ಮಮತಾ ಬ್ಯಾನರ್ಜಿ, ಪಿಣರಾಯಿ ವಿಜಯನ್, ಎಂ.ಕೆ.ಸ್ಟಾಲಿನ್​ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್​​ರಿಂದ ಅಭಿನಂದನೆ..

ಹಾಗೇ ಕೇರಳದಲ್ಲಿ ಎರಡನೇ ಬಾರಿಗೆ ಚುಕ್ಕಾಣಿ ಹಿಡಿಯಲಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೂ ರಾಜನಾಥ್ ಸಿಂಗ್ ಶುಭಾಶಯ ಕೋರಿದ್ದಾರೆ. ಕೇರಳದಲ್ಲಿ ಕೂಡ ಎಲ್​​ಡಿಎಫ್​ ಸರ್ಕಾರ ಮತ್ತೊಮ್ಮೆ ಅಧಿಕಾರ ಹಿಡಿಯುವ ನಿರೀಕ್ಷೆಯೇ ಹೆಚ್ಚಾಗಿತ್ತು. ಅದರಂತೆ ಆ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ.

ಮಮತಾ ಬ್ಯಾನರ್ಜಿ, ಪಿಣರಾಯಿ ವಿಜಯನ್, ಎಂ.ಕೆ.ಸ್ಟಾಲಿನ್​ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್​​ರಿಂದ ಅಭಿನಂದನೆ..
ರಾಜನಾಥ್ ಸಿಂಗ್​
Follow us
Lakshmi Hegde
| Updated By: guruganesh bhat

Updated on:May 02, 2021 | 6:44 PM

ನವದೆಹಲಿ: ಇಂದು ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಪಶ್ಚಿಮಬಂಗಾಳದಲ್ಲಿ ಮತ್ತೊಮ್ಮೆ ದೀದಿ ಆಡಳಿತ ನಿಶ್ಚಿತವಾಗಿದೆ. ಹಾಗೇ ಕೇರಳದಲ್ಲಿ ಕೂಡ ಪಿಣರಾಯಿ ವಿಜಯನ್ ಆಡಳಿತ ಮರುಕಳಿಸಲಿದ್ದು, ತಮಿಳುನಾಡಿನಲ್ಲಿ ಜನ ಕರುಣಾನಿಧಿ ಪುತ್ರ ಎಂ.ಕೆ.ಸ್ಟಾಲಿನ್​ಗೆ ಮಣೆ ಹಾಕಿದ್ದಾರೆ. ಬಹುತೇಕ ಫಲಿತಾಂಶ ನಿಶ್ಚಿತವಾಗಿದ್ದು ಅಧಿಕೃತ ಘೋಷಣೆಯೊಂದು ಬಾಕಿ ಇರುವಾಗಲೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಮತಾ ಬ್ಯಾನರ್ಜಿ, ಪಿಣರಾಯಿ ವಿಜಯನ್ ಮತ್ತು ಎಂ.ಕೆ.ಸ್ಟಾಲಿನ್​ಗೆ ಅಭಿನಂದಿಸಿದ್ದಾರೆ.

ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 216 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯಲಿದೆ. ಇನ್ನು ತಮ್ಮ ಸ್ವಕ್ಷೇತ್ರ ಬಿಟ್ಟು, ಸುವೇಂದು ಅಧಿಕಾರಿಯವರಿಗೆ ಸವಾಲು ಹಾಕಿ ನಂದಿಗ್ರಾಮದಿಂದ ಸ್ಪರ್ಧಿಸಿದ್ದರು.

ಹಾಗೇ ಕೇರಳದಲ್ಲಿ ಎರಡನೇ ಬಾರಿಗೆ ಚುಕ್ಕಾಣಿ ಹಿಡಿಯಲಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೂ ರಾಜನಾಥ್ ಸಿಂಗ್ ಶುಭಾಶಯ ಕೋರಿದ್ದಾರೆ. ಕೇರಳದಲ್ಲಿ ಕೂಡ ಎಲ್​​ಡಿಎಫ್​ ಸರ್ಕಾರ ಮತ್ತೊಮ್ಮೆ ಅಧಿಕಾರ ಹಿಡಿಯುವ ನಿರೀಕ್ಷೆಯೇ ಹೆಚ್ಚಾಗಿತ್ತು. ಅದರಂತೆ ಆ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ. ಹಾಗೇ, ತಮಿಳುನಾಡಿನಲ್ಲಿ ಎಐಎಡಿಎಂಕೆ-ಬಿಜೆಪಿ ಮತ್ತಿತರ ಪಕ್ಷಗಳ ಒಕ್ಕೂಟ ಈ ಬಾರಿ ಸೋತಿದ್ದು, ಜನರು ಡಿಎಂಕೆಯ ಕೈ ಹಿಡಿದಿದ್ದಾರೆ. ಈಗ ಅಲ್ಲಿ ಡಿಎಂಕೆ ಸರ್ಕಾರ ರಚನೆ ಮಾಡಲಿದೆ. ಹೀಗಾಗಿ ರಾಜನಾಥ್ ಸಿಂಗ್ ಅವರು ಎಂ.ಕೆ.ಸ್ಟಾಲಿನ್ ಅವರಿಗೆ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: 5 State Assembly Election Results 2021 LIVE: ಮಮತಾ ಬ್ಯಾನರ್ಜಿಗೆ ರೋಚಕ ಗೆಲುವು; ವೀರೋಚಿತ ಸೋಲುಂಡ ಸುವೇಂದು ಅಧಿಕಾರಿ

Published On - 5:25 pm, Sun, 2 May 21