ರಾಮ ನನ್ನ ಕನಸಿನಲ್ಲಿ ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ ಎಂದು ಹೇಳಿದ್ರು: ತೇಜ್ ಪ್ರತಾಪ್ ಯಾದವ್
ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಭಗವಾನ್ ರಾಮನು ತನ್ನ ಕನಸಿನಲ್ಲಿ ಹೇಳಿದ್ದ. ಚುನಾವಣೆ ಮುಗಿದ ಮೇಲೆ ರಾಮನನ್ನು ಮರೆತು ಬಿಡುತ್ತಾರೆ.ಜನವರಿ 22ಕ್ಕೆ ಬರುವುದು ಕಡ್ಡಾಯವೇ? ಎಂದು ಬಿಹಾರ ಸಚಿವ ತೇಜ್ ಪ್ರತಾಪ್ ಯಾದವ್ ಹೇಳಿ ವಿವಾದ ಹುಟ್ಟುಹಾಕಿದ್ದಾರೆ.
ದೆಹಲಿ ಜನವರಿ 15: ಜನವರಿ 22ರಂದು ನಡೆಯಲಿರುವ ಅಯೋಧ್ಯೆ (Ayodhya) ರಾಮ ಮಂದಿರ (Ram mandir) ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಭಗವಾನ್ ರಾಮನು ತನ್ನ ಕನಸಿನಲ್ಲಿ ಹೇಳಿದ್ದ ಎಂದು ಬಿಹಾರ ಸಚಿವ ತೇಜ್ ಪ್ರತಾಪ್ ಯಾದವ್ (Tej Pratap Yadav) ಹೇಳಿದ್ದಾರೆ. ಚುನಾವಣೆ ಮುಗಿದ ಮೇಲೆ ರಾಮನನ್ನು ಮರೆತು ಬಿಡುತ್ತಾರೆ.ಜನವರಿ 22ಕ್ಕೆ ಬರುವುದು ಕಡ್ಡಾಯವೇ? ನಾಲ್ವರು ಶಂಕರಾಚಾರ್ಯರ ಕನಸಿನಲ್ಲಿ ರಾಮನು ಬಂದನು. ರಾಮ್ ಜಿ ನನ್ನ ಕನಸಿನಲ್ಲಿಯೂ ಬಂದರು. ಬೂಟಾಟಿಕೆ ಇರುವುದರಿಂದ ಅವರು ಬರುವುದಿಲ್ಲ ಎಂದು ಹೇಳಿರುವುದಾಗಿ ತೇಜ್ ಪ್ರತಾಪ್ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತೇಜ್ ಪ್ರತಾಪ್ ನಾಲ್ಕು ಶಂಕರಾಚಾರ್ಯರನ್ನು ಉಲ್ಲೇಖಿಸಿದ್ದಾರೆ. ಆದಿ ಶಂಕರಾಚಾರ್ಯರು ಸ್ಥಾಪಿಸಿದರು ಎಂದು ನಂಬಲಾದ ನಾಲ್ಕು ಮಠಗಳ ಮಠಾಧೀಶರು, ಕಾರ್ಯಕ್ರಮಕ್ಕೆ ಹಾಜರಾಗುವ ಸಾಧ್ಯತೆಯಿಲ್ಲ. ಅವರ ಸಹೋದರ, ಈಗ ಆಡಳಿತಾರೂಢ ರಾಷ್ಟ್ರೀಯ ಜನತಾ ದಳವನ್ನು ಮುನ್ನಡೆಸುತ್ತಿರುವ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಈ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಪ್ರತಿಪಕ್ಷ ಬಿಜೆಪಿ ಕೂಡ ಈ ಹೇಳಿಕೆಗೆ ಏನನ್ನೂ ಹೇಳಿಲ್ಲ.
तेजप्रताप यादव को आया भगवान राम का सपना: कहा राम जी मेरे सपने में आए और बोले 22 तारीख को अयोध्या नहीं जाएंगे @BJP4Bihar @samrat4bjp #biharpolitics #Bihar #Biharnews pic.twitter.com/WCCzzT32qE
— FirstBiharJharkhand (@firstbiharnews) January 14, 2024
ಈ ತಿಂಗಳ ಆರಂಭದಲ್ಲಿ ತೇಜ್ ಪ್ರತಾಪ್ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಗೆದ್ದ ನಂತರವೇ ಭಗವಾನ್ ರಾಮ ಮನೆಗೆ ಬರುತ್ತಾರೆ ಎಂದು ಹೇಳಿ ವಿವಾದವನ್ನು ಹುಟ್ಟು ಹಾಕಿದ್ದರು. “ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟದ ಧ್ವಜವನ್ನು ಹಾರಿಸಿದ ನಂತರವೇ ರಾಮನು ಮನೆಗೆ ಬರುತ್ತಾನೆ” ಎಂದು ಅವರು ಜನವರಿ 1 ರಂದು ಹೇಳಿದ್ದು ಇದು ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವೆ ಮಾತಿನ ಸಮರಕ್ಕೆ ಕಾರಣವಾಗಿತ್ತು.
ಜನವರಿ 22 ರಂದು ರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ನಡೆಯಲಿದ್ದು, ಜನವರಿ 16 ರಂದು ಕಾರ್ಯಕ್ರಮದ ವಿಧಿವಿಧಾನಗಳು ಆರಂಭವಾಗಲಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಭವ್ಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಗಣ್ಯರು, ಸಂತರು ಸೇರಿದಂತೆ ಸಾವಿರಾರು ಜನರು ಮತ್ತು ರಾಜಕಾರಣಿಗಳನ್ನು ಆಹ್ವಾನಿಸಲಾಗಿದೆ.
ಆದರೆ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಅಧೀರ್ ರಂಜನ್ ಚೌಧರಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮತ್ತು ಸಿಪಿಐ(ಎಂ) ನಾಯಕ ಸೀತಾರಾಂ ಯೆಚೂರಿ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರು ಇದು ಚುನಾವಣಾ ಲಾಭಕ್ಕಾಗಿ. ರಾಜಕೀಯ ಯೋಜನೆ ಎಂದು ಹೇಳುವ ಮೂಲಕ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಆಹ್ವಾನವನ್ನು ತಿರಸ್ಕರಿಸಿದ್ದಾರೆ.
ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ ವಿಷಯದಲ್ಲಿ ಕಾಂಗ್ರೆಸ್ ಮಾಡುತ್ತಿರುವ ರಾಜಕಾರಣ ಜನರಿಗೆ ಅರ್ಥವಾಗುತ್ತಿದೆ: ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವ
ಈ ನಾಯಕರ ಹೊರತಾಗಿ, ‘ಶಂಕರಾಚಾರ್ಯರು’ ಎಂದು ಕರೆಯಲ್ಪಡುವ ಪ್ರಮುಖ ನಾಲ್ಕು ಸನಾತನ ಹಿಂದೂ ಧರ್ಮದ ಆಧ್ಯಾತ್ಮಿಕ ನಾಯಕರು ಕೂಡ ಪವಿತ್ರ ಸಮಾರಂಭದಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ ಆದರೂ ಅವರಲ್ಲಿ ಇಬ್ಬರು ಕಾರ್ಯಕ್ರಮವನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ. ಉತ್ತರಾಖಂಡದ ಜ್ಯೋತಿಷ್ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ, ದೇವಾಲಯದ ನಿರ್ಮಾಣವು ಸನಾತನ ಧರ್ಮದ ವಿಜಯವನ್ನು ಸೂಚಿಸುವುದಿಲ್ಲ ಎಂದು ಹೇಳಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:18 pm, Mon, 15 January 24