ಸಾಮಾಜಿಕ ನ್ಯಾಯದ ಬಗ್ಗೆ ಮೋದಿ ಹೇಳಿಕೆಗೆ 3 ಸಂಗತಿಗಳನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದ ಕಪಿಲ್ ಸಿಬಲ್

2012-2021ರ ಅವಧಿಯಲ್ಲಿ ಉಂಟಾದ ಸಂಪತ್ತಿನ ಶೇ.40 ಜನಸಂಖ್ಯೆಯ ಕೇವಲ ಶೇ 1 ರಷ್ಟು ಜನರಿಗೆ ಮಾತ್ರ ತಲುಪಿದೆ. 2022 ರಲ್ಲಿ ಅದಾನಿ ಸಂಪತ್ತು 46 ಶೇಕಡಾ ಹೆಚ್ಚಾಗಿದೆ ಎಂದು ಕಪಿಲ್ ಸಿಬಲ್ ಟ್ವೀಟ್

ಸಾಮಾಜಿಕ ನ್ಯಾಯದ ಬಗ್ಗೆ ಮೋದಿ ಹೇಳಿಕೆಗೆ 3 ಸಂಗತಿಗಳನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದ ಕಪಿಲ್ ಸಿಬಲ್
ಕಪಿಲ್ ಸಿಬಲ್

Updated on: Apr 07, 2023 | 1:51 PM

ಸಾಮಾಜಿಕ ನ್ಯಾಯದಲ್ಲಿ ಬಿಜೆಪಿ (BJP) ದೃಢವಾದ ನಂಬಿಕೆ ಇರಿಸಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಹೇಳಿಕೆಗೆ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ (Kapil Sibal) ಶುಕ್ರವಾರ ಪ್ರತಿಕ್ರಿಯಿಸಿದ್ದು “ಶ್ರೀಮಂತರು ಶ್ರೀಮಂತರಾಗುತ್ತಾರೆ ಬಡವರು ಕಡು ಬಡವರಾಗುತ್ತಾರೆ ಎಂದು ಹೇಳಿದರು. ತಮ್ಮ ಹೇಳಿಕೆಯನ್ನು ಬೆಂಬಲಿಸಲು, ಸಿಬಲ್ ಅವರು ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ ಹೆಚ್ಚುತ್ತಿರುವ ಸಂಪತ್ತಿನ ಅಂತರ, ಜಿಎಸ್‌ಟಿ ಸಂಗ್ರಹ ಮತ್ತು ಬಿಲಿಯನೇರ್ ಗೌತಮ್ ಅದಾನಿಯವರ ಆದಾಯದಲ್ಲಿನ ಏರಿಕೆಯ ಡೇಟಾವನ್ನು ಟ್ವೀಟ್ ಮಾಡಿದ್ದಾರೆ.  ಗುರುವಾರ ಪಕ್ಷದ 44ನೇ ಸಂಸ್ಥಾಪನಾ ದಿನದಂದು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಉಚಿತ ಪಡಿತರ ಯೋಜನೆ, ಆರೋಗ್ಯ ವಿಮೆ ಮತ್ತು ಇತರ ಕಲ್ಯಾಣ ಕ್ರಮಗಳನ್ನು ಉಲ್ಲೇಖಿಸಿ, ಸಾಮಾಜಿಕ ನ್ಯಾಯದಲ್ಲಿ ಬಿಜೆಪಿಗೆ ಗಟ್ಟಿಯಾದ ನಂಬಿಕೆ ಇರಿಸಿದೆ. ಆದರೆ ಇತರ ಪಕ್ಷಗಳು ಸಮಾಜಕ್ಕೆ ಸಹಾಯ ಮಾಡದೆ ನಿರ್ದಿಷ್ಟ ಕುಟುಂಬಗಳ ಹಿತಾಸಕ್ತಿಗಳಿಗೆ ಆದ್ಯತೆ ನೀಡಿದ್ದವು ಎಂದು ಹೇಳಿದ್ದರು.

ಬಿಜೆಪಿ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡುತ್ತದೆ.ಅದನ್ನು ಅಕ್ಷರ ಮತ್ತು ಸ್ಫೂರ್ತಿಯಾಗಿ ಅನುಸರಿಸುತ್ತದೆ. 80 ಕೋಟಿ ಜನರಿಗೆ ಉಚಿತ ಪಡಿತರ ಸಿಗುತ್ತಿರುವುದು ಸಾಮಾಜಿಕ ನ್ಯಾಯದ ಪ್ರತಿಬಿಂಬವಾಗಿದೆ. ತಾರತಮ್ಯವಿಲ್ಲದೆ 50 ಕೋಟಿ ಬಡವರಿಗೆ ₹5 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡುವ ಸೌಲಭ್ಯ ಸಾಮಾಜಿಕ ನ್ಯಾಯದ ಪ್ರದರ್ಶನವಾಗಿದೆ. ನಮ್ಮ ಕಾರ್ಯಕರ್ತರ ಶ್ರದ್ಧೆ, ಸಮರ್ಪಣೆ ಮತ್ತು ಶಕ್ತಿ ಮತ್ತು ‘ದೇಶ ಮೊದಲು’ ಎಂಬ ನಮ್ಮ ಮಂತ್ರವು ನಮ್ಮನ್ನು ಪ್ರೇರೇಪಿಸುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ ಎಂದು ಪ್ರಧಾನಿ ಹೇಳಿದ್ದಾರೆ.


ಮೋದಿ ಮಾತಿಗೆ ಪ್ರತಿಕ್ರಿಯೆಗಾಗಿ ಟ್ವೀಟ್ ಮಾಡಿದ ಕಪಿಲ್ ಸಿಬಲ್, “ಪ್ರಧಾನಿ: ಬಿಜೆಪಿ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡುತ್ತದೆ.ಅದನ್ನು ಅಕ್ಷರ ಮತ್ತು ಸ್ಫೂರ್ತಿಯಾಗಿ ಅನುಸರಿಸುತ್ತದೆ. ನಿಜ ಸಂಗತಿಗಳು: 1) 2012-2021ರ ಅವಧಿಯಲ್ಲಿ ಉಂಟಾದ ಸಂಪತ್ತಿನ ಶೇ.40 ಜನಸಂಖ್ಯೆಯ ಕೇವಲ ಶೇ 1 ರಷ್ಟು ಜನರಿಗೆ ಮಾತ್ರ ತಲುಪಿದೆ.2) 2022 ರಲ್ಲಿ ಅದಾನಿ ಸಂಪತ್ತು 46 ಶೇಕಡಾ ಹೆಚ್ಚಾಗಿದೆ 3) ಜಿಎಸ್‌ಟಿಯ ಶೇಕಡಾ 64 ರಷ್ಟು ಕೆಳಭಾಗದ ಶೇಕಡಾ 50 ರಿಂದ ಬಂದಿದೆ; ಶೇಕಡಾ 4 ರಷ್ಟು ಮೇಲಿನ ಶೇಕಡಾ 10 ರಿಂದ ಬಂದಿದೆ.
ಶ್ರೀಮಂತರು ಶ್ರೀಮಂತರಾಗುತ್ತಾ ಹೋಗುತ್ತಾರೆ ಬಡವರು ಕಡುಬಡವರಾಗುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:Kiran Kumar Reddy Joins BJP: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಬಿಜೆಪಿಗೆ ಸೇರ್ಪಡೆ 

ಯುಪಿಎ 1 ಮತ್ತು 2 ರ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ಸಿಬಲ್ ಕಳೆದ ವರ್ಷ ಮೇ ತಿಂಗಳಲ್ಲಿ ಕಾಂಗ್ರೆಸ್ ತೊರೆದು ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಸ್ವತಂತ್ರ ಸದಸ್ಯರಾಗಿ ರಾಜ್ಯಸಭೆಗೆ ಆಯ್ಕೆಯಾದರು. ಅವರು ಇತ್ತೀಚೆಗೆ ಅನ್ಯಾಯದ ವಿರುದ್ಧ ಹೋರಾಡುವ ಉದ್ದೇಶದಿಂದ ಚುನಾವಣೇತರ ವೇದಿಕೆ ‘ಇನ್ಸಾಫ್’ ಅನ್ನು ಹುಟ್ಟು ಹಾಕಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ