Masala Chai: ವಿಶ್ವದ ಅತ್ಯಂತ ಜನಪ್ರಿಯ ಪಾನೀಯಗಳು; ಭಾರತದ ಮಸಾಲ ಚಾಯ್ ಎರಡನೇ ಸ್ಥಾನದಲ್ಲಿ; ಅಗ್ರಸ್ಥಾನ ಯಾವುದಕ್ಕೆ?

World's Best Non-alcoholic Beverages: ಟೇಸ್ಟ್ ಅಟ್ಲಾಸ್ ಎಂಬ ಫುಡ್ ಮತ್ತು ಟ್ರಾವಲ್ ಇನ್ಸ್​ಟಾಗ್ರಾಮ್ ಪೇಜ್​ನಲ್ಲಿ ಜಗತ್ತಿನ ಅತ್ಯುತ್ತಮ ಪಾನೀಯಗಳ ಪಟ್ಟಿ ಪ್ರಕಟವಾಗಿದೆ. ಭಾರತದ ಮಸಾಲ ಚಾಯ್ ಎರಡನೇ ಅತ್ಯುತ್ತಮ ಪಾನೀಯ ಎಂಬ ಕೀರ್ತಿಗೆ ಪಾತ್ರವಾಗಿದೆ. ಮೆಕ್ಸಿಕೋದ ಆಗ್ವಸ್ ಫ್ರೆಸ್ಕಾಸ್ ಎಂಬ ಪಾನೀಯ ಮೊದಲ ಸ್ಥಾನ ಪಡೆದಿದೆ.

Masala Chai: ವಿಶ್ವದ ಅತ್ಯಂತ ಜನಪ್ರಿಯ ಪಾನೀಯಗಳು; ಭಾರತದ ಮಸಾಲ ಚಾಯ್ ಎರಡನೇ ಸ್ಥಾನದಲ್ಲಿ; ಅಗ್ರಸ್ಥಾನ ಯಾವುದಕ್ಕೆ?
ಚಹಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 19, 2024 | 3:50 PM

ನವದೆಹಲಿ, ಜನವರಿ 19: ಬಹಳಷ್ಟು ಭಾರತೀಯರಿಗೆ ಚಹಾ ಫೇವರಿಟ್ ಪಾನೀಯ. ಯಾರೇ ಅತಿಥಿ ಬಂದರೂ ಚಹಾ ಅಥವಾ ಕಾಫಿ ಸರ್ವ್ ಆಗದೇ ಸತ್ಕಾರಕ್ಕೆ ಅರ್ಥ ಇರೋದಿಲ್ಲ. ಚಹಾದಲ್ಲೂ ವೈವಿಧ್ಯತೆ ಇದೆ. ಬ್ಲ್ಯಾಕ್ ಟೀ, ಗ್ರೀನ್ ಟೀ, ಮಸಾಲೆ ಟೀ, ಜಿಂಜರ್ ಟೀ, ಹೀಗೆ ನಾನಾ ರೀತಿಯ ಟೀ ಇದೆ. ಸ್ವಾದಿಷ್ಟಕರವಾದ ಈ ಪಾನೀಯ ಈಗ ವಿಶ್ವದ ಅತ್ಯುತ್ತಮ ಪಾನೀಯಗಳ ಪಟ್ಟಿಗೆ ಸೇರಿದೆ. ಆಲ್ಕೋಹಾಲ್ ಅಲ್ಲದ ಅತ್ಯಂತ ಜನಪ್ರಿಯ ಪಾನೀಯಗಳ ಪಟ್ಟಿಯಲ್ಲಿ (Most popular non-alcoholic beverages) ಮಸಾಲ ಚಾಯ್ ಎರಡನೇ ಸ್ಥಾನ ಗಿಟ್ಟಿಸಿದೆ.

ಟೇಸ್ಟ್ ಅಟ್ಲಾಸ್ (TasteAtlas) ಎಂಬ ಫುಡ್ ಮತ್ತು ಟ್ರಾವಲ್ ಬ್ಲಾಗರ್​ನ ಇನ್ಸ್​ಟಾಗ್ರಾಮ್ ಪೇಜ್​ನಲ್ಲಿ ಈ ಪಟ್ಟಿ ಪ್ರಕಟವಾಗಿದೆ. ಮಸಲಾ ಟೀ ವಿಶ್ವದ ಎರಡನೇ ಅತ್ಯುತ್ತಮ ಪಾನೀಯವೆಂಬ ಗೌರವಕ್ಕೆ ಪಾತ್ರವಾಗಿದೆ.

ಇದನ್ನೂ ಓದಿ: Rameshwaram Cafe: ಹೈದರಾಬಾದ್​ನಲ್ಲಿ ಬೆಂಗಳೂರಿನ ರಾಮೇಶ್ವರಂ ಕೆಫೆ ಹವಾ; ಸ್ಯಾಂಪಲ್ ತಿನಿಸಿಗೆ ಉಘೇ ಎಂದ ಜನರು; ಇಂದು ಅಧಿಕೃತ ಆರಂಭ

ಮಸಾಲ ಟೀ ಹೇಗೆ?

ಸಾಂಪ್ರದಾಯಿಕ ಚಹಾಗೆ ಶುಂಠಿ, ಲವಂಗ, ಏಲಕ್ಕಿ ಮೊದಲಾದ ಮಸಾಲ ಪದಾರ್ಥಗಳನ್ನು ಸೇರಿಸಲಾಗುತ್ತದೆ. ಕೆಲ ಪ್ರದೇಶಗಳಲ್ಲಿ ಒಂದೇ ಮಸಾಲೆ ಬೆರೆಸಬಹುದು, ಕೆಲವೆಡೆ ಹೆಚ್ಚು ಮಸಾಲೆ ಪದಾರ್ಥ ಬೆರೆಸಬಹುದು. ಆದರೆ, ಸಾಂಪ್ರದಾಯಿಕ ಚಹಾದ ರುಚಿಯ ಸ್ವಾದವನ್ನು ಈ ಮಸಾಲೆ ಇನ್ನಷ್ಟು ಹೆಚ್ಚಿಸುತ್ತದೆ.

19ನೇ ಶತಮಾನದಲ್ಲಿ ಭಾರತಕ್ಕೆ ಬಂದ ಮಸಾಲ ಟೀ

ಚಹಾ ಮೂಲತಃ ಚೀನಾದಲ್ಲಿ ಶುರುವಾಗಿದ್ದು. ಬ್ರಿಟಿಷರು 19ನೇ ಶತಮಾನದಲ್ಲಿ ಮಸಾಲ ಟೀ ಅನ್ನು ಭಾರತದಲ್ಲಿ ಜನಪ್ರಿಯಗೊಳಿಸಿದರು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Inspiring: ರೋಲೆಕ್ಸ್ ವಾಚ್ ಗೊತ್ತೆ? ಇದನ್ನು ಸ್ಥಾಪಿಸಿದವ ಕಡುಬಡವ, ನಿರ್ಗತಿಕ; ಇದು ವ್ಯವಹಾರ ಜಗತ್ತಿನ ಕೌತುಕ

ಪಟ್ಟಿಯಲ್ಲಿ ನಂ. 1 ಸ್ಥಾನದಲ್ಲಿರುವ ಪಾನೀಯ ಯಾವುದು?

ಟೇಸ್ಟ್ ಅಟ್ಲಾಸ್ ಪ್ರಕಟಿಸಿದ ಅತ್ಯುತ್ತಮ ಪಾನೀಯಗಳ ಪಟ್ಟಿಯಲ್ಲಿ ಮಸಾಲ ಚಾಯ್ ಎರಡನೇ ಸ್ಥಾನದಲ್ಲಿದೆ. ಮೆಕ್ಸಿಕೋದ ಆಗ್ವಸ್ ಫ್ರೆಸ್ಕಾಸ್ ಎಂಬ ಪಾನೀಯ ಮೊದಲನೆಯ ಸ್ಥಾನದಲ್ಲಿದೆ. ಹಣ್ಣು, ಹೂವು, ಬೀಜ, ಕಾಳು, ಸೌತೆ ಕಾಯಿಯ ರಸಕ್ಕೆ ನೀರು ಮತ್ತು ಸಕ್ಕರೆ ಬೆರೆಸಿ ಮಾಡಲಾಗುವ ವಿಶೇಷ ಪಾನೀಯ ಇದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್