AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Oxygen Shortage: ಆಕ್ಸಿಜನ್ ಕೊರತೆ ನೀಗಿಸಲು ಸಮುದ್ರ ಸೇತು ಕಾರ್ಯಾಚರಣೆ ಶುರು ಮಾಡಿದ ಭಾರತೀಯ ನೌಕಾಪಡೆ..

ಭಾರತೀಯ ನೌಕಾಪಡೆಯ ವಕ್ತಾರ ಟ್ವೀಟ್ ಮಾಡಿದ್ದು, ಸಮುದ್ರ ಸೇತು-II ಮಿಷನ್​ನಡಿ ಭಾರತೀಯ ನೌಕಾಪಡೆಯ ಹಡಗುಗಳು ಬೇರೆ ರಾಷ್ಟ್ರಗಳಿಂದ ದ್ರವರೂಪದ ಆಮ್ಲಜನಕ ಸಾಂದ್ರಕಗಳನ್ನು ಹೊತ್ತು ತರುತ್ತವೆ ಎಂದು ತಿಳಿಸಿದ್ದಾರೆ.

Oxygen Shortage: ಆಕ್ಸಿಜನ್ ಕೊರತೆ ನೀಗಿಸಲು ಸಮುದ್ರ ಸೇತು ಕಾರ್ಯಾಚರಣೆ ಶುರು ಮಾಡಿದ ಭಾರತೀಯ ನೌಕಾಪಡೆ..
ಸಮುದ್ರ ಸೇತು ಕಾರ್ಯಾಚರಣೆ ಶುರು ಮಾಡಿದ ಇಂಡಿಯನ್ ನೇವಿ
Lakshmi Hegde
|

Updated on:May 02, 2021 | 4:15 PM

Share

ದೆಹಲಿ: ದೇಶದಲ್ಲಿ ಸದ್ಯ ಆಕ್ಸಿಜನ್ ಅಭಾವದ ಸಮಸ್ಯೆ ತಲೆದೋರಿದ್ದು, ವಿದೇಶಗಳೂ ಸಹ ಭಾರತಕ್ಕೆ ನೆರವಿನಹಸ್ತ ಚಾಚಿವೆ. ಆಮ್ಲಜನಕ ಸಾಂದ್ರಕಗಳನ್ನು ಕಳಿಸುತ್ತಿವೆ. ಇದೀಗ ಬೇರೆ ರಾಷ್ಟ್ರಗಳಿಂದ ಆಮ್ಲಜನಕವನ್ನು ಭಾರತಕ್ಕೆ ತರಲು ಇಂಡಿಯನ್ ನೇವಿ (ಭಾರತೀಯ ನೌಕಾಪಡೆ) ಸಮುದ್ರ ಸೇತು-II ಎಂಬ ಹೆಸರಿನಡಿ ಕಾರ್ಯಾಚರಣೆ ಶುರು ಮಾಡಿದೆ.

ಈ ಬಗ್ಗೆ ಭಾರತೀಯ ನೌಕಾಪಡೆಯ ವಕ್ತಾರ ಟ್ವೀಟ್ ಮಾಡಿದ್ದು, ಸಮುದ್ರ ಸೇತು-II ಮಿಷನ್​ನಡಿ ಭಾರತೀಯ ನೌಕಾಪಡೆಯ ಹಡಗುಗಳು ಬೇರೆ ರಾಷ್ಟ್ರಗಳಿಂದ ದ್ರವರೂಪದ ಆಮ್ಲಜನಕ ಸಾಂದ್ರಕಗಳು ಮತ್ತು ಸಂಬಂಧಿತ ವೈದ್ಯಕೀಯ ಉಪಕರಣಗಳನ್ನು ಹೊತ್ತು ತರಲಿವೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಕೊವಿಡ್ 19 ಎರಡನೇ ಅಲೆ ಗಂಭೀರವಾಗುತ್ತಿದೆ. ಈ ಹೊತ್ತಲ್ಲಿ ಆಮ್ಲಜನಕದ ಕೊರತೆಯೂ ಹೆಚ್ಚಾಗಿದೆ. ಆಮ್ಲಜನಕವಿಲ್ಲದೆ ಅದೆಷ್ಟೋ ರೋಗಿಗಳು ಜೀವ ಕಳೆದುಕೊಂಡಿದ್ದಾರೆ. ಆಸ್ಪತ್ರೆಗಳ ಮುಖ್ಯಸ್ಥರೇ ಕಣ್ಣೀರಿಡುತ್ತಿದ್ದಾರೆ. ಈಗಾಗಲೇ ಅಮೆರಿಕ, ಯುಕೆ, ಫ್ರಾನ್ಸ್​ ಮತ್ತಿತರ ದೇಶಗಳಿಂದ ವಿಮಾನದ ಮೂಲಕ ಆಕ್ಸಿಜನ್​​ನ್ನು ಭಾರತಕ್ಕೆ ಸಾಗಣೆ ಮಾಡಲಾಗಿದೆ. ಇದೀಗ ನೌಕಾಪಡೆ ಸಮುದ್ರ ಮಾರ್ಗದ ಮೂಲಕ ಸಾಗಣೆಗೆ ಮುಂದಾಗಿದೆ. ಹೀಗೆ ಆಕ್ಸಿಜನ್​ ಸಾಗಣೆಯ ಮೊದಲ ಬ್ಯಾಚ್​​ನಲ್ಲಿ ಐಎನ್​ಎಸ್ ಕೋಲ್ಕತ್ತ ಮತ್ತು ಐಎನ್​ಎಸ್​ ತಲ್ವಾರ್​​ಗಳು ಕಾರ್ಯಾಚರಣೆ ಆರಂಭಿಸಿವೆ. ಇದರಲ್ಲಿ ಐಎನ್​ಎಸ್ ತಲ್ವಾರ್ ಏಪ್ರಿಲ್ 30ರಂದು ಬಹರೇನ್ ದೇಶದ ಮನಮಾ ಬಂದರನ್ನು ತಲುಪಿದ್ದು ಸುಮಾರು 40 ಮೆಟ್ರಿಕ್ ಟನ್​ಗಳಷ್ಟು ದ್ರವರೂಪದ ವೈದ್ಯಕೀಯ ಆಕ್ಸಿಜನ್ ಹೊತ್ತು ತರಲಿದೆ. ಹಾಗೇ ಐಎನ್​ಎಸ್ ಕೋಲ್ಕತ್ತ ದೋಹಾ, ಕ್ವತಾರ್​, ಕುವೈತ್​​ಗಳಿಂದ ಆಕ್ಸಿಜನ್​ ತರಲಿದೆ ಎಂದು ರಕ್ಷಣಾ ಇಲಾಖೆ ಮಾಹಿತಿ ನೀಡಿದೆ. ಇಷ್ಟೇ ಅಲ್ಲದೆ ಮುಂದೆ ಇನ್ನಷ್ಟು ನೌಕಾಹಡಗುಗಳು ಕಾರ್ಯಾಚರಣೆಯಲ್ಲಿ ತೊಡಗಿಕೊಳ್ಳಲಿವೆ ಎಂದೂ ತಿಳಿಸಿದೆ.

ಇದನ್ನೂ ಓದಿ: ಮಹಿಳೆಯ ಶವದ ಮೇಲಿದ್ದ ಚಿನ್ನಾಭರಣ ಕಳ್ಳತನ; ಚಿಕ್ಕಬಳ್ಳಾಪುರ ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ

ಚಕ್ರವರ್ತಿ ತೆಗೆದುಕೊಂಡ ಆ ಒಂದು ನಿರ್ಧಾರ ಅವರ ಬಿಗ್​ ಬಾಸ್​ ಜರ್ನಿಯನ್ನೇ ಬದಲಾಯಿಸಿತು

Indian Navy start Samudra Setu for bring the oxygen from other Countries

Published On - 4:13 pm, Sun, 2 May 21

Follow Us
Lakshmi Hegde
Lakshmi Hegde
ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಬಿಗ್​​ಬಾಸ್ ಸ್ಪರ್ಧಿಗಳ ತಲೆ ಮೇಲೆ ಸಗಣಿ ನೀರು, ಕಸ: ವಿಡಿಯೋ ನೋಡಿ
ಬಿಗ್​​ಬಾಸ್ ಸ್ಪರ್ಧಿಗಳ ತಲೆ ಮೇಲೆ ಸಗಣಿ ನೀರು, ಕಸ: ವಿಡಿಯೋ ನೋಡಿ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ