Oxfam India: ಎಫ್‌ಸಿಆರ್‌ಎ ಉಲ್ಲಂಘನೆ, ಎನ್‌ಜಿಒ ಆಕ್ಸ್‌ಫ್ಯಾಮ್ ಇಂಡಿಯಾ ವಿರುದ್ಧ ಸಿಬಿಐ ತನಿಖೆಗೆ ಗೃಹ ಸಚಿವಾಲಯ ಶಿಫಾರಸು
ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಯ ಉಲ್ಲಂಘನೆ ಆರೋಪದ ಮೇಲೆ ಜಾಗತಿಕ ಎನ್‌ಜಿಒ ಆಕ್ಸ್‌ಫ್ಯಾಮ್‌ನ ಭಾರತೀಯ ಅಂಗಸಂಸ್ಥೆಗಳ ವ್ಯವಹಾರಗಳ ಬಗ್ಗೆ ಸಿಬಿಐ ತನಿಖೆಗೆ ಕೇಂದ್ರ ಗೃಹ ಸಚಿವಾಲಯ ಗುರುವಾರ ಶಿಫಾರಸು ಮಾಡಿದೆ
ದೆಹಲಿ: ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಯ ಉಲ್ಲಂಘನೆ ಆರೋಪದ ಮೇಲೆ ಜಾಗತಿಕ ಎನ್‌ಜಿಒ ಆಕ್ಸ್‌ಫ್ಯಾಮ್‌ನ (Oxfam India) ಭಾರತೀಯ ಅಂಗಸಂಸ್ಥೆಗಳ ವ್ಯವಹಾರಗಳ ಬಗ್ಗೆ ಸಿಬಿಐ ತನಿಖೆಗೆ ಕೇಂದ್ರ ಗೃಹ ಸಚಿವಾಲಯ ಗುರುವಾರ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ. ಎಫ್‌ಸಿಆರ್‌ಎ ಅಡಿಯಲ್ಲಿ ನೋಂದಾಯಿಸಿದ ಆಕ್ಸ್‌ಫ್ಯಾಮ್ ಭಾರತ ಇತರ ಎನ್‌ಜಿಒಗಳು ಸೇರಿದಂತೆ ವಿವಿಧ ಘಟಕಗಳಿಗೆ ವಿದೇಶಿ ಕೊಡುಗೆಗಳನ್ನು ವರ್ಗಾಯಿಸಿದೆ ಎಂದು ಕೇಂದ್ರ ಗೃಹ ಸಚಿವಾಲಯವು ಈ ಬಗ್ಗೆ ಪತ್ತೆ ಮಾಡಿದೆ. ಇದು ಸೆಪ್ಟೆಂಬರ್ 29, 2020 ರಂದು ಜಾರಿಗೆ ಬಂದ ಕಾನೂನಿನ ತಿದ್ದುಪಡಿಯ ನಂತರ ಅಂತಹ ವರ್ಗಾವಣೆಗಳನ್ನು ಎನ್‌ಜಿಒ ಆಕ್ಸ್‌ಫ್ಯಾಮ್ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಆಕ್ಸ್ಫ್ಯಾಮ್ನಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಲಾಗಿದೆ. ಆದಾಯ ತೆರಿಗೆ ಇಲಾಖೆಯ ಸಮೀಕ್ಷೆಯ ಸಮಯದಲ್ಲಿ, ಆಕ್ಸ್‌ಫ್ಯಾಮ್ ಇಂಡಿಯಾ ಇತರ ಎಫ್‌ಸಿಆರ್‌ಎ-ನೋಂದಾಯಿತ ಸಂಘಗಳಿಗೆ ಅಥವಾ ಲಾಭದಾಯಕ ಸಲಹಾ ಮಾರ್ಗದಲ್ಲಿ ಹಣವನ್ನು ವರ್ಗಾವಣೆ ಮಾಡುವ ಮೂಲಕ ಎಫ್‌ಸಿಆರ್‌ಎಯ ನಿಬಂಧನೆಗಳನ್ನು ಉಲ್ಲಂಘನೆ ಮಾಡಿದೆ ಎಂಬುದು ಎನ್ಜಿಓ ಬಹು ಇಮೇಲ್‌ಗಳಲ್ಲಿ ಕಂಡುಬಂದಿವೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ತೆರಿಗೆ ಇಲಾಖೆ ಸಮೀಕ್ಷೆಯು ಆಕ್ಸ್‌ಫ್ಯಾಮ್ ಇಂಡಿಯಾವನ್ನು ವಿದೇಶಿ ಸಂಸ್ಥೆಗಳು ಅಥವಾ ಘಟಕಗಳ ವಿದೇಶಾಂಗ ನೀತಿಯ ಸಂಭಾವ್ಯ ಸಾಧನ ಎಂದು ಬಹಿರಂಗಪಡಿಸಿದೆ. ಇದು ವರ್ಷಗಳಲ್ಲಿ ಎನ್‌ಜಿಒಗೆ ಉದಾರವಾಗಿ ಹಣವನ್ನು ನೀಡಿದೆ ಎಂದು ಹೇಳಿದೆ. ಸಾಮಾಜಿಕ ಚಟುವಟಿಕೆಗಳನ್ನು ಕೈಗೊಳ್ಳಲು ನೋಂದಣಿಯಾಗಿರುವ ಆಕ್ಸ್‌ಫ್ಯಾಮ್ ಇಂಡಿಯಾ, ತನ್ನ ಸಹವರ್ತಿಗಳು ಮತ್ತು ಉದ್ಯೋಗಿಗಳ ಮೂಲಕ ದೆಹಲಿ ಮೂಲದ ಥಿಂಕ್ ಟ್ಯಾಂಕ್ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ಗೆ (ಸಿಪಿಆರ್) ಕಮಿಷನ್ ರೂಪದಲ್ಲಿ ಹಣವನ್ನು ರವಾನಿಸಿದೆ ಎಂದು ಮೂಲಗಳು ತಿಳಿಸಿವೆ.
2019-20 ರಲ್ಲಿ CPR ಗೆ 12,71,188 ರೂ ಪಾವತಿ ಬಗ್ಗೆ ಆಕ್ಸ್‌ಫ್ಯಾಮ್ ಇಂಡಿಯಾದ TDS ಡೇಟಾ ತಿಳಿಸುತ್ತದೆ. ಆಕ್ಸ್‌ಫ್ಯಾಮ್ ಇಂಡಿಯಾ ಸುಮಾರು 1.50 ಕೋಟಿ ರೂಪಾಯಿ ಮೊತ್ತದ ವಿದೇಶಿ ಕೊಡುಗೆಗಳನ್ನು ಎಫ್‌ಸಿಆರ್‌ಎ ಖಾತೆಯ ಮೂಲಕ ಸ್ವೀಕರಿಸುವ ಬದಲು ನೇರವಾಗಿ ತನ್ನ ವಿದೇಶಿ ಕೊಡುಗೆ ಬಳಕೆ ಖಾತೆಗೆ ಸ್ವೀಕರಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ತನಿಖೆಯ ನಂತರ ಕೇಂದ್ರ ಗೃಹ ಸಚಿವಾಲಯವು ಆಕ್ಸ್‌ಫ್ಯಾಮ್ ಇಂಡಿಯಾ ವಿರುದ್ಧ ಸಿಬಿಐ ತನಿಖೆಗೆ ಶಿಫಾರಸು ಮಾಡಿದೆ ಎಂದು ಹೇಳಿದೆ. ಆದಾಯ ತೆರಿಗೆ ಇಲಾಖೆಯು ಸಿಪಿಆರ್ ಮತ್ತು ಆಕ್ಸ್‌ಫ್ಯಾಮ್ ಇಂಡಿಯಾ ವಿರುದ್ಧ ಮಾಧ್ಯಮ ಫೌಂಡೇಶನ್ ಜೊತೆಗೆ ಸೆಪ್ಟೆಂಬರ್‌ನಲ್ಲಿ ಸಮೀಕ್ಷೆಗಳನ್ನು ನಡೆಸಿತು. ಆಕ್ಸ್‌ಫ್ಯಾಮ್ ಇಂಡಿಯಾ ದೇಶದ ಎರಡನೇ ಎನ್‌ಜಿಒ ಆಗಿದ್ದು, ಎಫ್‌ಸಿಆರ್‌ಎ ಉಲ್ಲಂಘನೆ ಆರೋಪದ ಮೇಲೆ ಗೃಹ ಸಚಿವಾಲಯವು ಒಂದು ತಿಂಗಳೊಳಗೆ ಸಿಬಿಐ ತನಿಖೆಗೆ ಶಿಫಾರಸು ಮಾಡಿದೆ.
ಮಾರ್ಚ್ 20 ರಂದು ಗೃಹ ಸಚಿವಾಲಯವು ಅಮನ್ ಬಿರಾದಾರಿ ವಿರುದ್ಧ ಸಿಬಿಐ ತನಿಖೆಗೆ ಶಿಫಾರಸು ಮಾಡಿತು, ಬರಹಗಾರ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಹರ್ಷ್ ಮಂದರ್ ಸ್ಥಾಪಿಸಿದ NGO ಮೇಲೆ ತನಿಖೆ ನಡೆಸಲಾಗಿತ್ತು. ಆಕ್ಸ್‌ಫ್ಯಾಮ್ ಇಂಡಿಯಾದ FCRA ಪರವಾನಗಿಯನ್ನು ಜನವರಿ 2022 ರಲ್ಲಿ ಅಮಾನತುಗೊಳಿಸಲಾಯಿತು, ನಂತರ NGO ಗೃಹ ಸಚಿವಾಲಯಕ್ಕೆ ಪರಿಷ್ಕರಣೆ ಅರ್ಜಿಯನ್ನು ಸಲ್ಲಿಸಿತು. ಕಾನೂನುಗಳ ಉಲ್ಲಂಘನೆಯ ಆರೋಪದ ಮೇಲೆ ಸಿಪಿಆರ್‌ನ ಎಫ್‌ಸಿಆರ್‌ಎ ಪರವಾನಗಿಯನ್ನು ಮಾರ್ಚ್ 1ರಂದು ಆರು ತಿಂಗಳವರೆಗೆ ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ: Kiran Kumar Reddy Joins BJP: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಬಿಜೆಪಿಗೆ ಸೇರ್ಪಡೆ
ವಿದೇಶಿ ಕೊಡುಗೆಗಳನ್ನು ಸ್ವೀಕರಿಸುವ ಎಲ್ಲಾ ಎನ್‌ಜಿಒಗಳು ಎಫ್‌ಸಿಆರ್‌ಎ ಅಡಿಯಲ್ಲಿ ಗೃಹ ಸಚಿವಾಲಯದಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ಆಕ್ಸ್‌ಫ್ಯಾಮ್ ಇಂಡಿಯಾ ವೆಬ್‌ಸೈಟ್ ಪ್ರಕಾರ, ಎನ್‌ಜಿಒ 1951 ರಿಂದ ಭಾರತದಲ್ಲಿದೆ ಮತ್ತು ಇದು ಯಾವುದೇ ತಾರತಮ್ಯ ಮಾಡದೆ. ಮುಕ್ತ ಮತ್ತು ನ್ಯಾಯಯುತವಾಗಿ ಸಮಾಜದಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿಕೊಂಡಿದೆ.
ಆದಿವಾಸಿಗಳು, ದಲಿತರು, ಮುಸ್ಲಿಮರು ಮತ್ತು ಅನೌಪಚಾರಿಕ ವಲಯದ ಕಾರ್ಮಿಕರು, ವಿಶೇಷವಾಗಿ ಮಹಿಳೆಯರು ಮತ್ತು ಹುಡುಗಿಯರು ಸುರಕ್ಷಿತ, ಹಿಂಸಾಚಾರದ ಬಗ್ಗೆ ಮುಕ್ತ ಮನಸ್ಸನಿಂದ ಮಾತನಾಡುವ ಸ್ವಾತಂತ್ರ್ಯ, ಅವರ ಹಕ್ಕುಗಳನ್ನು ಅರಿತುಕೊಳ್ಳಲು ಸಮಾನ ಅವಕಾಶಗಳು ಮತ್ತು ತಾರತಮ್ಯ ಮುಕ್ತ ಭವಿಷ್ಯವನ್ನು ರೂಪಿಸಲು ನಾವು ಕೆಲಸ ಮಾಡುತ್ತೇವೆ ಎಂದು ಹೇಳಿಕೊಂಡಿದೆ.
2018 ಮತ್ತು 2022 ರ ನಡುವೆ, 1,827 ಎನ್‌ಜಿಒಗಳ ಎಫ್‌ಸಿಆರ್‌ಎ ನೋಂದಣಿಯನ್ನು ಅದರ ನಿಬಂಧನೆಗಳು ಮತ್ತು ನಿಯಮಗಳನ್ನು ಉಲ್ಲಂಘಿಸಿದ ಕಾರಣ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾರ್ಚ್ 10, 2023ರಂತೆ, 16,383 FCRA-ನೋಂದಾಯಿತ ಸಂಸ್ಥೆಗಳಿವೆ. ಕಳೆದ ಮೂರು ವರ್ಷಗಳಲ್ಲಿ ಒಟ್ಟು 55,449 ಕೋಟಿ ರೂಪಾಯಿ ವಿದೇಶಿ ನಿಧಿಯನ್ನು ಭಾರತೀಯ ಎನ್‌ಜಿಒಗಳು ಸ್ವೀಕರಿಸಿವೆ. 2019-20ರಲ್ಲಿ ದೇಶಾದ್ಯಂತ 16,306.04 ಕೋಟಿ ರೂ. 2020-21ರಲ್ಲಿ 17,058.64 ಕೋಟಿ ರೂ., 2021-22ರಲ್ಲಿ 22,085.10 ಕೋಟಿ ರೂ.ಗಳನ್ನು ಎನ್‌ಜಿಒಗಳು ಸ್ವೀಕರಿಸಿವೆ ಎಂದು ರಾಜ್ಯಸಭೆಗೆ ಕಳೆದ ತಿಂಗಳು ತಿಳಿಸಲಾಗಿತ್ತು.
Published On - 12:54 pm, Fri, 7 April 23