ಅಯೋಧ್ಯೆಯ ಸಿದ್ಧಪೀಠ ಮಂದಿರಕ್ಕೆ ಭೇಟಿ ನೀಡದೆ ರಾಮ ಲಲ್ಲಾ ದರ್ಶನ ಪಡೆದರೆ ಅಪೂರ್ಣ! ಏನಿದರ ವಿಶೇಷ?

|

Updated on: Jan 19, 2024 | 2:55 PM

Hanuman Garhi Mandir: ಪ್ರಾಚೀನ ಹನುಮಾನ್‌ಗಢೀ ದೇವಸ್ಥಾನವು ರಾಮನ ಭಂಟ, ಭಗವಾನ್ ಶ್ರೀ ರಾಮನ ಮಹಾನ್ ಭಕ್ತ ಎಂದು ಪರಿಗಣಿಸಲಾಗಿರುವ ಹನುಮಂತನಿಗೆ ಸಂಬಂಧಿಸಿದ್ದಾಗಿದೆ. ಅಯೋಧ್ಯೆಯಲ್ಲಿರುವ ಹನುಮಾನ್‌ಗಢೀ ದೇವಸ್ಥಾನಕ್ಕೂ ವಿಶೇಷ ಮಹತ್ವವಿದೆ.

ಅಯೋಧ್ಯೆಯ ಸಿದ್ಧಪೀಠ ಮಂದಿರಕ್ಕೆ ಭೇಟಿ ನೀಡದೆ ರಾಮ ಲಲ್ಲಾ ದರ್ಶನ ಪಡೆದರೆ ಅಪೂರ್ಣ! ಏನಿದರ ವಿಶೇಷ?
ಅಯೋಧ್ಯೆಯ ಸಿದ್ಧಪೀಠ ಹನುಮಾನ್‌ಗಢೀ ಮಂದಿರ
Follow us on

ಅಯೋಧ್ಯೆ, ಜನವರಿ 19: ಅಯೋಧ್ಯೆಯ ಭವ್ಯವಾದ ರಾಮ ಮಂದಿರದಲ್ಲಿ (Ayodhya Ram Mandir) ರಾಮ ಲಲ್ಲಾ (Ram Lalla) ಪ್ರಾಣ ಪ್ರತಿಷ್ಠೆ ಕ್ಷಣಗಣನೆ ಆರಂಭವಾಗಿದೆ. ಇಡೀ ದೇಶವೇ ಶ್ರೀರಾಮನ ಭಕ್ತಿಯಲ್ಲಿ ಮುಳುಗಿದ್ದು, ಅಯೋಧ್ಯೆಯತ್ತ ಗಮನ ನೆಟ್ಟಿದೆ. ರಾಮ ಮಂದಿರದಲ್ಲಿ ಇರುವ ಭಗವಾನ್ ಶ್ರೀರಾಮನ ಮಗುವಿನ ರೂಪವಾದ ರಾಮ ಲಾಲ್ಲಾ ದರ್ಶನ ಪಡೆಯಲು ದೇಶದ ಪ್ರತಿಯೊಬ್ಬ ಭಕ್ತರೂ ಬಯಸುತ್ತಾರೆ. ಆದರೆ, ಭಗವಾನ್ ಶ್ರೀರಾಮನ ನಗರವಾದ ಅಯೋಧ್ಯೆಯಲ್ಲಿರುವ ಪುರಾತನ ಸಿದ್ಧಪೀಠ ಹನುಮಾನ್‌ಗಢೀ (Hanuman Garhi Mandir) ಭವ್ಯವಾದ ದೇವಾಲಯವಾಗಿದೆ. ಇಲ್ಲಿನ ಭಜರಂಗಬಲಿ ಅಥವಾ ಹನುಮನನ್ನು ನೋಡದೆ ರಾಮ ಲಲ್ಲಾ ಆರಾಧನೆಯು ಅಪೂರ್ಣವಾಗಿದೆ ಎಂಬುದು ಭಕ್ತರ ನಂಬಿಕೆಯಾಗಿದೆ.

ಪ್ರಾಚೀನ ಹನುಮಾನ್‌ಗಢೀ ದೇಗುಲ

ಪ್ರಾಚೀನ ಹನುಮಾನ್‌ಗಢೀ ದೇವಸ್ಥಾನವು ರಾಮನ ಭಂಟ, ಭಗವಾನ್ ಶ್ರೀ ರಾಮನ ಮಹಾನ್ ಭಕ್ತ ಎಂದು ಪರಿಗಣಿಸಲಾಗಿರುವ ಹನುಮಂತನಿಗೆ ಸಂಬಂಧಿಸಿದ್ದಾಗಿದೆ. ಅಯೋಧ್ಯೆಯಲ್ಲಿರುವ ಹನುಮಾನ್‌ಗಢೀ ದೇವಸ್ಥಾನಕ್ಕೂ ವಿಶೇಷ ಮಹತ್ವವಿದೆ. ಇದನ್ನು ಅಯೋಧ್ಯೆಯ ಹತ್ತು ಪ್ರಮುಖ ದೇವಾಲಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ದೇವಾಲಯ ಅಯೋಧ್ಯಾ ನಗರದ ಮಧ್ಯದಲ್ಲಿದೆ. ಹನುಮಾನ್‌ಗಢೀ ದೇವಸ್ಥಾನಕ್ಕೆ ಭೇಟಿ ನೀಡದೆ ರಾಮ ಲಲ್ಲಾ ದರ್ಶನವು ಅಪೂರ್ಣ ಎನ್ನಲಾಗಿದೆ.

ಶ್ರೀರಾಮನು ರಾವಣನನ್ನು ಸೋಲಿಸಿ ಲಂಕೆಯಿಂದ ಅಯೋಧ್ಯೆಗೆ ಹಿಂದಿರುಗುತ್ತಿದ್ದಾಗ, ತನ್ನ ನೆಚ್ಚಿನ ಭಕ್ತ ಹನುಮಂತನಿಗೆ ಉಳಿಯಲು ಸ್ಥಳವನ್ನು ನೀಡಿದ್ದನೆಂದು ಹೇಳಲಾಗುತ್ತದೆ. ಜತೆಗೆ, ಯಾವುದೇ ಭಕ್ತ ಅಯೋಧ್ಯೆಗೆ ಬಂದಾಗ, ಮೊದಲು ಹನುಮಂತನ ದರ್ಶನ ಮಾಡಬೇಕೆಂದು ಸೂಚಿಸಿದ್ದ ಎಂಬ ನಂಬಿಕೆ ಇದೆ.

ಭಗವಾನ್ ಶ್ರೀರಾಮನು ಹನುಮಂತನಿಗೆ ನೀಡಿದ ಸ್ಥಳವು ಪುರಾತನವಾದ ಸಿದ್ಧಪೀಠ ಹನುಮಾನ್‌ಗಢೀ ದೇವಸ್ಥಾನವಾಗಿದೆ. ಹನುಮಂತ ಈಗಲೂ ಇಲ್ಲಿ ನೆಲೆಸಿದ್ದಾನೆ ಎಂಬ ನಂಬಿಕೆ ಭಕ್ತರದ್ದಾಗಿದೆ.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರದ ಗರ್ಭಗುಡಿಯಲ್ಲಿ ರಾಮ ಲಲ್ಲಾ ಮೂರ್ತಿ: ಇಲ್ಲಿದೆ ಮೊದಲ ಚಿತ್ರ

ಹನುಮಂತನು ಭಕ್ತರ ಎಲ್ಲಾ ರೀತಿಯ ತೊಂದರೆಗಳು ಮತ್ತು ನೋವುಗಳನ್ನು ನಿವಾರಿಸುವ ದೇವರು ಎಂದು ನಂಬಲಾಗಿದೆ. ರಾಮನ ಯಾವುದೇ ಭಕ್ತನು ಹನುಮಂತನಿಗೆ ಕೆಂಪು ಬಟ್ಟೆ ಅಥವಾ ವಸ್ತ್ರಗಳನ್ನು ಹನುಮಾನ್​ಗಢೀ ದೇವಸ್ಥಾನದಲ್ಲಿ ಪೂರ್ಣ ಭಕ್ತಿಯಿಂದ ಅರ್ಪಿಸಿದರೆ ಅವನ ಎಲ್ಲಾ ದೋಷಗಳು ದೂರವಾಗುತ್ತವೆ ಎಂಬ ಧಾರ್ಮಿಕ ನಂಬಿಕೆ ಇದೆ. ಹನುಮಂತನ ಮಗುವಿನ ರೂಪವನ್ನು ಹನುಮಾನ್​ಗಢೀ ದೇವಸ್ಥಾನದಲ್ಲಿ ಕಾಣಬಹುದು. ದೇವಸ್ಥಾನದಲ್ಲಿ ಹನುಮಂತನ ತಾಯಿ ಅಂಜನಾ ದೇವಿಯ ಮೂರ್ತಿಯೂ ಇದೆ.

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಬಗ್ಗೆ ಮತ್ತಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ