ಕೊರೊನಾ ಲಸಿಕೆ ಕುರಿತು ಅಪಪ್ರಚಾರ; ಅಪರಿಚಿತ ಮುಸ್ಲಿಂ ಮಹಿಳೆ ವಿರುದ್ಧ ಕಾರವಾರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು

ಕೊರೊನಾಕ್ಕೆ ವೈದ್ಯರ ಬಳಿ ಲಸಿಕೆ ಪಡೆಯಲು ಹೋದರೆ ಜನರು ಸಾಯ್ತಾರೆ ಎಂದು ಹೇಳಿರುವ ಮಾತು ರೆಕಾರ್ಡ್​ ಆಗಿದೆ. ಯೂಟ್ಯೂಬ್‌ನಲ್ಲಿ ತಪ್ಪು ಮಾಹಿತಿ ನೀಡಿ ಜನತಾ ಕರ್ಫ್ಯೂ ವಿರುದ್ಧವೂ ಕಿಡಿಕಾರಿದ್ದಾರೆ. ವಿಡಿಯೋವನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿ ಬಳಿಕ ಲಿಂಕ್​ಅನ್ನು ವಾಟ್ಸಾಪ್ ಗ್ರೂಪ್‌ಗಳಲ್ಲಿ ಶೇರ್ ಮಾಡಲಾಗಿದೆ.

ಕೊರೊನಾ ಲಸಿಕೆ ಕುರಿತು ಅಪಪ್ರಚಾರ; ಅಪರಿಚಿತ ಮುಸ್ಲಿಂ ಮಹಿಳೆ ವಿರುದ್ಧ ಕಾರವಾರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು
ಸಾಂರ್ಭಿಕ ಚಿತ್ರ
Follow us
shruti hegde
| Updated By: ganapathi bhat

Updated on: May 02, 2021 | 5:36 PM

ಕಾರವಾರ: ಕೊರೊನಾ ಸಾಂಕ್ರಾಮಿಕ ಹರಡುವಿಕೆ ಕುರಿತಾಗಿ ಸುಳ್ಳು ಸುದ್ದಿ ಹರಡುತ್ತಾ, ಜನರ ದಾರಿ ತಪ್ಪಿಸುವ ಕೆಲಸವನ್ನು ಮುಸ್ಲಿಂ ಮಹಿಳೆಯೋರ್ವರು ಮಾಡಿದ್ದಾರೆ. ಇವರು ಕೊರೊನಾಕ್ಕೆ ಲಸಿಕೆ ಪಡೆಯಲು ವೈದ್ಯರ ಬಳಿ ಹೋದರೆ ಜನರು ಸಾಯುತ್ತಾರೆ ಎಂದು ಜನರಲ್ಲಿ ಭೀತಿ ಸೃಷ್ಟಿಸುವಂತೆ ಮಾಡುತ್ತಿದ್ದಾರೆ. ಹೀಗೆ ಅಪಪ್ರಚಾರ ಮಾಡಲು ಯೂಟ್ಯೂಬ್​ ಬಳಿಸಿಕೊಂಡಿದ್ದು, ಜನತಾ ಕರ್ಫ್ಯೂ ವಿರುದ್ಧವೂ ಮಹಿಳೆ ಕಿಡಿಕಾರಿರುವ ಮಾತು, ರೆಕಾರ್ಡ್​ ಸಹಿತ ಬಯಲಾಗಿದೆ. ಈ ಕುರಿತಂತೆ ಶಾಬಂದ್ರಿ ಆನ್​ಲೈನ್​ ಭಟ್ಕಳ ನ್ಯೂಸ್​ ರೆಕಾರ್ಡ್​ ಒಂದನ್ನು ಅಪ್ಲೋಡ್​ ಮಾಡಿದೆ.

ಕೊರೊನಾಕ್ಕೆ ವೈದ್ಯರ ಬಳಿ ಲಸಿಕೆ ಪಡೆಯಲು ಹೋದರೆ ಜನರು ಸಾಯ್ತಾರೆ ಎಂದು ಹೇಳಿರುವ ಮಾತು ರೆಕಾರ್ಡ್​ ಆಗಿದೆ. ಯೂಟ್ಯೂಬ್‌ನಲ್ಲಿ ತಪ್ಪು ಮಾಹಿತಿ ನೀಡಿ ಜನತಾ ಕರ್ಫ್ಯೂ ವಿರುದ್ಧವೂ ಕಿಡಿಕಾರಿದ್ದಾರೆ. ವಿಡಿಯೋವನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿ ಬಳಿಕ ಲಿಂಕ್​ಅನ್ನು ವಾಟ್ಸಾಪ್ ಗ್ರೂಪ್‌ಗಳಲ್ಲಿ ಶೇರ್ ಮಾಡಲಾಗಿದೆ.

ದೇವರ ದಯೆಯಿಂದ ಕೊರೊನಾ ನಾಶವಾಗಿದೆ. ಆಂಧ್ರದಲ್ಲಿ, ಮಹಾರಾಷ್ಟ್ರದಲ್ಲಿ, ಎಷ್ಟು ಜನ ಸತ್ತಿದ್ದಾರೆ ಎಂದು ಮಾಧ್ಯಮಗಳು ಸುಮ್ಮನೆ ಜನರಿಗೆ ಹೆದರಿಸುತ್ತಿವೆ. ಮಾಧ್ಯಮಗಳು ಕಾಲು ಭಾಗ ಸತ್ಯಹೇಳಿ, ಮುಕ್ಕಾಲು ಭಾಗ ಸುಳ್ಳು ಹೇಳುವ ಮೂಲಕ ಜನರಿಗೆ ಸಿನಿಮಾ ತೋರಿಸುತ್ತಿದೆ. ಜನರು ಕೊರೊನಾಕ್ಕೆ ಹೆದರದೆ ಮನೆಯಲ್ಲಿ ಇದ್ದು, ಮನೆ ಮದ್ದೇ ಮಾಡಿಕೊಳ್ಳಿ, ಯಾರೂ ಆಸ್ಪತ್ರೆಗೆ ಹೋಗಬೇಡಿ, ಹೋದಲ್ಲಿ ಕೊರೊನಾ ಇಂಜೆಕ್ಷನ್ ಕೊಟ್ಟು ಜನರಿಗೆ ನಿಶ್ಶಕ್ತಿ ಮಾಡ್ತಾರೆ. ಇಂಜೆಕ್ಷನ್ ಕೊಟ್ಟ ನಂತರ ಮೂಳೆ ಸವೆಯುತ್ತವೆ, ಬಳಿಕ ಜನರು ಸಾಯುತ್ತಾರೆ ಎಂದು ಅಪಪ್ರಚಾರ ಮಾಡಿರುವ ಮಾತು ರೆಕಾರ್ಡ್​ ಆಗಿದೆ.

ಯಾವ ಇಂಜೆಕ್ಷನ್ ಕೊಟ್ಟಿದ್ದು ಅಂತಾ ಜನರು ವೈದ್ಯರನ್ನು ಕೇಳಬೇಕು. ಜನರು ಯಾರೂ ಕೂಡ ಆಸ್ಪತ್ರೆಗೆ ಹೋಗದೆ ಮನೆಯಲ್ಲಿಯೇ ಇರಿ. ರಂಜಾನ್ ಒಳ್ಳೆಯ ವ್ಯಾಪಾರದ ಸಮಯವಾಗಿದ್ದು, ಇದೀಗ ನಮ್ಮ ಜನರಿಗೆ ವ್ಯಾಪಾರವಿಲ್ಲದಂತಾಗಿದೆ. ರಂಜಾನ್​ ಸಮಯದಲ್ಲಿ ಲಾಕ್‌ಡೌನ್ ಮಾಡುತ್ತಾರೆ. ಹಿಂದೂಗಳ ಹಬ್ಬದ ಸಮಯದಲ್ಲಿ ಏನೂ ಇಲ್ಲ. ಕೊರೊನಾ ಅನ್ನೋದೆ ಸುಳ್ಳಾಗಿದ್ದು, ಜನರು ಲಾಕ್‌ಡೌನ್ ಬಿಸಾಕಿ ಹೊರಬರಬೇಕು. ಭಟ್ಕಳದ ತಂಜೀಂನ ಜನರು ಹಾಗೂ ಜಮಾಅತ್ ಈ ಬಗ್ಗೆ ಸುಮ್ಮನಿರದೆ ಧ್ವನಿ‌ ಎತ್ತಬೇಕು ಎಂದು ಹಿಂದಿ ಮತ್ತು ಉರ್ದು ಭಾಷೆಯಲ್ಲಿ ಮಾತನಾಡಿ ಜನರ ‌ದಾರಿ ತಪ್ಪಿಸಲು ಯತ್ನಿಸಿದ್ದಾರೆ.

ಈ ಕುರಿತಾಗಿ ಅಪರಿಚಿತ ಮಹಿಳೆಯ ವಿರುದ್ಧ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್​ಐ ಸುಮಾ ಬಿ ಮಹಿಳೆಯ ವಿರುದ್ಧ ಸುವೋ ಮೋಟೊ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆಯುತ್ತಿದೆ.

ಇದನ್ನೂ ಓದಿ: ಕೊರೊನಾ ಸೋಂಕಿಲ್ಲದಿದ್ದರೂ ನನ್ನ ತಂದೆ ಬೆಡ್ ಸಿಗದೇ ಮೃತರಾಗಿದ್ದಾರೆ; ಟಿವಿ9 ಬಳಿ ಮಗನ ಕಣ್ಣೀರು