ಬೆಂಗಳೂರಿಗೆ ಆಗಮಿಸಿ ಭಟ್ಟರ ಮಾರೇನಹಳ್ಳಿಗೆ ತೆರಳುವಾಗ ತಮಗಾಗಿ ಕಾಯುತ್ತಿದ್ದ ಜನರತ್ತ ಕೈಬೀಸಿದ ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರಿಗೆ ಆಗಮಿಸಿ ಭಟ್ಟರ ಮಾರೇನಹಳ್ಳಿಗೆ ತೆರಳುವಾಗ ತಮಗಾಗಿ ಕಾಯುತ್ತಿದ್ದ ಜನರತ್ತ ಕೈಬೀಸಿದ ಪ್ರಧಾನಿ ನರೇಂದ್ರ ಮೋದಿ

ಅರುಣ್​ ಕುಮಾರ್​ ಬೆಳ್ಳಿ
|

Updated on:Jan 19, 2024 | 3:49 PM

ಪ್ರಧಾನಿ ಮೋದಿ ಭಟ್ಟರ ಮಾರೇನಹಳ್ಳಿಯಲ್ಲಿ ಜಾಗತಿಕ ಏರೋಸ್ಪೇಸ್ ಬೋಯಿಂಗ್ ನೂತನ ಕ್ಯಾಂಪಸ್ ಉದ್ಘಾಟಿಸಿಲಿದ್ದಾರೆ. ಅದರ ಜೊತೆಗೆ ವಿಶ್ವದಲ್ಲ್ಲೇ ಅತಿದೊಡ್ಡದು ಎನ್ನಲಾಗಿರುವ ಹೈ-ಟೆಕ್ ಏರೋಸ್ಪೇಸ್ ಪಾರ್ಕನ್ನು ಸಹ ಪ್ರಧಾನಿ ಲೋಕಾರ್ಪಣೆ ಮಾಡಲಿದ್ದಾರೆ.

ಬೆಂಗಳೂರು: ಈಗಾಗಲೇ ವರದಿಯಾಗಿರುವ ಹಾಗೆ ಮಹಾರಾಷ್ಟ್ರದ ಸೋಲಾಪರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ಸೇನೆಯ ಚಾಪರ್ ನಲ್ಲಿ ಕಲಬುರಗಿಗೆ (Kalaburagi) ವಾಪಸ್ಸಾಗಿ; ಬೆಳಗ್ಗೆ ಅವರು ದೆಹಲಿಯಿಂದ ಆಗಮಿಸಿದ್ದ ಭಾರತೀಯ ವಾಯು ಸೇನೆಯ ವಿಶೇಷ ವಿಮಾನದಲ್ಲಿ (special aircraft) ಬೆಂಗಳೂರಿಗೆ ಆಗಮಿಸಿದರು. ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೊರಬಂದ ನಂತರ ಅವರಿಗಾಗಿ ಕಾಯುತ್ತಿದ್ದ ಮತ್ತು ದೆಹಲಿಯಲ್ಲಿ ನೋಂದಣಿಯಾಗಿರುವ ಕಾರು ಹತ್ತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಭಟ್ಟರ ಮಾರೇನಹಳ್ಳಿಗೆ ತೆರಳುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ವಿಮಾನ ನಿಲ್ದಾಣದ ಹೊರಭಾಗದಲ್ಲಿ ತಮ್ಮನ್ನು ನೋಡಲು ಕಾಯುತ್ತಿದ್ದ ಜನರೆಡೆ ಮುಗುಳ್ನಗುತ್ತಾ ಕೈ ಬೀಸುವುದನ್ನು ಸಹ ವಿಡಿಯೋದಲ್ಲಿ ನೋಡಬಹುದು. ಪ್ರಧಾನಿ ಮೋದಿ ಭಟ್ಟರ ಮಾರೇನಹಳ್ಳಿಯಲ್ಲಿ ಜಾಗತಿಕ ಏರೋಸ್ಪೇಸ್ ಬೋಯಿಂಗ್ ನೂತನ ಕ್ಯಾಂಪಸ್ ಉದ್ಘಾಟಿಸಿಲಿದ್ದಾರೆ. ಅದರ ಜೊತೆಗೆ ವಿಶ್ವದಲ್ಲೇ ಅತಿದೊಡ್ಡದು ಎನ್ನಲಾಗಿರುವ ಹೈ-ಟೆಕ್ ಏರೋಸ್ಪೇಸ್ ಪಾರ್ಕನ್ನು ಸಹ ಪ್ರಧಾನಿ ಲೋಕಾರ್ಪಣೆ ಮಾಡಲಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Jan 19, 2024 03:15 PM