Pepsico India CEO: ಪೆಪ್ಸಿಕೋ ಇಂಡಿಯಾ: ಸಿಇಒ ಸ್ಥಾನಪಲ್ಲಟ; ಅಹ್ಮದ್ ಶೇಖ್ ಜಾಗಕ್ಕೆ ಜಾಗೃತ್ ಕೊಟೇಚ; ಮಾರ್ಚ್ನಲ್ಲಿ ಅಧಿಕಾರ
Jagrut Kotecha: ಪೆಪ್ಸಿಕೋ ಇಂಡಿಯಾದ ಹಾಲಿ ಸಿಇಒ ಅಹ್ಮದ್ ಎಲ್ ಶೇಖ್ ಅವರು ಮಿಡಲ್ ಈಸ್ಟ್ ಬಿಸಿನೆಸ್ ಯೂನಿಟ್ನ ಸಿಇಒ ಸ್ಥಾನಕ್ಕೆ ವರ್ಗವಾಗಿದ್ದಾರೆ. ಮಿಡಲ್ ಈಸ್ಟ್, ಆಫ್ರಿಕಾ ಘಟಕದ ಪೆಪ್ಸಿಕೋದ ಸಿಸಿಒ ಆಗಿದ್ದ ಜಾಗೃತ್ ಕೊಟೇಚ ಪೆಪ್ಸಿಕೋ ಇಂಡಿಯಾದ ಸಿಇಒ ಆಗಿದ್ದಾರೆ. ಮಾರ್ಚ್ ತಿಂಗಳಲ್ಲಿ ಜಾಗೃತ್ ಅವರು ಸಿಇಒ ಆಗಿ ಜವಾಬ್ದಾರಿ ಆರಂಭಿಸಲಿದ್ದಾರೆ.
ನವದೆಹಲಿ, ಜನವರಿ 19: ಪೆಪ್ಸಿಕೋ ಇಂಡಿಯಾದಲ್ಲಿ (Pepsico India) ನಾಯಕತ್ವ ಬದಲಾವಣೆ ಆಗಿದೆ. ಸಿಇಒ ಆಗಿದ್ದ ಅಹ್ಮದ್ ಎಲ್ ಶೇಖ್ ಅವರ ಸ್ಥಾನವನ್ನು ಜಾಗೃತ್ ಕೊಟೇಚ (Jagrut Kotecha) ತುಂಬಿದ್ದಾರೆ. ಪೆಪ್ಸಿಕೋ ಇಂಡಿಯಾದ ನೂತನ ಸಿಇಒ ಆಗಿದ್ದಾರೆ. ಅಹ್ಮದ್ ಎಲ್ ಶೇಖ್ ಅವರು ಪೆಪ್ಸಿಕೋ ಇಂಡಿಯಾ ವಿಭಾಗದಿಂದ ಮಿಡಲ್ ಈಸ್ಟ್ ಬಿಸಿನೆಸ್ ಯೂನಿಟ್ಗೆ ವರ್ಗವಾಗಿದ್ದು ಅಲ್ಲಿ ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಜಾಗೃತ್ ಕೊಟೇಚ ಅವರು ಪೆಪ್ಸಿಕೋ ಕಂಪನಿಯಲ್ಲಿ ಮೂರು ದಶಕಗಳಿಂದಲೂ ಇದ್ದಾರೆ. ಸದ್ಯ ಅವರು ಆಫ್ರಿಕಾ, ಮಿಡಲ್ ಈಸ್ಟ್ ಮತ್ತು ಸೌತ್ ಏಷ್ಯಾ ವಿಭಾಗಗಳಿಗೆ ಚೀಫ್ ಕಮರ್ಷಿಯಲ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈಗ ಸಿಇಒ ಆಗಿ ಬಡ್ತಿ ಪಡೆದಿದ್ದಾರೆ. ಮಾರ್ಚ್ ತಿಂಗಳಲ್ಲಿ ಅವರು ಪೆಪ್ಸಿಕೋ ಇಂಡಿಯಾದ ಸಿಇಒ ಆಗಿ ಕೆಲಸ ಆರಂಭಿಸಬಹುದು.
ಇದನ್ನೂ ಓದಿ: Inspiring: ರೋಲೆಕ್ಸ್ ವಾಚ್ ಗೊತ್ತೆ? ಇದನ್ನು ಸ್ಥಾಪಿಸಿದವ ಕಡುಬಡವ, ನಿರ್ಗತಿಕ; ಇದು ವ್ಯವಹಾರ ಜಗತ್ತಿನ ಕೌತುಕ
‘ಕಳೆದ 30 ವರ್ಷಗಳಿಂದ ಪೆಪ್ಸಿಕೋ ಫ್ಯಾಮಿಲಿಯ ಭಾಗವಾಗಿದ್ದೇನೆ. ಉದ್ಯಮದಲ್ಲಿ ಶ್ರೇಷ್ಠತೆ ಸಾಧಿಸಲು ಪೆಪ್ಸಿಕೋ ಇಂಡಿಯಾ ತೋರಿದ ಬದ್ಧತೆಯನ್ನು ಸಮೀಪದಿಂದ ಗಮನಿಸಿದ್ದೇನೆ. ಕಂಪನಿಯ ಈ ಬದ್ಧತೆಯು ಭಾರತೀಯ ಮಾರುಕಟ್ಟೆಯಲ್ಲಿ ನಮ್ಮ ಬೆಳವಣಿಗೆಗೆ ಉತ್ತೇಜಿಸಿದ್ದಲ್ಲದೇ, ಈ ಉದ್ಯಮದಲ್ಲಿ ನಾವು ಮುಂಚೂಣಿಯಲ್ಲಿ ಮುಂದುವರಿಯುವುದನ್ನು ಖಾತ್ರಿಪಡಿಸಿದೆ,’ ಎಂದು ಜಾಗೃತ್ ಹೇಳಿಕೆ ನೀಡಿದ್ದಾರೆ.
ಪೆಪ್ಸಿಕೋ ಇಂಡಿಯಾದ ಬೆಳವಣಿಗೆಯಲ್ಲಿ ಹಾಲಿ ಸಿಇಒ ಅಹ್ಮದ್ ಎಲ್ ಶೇಖ್ ಅವರ ಮಹತ್ವದ ಪಾತ್ರ ಇದೆ ಎಂದು ತಮ್ಮ ಸಹೋದ್ಯೋಗಿ ಬಗ್ಗೆ ಜಾಗೃತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Budget 2024: ಇನ್ಕಮ್ ಟ್ಯಾಕ್ಸ್ ವಿಚಾರದಲ್ಲಿ ಬಜೆಟ್ನಲ್ಲಿ ಏನು ಬದಲಾವಣೆ ನಿರೀಕ್ಷಿಸಬಹುದು?
ದಕ್ಷಿಣ ಏಷ್ಯಾ, ಆಫ್ರಿಕಾ, ಮಿಡಲ್ ಈಸ್ಟ್ ವಿಭಾಗದ ಪೆಪ್ಸಿಕೋದ ಸಿಇಒ ಯೂಜೀನ್ ವಿಲೆಮ್ಸನ್ ಮಾತನಾಡಿ, ‘ಕಳೆದ ಆರು ವರ್ಷದಲ್ಲಿ ಅಹ್ಮದ್ ಅವರು ಹಲವು ಸವಾಲುಗಳ ನಡುವೆಯೂ ನಮ್ಮ ವ್ಯವಹಾರ ವೃದ್ಧಿಸಲು ಮತ್ತು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಲು ಸಫಲರಾಗಿದ್ದಾರೆ. ಜಾಗೃತ್ ಅವರನ್ನು ಭಾರತ ವಿಭಾಗದ ಎಕ್ಸಿಕ್ಯೂಟಿವ್ ತಂಡಕ್ಕೆ ಆಹ್ವಾನಿಸಲು ಇಷ್ಟೇ ಉತ್ಸುಕನಾಗಿದ್ದೇನೆ. ಅವರ ನಾಯಕತ್ವದಲ್ಲಿ ನಾವು ಹೊಸ ಎತ್ತರಕ್ಕೆ ಏರುತ್ತೇವೆಂಬ ವಿಶ್ವಾಸ ಇದೆ,’ ಎಂದು ಯೂಜೀನ್ ವಿಲೆಮ್ಸನ್ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ