‘ಇದು ಬಂಗಾಳದ ಗೆಲುವು..’ ಎಂದು ನಗೆ ಬೀರಿದ ಮಮತಾ ಬ್ಯಾನರ್ಜಿ; ಇಂದು ಸಂಜೆ 6ಗಂಟೆಗೆ ಸುದ್ದಿಗೋಷ್ಠಿ

ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸಿಕ್ಕಾಪಟೆ ಫೈಟ್ ಇದ್ದರೂ ಕೂಡ ಗೆಲುವು ಸಾಧಿಸಿದ ಮಮತಾ ಬ್ಯಾನರ್ಜಿಯವರನ್ನು ಶಿವಸೇನೆ ಸಂಸದ ಸಂಜಯ್​ ರಾವತ್ ಬಂಗಾಳದ ಹುಲಿ ಎಂದು ಹೊಗಳಿದ್ದಾರೆ.

‘ಇದು ಬಂಗಾಳದ ಗೆಲುವು..’ ಎಂದು ನಗೆ ಬೀರಿದ ಮಮತಾ ಬ್ಯಾನರ್ಜಿ; ಇಂದು ಸಂಜೆ 6ಗಂಟೆಗೆ ಸುದ್ದಿಗೋಷ್ಠಿ
ಮಮತಾ ಬ್ಯಾನರ್ಜಿ
Lakshmi Hegde

|

May 02, 2021 | 5:51 PM

ಪಶ್ಚಿಮಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರನ್ನು ಸೋಲಿಸುವುದು ಅಷ್ಟು ಸುಲಭವಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ಬಾರಿಯೂ ಸಹ ದೀದಿ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲಿದ್ದಾರೆ. ಬಿಜೆಪಿಯ ಗಣ್ಯರು ಸಾಲುಸಾಲಾಗಿ ಹೋಗಿ ಪ್ರಚಾರ ನಡೆಸಿದರೂ.. ಅಲ್ಲಿನ ಮತದಾರರು ಕೈಹಿಡಿದಿದ್ದು ಟಿಎಂಸಿಯನ್ನೇ.. !

ಇನ್ನು ತಮ್ಮ ಪಕ್ಷ ಮತ್ತೊಮ್ಮೆ ಗೆಲುವು ಸಾಧಿಸಿದ ಬೆನ್ನಲ್ಲೇ ಕಾಳಿಘಾಟ್​​ನಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ..ಇದು ಇಡೀ ಪಶ್ಚಿಮಬಂಗಾಳದ ಗೆಲುವು ಎಂದು ಹೇಳಿದ್ದಾರೆ. ಈ ಗೆಲುವಿನ ಸಂದರ್ಭದಲ್ಲಿ ಎಲ್ಲ ರೀತಿಯ ಕೊವಿಡ್ ಶಿಷ್ಟಾಚಾರಗಳೂ ಪಾಲನೆಯಾಗಬೇಕು. ಈಗ ಯಾವುದೇ ವಿಜಯಯಾತ್ರೆಯನ್ನು ನಡೆಸುವಂತಿಲ್ಲ. ಈ ಬಗ್ಗೆ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಇಂದು ಸಂಜೆ ಪಶ್ಚಿಮ ಬಂಗಾಳ ಜನರನ್ನು ಉದ್ದೇಶಿಸಿ ಮಮತಾ ಬ್ಯಾನರ್ಜಿ ಸುದೀರ್ಘ ಭಾಷಣ ಮಾಡುವ ನಿರೀಕ್ಷೆಯಿದ್ದು, ಇವರು ರಾಷ್ಟ್ರ ರಾಜಕಾರಣದ ಬಗ್ಗೆ ಏನು ಪ್ರಸ್ತಾಪಿಸಬಹುದು ಎಂಬ ಬಗ್ಗೆ ದೇಶದಲ್ಲಿ ಕುತೂಹಲ ವ್ಯಕ್ತವಾಗಿದೆ.

ಬಂಗಾಳದ ಹುಲಿ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸಿಕ್ಕಾಪಟೆ ಫೈಟ್ ಇದ್ದರೂ ಕೂಡ ಗೆಲುವು ಸಾಧಿಸಿದ ಮಮತಾ ಬ್ಯಾನರ್ಜಿಯವರನ್ನು ಶಿವಸೇನೆ ಸಂಸದ ಸಂಜಯ್​ ರಾವತ್ ಬಂಗಾಳದ ಹುಲಿ ಎಂದು ಹೊಗಳಿದ್ದಾರೆ. ಮಮತಾ ಬ್ಯಾನರ್ಜಿಯವರನ್ನು ಸೋಲಿಸುವುದು ಅಷ್ಟು ಸುಲಭವಲ್ಲ ಎಂದು ಹೇಳಿರುವ ಅವರು, ಬಂಗಾಳದ ಹುಲಿಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 1200 ಮತಗಳಿಂದ ಶಿಷ್ಯನನ್ನು ಸೋಲಿಸಿದ ಮಮತಾ ಬ್ಯಾನರ್ಜಿ; ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹ್ಯಾಟ್ರಿಕ್​ ಸಾಧನೆ

 ಕೊರೊನಾ ಲಸಿಕೆ ಕುರಿತು ಅಪಪ್ರಚಾರ; ಅಪರಿಚಿತ ಮುಸ್ಲಿಂ ಮಹಿಳೆ ವಿರುದ್ಧ ಕಾರವಾರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು

This is Bengals victory say Mamata Banerjee after her victory In West Bengal Assembly Election”

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada