ಆಹ್ವಾನಿತರು ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಬೇಕು: ಸಂಜಯ್ ರಾವತ್

|

Updated on: Jan 15, 2024 | 1:59 PM

ರಾಮ ಬಿಜೆಪಿಯ ಖಾಸಗಿ ಆಸ್ತಿಯಲ್ಲ. ರಾಮ ಎಲ್ಲರಿಗೂ ಸೇರಿದವನು. ಆಹ್ವಾನಿತರು ಮತ್ತು ಇಲ್ಲದವರೂ ಸಹ ಎಲ್ಲರೂ ಭೇಟಿ ನೀಡಬೇಕು. ಆಹ್ವಾನ ನೀಡಲು ಅವರು (ಬಿಜೆಪಿ) ಯಾರು? ಅವರು ಅಯೋಧ್ಯೆಯಲ್ಲಿ ಬಿಜೆಪಿ ಕಚೇರಿಯನ್ನು ನಿರ್ಮಿಸಿದ್ದಾರೆಯೇ? ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಕೇಳಿದ್ದಾರೆ.

ಆಹ್ವಾನಿತರು ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಬೇಕು: ಸಂಜಯ್ ರಾವತ್
ಸಂಜಯ್ ರಾವತ್
Follow us on

ಮುಂಬೈ ಜನವರಿ 15: ರಾಮ ಮಂದಿರದ (Ram mandir) ಉದ್ಘಾಟನಾ ಸಮಾರಂಭದ ಆಹ್ವಾನವನ್ನು ಕಾಂಗ್ರೆಸ್‌ನ (Congress) ಉನ್ನತ ನಾಯಕರು ನಿರಾಕರಿಸಿದ ಕೆಲವು ದಿನಗಳ ನಂತರ, ಶಿವಸೇನಾ(ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ) ಸಂಸದ ಸಂಜಯ್ ರಾವತ್ (Sanjay Raut) ಸೋಮವಾರ, ಆಹ್ವಾನ ಪಡೆದವರು ಜನವರಿ 22 ರಂದು ಅಯೋಧ್ಯೆಗೆ ಭೇಟಿ ನೀಡಬೇಕು ಎಂದು ಹೇಳಿದ್ದಾರೆ. ಆಹ್ವಾನಿತರು ರಾಮ ಮಂದಿರ ಉದ್ಘಾಟನೆಗೆ ಅಯೋಧ್ಯೆಗೆ ಭೇಟಿ ನೀಡಬೇಕು ಎಂದು ಸುದ್ದಿಗಾರರರೊಂದಿಗೆ ಮಾತನಾಡಿದ ರಾವತ್ ಹೇಳಿದ್ದಾರೆ.

ರಾಮ ಬಿಜೆಪಿಯ ಖಾಸಗಿ ಆಸ್ತಿಯಲ್ಲ. ರಾಮ ಎಲ್ಲರಿಗೂ ಸೇರಿದವನು. ಆಹ್ವಾನಿತರು ಮತ್ತು ಇಲ್ಲದವರೂ ಸಹ ಎಲ್ಲರೂ ಭೇಟಿ ನೀಡಬೇಕು. ಆಹ್ವಾನ ನೀಡಲು ಅವರು (ಬಿಜೆಪಿ) ಯಾರು? ಅವರು ಅಯೋಧ್ಯೆಯಲ್ಲಿ ಬಿಜೆಪಿ ಕಚೇರಿಯನ್ನು ನಿರ್ಮಿಸಿದ್ದಾರೆಯೇ? ಎಂದು ರಾವತ್ ಕೇಳಿದ್ದಾರೆ.
ಜನವರಿ 22 ರಂದು ನಡೆಯಲಿರುವ ರಾಮ ಮಂದಿರ ಉದ್ಘಾಟನಾ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ಅಧೀರ್ ರಂಜನ್ ಚೌಧರಿ ಭಾಗವಹಿಸುವುದಿಲ್ಲ ಎಂದು ಕಾಂಗ್ರೆಸ್ ಕಳೆದ ವಾರ ಹೇಳಿತ್ತು. ಇದು ಆರ್‌ಎಸ್‌ಎಸ್ / ಬಿಜೆಪಿ ಕಾರ್ಯಕ್ರಮ ಎಂದು ಹೇಳಿ ಕಾಂಗ್ರೆಸ್ ಆಹ್ವಾನ ನಿರಾಕರಿಸಿತ್ತು.

“ಧರ್ಮವು ವೈಯಕ್ತಿಕ ವಿಷಯವಾಗಿದೆ. ಆದರೆ ಆರೆಸ್ಸೆಸ್/ಬಿಜೆಪಿ ಬಹಳ ಹಿಂದಿನಿಂದಲೂ ಅಯೋಧ್ಯೆಯಲ್ಲಿ ಮಂದಿರದ ರಾಜಕೀಯ ಯೋಜನೆಯನ್ನು ಮಾಡಿದೆ. ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರು ಅಪೂರ್ಣ ದೇವಾಲಯದ ಉದ್ಘಾಟನೆಯನ್ನು ಚುನಾವಣಾ ಲಾಭಕ್ಕಾಗಿ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟ ಎಂದು ಪಕ್ಷವು ಹೇಳಿಕೆಯಲ್ಲಿ ತಿಳಿಸಿದೆ.

2019 ರ ಸುಪ್ರೀಂ ಕೋರ್ಟ್ ತೀರ್ಪಿಗೆ ಬದ್ಧವಾಗಿರುವಾಗ ಮತ್ತು ಭಗವಾನ್ ರಾಮನನ್ನು ಪೂಜಿಸುವ ಲಕ್ಷಾಂತರ ಜನರ ಭಾವನೆಗಳನ್ನು ಗೌರವಿಸುತ್ತೇವೆ.ಆದರೆ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ಶ್ರೀ ಅಧೀರ್ ರಂಜನ್ ಚೌಧರಿ ಅವರು ಆರೆಸ್ಸೆಸ್/ಬಿಜೆಪಿ ಕಾರ್ಯಕ್ರಮದ ಆಹ್ವಾನವನ್ನು ಗೌರವಯುತವಾಗಿ ನಿರಾಕರಿಸಿರುತ್ತಾರೆ ಎಂದು ಪಕ್ಷ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿರಾಮ ನನ್ನ ಕನಸಿನಲ್ಲಿ ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ ಎಂದು ಹೇಳಿದ್ರು: ತೇಜ್ ಪ್ರತಾಪ್ ಯಾದವ್

ಈ ಮಧ್ಯೆ, ಜನವರಿ 22 ರಂದು ನಾಸಿಕ್‌ನ  ಕಾಲಾರಾಮ್ ದೇವಸ್ಥಾನದಲ್ಲಿ ಭಗವಾನ್ ರಾಮನ ಪೂಜೆಯಲ್ಲಿ ಪಾಲ್ಗೊಳ್ಳಲು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅಧ್ಯಕ್ಷ ದ್ರೌಪದಿ ಮುರ್ಮು ಅವರಿಗೆ ಆಹ್ವಾನವನ್ನು ನೀಡಿದ್ದಾರೆ. ಶಿವಸೇನಾ (ಯುಬಿಟಿ) ಆರತಿಯನ್ನು ಮಾಡಲಿದೆ ಎಂದು ಠಾಕ್ರೆ ಹೇಳಿದರು. ಗೋದಾವರಿ ನದಿ ಮತ್ತು ನಾಸಿಕ್‌ನಲ್ಲಿ ಪಕ್ಷದ ಕಾರ್ಯಕರ್ತರ ರ‍್ಯಾಲಿ ನಡೆಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ