ಅಯೋಧ್ಯಾ ರಾಮ ಜನ್ಮಭೂಮಿಯನ್ನೂ ಮೆಕ್ಕಾ ಮಾದರಿಯಲ್ಲೇ ಅಭಿವೃದ್ಧಿಗೊಳಿಸಲಾಗುವುದು ಎಂದು ವಿಎಚ್​ಪಿ ಮುಖ್ಯಸ್ಥ

| Updated By: Lakshmi Hegde

Updated on: Dec 13, 2021 | 10:01 AM

ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯ ಪಡೆಯಲು ಕಾರಣವಾಗಿದ್ದು ಈ ರಾಮಮಂದಿರ ಚಳವಳಿ ಎಂದು ವಿಎಚ್​ಪಿ ನಾಯಕ ಸುರೇಂರ

ಅಯೋಧ್ಯಾ ರಾಮ ಜನ್ಮಭೂಮಿಯನ್ನೂ ಮೆಕ್ಕಾ ಮಾದರಿಯಲ್ಲೇ ಅಭಿವೃದ್ಧಿಗೊಳಿಸಲಾಗುವುದು ಎಂದು ವಿಎಚ್​ಪಿ ಮುಖ್ಯಸ್ಥ
ಶ್ರೀರಾಮ ಮಂದಿರ
Follow us on

ನಾಗ್ಪುರ: ಅಯೋಧ್ಯಾ ರಾಮಜನ್ಮಭೂಮಿ ತೀರ್ಥ ಕ್ಷೇತ್ರವನ್ನೂ ಕೂಡ ವ್ಯಾಟಿಕನ್ ನಗರ ಮತ್ತು ಮೆಕ್ಕಾ ಮಾದರಿಯಲ್ಲೇ ಅಭಿವೃದ್ಧಿಗೊಳಿಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್​ (VHP) ಅಧ್ಯಕ್ಷ ರಬೀಂದ್ರ ನಾರಾಯಣ್​ ಸಿಂಗ್ ಹೇಳಿದ್ದಾರೆ. ನಾಗ್ಪುರದಲ್ಲಿ ವಿಎಚ್​ಪಿ ಕಾರ್ಯಕರ್ತರು ಮತ್ತು ಸಂತರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಮ ಜನ್ಮಭೂಮಿ ಮತ್ತು ರಾಮಮಂದಿರಗಳು ಹಿಂದುತ್ವದ ಸಂಕೇತವಾಗಿದೆ ಎಂದು ಹೇಳಿದರು. ಇವರು ಉಲ್ಲೇಖಿಸಿದ ಮೆಕ್ಕಾ, ಇಸ್ಲಾಂ ಧರ್ಮೀಯರ ಪವಿತ್ರ ಸ್ಥಳವಾಗಿದ್ದು, ವ್ಯಾಟಿಕನ್ ನಗರವೆಂಬುದು ರೋಮನ್ ಕ್ಯಾಥೋಲಿಕ್​ ಚರ್ಚ್​​ಗಳ ಪ್ರಧಾನ ಕಚೇರಿಯಾಗಿದೆ.  

ಹಾಗೇ, ಇನ್ನೊಂದು ಸಮಾರಂಭದಲ್ಲಿ ಮಾತನಾಡಿದ್ದ  ವಿಎಚ್​ಪಿ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಸುರೇಂದ್ರ ಜೈನ್​,  ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯ ಪಡೆಯಲು ಕಾರಣವಾಗಿದ್ದು ಈ ರಾಮಮಂದಿರ ಚಳವಳಿ. ದೇಶವನ್ನು ವಿಭಜಿಸಿದ್ದು ಜಾತ್ಯತೀತ ರಾಜಕಾರಣ ಎಂದು ಹೇಳಿದ್ದಾರೆ.  ಇದೇ ವೇಳೆ ರಾಹುಲ್ ಗಾಂಧಿಯವರ ವಿರುದ್ಧ ಹರಿಹಾಯ್ದ ಸುರೇಂದ್ರ ಜೈನ್​, ಭಾರತದ ರಾಜಕಾರಣದಲ್ಲಿಯೇ ರಾಹುಲ್​ ಗಾಂಧಿ ಅತ್ಯಂತ ಗೊಂದಲಮಯ ನಾಯಕ ಎಂದಿದ್ದಾರೆ. ಅವರು ಏನು ಮಾತನಾಡುತ್ತಾರೆ? ಯಾವ ಅರ್ಥದಲ್ಲಿ ಮಾತಾಡುತ್ತಾರೆ ಎಂಬುದು ಯಾರಿಗೂ ಅರ್ಥವಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿಯವರು ಇತ್ತೀಚೆಗಷ್ಟೇ ಜೈಪುರಕ್ಕೆ ಭೇಟಿ ನೀಡಿದ್ದಾಗ, ಈ ದೇಶ ಹಿಂದುಗಳದ್ದು ಹೊರತಾಗಿ ಹಿಂದುತ್ವವಾದಿಗಳದ್ದಲ್ಲ ಎಂದಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಸುರೇಂದ್ರ ಜೈನ್​ ಹೀಗೆ ತಿರುಗೇಟು ನೀಡಿದ್ದಾರೆ.

ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆ
ಒಂದೆಡೆ ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ ಕ್ಷೇತ್ರ ಅಭಿವೃದ್ಧಿ ಹೊಂದುತ್ತಿದ್ದರೆ, ಇನ್ನೊಂದೆಡೆ ಇಂದು ವಾರಾಣಸಿಯಲ್ಲಿ ಪ್ರಧಾನಿ ಮೋದಿಯವರು ಕಾಶಿ ವಿಶ್ವನಾಥ ಕಾರಿಡಾರ್​ ಉದ್ಘಾಟನೆ ಮಾಡಲಿದ್ದಾರೆ. ವಾಸ್ತುಶಿಲ್ಪಿ ಭೀಮಲ್ ಪಟೇಲ್ ಅವರಿಂದ ಕಾರಿಡಾರ್ ವಿನ್ಯಾಸ ಮಾಡಲಾಗಿದೆ. ಈ ಕಾರಿಡಾರ್ನಿಂದ ಯಾವುದೇ ಅಡೆತಡೆ ಇಲ್ಲದೆ ವಿಶ್ವನಾಥನ ದರ್ಶನ ಪಡೆಯೋದಕ್ಕೆ ಸಾಧ್ಯವಾಗಲಿದೆ. ಕಾಶಿ ದೇಗುಲ ಹಾಗೂ ಗಂಗಾ ನದಿಯ ನಡುವಿನ ಸಂಚಾರದ ಅವಧಿ ಈ ಕಾರಿಡಾರ್ನಿಂದ ಕಡಿತವಾಲಿದೆ. ಕಾರಿಡಾರ್‌ ಭಾಗದಲ್ಲಿ 10 ಸಾವಿರ ಜನ ಧ್ಯಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇನ್ನು 7,000 ಚದರ ಮೀಟರ್ ವೇದಿಕೆ, 7 ಭವ್ಯ ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗಿದೆ. ಫುಡ್ ಕೋರ್ಟ್, ವೈದಿಕ ಸೇರಿದಂತೆ ಆಧ್ಯಾತ್ಮಿಕ ಗ್ರಂಥಾಲಯವನ್ನ ಸ್ಥಾಪಿಸಲಾಗಿದೆ.

ಇದನ್ನೂ ಓದಿ: Miss Universe 2021: ಭುವನ ಸುಂದರಿಯಾಗಿ ಹೊರಹೊಮ್ಮಿದ ಭಾರತದ ಹರ್ನಾಜ್ ಸಂಧು

Published On - 9:50 am, Mon, 13 December 21