RBI: ಗಮನಿಸಿ, ಜನವರಿ 22ರಂದು 2,000 ರೂ ನೋಟುಗಳ ವಿನಿಮಯ ಇರುವುದಿಲ್ಲ; ಆರ್​ಬಿಐ ಸ್ಪಷ್ಟನೆ

Rs 2000 Notes Exchange Facility on Jan 22nd: ಜನವರಿ 22ರಂದು ಆರ್​ಬಿಐನ ಇಷ್ಯೂ ಕಚೇರಿಗಳಲ್ಲಿ 2,000 ರೂ ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಅವಕಾಶ ಇರುವುದಿಲ್ಲ. ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಇರುವುದರಿಂದ ಆರ್​ಬಿಐ ಸೇರಿದಂತೆ ಕೇಂದ್ರ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ಇದೆ. 2,000 ರೂ ನೋಟು ಹೊಂದಿರುವವರು ಅಂಚೆ ಮೂಲಕ ನೋಟುಗಳನ್ನು ಆರ್​ಬಿಐ ಕಚೇರಿಗೆ ಕಳುಹಿಸಿ ತಮ್ಮ ಖಾತೆಗೆ ಡೆಪಾಸಿಟ್ ಮಾಡಬಹುದು.

RBI: ಗಮನಿಸಿ, ಜನವರಿ 22ರಂದು 2,000 ರೂ ನೋಟುಗಳ ವಿನಿಮಯ ಇರುವುದಿಲ್ಲ; ಆರ್​ಬಿಐ ಸ್ಪಷ್ಟನೆ
2000 ರೂ ನೋಟು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 19, 2024 | 6:16 PM

ನವದೆಹಲಿ, ಜನವರಿ 19: ಅಯೋಧ್ಯೆಯ ರಾಮ ಮಂದಿರದಲ್ಲಿ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಕಾರ್ಯ (Ram Mandir Consecration ceremony) ನಡೆಯಲಿದ್ದು ಅಂದು ಬಹಳಷ್ಟು ಕಡೆ ಪೂರ್ಣ ರಜೆ, ಅರೆ ರಜೆ, ಧಾರ್ಮಿಕ ಆಚರಣೆ ಇತ್ಯಾದಿಗಳಿವೆ. ಉತ್ತರಪ್ರದೇಶ, ಗೋವಾ, ಛತ್ತೀಸ್​ಗಡ, ಹರ್ಯಾಣ ರಾಜ್ಯಗಳಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿದೆ. ಎಲ್ಲಾ ರೈಲ್ವೆ ನಿಲ್ದಾಣಗಳಲ್ಲೂ ಕಾರ್ಯಕ್ರಮದ ನೇರ ಪ್ರಸಾರ ಇರುತ್ತದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಮಧ್ಯಾಹ್ನ 2:30ರವರೆಗೂ ರಜೆ ಇರುತ್ತದೆ. ಅಂತೆಯೇ ಬ್ಯಾಂಕುಗಳಿಗೂ ಅರ್ಧ ದಿನ ರಜೆ ಇರುತ್ತದೆ. ಹೀಗಾಗಿ, ಅಂದು 2,000 ರೂ ನೋಟುಗಳ ವಿನಿಮಯಕ್ಕೆ ಅವಕಾಶ ಇರುವುದಿಲ್ಲ. ಆರ್​ಬಿಐ ಈ ವಿಷಯವನ್ನು ಇಂದು ಶುಕ್ರವಾರ (ಜ. 19) ಸ್ಪಷ್ಟಪಡಿಸಿದೆ.

ಎರಡು ಸಾವಿರ ರೂ ನೋಟು ವಿನಿಮಯದ ಸೌಲಭ್ಯ ಜನವರಿ 22ರಂದು ಇರುವುದಿಲ್ಲ. ಜನವರಿ 23ರಂದು ಈ ಸೌಲಭ್ಯ ಮುಂದುವರಿಯುತ್ತದೆ ಎಂದು ಆರ್​ಬಿಐ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Rameshwaram Cafe: ಹೈದರಾಬಾದ್​ನಲ್ಲಿ ಬೆಂಗಳೂರಿನ ರಾಮೇಶ್ವರಂ ಕೆಫೆ ಹವಾ; ಸ್ಯಾಂಪಲ್ ತಿನಿಸಿಗೆ ಉಘೇ ಎಂದ ಜನರು; ಇಂದು ಅಧಿಕೃತ ಆರಂಭ

‘ಭಾರತ ಸರ್ಕಾರ ಅರ್ಧ ದಿನ ರಜೆ ಘೋಷಿಸಿರುವುದರಿಂದ ಆರ್​ಬಿಐನ ಯಾವುದೆ 19 ಇಷ್ಯೂ ಆಫೀಸ್​ಗಳಲ್ಲಿ 2,000 ರೂ ನೋಟು ವಿನಿಮಯ ಇರುವುದಿಲ್ಲ,’ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.

ಆರ್​ಬಿಐ 2023ರ ಮೇ 19ರಂದು 2,000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಘೋಷಣೆ ಮಾಡಿತು. ಮೊದಲಿಗೆ ಎಲ್ಲಾ ಬ್ಯಾಂಕುಗಳಲ್ಲೂ ನೋಟು ವಿನಿಮಯ ಮಾಡಲು ಅಥವಾ ಠೇವಣಿ ಇಡಲು ಅವಕಾಶ ಕೊಟ್ಟಿತ್ತು. ಇದೀಗ ಆರ್​ಬಿಐನ 19 ಇಷ್ಯೂ ಆಫೀಸ್​ಗಳಲ್ಲಿ ಮಾತ್ರವೇ ನೋಟು ವಿನಿಮಯಕ್ಕೆ ಅವಕಾಶ ಇದೆ.

ಇದನ್ನೂ ಓದಿ: TCS: ಯೂರೋಪ್​ನಲ್ಲಿ ಉದ್ಯೋಗಿಗಳು ಮೆಚ್ಚುವ ಕಂಪನಿಗಳಲ್ಲಿ ಟಿಸಿಎಸ್​ಗೆ ಮೊದಲ ಸ್ಥಾನ

ಬೆಂಗಳೂರನ ನೃಪತುಂಗ ರಸ್ತೆಯಲ್ಲಿರುವ ಆರ್​ಬಿಐ ಕಚೇರಿಯೂ ಅದರಲ್ಲಿ ಒಂದು. ಈ 19 ಕಚೇರಿಗಳಲ್ಲಿ ಯಾವುದರಲ್ಲಿಯಾದರೂ ನೀವು ಹೋಗಿ ನೋಟು ವಿನಿಮಯ ಮಾಡಿಕೊಳ್ಳಬಹುದು. ಅಥವಾ ಈ ಕಚೇರಿಗಳ ವಿಳಾಸಕ್ಕೆ ಅಂಚೆ ಮೂಲಕ ನೋಟನ್ನು ಕಳುಹಿಸಿ ನಿಮ್ಮ ಬ್ಯಾಂಕ್ ಖಾತೆಗೆ ಡೆಪಾಸಿಟ್ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ