West Bengal Election Result 2021: ಖೇಲಾ ಹೋಬೆಯಿಂದ ಖೇಲಾ ಹೊಯೆಚೆವರೆಗೆ ಟಿಎಂಸಿಯ ಚುನಾವಣಾ ಪಯಣ

West Bengal Assembly Election Result 2021: ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಆರಂಭವಾದಾಗ ಖೇಲಾ ಹೋಬೆ ಎಂಬ ಘೋಷವಾಕ್ಯದೊಂದಿಗೆ ಟಿಎಂಸಿ ಕಣಕ್ಕಿಳಿದಿತ್ತು. ಇದೀಗ ಟಿಎಂಸಿ ಕಾರ್ಯಕರ್ತರು ಗೆಲುವಿಗೆ ಸಂಭ್ರಮಾಚರಣೆ ಮಾಡಿ ಟ್ವಿಟರ್​ನಲ್ಲಿ #khela hobe ಟ್ರೆಂಡ್ ಮಾಡಿದ್ದಾರೆ.

West Bengal Election Result 2021: ಖೇಲಾ ಹೋಬೆಯಿಂದ ಖೇಲಾ ಹೊಯೆಚೆವರೆಗೆ ಟಿಎಂಸಿಯ ಚುನಾವಣಾ ಪಯಣ
ಮಮತಾ ಬ್ಯಾನರ್ಜಿ
Follow us
ರಶ್ಮಿ ಕಲ್ಲಕಟ್ಟ
|

Updated on: May 02, 2021 | 4:47 PM

ಪಶ್ಚಿಮ ಬಂಗಾಳದಲ್ಲಿ 200ಕ್ಕಿಂತಲೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಮಮತಾ ಬ್ಯಾನರ್ಜಿ ಸತತ ಮೂರನೇ ಬಾರಿ ಮುಖ್ಯಮಂತ್ರಿ ಸ್ಥಾನಕ್ಕೇರುವುದು ಖಚಿತವಾಗಿದೆ. ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಈಗಾಗಲೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದು ಟ್ವಿಟರ್​ನಲ್ಲಿ khela hobe ಟ್ರೆಂಡ್ ಆಗಿದೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಆರಂಭವಾದಾಗ ಖೇಲಾ ಹೋಬೆ ಎಂಬ ಘೋಷವಾಕ್ಯದೊಂದಿಗೆ ಟಿಎಂಸಿ ಕಣಕ್ಕಿಳಿದಿತ್ತು. ಬಿಜೆಪಿ ಕೂಡಾ ಖೇಲಾ ಹೋಬೆ ಎಂದು ಹೇಳುತ್ತಾ ಚುನಾವಣಾ ಪ್ರಚಾರ ಮಾಡಿತ್ತು.

ಏನಿದು ಖೇಲಾ ಹೋಬೆ ಖೇಲಾ ಹೋಬೆ ಎಂಬ ಬಂಗಾಳಿ ಪದದ ಅರ್ಥ ಆಟ ಶುರು. ಬಿಜೆಪಿ ವಿರುದ್ಧ ಗೆದ್ದೇ ಗೆಲ್ಲುತ್ತೇನೆ ಎಂದು ಅಬ್ಬರಿಸಿದ್ದ ಮಮತಾ ಖೇಲಾ ಹೋಬೆ ಎನ್ನುತ್ತಲೇ ಚುನಾವಣಾ ಪ್ರಚಾರ ನಡೆಸಿದ್ದರು. ಅಂದ ಹಾಗೆ ಈ ಖೇಲಾ ಹೋಬೆ ಎಂಬ ಘೋಷವಾಕ್ಯದ ಹಿಂದೆ ಒಂದು ಕತೆಯಿದೆ. ಪಶ್ಚಿಮ ಬಂಗಾಳಕ್ಕೆ ಈ ಘೋಷವಾಕ್ಯ ಬಂದಿದ್ದು ನೆರೆ ರಾಷ್ಟ್ರ ಬಾಂಗ್ಲಾದೇಶದಿಂದ. ಕೆಲವು ವರ್ಷಗಳ ಹಿಂದೆ ಬಾಂಗ್ಲಾದೇಶದ ಆವಾಮಿ ಲೀಗ್ ಸಂಸದ ಶಮೀಮ್ ಒಸ್ಮಾನ್ ಈ ಘೋಷವಾಕ್ಯ ಬಳಸಿದ್ದರು. ಪಶ್ಚಿಮ ಬಂಗಾಳದ ಬಿರ್​ಭುಮ್ ಜಿಲ್ಲೆಯಲ್ಲಿ ನಡೆದ ರಾಜಕೀಯ ಕಾರ್ಯಕ್ರಮವೊಂದರಲ್ಲಿ ಅಲ್ಲಿನ ತೃಣಮೂಲ ಕಾಂಗ್ರೆಸ್ ಅಧ್ಯಕ್ಷ ಅನುಬ್ರತಾ ಮೊಂಡಲ್ ಈ ಪದವನ್ನು ಬಳಸಿ ಹೆಚ್ಚು ಪ್ರಚಾರ ಕೊಟ್ಟರು. ಖೇಲಾ ಹೋಬೆ, ಬೊಯಂಕರ್ ಖೇಲಾ ಹೋಬೆ, ಏಯ್ ಮಾಟಿ ತೆ ಖೇಲಾ ಹೋಬೆ (ಆಟ ಶುರುವಾಗಿದೆ. ಇದೊಂದು ಅಪಾಯಕಾರಿ ಆಟ. ಆದರೆ ಆಟ ಶುರುವಾಗಿದೆ, ಇದೇ ಆಟದ ಮೈದಾನ) ಎಂದಿದ್ದರು ಮೊಂಡಲ್.

ಟಿಎಂಸಿ ನಾಯಕರು ಬಾಂಗ್ಲಾದೇಶದಿಂದ ಈ ಘೋಷವಾಕ್ಯ ತಂದಿದ್ದಾರೆ ಎಂದು ಬಿಜೆಪಿ ನಾಯಕರು ವಾದಿಸುತ್ತಿದ್ದರೂ, ಬಾಂಗ್ಲಾದೇಶಾದ ಒಸ್ಮಾನ್ ಅವರು ಈ ಪದವನ್ನು ಬಳಸಿರುವ ಬಗ್ಗೆ ಮೊಂಡಲ್ ಅವರಿಗೆ ಗೊತ್ತಿತ್ತೋ ಇಲ್ಲವೋ ಎಂಬುದು ಸ್ಪಷ್ಟವಿಲ್ಲ.

ಖೇಲಾ ಹೋಬೆ ಚುನಾವಣಾ ಘೋಷವಾಕ್ಯವಾಗಿದ್ದು ಹೇಗೆ? ಬಂಗಾಳದಲ್ಲಿ ಚುನಾವಣೆ ಆರಂಭವಾದಾಗ ಮೊದಲು ಚರ್ಚೆಯಾದ ವಿಷಯ ಹೊರಗಿನವರು ಮತ್ತು ಒಳಗಿನವರು ಎಂಬುದಾಗಿತ್ತು. ಟಿಎಂಸಿ ಪಕ್ಷ ಬಿಜೆಪಿಯನ್ನು ಬಾರ್​ಗಿಸ್( ಹೊರಗಿನವರು) ಎಂದು ಕರೆಯಿತು. ಬೈರೇ ತೇಕೆ ಬಾರ್ ಗೀ ಆಶೆ, ನಿಯೋಮ್ ಕೊರ ಪ್ರೊತಿ ಮಶೆ, ಅಮಿಯೊ ಅಚಿ,ತುಮಿಯೊ ರೊಬೆ ,ಬೊಂದು ಈ ಬಾರ್ ಖೇಲಾ ಹೋಬೆ (ಬಾರ್ ಗಿಸ್ ಹೊರಗಿನಿಂದ ಬಂದಿದ್ದಾರೆ , ಅವರು ಪ್ರತಿ ತಿಂಗಳು ಇಲ್ಲಿ ಗೆ ಭೇಟಿ ನೀಡುತ್ತಾರೆ, ಆದರೆ ನಾವು ಮತ್ತು ನೀವು ಇಲ್ಲೇ ಇರುತ್ತೇವೆ.ಗೆಳೆಯಾ ಆಟ ಶುರುವಾಗಿದೆ) ಎಂದು ಹೇಳುತ್ತಾ ಟಿಎಂಸಿ ಚುನಾವಣಾ ಕಣಕ್ಕಿಳಿದಿತ್ತು. ಈ ಬಗ್ಗೆ ಹಾಡು ಕೂಡಾ ವೈರಲ್ ಆಗಿದ್ದು, ಬಿಜೆಪಿಯನ್ನು ಟೀಕಿಸಿ ಟಿಎಂಸಿ ಈ ಹಾಡನ್ನು ಹರಿಬಿಟ್ಟಿತ್ತು.

ರಾಜಕಾರಣಿಗಳ ಬಾಯಲ್ಲಿ ಖೇಲಾ ಹೋಬೆ ಪಶ್ಚಿಮ ಬಂಗಾಳದಲ್ಲಿ ಭಾಷಾ ದಿನಾಚರಣೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖೇಲಾ ಹೋಬೆ ಘೋಷವಾಕ್ಯ ಬಳಸಿದ್ದರು. ಆಟ ಶುರುವಾಗಿದೆ. ನಾನೇ ಗೋಲ್ ಕೀಪರ್. ಯಾರು ಗೆಲ್ಲುತ್ತಾರೆ ಎಂಬುದನ್ನು ನೋಡೋಣ. ಯಾರದ್ದು ಕೊನೆಯ ನಗುವಾಗುತ್ತದೆ ಎಂಬುದು ಚುನಾವಣಾ ಫಲಿತಾಂಶ ಹೇಳಲಿದ ಎಂದಿದ್ದರು ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ರಜೀಬ್ ಬ್ಯಾನರ್ಜಿ (ಈ ಹಿಂದೆ ಟಿಎಂಸಿಯಲ್ಲಿದ್ದವರು), ಆಟ ಶುರುವಾಗಿದೆ ಎಂದರೆ ಏನರ್ಥ? ಇದು ರಾಜಕೀಯ ಕಣ ಅಥವಾ ಆಟದ ಮೈದಾನನಾ? ಮಮತಾ ಅವರ ಜತೆಗೆ ಈಗ ಯಾರೂ ಇಲ್ಲ. ಹಾಗಾಗಿ ಈಗ ಅವರೇ ಗೋಲ್ ಕೀಪರ್ ಎಂದಿದ್ದರು.

ಟಿಎಂಸಿ ಘೋಷಣೆಯನ್ನು ಟೀಕಿಸಿದ ಬಂಗಾಳ ಬಿಜೆಪಿಯ ವಕ್ತಾರ ಶಮಿಕ್ ಭಟ್ಟಾಚಾರ್ಯ,ಟಿಎಂಸಿ ರಾಜಕೀಯವನ್ನು ಆಟಕ್ಕೆ ಹೋಲಿಸಿದೆ. ಈ ಘೋಷವಾಕ್ಯವನ್ನು ಬೆದರಿಕೆಯಂತೆ ಬಳಸುತ್ತಿದ್ದು ಇದು ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ ಎಂದಿದ್ದರು

ಇದೇ ಘೋಷವಾಕ್ಯವನ್ನು ಬಳಸಿದ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ , ಖೇಲಾ ಹೋಬೆ, ಖೇಲಾ ಹೋಬೆ ,ಪರಿಬರ್ತನ್ ಹೋಬೆ (ಆಟ ಶುರು ಬದಲಾವಣೆಯೂ ಶುರು) ಎಂದಿದರು. ಮಮತಾ ದೀದಿಯವರ ಸಹೋದರರಿಗೆ ನಾನು ಒಂದು ಮಾತು ಹೇಳಲು ಇಷ್ಟಪಡುತ್ತೇನೆ . ಬಂಗಾದಲ್ಲಿ ನಾವು ಆಟವಾಡುತ್ತೇವೆ , ನೀವು ಗ್ಯಾಲರಿಯಲ್ಲಿ ಕುಳಿತು ಆಟ ನೋಡಬೇಕಾಗಿ ಬರುತ್ತದೆ ಎಂದಿದ್ದರು.

ಖೇಲಾ ಹೋಬೆಯಿಂದ ಖೇಲಾ ಹೊಯೆಚೆ ಭಾನುವಾರ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಮುನ್ನಡೆ ಸಾಧಿಸಿತ್ತಿದ್ದಂತೆ ಟಿಎಂಸಿ ಸಂಸದೆ, ನಟಿ ನುಸ್ರತ್ ಜಹಾನ್ ರೂಹಿ ಜೇತಾ ಹೊಯೆಚೆ, ಖೇಲಾ ಹೊಯೆಚೆ ಎಂದು ಟ್ವೀಟ್ ಮಾಡಿದ್ದಾರೆ. ಇದರರ್ಥ ಏನೇ ಆಗಿರಲಿ ಆಟ ಈಗ ಶುರುವಾಗಿದೆ ಎಂಬುದು ಇದರರ್ಥ .

ಇದನ್ನೂ ಓದಿ: West Bengal Assembly Elections Exit Poll: ದೀದಿ ವರ್ಸಸ್ ಮೋದಿ ಕದನದ ಕ್ಲೈಮಾಕ್ಸ್ ಮುಂಚಿನ ರಿಸಲ್ಟ್ಸ್

(West Bengal Election Result 2021 Khela hobe has become a slogan for TMC Jeta Hocche Khela Hoyeche tweets Nusrat Jahan)

ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ
ಬಿಜೆಪಿ ಶಾಸಕ ಪ್ರಭು ಚವ್ಹಾಣ್​ಗೆ ಮಹಾರಾಷ್ಟ್ರ ಶಿವಸೇನೆ ಪುಂಡರಿಂದ ಕಿರಿಕ್
ಬಿಜೆಪಿ ಶಾಸಕ ಪ್ರಭು ಚವ್ಹಾಣ್​ಗೆ ಮಹಾರಾಷ್ಟ್ರ ಶಿವಸೇನೆ ಪುಂಡರಿಂದ ಕಿರಿಕ್