ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹ್ಯಾಟ್ರಿಕ್​ ಸಾಧನೆ

Mamata Banejee: ತಮಗೆ ಕೈಕೊಟ್ಟ ಒಂದು ಕಾಲದ ನೆಚ್ಚಿನ ಅನುಯಾಯಿ ಸುವೇಂದು ಅಧಿಕಾರಿಯನ್ನು ಮಣಿಸಲೆಂದೇ ಸ್ವಕ್ಷೇತ್ರ ಭವಾನಿಪುರ ತೊರೆದು ನಂದಿಗ್ರಾಮದಿಂದ ಮಮತಾ ಸ್ಪರ್ಧಿಸಿದ್ದರು.

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹ್ಯಾಟ್ರಿಕ್​ ಸಾಧನೆ
ಅಂದು ಒಂದೇ ಪಕ್ಷದ ನಾಯಕರು, ಇಂದು ಪ್ರಬಲ ವಿರೋಧಿಗಳು

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ನಂದಿಗ್ರಾಮದಲ್ಲಿ ತಾವೂ ಗೆದ್ದು, ರಾಜ್ಯದಲ್ಲಿ ಟಿಎಂಸಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ನಂದಿಗ್ರಾಮದಲ್ಲಿ ಕಾಲಿಗೆ ಪೆಟ್ಟಾದ ನಂತರ ಮಮತಾ, ವ್ಹೀಲ್​ಚೇರ್​ನಲ್ಲಿ ಕುಳಿತೇ ಚುನಾವಣೆ ನಿಭಾಯಿಸಿದ್ದರು.ಮಮತಾ ವಿರುದ್ಧ ಬಿಜೆಪಿ ತನ್ನ ಸರ್ವಶಕ್ತಿಯನ್ನು ಪ್ರಯೋಗಿಸಿತ್ತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಚಾರ ನಡೆಸಿದ್ದರು. ಕೇಂದ್ರದ ಹಲವು ಸಚಿವರು, ಬಿಜೆಪಿ ನಾಯಕರು ಪಶ್ಚಿಮ ಬಂಗಾಳಕ್ಕೆ ಧಾವಿಸಿ ಮಮತಾ ವಿರುದ್ಧ ಹರಿಹಾಯ್ದಿದ್ದರು.

ಹಿಂದೆ ಟಿಎಂಸಿ ಸರ್ಕಾರದಲ್ಲಿ ಮುಖ್ಯಸ್ಥಾನದಲ್ಲಿದ್ದ ಸಚಿವರು, ಶಾಸಕರು, ಟಿಎಂಸಿ ನಾಯಕರು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಮಮತಾ ವಿರುದ್ಧ ಬಿಜೆಪಿ ಆರೋಪಗಳ ಸುರಿಮಳೆಗೈದಿತ್ತು. ಎಲ್ಲವನ್ನೂ ಮಮತಾ ಬ್ಯಾನರ್ಜಿ ಸಮರ್ಥವಾಗಿ ಎದುರಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಹತ್ತಾರು ಅಭ್ಯರ್ಥಿಗಳು ಕೈಕೊಟ್ಟಿದ್ದರು. ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ನಂತರ ಟಿಎಂಸಿ ತೊರೆದಿದ್ದರು. ರಾತ್ರೋರಾತ್ರಿ ಹೊಸ ಅಭ್ಯರ್ಥಿಗಳನ್ನು ಟಿಎಂಸಿ ಕಣಕ್ಕಿಳಿಸಬೇಕಾಯಿತು.

ತಮಗೆ ಕೈಕೊಟ್ಟ ಒಂದು ಕಾಲದ ನೆಚ್ಚಿನ ಅನುಯಾಯಿ ಸುವೇಂದು ಅಧಿಕಾರಿಯನ್ನು ಮಣಿಸಲೆಂದೇ ಸ್ವಕ್ಷೇತ್ರ ಭವಾನಿಪುರ ತೊರೆದು ನಂದಿಗ್ರಾಮದಿಂದ ಮಮತಾ ಸ್ಪರ್ಧಿಸಿದ್ದರು. ಇದೀಗ ನಂದಿಗ್ರಾಮದಲ್ಲಿ ಗೆಲುವಿನ ಸನಿಹ ತಲುಪಿದ್ದಾರೆ. ಸುಮಾರು 216 ಕ್ಷೇತ್ರಗಳಲ್ಲಿ ಟಿಎಂಸಿ ಮುನ್ನಡೆ ಸಾಧಿಸಿದ್ದು, ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗಾದಿ ಹಿಡಿಯುವ ಖುಷಿಯಲ್ಲಿದೆ.

ಇದನ್ನೂ ಓದಿ: #PrashantKishore: ರಾಜಕೀಯ ಪಕ್ಷಗಳಿಗೆ ಸಲಹೆ ನೀಡುವ ಕೆಲಸಕ್ಕೆ ಗುಡ್​ಬೈ ಹೇಳಿದ ಪ್ರಶಾಂತ್ ಕಿಶೋರ್

ಇದನ್ನೂ ಓದಿ: West Bengal Election Result 2021: ಖೇಲಾ ಹೋಬೆಯಿಂದ ಖೇಲಾ ಹೊಯೆಚೆವರೆಗೆ ಟಿಎಂಸಿಯ ಚುನಾವಣಾ ಪಯಣ

(Mamata Banerjee won by 1200 votes in Nandigram against BJP suvendu Adhikari West Bengal elections 2021)

Published On - 4:58 pm, Sun, 2 May 21

Click on your DTH Provider to Add TV9 Kannada