Rajnath Singh Birthday: ರಕ್ಷಣಾ ಸಚಿವ ರಾಜನಾಥ್ ಸಿಂಗ್ಗೆ ಜನ್ಮದಿನದ ಸಂಭ್ರಮ, ಶುಭಾಶಯ ಕೋರಿದ ಮೋದಿ, ಅಮಿತ್ ಶಾ
ರಾಜನಾಥ್ ಸಿಂಗ್: ರಕ್ಷಣಾ ಸಚಿವ ರಾಜನಾಥ್ ಸಿಂಗ್ಗೆ ಇಂದು ಜನ್ಮದಿನದ ಸಂಭ್ರಮ, ಪ್ರಧಾನಿ ಮೋದಿ ಸೇರಿದ ರಾಜಕೀಯ ನಾಯಕರ ಶುಭಾಶಯಗಳು ತಿಳಿಸಿದ್ದಾರೆ.
ರಾಜನಾಥ್ ಸಿಂಗ್ (Rajnath Singh) ಈ ಹೆಸರು ಕೇಳಿದ ತಕ್ಷಣ ದೇಶ ರಾಜಕೀಯದ ಇತಿಹಾಸದ ಪುಟಗಳು ತೆರೆದುಕೊಳ್ಳುತ್ತದೆ, ರಾಜಕೀಯ ಜೀವನದಲ್ಲಿ ಮೇರು ಸಾಧನೆ ಮಾಡಿದ ಅದ್ಭುತ ರಾಜಕಾರಣಿ, ಒಬ್ಬ ಸಾಮಾನ್ಯ ವ್ಯಕ್ತಿ, ಇಂದು ದೇಶ ರಕ್ಷಣಾ ಸಚಿವರಾಗಿ, ಅನೇಕ ರಾಜಕೀಯ ಸವಾಲುಗಳನ್ನು ಎದುರಿಸಿಕೊಂಡು ಬಂದ ನಾಯಕ, ಒಂದು ಕಾಲದಲ್ಲಿ ಇಡೀ ದೇಶದಲ್ಲಿ ಬಿಜೆಪಿ ಬಲ ತುಂಬಿದ ಭಾಜಪದ ಜನಪ್ರೀಯ ರಾಷ್ಟ್ರಾಧ್ಯಕ್ಷ, ಇಂದು ಈ ನಾಯಕನಿಗೆ 72ರ ಜನ್ಮದಿನದ ಸಂಭ್ರಮ. ರಾಜಕೀಯದಲ್ಲಿ ಹಿರಿತನದಂತೆ, ವಯಸ್ಸಿನಲ್ಲೂ ಹಿರಿಯ ವ್ಯಕ್ತಿ ರಾಜನಾಥ್ ಸಿಂಗ್.
ಇವರ ಹುಟ್ಟು ಹಬ್ಬಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಮತ್ತು ಇತರ ಪಕ್ಷಗಳ ನಾಯಕರು ಶುಭಾಶಯ ತಿಳಿಸಿದ್ದಾರೆ. ನಮ್ಮ ಹಿರಿಯ ಕ್ಯಾಬಿನೆಟ್ ಸಹೋದ್ಯೋಗಿ ರಾಜನಾಥಸಿಂಗ್ ಅವರಿಗೆ ಜನ್ಮದಿನದ ಶುಭಾಶಯಗಳು. ರಕ್ಷಣಾ ವಲಯದಲ್ಲಿ ಭಾರತದ ಪ್ರಗತಿಯನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ. ವಿವಿಧ ವಿಷಯಗಳ ಬಗ್ಗೆ ಅವರ ಒಳನೋಟಗಳು ಯಾವಾಗಲೂ ಬಹಳ ಉತ್ತಮವಾಗಿರುತ್ತದೆ. ಅವರು ನಮ್ಮ ರೈತರು ಮತ್ತು ಗ್ರಾಮೀಣ ಪ್ರದೇಶಗಳ ಜೀವನವನ್ನು ಸುಧಾರಿಸುವ ಕೆಲಸವನ್ನು ಕೂಡ ಮಾಡಿದ್ದಾರೆ. ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಮೋದಿ ಟ್ವೀಟ್ ಮೂಲಕ ತಿಳಿಸಿದ್ದಾರೆ. ಇದರ ಜತೆಗೆ ಅಮಿತ್ ಶಾ ಕೂಡ ಶುಭಾಶಯಗಳು ತಿಳಿಸಿದ್ದಾರೆ.
Birthday greetings to our senior Cabinet colleague, Shri @rajnathsingh Ji. He is at the forefront of furthering India’s strides in the vital defence sector. His insights on various issue are always greatly cherished. He is also passionate about improving the lives of our farmers…
— Narendra Modi (@narendramodi) July 10, 2023
ರಾಜನಾಥ್ ಸಿಂಗ್ ಅವರು ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಭಭೌರಾ ಗ್ರಾಮದಲ್ಲಿ 10 ಜುಲೈ 1951 ರಂದು ಜನಿಸಿದರು. ಅವರ ತಂದೆ ರಾಮ್ ಬದನ್ ಸಿಂಗ್ ಮತ್ತು ತಾಯಿ ಗುಜರಾತಿ ದೇವಿ. ರಾಜನಾಥ್ ಸಿಂಗ್ ಅವರಿಗೆ 13 ವರ್ಷ ವಯಸ್ಸಾಗಿದ್ದಾಗ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಂಪರ್ಕ ಬೆಳೆಯಿತು. ನಂತರ ಎಬಿವಿಪಿಯಲ್ಲಿ ವಿದ್ಯಾರ್ಥಿ ಕಾರ್ಯಕರ್ತನಾಗಿ ರಾಜಕೀಯ ಜೀವನ ಆರಂಭಿಸಿದರು.
केंद्रीय रक्षामंत्री व पार्टी के वरिष्ठ नेता श्री @rajnathsingh जी को जन्मदिन की शुभकामनाएं। मोदी जी के नेतृत्व में आप तीनों सेनाओं को आधुनिक बना उन्हें और सशक्त कर रहे हैं। साथ ही अपने अनुभव व संगठन कौशल से पार्टी को मजबूत बनाने में अहम योगदान दे रहे हैं। आपके स्वास्थ्यपूर्ण व…
— Amit Shah (@AmitShah) July 10, 2023
ಇದನ್ನೂ ಓದಿ: Rajnath Singh Birthday Special: ಇಂದು ರಕ್ಷಣಾ ಸಚಿವ ರಾಜನಾಥ್ ಹುಟ್ಟುಹಬ್ಬ; 10 ಕುತೂಹಲಕರ ಮಾಹಿತಿ ಇಲ್ಲಿದೆ
ಶಿಕ್ಷಕರಿಂದ ರಾಜಕಾರಣಿಯವರೆಗಿನ ಪಯಣ
1. ರಾಜನಾಥ್ ಸಿಂಗ್ ಅವರು ತಮ್ಮ ಆರಂಭಿಕ ಅಧ್ಯಯನವನ್ನು ತಮ್ಮ ಹಳ್ಳಿಯಲ್ಲಿ ಮಾಡಿದರು.
2. ಉನ್ನತ ಶಿಕ್ಷಣ ಪಡೆಯಲು ಗೋರಖ್‌ಪುರಕ್ಕೆ ಬರಬೇಕಾಯಿತು. ಇಲ್ಲಿ ಅವರು ಗೋರಖ್‌ಪುರ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
3. ರಾಜನಾಥ್ ಸಿಂಗ್ ಮಿರ್ಜಾಪುರದ ಕೆ.ಬಿ. ಸ್ನಾತಕೋತ್ತರ ಕಾಲೇಜಿನಲ್ಲಿ ಭೌತಶಾಸ್ತ್ರ ಶಿಕ್ಷಕರೂ ಆಗಿದ್ದರು.
4. 1969 ಮತ್ತು 197ರ ನಡುವೆ ಅವರು ಗೋರಖ್‌ಪುರದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸಾಂಸ್ಥಿಕ ಕಾರ್ಯದರ್ಶಿಯಾಗಿದ್ದರು.
5. ರಾಜನಾಥ್ ಸಿಂಗ್ ಅವರು 1974 ರಲ್ಲಿ ಔಪಚಾರಿಕವಾಗಿ ರಾಜಕೀಯಕ್ಕೆ ಸೇರಿದರು. ರಾಜಕೀಯ ಜೀವನವನ್ನು ಜನತಾ ಪಕ್ಷದಿಂದ ಪ್ರಾರಂಭಿಸಿದರು.
6. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ರಾಜನಾಥ್ ಸಿಂಗ್ ಕೂಡ ಅನೇಕ ನಾಯಕರ ಜೈಲಿಗೆ ಹೋಗಿದ್ದರು.
7. 1977ರಲ್ಲಿ ರಾಜನಾಥ್ ಸಿಂಗ್ ಮಿರ್ಜಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. 1980ರಲ್ಲಿ ಬಿಜೆಪಿ ಸೇರಿದರು.
8. ರಾಜನಾಥ್ ಸಿಂಗ್ 1984ರಲ್ಲಿ ಬಿಜೆಪಿ ಯುವ ಘಟಕದ ರಾಜ್ಯಾಧ್ಯಕ್ಷರಾಗಿ, 1986ರಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದರು.
9. 1991ರಲ್ಲಿ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದಲ್ಲಿ ರಾಜನಾಥ್ ಅವರನ್ನು ಶಿಕ್ಷಣ ಸಚಿವರನ್ನಾಗಿ ಮಾಡಲಾಯಿತು. ಈ ವೇಳೆ ನಕಲು ತಡೆ ಕಾಯ್ದೆಯನ್ನು ತರಲಾಯಿತು.
10. ರಾಜನಾಥ್ ಸಿಂಗ್ ಅವರು 1994 ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು.
ಪ್ರಮುಖ ಜವಾಬ್ದಾರಿಗಳನ್ನು ವಹಿಸಿಕೊಂಡ ರಾಜನಾಥ್ ಸಿಂಗ್
ರಾಜನಾಥ್ ಸಿಂಗ್ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವರ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಇದಾದ ನಂತರ 2000ದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದರು. ಆದರೆ, ಅವರ ಸರ್ಕಾರ ಹೆಚ್ಚು ದಿನ ಉಳಿಯಲಿಲ್ಲ. ಇದಾದ ಬಳಿಕ 2003ರಲ್ಲಿ ವಾಜಪೇಯಿ ಸರಕಾರದಲ್ಲಿ ಕೃಷಿ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ರಾಜನಾಥ್ ಸಿಂಗ್ ಕೂಡ ಎರಡು ಬಾರಿ ಪಕ್ಷದ ಅಧ್ಯಕ್ಷರಾಗಿದ್ದರು.
2009ರಲ್ಲಿ, ರಾಜನಾಥ್ ಸಿಂಗ್ ಗಾಜಿಯಾಬಾದ್‌ನಿಂದ ಸಂಸದರಾಗಿ ಆಯ್ಕೆಯಾದರು. ಇದಾದ ಬಳಿಕ 2014ರಲ್ಲಿ ಲಕ್ನೋದಿಂದ ಲೋಕಸಭೆಗೆ ಸ್ಪರ್ಧಿಸಿ ಗೆದ್ದಿದ್ದರು. ನರೇಂದ್ರ ಮೋದಿ ಸರ್ಕಾರದಲ್ಲಿ ಗೃಹ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:26 am, Mon, 10 July 23