದರು. ಪತ್ನಿ ಅಕ್ಷತಾ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿದರು.
-
G20 Summit 2023 in Delhi, Day 2 Live: ದೆಹಲಿಯಲ್ಲಿ ಜಿ20 ಶೃಂಗಸಭೆಯ ಇಂದಿನ ವೇಳಾಪಟ್ಟಿ
ಇಂದು ಬೆಳಗ್ಗೆ 8.15ಕ್ಕೆ ರಾಜ್ಘಾಟ್ಗೆ ತೆರಳಲಿರುವ ಅತಿಥಿಗಳು ಇಂದು ಬೆಳಗ್ಗೆ 9 ಗಂಟೆವರೆಗೆ ರಾಜ್ಘಾಟ್ಗೆ ಆಗಮಿಸುವ ಅತಿಥಿಗಳು ಇಂದು ಬೆಳಗ್ಗೆ 9ರಿಂದ 9.20ರವರೆಗೆ ಗಾಂಧಿ ಸಮಾಧಿಗೆ ಅತಿಥಿಗಳ ನಮನ ರಾಜ್ಘಾಟ್ನ ಮಹಾತ್ಮ ಗಾಂಧಿ ಸಮಾಧಿ ಬಳಿ ಶಾಂತಿ ಗೀತೆ ಗಾಯನ ನಂತರ ‘ಭಾರತ್ ಮಂಟಪಂ’ನತ್ತ ತೆರಳಲಿರುವ ಅತಿಥಿಗಳು ಬೆಳಗ್ಗೆ 9.40ರಿಂದ 10.15ರವರೆಗೆ ಭಾರತ್ ಮಂಟಪಂಗೆ ಆಗಮನ ಬೆಳಗ್ಗೆ 10.15-10.30ರವರೆಗೆ G20 ನೆನಪಿಗಾಗಿ ಸಸಿ ನೆಡುವ ಕಾರ್ಯಕ್ರಮ ಭಾರತ್ ಮಂಟಪಂ ಆವರಣದ ಸೌತ್ ಪ್ಲಾಜಾದಲ್ಲಿ ಸಸಿ ನೆಡುವ ಕಾರ್ಯಕ್ರಮ ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಜಿ20 ಶೃಂಗಸಭೆಯ 3ನೇ ಸಭೆ ‘ಒಂದು ಭವಿಷ್ಯ’ ವಿಚಾರವಾಗಿ ನಡೆಯಲಿರುವ ಸಭೆ ಜಿ20 ಶೃಂಗಸಭೆಯ ಸಭೆಯ ಅಂತ್ಯದಲ್ಲಿ ನಿರ್ಣಯ ಮಂಡನೆ, ಒಪ್ಪಿಗೆ ಮುಂದಿನ ಶೃಂಗಸಭೆ ನಡೆಯುವ ದೇಶಕ್ಕೆ ಅಧ್ಯಕ್ಷೀಯ ಜವಾಬ್ದಾರಿ ಹಸ್ತಾಂತರ
Published On - Sep 10,2023 8:30 AM