ನರಿಬುದ್ಧಿ ಚೀನಾ, ಪಾಪಿ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಮಾಸ್ಟರ್​ ಸ್ಟ್ರೋಕ್​..!

| Updated By: Team Veegam

Updated on: Jun 24, 2020 | 1:16 AM

ನರಿಬುದ್ಧಿ ಚೀನಾ ಮತ್ತು ಪಾಪಿ ಪಾಕಿಸ್ತಾನ ಭಾರತದ ವಿರುದ್ಧ ಕಾಲುಕೆರೆದುಕೊಂಡು ಜಗಳ ಮಾಡದಿರುವ ದಿನವೇ ಇಲ್ಲ. ಕುತಂತ್ರ ಹೂಡದ ಕ್ಷಣವೇ ಇಲ್ಲ. ಅದೇನೋ ಗೊತ್ತಿಲ್ಲ ಭಾರತವನ್ನ ಕಂಡ್ರೆ ಈ ಎರಡೂ ದೇಶಗಳಿಗೆ ಉರಿ ಉರಿ. ಇಷ್ಟು ದಿನ ಪಾಕಿಸ್ತಾನ ಕ್ಯಾತೆ ತೆಗೆಯುತ್ತಿತ್ತು. ಇದೀಗ ಚೀನಾದ ಸರದಿ. ಲಡಾಖ್​ನ ಗಾಲ್ವಾನ್​ ಕಣಿವೆಯಲ್ಲಿ ಚೀನಾ ಕಾಲು ಕೆರೆದು ಜಗಳಕ್ಕೆ ನಿಂತಿದೆ. ಅಲ್ಲದೆ ಭಾರತದ ಯೋಧರ ಮೇಲೆ ದಾಳಿ ಸಹ ಮಾಡಿದೆ. ಈ ಹೊತ್ತಲ್ಲೇ ಭಾರತ ಅದಕ್ಕೆ ತಕ್ಕ ಪಾಠ ಕಲಿಸಲು […]

ನರಿಬುದ್ಧಿ ಚೀನಾ, ಪಾಪಿ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಮಾಸ್ಟರ್​ ಸ್ಟ್ರೋಕ್​..!
Follow us on

ನರಿಬುದ್ಧಿ ಚೀನಾ ಮತ್ತು ಪಾಪಿ ಪಾಕಿಸ್ತಾನ ಭಾರತದ ವಿರುದ್ಧ ಕಾಲುಕೆರೆದುಕೊಂಡು ಜಗಳ ಮಾಡದಿರುವ ದಿನವೇ ಇಲ್ಲ. ಕುತಂತ್ರ ಹೂಡದ ಕ್ಷಣವೇ ಇಲ್ಲ. ಅದೇನೋ ಗೊತ್ತಿಲ್ಲ ಭಾರತವನ್ನ ಕಂಡ್ರೆ ಈ ಎರಡೂ ದೇಶಗಳಿಗೆ ಉರಿ ಉರಿ. ಇಷ್ಟು ದಿನ ಪಾಕಿಸ್ತಾನ ಕ್ಯಾತೆ ತೆಗೆಯುತ್ತಿತ್ತು. ಇದೀಗ ಚೀನಾದ ಸರದಿ. ಲಡಾಖ್​ನ ಗಾಲ್ವಾನ್​ ಕಣಿವೆಯಲ್ಲಿ ಚೀನಾ ಕಾಲು ಕೆರೆದು ಜಗಳಕ್ಕೆ ನಿಂತಿದೆ. ಅಲ್ಲದೆ ಭಾರತದ ಯೋಧರ ಮೇಲೆ ದಾಳಿ ಸಹ ಮಾಡಿದೆ. ಈ ಹೊತ್ತಲ್ಲೇ ಭಾರತ ಅದಕ್ಕೆ ತಕ್ಕ ಪಾಠ ಕಲಿಸಲು ಮಾಸ್ಟರ್ ಸ್ಟ್ರೋಕ್​ಗೆ ರೆಡಿಯಾಗಿದೆ. ಅದರ ಒಂದು ಭಾಗವೇ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಕೈಗೊಂಡಿರುವ ರಷ್ಯಾ ಪ್ರವಾಸ.

ಭಾರತದ ಜತೆ ಪಾಕಿಸ್ತಾನ ಅಥವಾ ಚೀನಾ ಕ್ಯಾತೆ ತೆಗೆದಾಗಲೆಲ್ಲಾ ನಾವು ಮುಖಮಾಡೋದು ರಷ್ಯಾ ಕಡೆಗೆ. ಯಾಕಂದ್ರೆ ಭಾರತ ಸಂಕಷ್ಟದಲ್ಲಿದ್ದ ಎಲ್ಲಾ ಸಂದರ್ಭಗಳಲ್ಲೂ ರಷ್ಯಾ ಅದರ ನೆರವಿಗೆ ನಿಂತಿದೆ. ಈಗಲೂ ಇದೇ ಭರವಸೆಯನ್ನು ಹೊತ್ತು ರಕ್ಷಣಾ ಸಚಿವರು ರಷ್ಯಾ ರಾಜಧಾನಿ ಮಾಸ್ಕೋಗೆ ಹಾರಿದ್ದಾರೆ. ಎರಡನೇ ಮಹಾಯುದ್ಧದಲ್ಲಿ ಜರ್ಮನಿಯನ್ನು ಮಣಿಸಿ 75 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಮಾಸ್ಕೋದಲ್ಲಿ ಸೇನಾ ಕವಾಯತು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರಾಜನಾಥ್ ಸಿಂಗ್ ಭಾಗವಹಿಸಲಿದ್ದಾರೆ. ಇದೇ ಸಂದರ್ಭವನ್ನು ಬಳಸಿಕೊಂಡು ಚೀನಾಗೆ ಬಿಸಿ ಮುಟ್ಟಿಸೋಕೆ ಸಿದ್ಧವಾಗಿದ್ದಾರೆ.

ರಾಜನಾಥ್ ಸಿಂಗ್​ರ ರಷ್ಯಾ ಪ್ರವಾಸದ ಭಾಗವಾಗಿ ಭಾರತ, ರಷ್ಯಾ ಹಾಗೂ ಚೀನಾ ನಡುವೆ ನಾಳೆ ತ್ರಿಪಕ್ಷೀಯ ಚರ್ಚೆ ನಡೆಯಲಿದೆ. ಜೊತೆಗೆ ರಷ್ಯಾದಿಂದ ಖರೀದಿಸಿರುವ ಎಸ್-400 ಅಣ್ವಸ್ತ್ರ ಕ್ಷಿಪಣಿ ನಿರೋಧಕ ವ್ಯವಸ್ಥೆಯ ಒಪ್ಪಂದದ ಬಗ್ಗೆಯೂ ಮಾತುಕತೆ ನಡೆಯಲಿದೆ.

ಅಂದ ಹಾಗೆ, ಎಸ್-400 ಒಂದು ಖತರ್ನಾಕ್ ಆಯುಧ. ಶತ್ರುವಿನ ಅಣ್ವಸ್ತ್ರ ಕ್ಷಿಪಣಿಗಳನ್ನು ತಕ್ಷಣವೇ ಗುರುತಿಸಿ, ಅದನ್ನ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. 2021ರ ಡಿಸೆಂಬರ್‌ಗೆ ಎಸ್-400 ವ್ಯವಸ್ಥೆಯನ್ನು ಭಾರತಕ್ಕೆ ನೀಡಲು ರಷ್ಯಾದಿಂದ ಸಿದ್ಧತೆ ನಡೆದಿದೆ. ಆದ್ರೆ ಅದನ್ನ ಕೂಡಲೇ ನೀಡುವಂತೆ ರಾಜನಾಥ್ ಸಿಂಗ್ ರಷ್ಯಾಗೆ ಮನವಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಚೀನಾ ಬಳಿ ಎಸ್-400 ವ್ಯವಸ್ಥೆ ಇರುವ ಕಾರಣ ಭಾರತ ರಷ್ಯಾ ಮೇಲೆ ಒತ್ತಡ ಹೇರಲು ಮುಂದಾಗಿದೆ.

ಒಟ್ನಲ್ಲಿ, ರಾಜನೀತಿಯ ಚತುರೋಪಾಯಗಳಾದ ಸಾಮ, ದಾನ, ಭೇದ, ದಂಡದ ಅನುಗುಣವಾಗಿ ಭಾರತ ಚೀನಾದೊಂದಿಗೆ ಮಾತುಕತೆ ನಡೆಸಿ ಒಳ್ಳೆಯ ಮಾತಿನಲ್ಲಿ ಅದಕ್ಕೆ ಬುದ್ಧಿ ಹೇಳಲು ಮುಂದಾಗಿದೆ. ಒಂದು ವೇಳೆ ನರಿಬುದ್ಧಿ ಚೀನಾ ನಮ್ಮ ಮಾತು ಕೇಳದಿದ್ದರೆ ಗಡಿಯಲ್ಲಿ ತಕ್ಕ ಶಾಸ್ತಿ ಮಾಡಲು ಭಾರತ ಸಜ್ಜಾಗುತ್ತಿದೆ.

Published On - 8:21 pm, Tue, 23 June 20