Rameshwaram Cafe: ಹೈದರಾಬಾದ್ನಲ್ಲಿ ಬೆಂಗಳೂರಿನ ರಾಮೇಶ್ವರಂ ಕೆಫೆ ಹವಾ; ಸ್ಯಾಂಪಲ್ ತಿನಿಸಿಗೆ ಉಘೇ ಎಂದ ಜನರು; ಇಂದು ಅಧಿಕೃತ ಆರಂಭ
Bengaluru's popular eatery in Hyderabad: ಬೆಂಗಳೂರಿನಲ್ಲಿ ನಾಲ್ಕು ಔಟ್ಲೆಟ್ ಹೊಂದಿರುವ ರಾಮೇಶ್ವರಂ ಕೆಫೆ ಈಗ (ಜ. 19) ಹೈದರಾಬಾದ್ನಲ್ಲೂ ಆರಂಭವಾಗಿದೆ. ಜನವರಿ 14ರಿಂದ 16ರವರೆಗೆ ಕೆಫೆ ಉಚಿತವಾಗಿ ಆಹಾರಗಳ ಟ್ರಯಲ್ ನೀಡಿದ್ದು ಉತ್ತಮ ಸ್ಪಂದನೆ ಸಿಕ್ಕಿತ್ತು. ದಿವ್ಯಾ ಮತ್ತು ರಾಘವೇಂದ್ರ ರಾವ್ ಎಂಬ ಯುವ ದಂಪತಿ 2021ರಲ್ಲಿ ಬೆಂಗಳೂರಿನಲ್ಲಿ ಈ ಕೆಫೆ ಆರಂಭಿಸಿದ್ದರು.
ಬೆಂಗಳೂರು, ಜನವರಿ 19: ಎರಡೇ ವರ್ಷದಲ್ಲಿ ಸಿಲಿಕಾನ್ ಸಿಟಿಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿರುವ ರಾಮೇಶ್ವರಂ ಕೆಫೆ (Rameshwaram Cafe) ಹೋಟೆಲ್ ಇದೀಗ ಹೈದರಾಬಾದ್ನಲ್ಲೂ ಆರಂಭವಾಗಿದೆ. ಈ ಹೋಟೆಲ್ನ ಇಡ್ಲಿ, ವಡೆ, ದೋಸೆ, ಕಾಫಿಯ ರುಚಿ ಹೈದರಾಬಾದಿಗರನ್ನು ಸೆಳೆಯುತ್ತಿದೆ. ಬೆಂಗಳೂರಿನಲ್ಲಿ ಹಾಸುಹೊಕ್ಕಾಗಿರುವ ಕೆಫೆ ಸಂಸ್ಕೃತಿ ಈಗ ಹೈದರಾಬಾದ್ನಲ್ಲಿ ಬೇರೂರುತ್ತಿದ್ದು ಅದರ ಒಂದು ಮೈಲಿಗಲ್ಲಾಗಿ ರಾಮೇಶ್ವರಂ ಕೆಫೆಯ ಒಂದು ಘಟಕ ಹೈದರಾಬಾದ್ನ ಮಾಧಾಪುರ್ನಲ್ಲಿ ಶುರುವಾಗಿದೆ.
ಸ್ಯಾಂಪಲ್ ಆಹಾರಕ್ಕೆ ಮುಗಿಬಿದ್ದ ಹೈದರಾಬಾದಿಗರು
ರಾಮೇಶ್ವರಂ ಕೆಫೆ ಹೈದರಾಬಾದ್ನಲ್ಲಿ ಉದ್ಘಾಟನೆ ಆಗುವುದಕ್ಕೂ ಮುನ್ನ ಜನವರಿ 14ರಿಂದ 16ರವರೆಗೆ ರಾಮೇಶ್ವರಂ ಕೆಫೆ ಉಚಿತ ಸ್ಯಾಂಪಲ್ ಟ್ರಯಲ್ ನಡೆಸಿತ್ತು. ನೂರಾರು ಜನರು ಹಾಗೂ ಫುಡ್ ಬ್ಲಾಗರ್ಗಳು ಕೆಫೆಗೆ ಮುಗಿಬಿದ್ದಿದ್ದರು. ತುಪ್ಪದ ಪುಡಿ ಇಡ್ಲಿ, ತುಪ್ಪದ ಮಸಾಲ ದೋಸೆ, ಅನ್ನ ಸಾಂಬಾರ್ ಇತ್ಯಾದಿ ಆಹಾರಗಳಿಗೆ ಅಲ್ಲಿನ ಜನರು ಫಿದಾ ಆಗಿದ್ದು ವಿಶೇಷ.
View this post on Instagram
ಇದನ್ನೂ ಓದಿ: Inspiring: ರೋಲೆಕ್ಸ್ ವಾಚ್ ಗೊತ್ತೆ? ಇದನ್ನು ಸ್ಥಾಪಿಸಿದವ ಕಡುಬಡವ, ನಿರ್ಗತಿಕ; ಇದು ವ್ಯವಹಾರ ಜಗತ್ತಿನ ಕೌತುಕ
2021ರಲ್ಲಿ ರಾಮೇಶ್ವರಂ ಕೆಫೆ ಬೆಂಗಳೂರಿನ ಎರಡು ಕಡೆ ಮೊದಲು ಸ್ಥಾಪನೆ ಆಯಿತು. ನೋಡನೋಡುತ್ತಿದ್ದಂತೆಯೇ ಕೆಫೆ ಬಹಳ ಜನಪ್ರಿಯವಾಗಿತ್ತು. ಜೆಪಿ ನಗರ, ಇಂದಿರಾ ನಗರ, ಬ್ರೂಕ್ಫೀಲ್ಡ್ ಮತ್ತು ರಾಜಾಜಿನಗರದಲ್ಲಿ ಹೀಗೆ ರಾಮೇಶ್ವರಂ ಕೆಫೆಯ ನಾಲ್ಕು ಬ್ರ್ಯಾಂಚ್ಗಳಿವೆ.
ಕರ್ನಾಟಕದವರು ಒಪ್ಪಿದರೆ ಎಲ್ಲರೂ ಒಪ್ಪಿದಂತೆ ಎನ್ನುವ ಮಾಲೀಕರು
ರಾಮೇಶ್ವರಂ ಕೆಫೆಯನ್ನು ಸ್ಥಾಪಿಸಿದವರು ದಿವ್ಯಾ ಮತ್ತು ರಾಘವೇಂದ್ರ ರಾವ್ ಎಂಬ ಯುವ ದಂಪತಿ. ದಿವ್ಯಾ ರಾಘವೇಂದ್ರ ರಾವ್ ಅವರು ಐಐಎಂ ಪದವೀಧರೆ, ಹಾಗು ಚಾರ್ಟರ್ಟ್ ಅಕೌಂಟೆಂಟ್ ಕೂಡ ಹೌದು. ಮನಿಕಂಟ್ರೋಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ದಿವ್ಯಾ ರಾಘವೇಂದ್ರ ಅವರು, ಉತ್ತಮ ಗುಣಮಟ್ಟದ ಆಹಾರ ಮತ್ತು ಸರಿಯಾದ ಸ್ಥಳ ಇದ್ದರೆ ಹೋಟೆಲ್ಗಳು ಯಶಸ್ವಿಯಾಗಬಹುದು ಎಂದು ಹೇಳುತ್ತಾರೆ.
‘ಕರ್ನಾಟಕದಲ್ಲಿ ನೀವು ಯಶಸ್ವಿಯಾದರೆ ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಜಯಿಸಬಹುದು. ನಾವು ಬೆಂಗಳೂರಿನವರೇ ಆದ್ದರಿಂದ ಅಲ್ಲಿಯೇ ನಮ್ಮ ಬಿಸಿನೆಸ್ ಆರಂಭಕ್ಕೆ ಸೂಕ್ತ ಸ್ಥಳವಾಗಿತ್ತು. ನಮಗೆ ಈ ನಗರದ ವಾತಾವರಣ, ಸಂಸ್ಕೃತಿ ಎಲ್ಲವೂ ಚೆನ್ನಾಗಿ ತಿಳಿದಿತ್ತು. ಆದರೆ, ಉತ್ತಮ ಆರಂಭ ಪಡೆಯುವ ನಂಬಿಕೆ ಮಾತ್ರ ಬೇಕಿತ್ತು,’ ಎಂದು ದಿವ್ಯಾ ರಾಘವೇಂದ್ರ ರಾವ್ ಹೇಳುತ್ತಾರೆ.
ನೀರ್ ದೋಸೆ at @RameshwaramCafe 🤩 Rajajinagar is now ‘Swathi Mutthina Male Haniye’ ದೋಸೆ!
Enjoy our ‘Swathi Mutthina Male Haniye’ ದೋಸೆ till 30th November.#SMMHonNovember24 See You At The Movies 🍿@divyaspandana @RajbShettyOMK @SiriRavikumar @StudiosApplebox @lighterbuddha… pic.twitter.com/7rinX9lCIJ
— KRG Studios (@KRG_Studios) November 18, 2023
ಅಂದಹಾಗೆ, ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆಯನ್ನು ದಿವ್ಯಾ ಮತ್ತು ರಾಘವೇಂದ್ರ ರಾವ್ ಆರಂಭಿಸಿದ್ದು ದಿಢೀರ್ ನಿರ್ಧಾರವಲ್ಲ. ದಶಕದ ಹಿಂದಿನಿಂದಲೂ ಅದಕ್ಕಾಗಿ ಪ್ಲಾನಿಂಗ್ ನಡೆದಿತ್ತಂತೆ. ಬಹಳ ವ್ಯವಸ್ಥಿತವಾಗಿ ತಿಂಡಿಗಳ ಆಯ್ಕೆ ಮಾಡಿದ್ದಾರೆ. ಬೆಂಗಳೂರಿನಲ್ಲಿರುವ ಎಲ್ಲಾ ನಾಲ್ಕು ರಾಮೇಶ್ವರಂ ಕೆಫೆ ಹೋಟೆಲ್ಗಳಲ್ಲಿ ನಿತ್ಯವೂ ಮೂರರಿಂದ ನಾಲ್ಕು ಸಾವಿರ ಗ್ರಾಹಕರು ಬರುತ್ತಾರಂತೆ. ಈಗ ಹೈದರಾಬಾದ್ನಲ್ಲೂ ಈ ಫಾಸ್ಟ್ಫುಡ್ ಹೋಟೆಲ್ ಯಶಸ್ವಿಯಾಗುತ್ತದಾ ನೋಡಬೇಕು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:57 pm, Fri, 19 January 24