ಶ್ರೀ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಪ್ರಧಾನಿ ಮೋದಿ ಭೇಟಿ: ತಮಿಳುನಾಡಿನ ಈ ಪುರಾತನ ದೇಗುಲಕ್ಕಿದೆ ಶ್ರೀರಾಮನ ನಂಟು

ಹಿಂದೂ ಧರ್ಮದ ಎರಡು ಪ್ರಮುಖ ಮಹಾಕಾವ್ಯಗಳಲ್ಲಿ ರಾಮಾಯಣವೂ ಒಂದು. ಭಾರತೀಯ ಭಾಷೆಗಳಲ್ಲಿ ರಾಮಾಯಣದ ಹಲವು ಆವೃತ್ತಿಗಳಿವೆ. ಶ್ರೀ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು ಕಂಬ ರಾಮಾಯಣದ ಪದ್ಯಗಳನ್ನು ಆಲಿಸಿದ್ದಾರೆ. ಕಂಬ ರಾಮಾಯಣಂ ಎಂದೂ ಕರೆಯಲ್ಪಡುವ ರಾಮಾವತಾರಂ ತಮಿಳು ಮಹಾಕಾವ್ಯವಾಗಿದ್ದು, ಇದನ್ನು 12 ನೇ ಶತಮಾನದಲ್ಲಿ ತಮಿಳು ಕವಿ ಕಂಬನ್ ಬರೆದಿದ್ದಾರೆ

ಶ್ರೀ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಪ್ರಧಾನಿ ಮೋದಿ ಭೇಟಿ: ತಮಿಳುನಾಡಿನ ಈ ಪುರಾತನ ದೇಗುಲಕ್ಕಿದೆ ಶ್ರೀರಾಮನ ನಂಟು
ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on:Jan 20, 2024 | 3:00 PM

ತಿರುಚಿರಾಪಳ್ಳಿ ಜನವರಿ 20: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶನಿವಾರ ತಮಿಳುನಾಡಿನ (Tamil Nadu) ತಿರುಚಿರಾಪಳ್ಳಿಯ ಶ್ರೀರಂಗಂನಲ್ಲಿರುವ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ (Sri Ranganatha Swamy temple) ಪ್ರಾರ್ಥನೆ ಸಲ್ಲಿಸಿದರು. ಅಂದಹಾಗೆ ಪ್ರಧಾನಿಯವರ ಈ ದೇವಾಲಯದ ಭೇಟಿ ಧಾರ್ಮಿಕ ಮಹತ್ವವನ್ನು ಹೊಂದಿದೆ. ಈ ದೇವಾಲಯವು ಭಗವಾನ್ ರಾಮನೊಂದಿಗೆ ಸಂಪರ್ಕವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಶ್ರೀರಂಗದಲ್ಲಿ ಪೂಜಿಸಲ್ಪಡುವ ದೇವರು ವಿಷ್ಣುವಿನ ರೂಪವಾದ ಶ್ರೀ ರಂಗನಾಥ ಸ್ವಾಮಿ. ಶ್ರೀರಂಗಂನಲ್ಲಿರುವ ವಿಗ್ರಹವನ್ನು ಮೂಲತಃ ಭಗವಾನ್ ರಾಮ ಮತ್ತು ಅವನ ಪೂರ್ವಜರು ಪೂಜಿಸುತ್ತಿದ್ದರು ಎಂದು ನಂಬಲಾಗಿದೆ. ಇದನ್ನು ಬ್ರಹ್ಮನು ರಾಮನ ಪೂರ್ವಜರಿಗೆ ಕೊಟ್ಟನು ಎಂಬ ನಂಬಿಕೆ ಇದೆ.

ತಮಿಳುನಾಡಿನ ಈ ಪುರಾತನ ದೇಗುಲಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು ಧೋತಿ ಮತ್ತು ಶಾಲು ಧರಿಸಿದ್ದರು. ಅಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ದೇವಸ್ಥಾನದ ಆನೆಗೆ ಆಹಾರ ನೀಡಿ ಆಶೀರ್ವಾದ ಪಡೆದರು.

ದ್ವೀಪವೊಂದರಲ್ಲಿ ನೆಲೆಸಿರುವ, ಕಾವೇರಿ ಮತ್ತು ಕೊಳ್ಳಿಡಂ ನದಿಗಳ ಸಂಗಮದಲ್ಲಿರುವ ಶ್ರೀರಂಗಂ ದೇವಾಲಯವು ತಮಿಳುನಾಡಿನ ಪುರಾತನ ವೈಷ್ಣವ ದೇವಾಲಯವಾಗಿದೆ. ಇದು ಸಂಗಮ್ ಯುಗದ ಹಿಂದಿನದು. ಈ ದೇವಾಲಯವನ್ನು ‘ಬೂಲೋಗ ವೈಕುಂಠಂ’ ಅಥವಾ ‘ಭೂಮಿಯ ಮೇಲಿನ ವೈಕುಂಠಂ’ ಎಂದೂ ಕರೆಯಲಾಗುತ್ತದೆ. ವೈಕುಂಠ ವಿಷ್ಣುವಿನ ಶಾಶ್ವತ ನಿವಾಸವಾಗಿದೆ.

ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ಮತ್ತು ರಾಮನ ನಂಟು

ಶ್ರೀರಂಗ ಮಹಾತ್ಮೀಯಂ ಪ್ರಕಾರ, ಅದರ ಮೂಲದ ಬಗ್ಗೆ ದೇವಾಲಯದ ಪುರಾಣಗಳ ಸಂಕಲನದ ಪ್ರಕಾರ, ಸಮುದ್ರ ಮಂಥನ ಸಮಯದಲ್ಲಿ ಬ್ರಹ್ಮನು ತಪಸ್ಸು ಮಾಡುತ್ತಿದ್ದಾಗ, ಭಗವಾನ್ ವಿಷ್ಣುವು ಸಮುದ್ರದಿಂದ ರಂಗನಾಥಸ್ವಾಮಿ ದೇವತೆಯಾಗಿ ಎದ್ದು ಶ್ರೀರಂಗ ವಿಮಾನವನ್ನು ಪ್ರದರ್ಶಿಸಿದನು. ಸಮುದ್ರದಿಂದ ಮೇಲೆದ್ದು ಬಂದ ಶ್ರೀರಂಗ ವಿಮಾನವು ಯುಗಯುಗಾಂತರಗಳವರೆಗೆ ಸತ್ಯಲೋಕದಲ್ಲಿ ಉಳಿಯಿತು. ಇದನ್ನು ಸೂರ್ಯ ವಂಶ ಅಥವಾ ಸೌರ ರಾಜವಂಶದ ರಾಜನಾದ ಇಕ್ಷ್ವಾಕು ಅಯೋಧ್ಯೆಗೆ ತಂದಿದ್ದ. ಈ ಅಯೋಧ್ಯೆಯಲ್ಲೇ ಭಗವಾನ್ ರಾಮನು ಅನೇಕ ವರ್ಷಗಳ ನಂತರ ಹುಟ್ಟಿದನು.

ಸಮುದ್ರದಿಂದ ಉದಯಿಸಿದ ಶ್ರೀರಂಗ ವಿಮಾನವು ಯುಗಗಳ ಮೂಲಕ ಮತ್ತು ಅಂತರಿಕ್ಷಗಳನ್ನು ದಾಟಿದೆ. ಶ್ರೀರಾಮ, ರಾಕ್ಷಸ ರಾಜ ರಾವಣನನ್ನು ಕೊಂದ ನಂತರ, ರಾಮಾಯಣದ ಮಹಾಕಾವ್ಯದ ಯುದ್ಧದ ಸಮಯದಲ್ಲಿ ಲಂಕಾದ (ಇಂದಿನ ಶ್ರೀಲಂಕಾ) ರಾಜ ವಿಭೀಷಣನಿಗೆ ರಾಮನು ವಿಮಾನವನ್ನು (ವಿಗ್ರಹ) ಉಡುಗೊರೆಯಾಗಿ ನೀಡಿದನು. ಶ್ರೀಲಂಕಾಕ್ಕೆ ಹೋಗುವಾಗ, ವಿಭೀಷಣ ತಮಿಳುನಾಡಿನ ತಿರುಚ್ಚಿ ಮೂಲಕ ಹಾದುಹೋದಾಗ, ಶ್ರೀರಂಗಂ ವಿಮಾನವು ಅಲ್ಲಿ ಸ್ಥಿರವಾಯಿತು. ವಿಭೀಷಣನು ವಿಮಾನವನ್ನು ತಿರುಚ್ಚಿಯ ಧರ್ಮವರ್ಮನ ಸ್ಥಳೀಯ ರಾಜನಿಗೆ ಒಪ್ಪಿಸಿ ಲಂಕೆಗೆ ಹಿಂದಿರುಗಿದನು. ಧರ್ಮ ವರ್ಮನು ರಂಗನಾಥ ಸ್ವಾಮಿ ದೇವಾಲಯದಲ್ಲಿ ವಿಮಾನವನ್ನು ಪ್ರತಿಷ್ಠಾಪಿಸಿ ವಿಭೀಷಣನ ಕೋರಿಕೆಯ ಮೇರೆಗೆ ದೇವರನ್ನು ಲಂಕೆಯ ಕಡೆಗೆ ಇರಿಸಿದನು.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ಉದ್ಘಾಟನೆ: ಪ್ರತಿ ದಿನ ಮುಂಜಾನೆ 1 ಗಂಟೆ ವಿಶೇಷ ಮಂತ್ರ ಪಠಿಸುವ ಪ್ರಧಾನಿ ಮೋದಿ

ಶ್ರೀರಂಗಂ ಮತ್ತು ಕಂಬ ಸಂಪರ್ಕ

ಹಿಂದೂ ಧರ್ಮದ ಎರಡು ಪ್ರಮುಖ ಮಹಾಕಾವ್ಯಗಳಲ್ಲಿ ರಾಮಾಯಣವೂ ಒಂದು. ಭಾರತೀಯ ಭಾಷೆಗಳಲ್ಲಿ ರಾಮಾಯಣದ ಹಲವು ಆವೃತ್ತಿಗಳಿವೆ. ಶ್ರೀ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು ಕಂಬ ರಾಮಾಯಣದ ಪದ್ಯಗಳನ್ನು ಆಲಿಸಿದ್ದಾರೆ. ಕಂಬ ರಾಮಾಯಣಂ ಎಂದೂ ಕರೆಯಲ್ಪಡುವ ರಾಮಾವತಾರಂ ತಮಿಳು ಮಹಾಕಾವ್ಯವಾಗಿದ್ದು, ಇದನ್ನು 12 ನೇ ಶತಮಾನದಲ್ಲಿ ತಮಿಳು ಕವಿ ಕಂಬನ್ ಬರೆದಿದ್ದಾರೆ. ವಾಲ್ಮೀಕಿಯ ರಾಮಾಯಣವನ್ನು ಆಧರಿಸಿದ ಕಥೆಯು ಅಯೋಧ್ಯೆಯ ರಾಜ ರಾಮನ ದಂತಕಥೆಯನ್ನು ವಿವರಿಸುತ್ತದೆ.

ಕಂಬನ್ ತನ್ನ ರಾಮಾಯಣದ ಆವೃತ್ತಿಯನ್ನು ಸಾರ್ವಜನಿಕವಾಗಿ ಮೊದಲು ಪ್ರಸ್ತುತಪಡಿಸಿದ್ದು ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ. ಇಂದಿಗೂ ಆ ಸಂದರ್ಭವನ್ನು ಸ್ಮರಿಸಲು ದೇವಸ್ಥಾನದಲ್ಲಿ ಕಂಬ ರಾಮಾಯಣ ಮಂಟಪ ಎಂಬ ವೇದಿಕೆ ಇದೆ. ಇಂದು, ಕಂಬನ್ ಮೊದಲು ತಮಿಳು ರಾಮಾಯಣವನ್ನು ಪಠಿಸಿದ ಸ್ಥಳದಲ್ಲಿಯೇ ಪ್ರಧಾನಿ ಮೋದಿ ಕುಳಿತು, ತಮಿಳು, ತಮಿಳುನಾಡು ಮತ್ತು ಭಗವಾನ್ ರಾಮನ ನಡುವಿನ ಆಳವಾದ ಸಂಪರ್ಕವನ್ನು ಬಲಪಡಿಸಿದರು.

ರಾಮಮಂದಿರಕ್ಕೆ ಕೊಂಡೊಯ್ಯಲು ಉಡುಗೊರೆ

ಶನಿವಾರ ಶ್ರೀ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಗೆ ಅಲ್ಲಿನ ಅರ್ಚಕರು ಅಯೋಧ್ಯೆಯ ರಾಮಮಂದಿರಕ್ಕೆ ಕೊಂಡೊಯ್ಯಲು ಉಡುಗೊರೆಯೊಂದನ್ನು ನೀಡಿದ್ದಾರೆ. ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿರುವ ಪುರಾತನ ದೇವಾಲಯದಲ್ಲಿ ಪ್ರಧಾನ ಅರ್ಚಕರ ಪರವಾಗಿ, ಅಯೋಧ್ಯೆಯ ರಾಮಮಂದಿರಕ್ಕೆ ಕೊಂಡೊಯ್ಯಲು ಬುಟ್ಟಿಯಲ್ಲಿ ಪ್ರಧಾನಿಗೆ ಉಡುಗೊರೆಯನ್ನು ನೀಡಲಾಯಿತು.

ರಂಗನಾಥಸ್ವಾಮಿ ದೇವಾಲಯವನ್ನು ವಿಜಯನಗರ ಕಾಲದಲ್ಲಿ (1336-1565) ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ತಮಿಳಿನಲ್ಲಿ “ನಮ್ಮ ದೇವರು” ಮತ್ತು “ಸುಂದರ ವರ” ಎಂದು ಕರೆಯಲ್ಪಡುವ ನಾಮ್ ಪೆರುಮಾಳ್ ಮತ್ತು ಅಳಗಿಯ ಮನವಾಳನ್ ಎಂದು ಕರೆಯಲ್ಪಡುವ ದೇವತೆಯ ವಾಸಸ್ಥಾನ, ಭವ್ಯವಾದ ರಂಗನಾಥಸ್ವಾಮಿ ದೇವಾಲಯವು ಭಗವಾನ್ ವಿಷ್ಣುವಿನ ಒರಗಿರುವ ಭಂಗಿಯಲ್ಲಿರುವ ಭಗವಾನ್ ರಂಗನಾಥನ ನೆಲೆಯಾಗಿದೆ. ಶ್ರೀರಂಗಂ ನಂತರ ಪ್ರಧಾನಿ ರಾಮೇಶ್ವರಂ ತಲುಪಿ ಶ್ರೀ ಅರುಲ್ಮಿಗು ರಾಮನಾಥಸ್ವಾಮಿ ದೇವಸ್ಥಾನದಲ್ಲಿ ದರ್ಶನ ಮತ್ತು ಪೂಜೆ ನೆರವೇರಿಸಲಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:44 pm, Sat, 20 January 24

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್