AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Union Budget 2024: ಕೇಂದ್ರ ಬಜೆಟ್​​ನಲ್ಲಿ ಅಯೋಧ್ಯೆಗೆ ಭರ್ಜರಿ ಕೊಡುಗೆ ನೀಡಲಿದ್ದಾರಾ ನಿರ್ಮಲಾ ಸೀತಾರಾಮನ್?

ಸಾಮಾನ್ಯವಾಗಿ ಮಧ್ಯಂತರ ಬಜೆಟ್​​ನಲ್ಲಿ ಸರ್ಕಾರಗಳು ಹೊಸ ಮತ್ತು ದೊಡ್ಡ ಘೋಷಣೆಗಳನ್ನು ಮಾಡದಿದ್ದರೂ ಕಳೆದ ಕೆಲವು ಮಧ್ಯಂತರ ಬಜೆಟ್‌ಗಳಲ್ಲಿ ಈ ಸಂಪ್ರದಾಯವನ್ನು ಮುರಿಯಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಅಯೋಧ್ಯೆಗೆ ಸಾಕಷ್ಟು ಕೊಡುಗೆ ನೀಡುವಂತಹ ಸಾಧ್ಯತೆಗಳಿವೆ.

Union Budget 2024: ಕೇಂದ್ರ ಬಜೆಟ್​​ನಲ್ಲಿ ಅಯೋಧ್ಯೆಗೆ ಭರ್ಜರಿ ಕೊಡುಗೆ ನೀಡಲಿದ್ದಾರಾ ನಿರ್ಮಲಾ ಸೀತಾರಾಮನ್?
ಕೇಂದ್ರ ಬಜೆಟ್​​ನಲ್ಲಿ ಅಯೋಧ್ಯೆಗೆ ಭರ್ಜರಿ ಕೊಡುಗೆ ನೀಡಲಿದ್ದಾರಾ ನಿರ್ಮಲಾ ಸೀತಾರಾಮನ್?
ಗಣಪತಿ ಶರ್ಮಾ
|

Updated on:Jan 19, 2024 | 2:17 PM

Share

ಅಯೋಧ್ಯೆ, ಜನವರಿ 19: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ (Ayodhya Ram Mandir) ಉದ್ಘಾಟನೆಗೆ ಇಡೀ ದೇಶ ಕಾತರದಿಂದಿದೆ. ಜನವರಿ 22 ರಂದು ದೇವಸ್ಥಾನದಲ್ಲಿ ರಾಮ ಲಾಲ್ಲಾ ವಿಗ್ರಹ (Ram Lalla Idol) ಪ್ರತಿಷ್ಠಾಪನೆಗೆ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಜನವರಿ 22 ರ ನಂತರ ಸುಮಾರು ಒಂದು ವಾರದ ಬಳಿಕ ಮೋದಿ ಸರ್ಕಾರದ ಈ ಅಧಿಕಾರಾವಧಿಯ ಕೊನೆಯ ಬಜೆಟ್‌ (Union Budget 2024) ಮಂಡನೆಯಾಗಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡಿಸಲಿದ್ದು, ಆದರೆ ಅದರ ಮೇಲೆ ರಾಮ ಮಂದಿರದ ಪರಿಣಾಮ ಗೋಚರಿಸಲಿದೆಯೇ? ನಿರ್ಮಲಾ ಸೀತಾರಾಮನ್ ಅವರು ಅಯೋಧ್ಯೆಗೆ ಅನೇಕ ಉಡುಗೊರೆಗಳನ್ನು ನೀಡುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗಳು ಈಗ ಉದ್ಭವವಾಗಿದೆ.

ಸುಮಾರು 3.5 ಲಕ್ಷ ಜನಸಂಖ್ಯೆ ಹೊಂದಿರುವ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ನಂತರ ಪ್ರವಾಸಿಗರ ಸಂಖ್ಯೆ 10 ಲಕ್ಷ ತಲುಪುವ ಅಂದಾಜಿದೆ. ಅಂತಹ ಪರಿಸ್ಥಿತಿಯಲ್ಲಿ, ಅಯೋಧ್ಯೆಯು ಬಹುದೊಡ್ಡ ನಗರೀಕರಣಕ್ಕೆ ಒಳಗಾಗಲಿದೆ. ಸದ್ಯ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾತ್ರವಲ್ಲದೆ 250ಕ್ಕೂ ಹೆಚ್ಚು ಯೋಜನೆಗಳ ಕಾಮಗಾರಿ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಅಯೋಧ್ಯೆಗೆ ಕೆಲವು ವಿಭಿನ್ನ ಉಡುಗೊರೆಗಳನ್ನು ನೀಡಬಹುದು ಎಂದು ನಿರೀಕ್ಷಿಸಲಾಗಿದೆ.

ಅಯೋಧ್ಯೆಗೆ ಹೊಸ ರೈಲಿನ ಘೋಷಣೆ ನಿರೀಕ್ಷೆ

ಸಾಮಾನ್ಯವಾಗಿ ಮಧ್ಯಂತರ ಬಜೆಟ್​​ನಲ್ಲಿ ಸರ್ಕಾರಗಳು ಹೊಸ ಮತ್ತು ದೊಡ್ಡ ಘೋಷಣೆಗಳನ್ನು ಮಾಡದಿದ್ದರೂ ಕಳೆದ ಕೆಲವು ಮಧ್ಯಂತರ ಬಜೆಟ್‌ಗಳಲ್ಲಿ ಈ ಸಂಪ್ರದಾಯವನ್ನು ಮುರಿಯಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಅಯೋಧ್ಯೆಗೆ ಸಾಕಷ್ಟು ಕೊಡುಗೆ ನೀಡುವಂತಹ ಸಾಧ್ಯತೆಗಳಿವೆ. ರೈಲ್ವೆ ಬಜೆಟ್ ಈಗ ಮುಖ್ಯ ಬಜೆಟ್‌ನ ಭಾಗವಾಗಿದೆ. ಹೀಗಾಗಿ ನಿರ್ಮಲಾ ಸೀತಾರಾಮನ್ ಅಯೋಧ್ಯೆಗೆ ಹೊಸ ರೈಲನ್ನು ಘೋಷಿಸುವ ನಿರೀಕ್ಷೆಯೂ ಇದೆ.

ಇದಲ್ಲದೆ, ದೇಶದ ಯಾತ್ರಾ ಕ್ಷೇತ್ರಗಳ ಅಭಿವೃದ್ಧಿಗಾಗಿ ಮೋದಿ ಸರ್ಕಾರ ಈಗಾಗಲೇ ಯೋಜನೆಯನ್ನು ಪ್ರಾರಂಭಿಸಿದೆ. ಮೋದಿ ಸರ್ಕಾರದ ‘ಅಮೃತ್ ಯೋಜನೆ’ ಕೂಡ ನಗರಗಳ ನವೀಕರಣಕ್ಕಾಗಿ ಕೆಲಸ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿರ್ಮಲಾ ಅವರು ಈ ಎರಡೂ ಯೋಜನೆಗಳ ಮೂಲಕ ಅಯೋಧ್ಯೆಗೆ ದೊಡ್ಡ ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ.

ಬಜೆಟ್​ನಲ್ಲಿ ಘೋಷಣೆಯಾಗದಿದ್ದರೂ ಅಯೋಧ್ಯೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಲವು ಯೋಜನೆಗಳ ಭಾಗ್ಯ ದೊರೆತಿದೆ. ಇದಕ್ಕೂ ಮುನ್ನ ಅಯೋಧ್ಯೆಯಲ್ಲಿ ‘ಮರ್ಯಾದಾ ಪುರುಷೋತ್ತಮ ಶ್ರೀರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಇದೀಗ ಅತಿ ವೇಗದಲ್ಲಿ ಕಾಮಗಾರಿ ಮುಗಿದು ದಾಖಲೆ ಮಾಡಿದೆ. ಆದರೆ, ಈಗ ಅದರ ಹೆಸರನ್ನು ‘ಮಹರ್ಷ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಬದಲಾಯಿಸಲಾಗಿದೆ. ಬಹುಶಃ ಚುನಾವಣೆಯಲ್ಲಿ ವಾಲ್ಮೀಕಿ ಸಮುದಾಯದ ಮತಗಳನ್ನು ಪಡೆಯಲು ಇದು ಬಿಜೆಪಿಗೆ ನೆರವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: ರಾಮಲಲ್ಲಾ ಪ್ರಾಣ ಪ್ರತಿಷ್ಠಾ ದಿನವಾದ ಜ. 22ರಂದು ಷೇರು ಮಾರುಕಟ್ಟೆಗೆ ಇದೆಯಾ ರಜೆ?

ಅಯೋಧ್ಯೆ ವಿಮಾನ ನಿಲ್ದಾಣದಿಂದ ಇಂಡಿಗೋ ಮತ್ತು ಏರ್ ಇಂಡಿಯಾ ಸೇವೆಗಳು ಪ್ರಾರಂಭವಾಗಿವೆ. ಉಳಿದ ಕಂಪನಿಗಳು ಶೀಘ್ರದಲ್ಲೇ ಅಯೋಧ್ಯೆಗೆ ಸೇವೆಗಳನ್ನು ಪ್ರಾರಂಭಿಸಲಿವೆ. ಅಯೋಧ್ಯೆಯ ರೈಲ್ವೆ ನಿಲ್ದಾಣವನ್ನು ಸರ್ಕಾರವು ಮರು ಅಭಿವೃದ್ಧಿಗೊಳಿಸಿದೆ. ಅಲ್ಲಿಂದ ವಂದೇ ಭಾರತ್ ಮತ್ತು ಅಮೃತ್ ಭಾರತ್ ರೈಲುಗಳ ಸೇವೆಯನ್ನು ಪ್ರಾರಂಭಿಸಲಾಗಿದೆ. 2031ರ ವೇಳೆಗೆ ಅಯೋಧ್ಯೆಯಲ್ಲಿ 85,000 ಕೋಟಿ ರೂ.ಗಳ ಯೋಜನೆಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು, ಇದರಲ್ಲಿ ಅಯೋಧ್ಯೆಯ ಸ್ವಚ್ಛತೆ, ರಸ್ತೆಗಳ ಅಗಲೀಕರಣ, ಥೀಮ್ ಪಾರ್ಕ್ ಮತ್ತು ಇತರ ಯೋಜನೆಗಳು ಸೇರಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:17 pm, Fri, 19 January 24

Follow Us
Ganapathi Sharma
Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!