ನವದೆಹಲಿ: ಇಂದು ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಪಶ್ಚಿಮಬಂಗಾಳದಲ್ಲಿ ಮತ್ತೊಮ್ಮೆ ದೀದಿ ಆಡಳಿತ ನಿಶ್ಚಿತವಾಗಿದೆ. ಹಾಗೇ ಕೇರಳದಲ್ಲಿ ಕೂಡ ಪಿಣರಾಯಿ ವಿಜಯನ್ ಆಡಳಿತ ಮರುಕಳಿಸಲಿದ್ದು, ತಮಿಳುನಾಡಿನಲ್ಲಿ ಜನ ಕರುಣಾನಿಧಿ ಪುತ್ರ ಎಂ.ಕೆ.ಸ್ಟಾಲಿನ್ಗೆ ಮಣೆ ಹಾಕಿದ್ದಾರೆ. ಬಹುತೇಕ ಫಲಿತಾಂಶ ನಿಶ್ಚಿತವಾಗಿದ್ದು ಅಧಿಕೃತ ಘೋಷಣೆಯೊಂದು ಬಾಕಿ ಇರುವಾಗಲೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಮತಾ ಬ್ಯಾನರ್ಜಿ, ಪಿಣರಾಯಿ ವಿಜಯನ್ ಮತ್ತು ಎಂ.ಕೆ.ಸ್ಟಾಲಿನ್ಗೆ ಅಭಿನಂದಿಸಿದ್ದಾರೆ.
ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 216 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯಲಿದೆ. ಇನ್ನು ತಮ್ಮ ಸ್ವಕ್ಷೇತ್ರ ಬಿಟ್ಟು, ಸುವೇಂದು ಅಧಿಕಾರಿಯವರಿಗೆ ಸವಾಲು ಹಾಕಿ ನಂದಿಗ್ರಾಮದಿಂದ ಸ್ಪರ್ಧಿಸಿದ್ದರು.
ಹಾಗೇ ಕೇರಳದಲ್ಲಿ ಎರಡನೇ ಬಾರಿಗೆ ಚುಕ್ಕಾಣಿ ಹಿಡಿಯಲಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೂ ರಾಜನಾಥ್ ಸಿಂಗ್ ಶುಭಾಶಯ ಕೋರಿದ್ದಾರೆ. ಕೇರಳದಲ್ಲಿ ಕೂಡ ಎಲ್ಡಿಎಫ್ ಸರ್ಕಾರ ಮತ್ತೊಮ್ಮೆ ಅಧಿಕಾರ ಹಿಡಿಯುವ ನಿರೀಕ್ಷೆಯೇ ಹೆಚ್ಚಾಗಿತ್ತು. ಅದರಂತೆ ಆ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ.
ಹಾಗೇ, ತಮಿಳುನಾಡಿನಲ್ಲಿ ಎಐಎಡಿಎಂಕೆ-ಬಿಜೆಪಿ ಮತ್ತಿತರ ಪಕ್ಷಗಳ ಒಕ್ಕೂಟ ಈ ಬಾರಿ ಸೋತಿದ್ದು, ಜನರು ಡಿಎಂಕೆಯ ಕೈ ಹಿಡಿದಿದ್ದಾರೆ. ಈಗ ಅಲ್ಲಿ ಡಿಎಂಕೆ ಸರ್ಕಾರ ರಚನೆ ಮಾಡಲಿದೆ. ಹೀಗಾಗಿ ರಾಜನಾಥ್ ಸಿಂಗ್ ಅವರು ಎಂ.ಕೆ.ಸ್ಟಾಲಿನ್ ಅವರಿಗೆ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
Congratulations to the Chief Minister of West Bengal, @MamataOfficial Didi on her party’s victory in West Bengal assembly elections. My best wishes to her for her next tenure.
— Rajnath Singh (@rajnathsingh) May 2, 2021
Congratulations to the Chief Minister of Kerala Shri @vijayanpinarayi on his party’s victory in Kerala Assembly elections. My best wishes to him for his next tenure.
— Rajnath Singh (@rajnathsingh) May 2, 2021
Congratulations to DMK leader, Thiru @mkstalin on his party’s victory in Tamil Nadu assembly elections. I extend my best wishes to him.
— Rajnath Singh (@rajnathsingh) May 2, 2021
ಇದನ್ನೂ ಓದಿ: 5 State Assembly Election Results 2021 LIVE: ಮಮತಾ ಬ್ಯಾನರ್ಜಿಗೆ ರೋಚಕ ಗೆಲುವು; ವೀರೋಚಿತ ಸೋಲುಂಡ ಸುವೇಂದು ಅಧಿಕಾರಿ
Published On - 5:25 pm, Sun, 2 May 21