AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯೋಧ್ಯೆ ರಾಮ ಮಂದಿರ ‘ಪ್ರಸಾದ’ ಎಂದು ಸಿಹಿತಿಂಡಿ ಮಾರಾಟ ಮಾಡಿದ್ದಕ್ಕೆ ಅಮೆಜಾನ್‌ಗೆ ಕೇಂದ್ರ ಸರ್ಕಾರ ನೋಟೀಸ್

ಅಯೋಧ್ಯೆಯ ರಾಮಮಂದಿರದ ಪ್ರಸಾದ ಎಂದು ಸಿಹಿ ತಿಂಡಿ ಮಾರಾಟ ಮಾಡಿದ್ದಕ್ಕೆ CCPA ನೀಡಿದ ನೋಟಿಸ್‌ಗೆ ಪ್ರತಿಕ್ರಿಯಿಸಲು ಅಮೆಜಾನ್​​ಗೆ ಏಳು ದಿನಗಳ ಕಾಲಾವಕಾಶ ನೀಡಲಾಗಿದೆ, ವಿಫಲವಾದರೆ ಗ್ರಾಹಕ ಸಂರಕ್ಷಣಾ ಕಾಯ್ದೆ, 2019 ರ ನಿಬಂಧನೆಗಳ ಅಡಿಯಲ್ಲಿ ಕಂಪನಿಯ ವಿರುದ್ಧ ಅಗತ್ಯ ಕ್ರಮಗಳನ್ನು ಪ್ರಾರಂಭಿಸಲಾಗುತ್ತದೆ.

ಅಯೋಧ್ಯೆ ರಾಮ ಮಂದಿರ 'ಪ್ರಸಾದ' ಎಂದು ಸಿಹಿತಿಂಡಿ ಮಾರಾಟ ಮಾಡಿದ್ದಕ್ಕೆ ಅಮೆಜಾನ್‌ಗೆ ಕೇಂದ್ರ ಸರ್ಕಾರ ನೋಟೀಸ್
ಅಮೆಜಾನ್
ರಶ್ಮಿ ಕಲ್ಲಕಟ್ಟ
|

Updated on: Jan 20, 2024 | 1:44 PM

Share

ದೆಹಲಿ ಜನವರಿ 20: ‘ಶ್ರೀರಾಮ ಮಂದಿರ ಅಯೋಧ್ಯಾ ಪ್ರಸಾದ್’ ಹೆಸರಿನಲ್ಲಿ ಸಿಹಿತಿಂಡಿಗಳ ಮಾರಾಟಕ್ಕೆ ಸಂಬಂಧಿಸಿದ “ಮೋಸದ ವ್ಯಾಪಾರ ಅಭ್ಯಾಸ” ದಲ್ಲಿ ತೊಡಗಿದೆ ಎಂದು ಆರೋಪಿಸಿ ಕೇಂದ್ರ ಸರ್ಕಾರ ಇ-ಕಾಮರ್ಸ್ ದೈತ್ಯ ಅಮೆಜಾನ್‌ಗೆ (Amazon) ನೋಟಿಸ್ ನೀಡಿದೆ. ಅಯೋಧ್ಯೆಯಲ್ಲಿ (Ayodhya) ಇನ್ನೂ ಉದ್ಘಾಟನೆಗೊಳ್ಳದ ರಾಮ ಮಂದಿರದ “ಪ್ರಸಾದ” ಎಂದು ಹೇಳಿ ಸಿಹಿತಿಂಡಿಗಳನ್ನು ಮಾರಾಟ ಮಾಡುವ ಮೂಲಕ ಅಮೆಜಾನ್ ಗ್ರಾಹಕರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (CAIT) ಸಲ್ಲಿಸಿದ ದೂರಿಗೆ ಪ್ರತಿಕ್ರಿಯೆಯಾಗಿ ಈ ಕ್ರಮ ಬಂದಿದೆ.

ಇಂತಹ ಅಭ್ಯಾಸಗಳು ಉತ್ಪನ್ನಗಳ ನಿಜವಾದ ಗುಣಲಕ್ಷಣಗಳ ಬಗ್ಗೆ ಗ್ರಾಹಕರನ್ನು ತಪ್ಪುದಾರಿಗೆಳೆಯುತ್ತವೆ, ತಪ್ಪಾದ ಪ್ರಾತಿನಿಧ್ಯಗಳ ಆಧಾರದ ಮೇಲೆ ಅವರ ಖರೀದಿ ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತವೆ ಎಂದು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಹೇಳಿದೆ.

ಆನ್‌ಲೈನ್‌ನಲ್ಲಿ ಆಹಾರ ಉತ್ಪನ್ನಗಳ ಮಾರಾಟವನ್ನು ಸಕ್ರಿಯಗೊಳಿಸುವುದರಿಂದ ಉತ್ಪನ್ನದ ನಿಜವಾದ ಗುಣಲಕ್ಷಣಗಳ ಬಗ್ಗೆ ಗ್ರಾಹಕರನ್ನು ತಪ್ಪುದಾರಿಗೆಳೆಯುತ್ತದೆ. ಅಂತಹ ಅಭ್ಯಾಸವು ಗ್ರಾಹಕರ ಮೇಲೆ ಪ್ರಭಾವ ಬೀರುತ್ತದೆ.ಉತ್ಪನ್ನದ ನಿಖರವಾದ ಗುಣಲಕ್ಷಣಗಳನ್ನು ಉಲ್ಲೇಖಿಸಿದ್ದರೆ ಒಳ್ಳೇದಿತ್ತು ಎಂದು ಸಿಸಿಪಿಎ ಪ್ರಕಟಣೆಯಲ್ಲಿ ತಿಳಿಸಿದೆ

ಅಮೆಜಾನ್‌ನ ಪ್ಲಾಟ್‌ಫಾರ್ಮ್‌ನಲ್ಲಿ ಪಟ್ಟಿ ಮಾಡಲಾದ ನಿರ್ದಿಷ್ಟ ಉತ್ಪನ್ನಗಳಲ್ಲಿ ‘ಶ್ರೀ ರಾಮಮಂದಿರ ಅಯೋಧ್ಯಾ ಪ್ರಸಾದ್ – ರಘುಪತಿ ತುಪ್ಪದ ಲಡ್ಡು, ಅಯೋಧ್ಯಾ ರಾಮಮಂದಿರ ಅಯೋಧ್ಯಾ ಪ್ರಸಾದ್, ಖೋಯಾ ಖೋಬಿ ಲಡ್ಡು, ರಾಮಮಂದಿರ ಅಯೋಧ್ಯಾ ಪ್ರಸಾದ್ – ದೇಸಿ ಹಸುವಿನ ಹಾಲಿನ ಪೇಡಾ’ ಸೇರಿವೆ.

ಇದನ್ನೂ ಓದಿWatch: ಅಯೋಧ್ಯೆ ರಾಮಮಂದಿರ ಹೇಗಿದೆ?; ಇಲ್ಲಿದೆ ರಾಮನ ಭವ್ಯ ದೇಗುಲದ ಒಂದು ನೋಟ

CCPA ನೀಡಿದ ನೋಟಿಸ್‌ಗೆ ಪ್ರತಿಕ್ರಿಯಿಸಲು ಅಮೆಜಾನ್​​ಗೆ  ಏಳು ದಿನಗಳ ಕಾಲಾವಕಾಶ ನೀಡಲಾಗಿದೆ, ವಿಫಲವಾದರೆ ಗ್ರಾಹಕ ಸಂರಕ್ಷಣಾ ಕಾಯ್ದೆ, 2019 ರ ನಿಬಂಧನೆಗಳ ಅಡಿಯಲ್ಲಿ ಕಂಪನಿಯ ವಿರುದ್ಧ ಅಗತ್ಯ ಕ್ರಮಗಳನ್ನು ಪ್ರಾರಂಭಿಸಲಾಗುತ್ತದೆ.

ಪ್ರತಿ ದಿನ ಮುಂಜಾನೆ 1 ಗಂಟೆ ವಿಶೇಷ ಮಂತ್ರ ಪಠಿಸುವ ಪ್ರಧಾನಿ ಮೋದಿ

ಅಯೋಧ್ಯೆಯ ರಾಮಮಂದಿರದಲ್ಲಿ  ಜನವರಿ 22 ರಂದು ‘ಪ್ರಾಣ ಪ್ರತಿಷ್ಠೆ’ ಸಮಾರಂಭಕ್ಕೆ ಮುನ್ನ ಪ್ರಧಾನಿ ನರೇಂದ್ರ ಮೋದಿ  ಅವರು 11 ದಿನಗಳ ‘ಅನುಷ್ಠಾನ’ದ ಭಾಗವಾಗಿ ಪ್ರತಿ ದಿನ ಬೆಳಗ್ಗೆ ಒಂದು ಗಂಟೆ ಕಾಲ ವಿಶೇಷ ಮಂತ್ರವನ್ನು ಪಠಿಸುತ್ತಿದ್ದಾರೆ. ಜನವರಿ 12 ರಂದು ವ್ರತಾಚರಣೆ ಆರಂಭಿಸಿರುವ ಮೋದಿ, ಜೀವನದಲ್ಲಿ ಹಿಂದೆಂದೂ ಅನುಭವಿಸದಂಥ ವಿಶೇಷ ಅನುಭೂತಿ ಹೊಂದಿರುವುದಾಗಿ ತಿಳಿಸಿದ್ದಾರೆ. ಪ್ರಾಣ ಪ್ರತಿಷ್ಠೆ ಸಮಾರಂಭದಲ್ಲಿ ಎಲ್ಲಾ ಭಾರತೀಯರನ್ನು ಪ್ರತಿನಿಧಿಸಲು ದೇವರು ನನ್ನನ್ನು ಸಾಧನವಾಗಿ ಆಯ್ಕೆ ಮಾಡಿದ್ದಾರೆ ಮತ್ತು ಇದನ್ನು ಗಮನದಲ್ಲಿಟ್ಟುಕೊಂಡು ಅವರು 11 ದಿನಗಳ ಧಾರ್ಮಿಕ ಅನುಷ್ಠಾನ ಕೈಗೊಳ್ಳುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ. ಧಾರ್ಮಿಕ ಅನುಷ್ಠಾನದ ಭಾಗವಾಗಿ ಮೋದಿ ಅವರು ಪ್ರತಿ ದಿನ ಒಂದು ಗಂಟೆ ಕಾಲ ಮಂತ್ರ ಪಠಣ ಮಾಡುತ್ತಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ