Ram Temple Inauguration: ರಾಮಲಲ್ಲಾ ಪ್ರಾಣ ಪ್ರತಿಷ್ಠಾ ದಿನವಾದ ಜ. 22ರಂದು ಷೇರು ಮಾರುಕಟ್ಟೆಗೆ ಇದೆಯಾ ರಜೆ?

Stock Market Holiday: ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಇದ್ದು ಕೇಂದ್ರದ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಇದೆ. ಅಂದು ಷೇರು ಮಾರುಕಟ್ಟೆಗೆ ರಜೆ ಇದೆ ಎನ್ನುವ ಸುದ್ದಿ ತಪ್ಪು. ಸೋಮವಾರ ಯಥಾ ಪ್ರಕಾರ ಬಿಸಿನೆಸ್ ಇರುತ್ತದೆ. ಶನಿವಾರ ಷೇರುಪೇಟೆಗೆ ರಜೆಯಾದರೂ ಜನವರಿ 20ರಂದು ಎರಡು ಲೈವ್ ಟ್ರೇಡಿಂಗ್ ಸೆಷನ್​ಗಳು ಬೇರೆ ಕಾರಣಕ್ಕ ನಡೆಯುತ್ತಿವೆ.

Ram Temple Inauguration: ರಾಮಲಲ್ಲಾ ಪ್ರಾಣ ಪ್ರತಿಷ್ಠಾ ದಿನವಾದ ಜ. 22ರಂದು ಷೇರು ಮಾರುಕಟ್ಟೆಗೆ ಇದೆಯಾ ರಜೆ?
ಷೇರು ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 19, 2024 | 9:00 AM

ನವದೆಹಲಿ, ಜನವರಿ 19: ಅಯೋಧ್ಯೆಯ ರಾಮಜನ್ಮಭೂಮಿ ಎನ್ನಲಾದ ಸ್ಥಳದಲ್ಲಿ ನಿರ್ಮಿಸಲಾಗುತ್ತಿರುವ ಬೃಹತ್ ರಾಮ ಮಂದಿರದಲ್ಲಿ ಬಾಲರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾ (Ram Lalla Pran Pratishta) ಕಾರ್ಯಕ್ರಮ ಜನವರಿ 22ರಂದು ನೆರವೇರುತ್ತಿದೆ. ಅಂದು ಕೇಂದ್ರ ಸರ್ಕಾರದ ಎಲ್ಲಾ ಕಚೇರಿಗಳಿಗೆ ಅರ್ಧದಿನ ರಜೆ ನೀಡಲಾಗಿದೆ. ಮಧ್ಯಾಹ್ನ 2:30ರವರೆಗೂ ಕಚೇರಿಗಳು ಬಂದ್ ಆಗಿರುತ್ತವೆ. ಉತ್ತರಪ್ರದೇಶ ಸರ್ಕಾರ ಅಂದು ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ರಜೆ ಘೋಷಿಸಿದೆ. ಆದರೆ, ಷೇರು ವಿನಿಮಯ ಮಾರುಕಟ್ಟೆಗಳಾದ ಬಿಎಸ್​ಇ ಮತ್ತು ಎನ್​ಎಸ್​ಇ (stock markets) ಜನವರಿ 22ರಂದು ಕಾರ್ಯನಿರ್ವಹಿಸುತ್ತವಾ ಎಂಬ ಗೊಂದಲ ಬಹಳ ಮಂದಿಗೆ ಇದೆ. ಆದರೆ, ಜನವರಿ 22ರಂದು ಷೇರುಪೇಟೆಗೆ ರಜೆ ಇರುವುದಿಲ್ಲ. ಸೋಮವಾರ ಆಗಿರುವ ಅಂದು ಷೇರು ಮಾರುಕಟ್ಟೆಯಲ್ಲಿ ಯಥಾ ಪ್ರಕಾರ ಬಿಸಿನೆಸ್ ನಡೆಯುತ್ತದೆ.

ಜನವರಿ 20, ಶನಿವಾರದಂದು ಷೇರುಪೇಟೆಗೆ ರಜೆ ಇಲ್ಲವಾ?

ಷೇರು ಮಾರುಕಟ್ಟೆ ವಾರದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ತೆರೆದಿರುತ್ತದೆ. ಶನಿವಾರ ಮತ್ತು ಭಾನುವಾರ ರಜೆ. ಆದರೆ, ಈ ಶನಿವಾರ, ಅಂದರೆ ನಾಳೆ (ಜ. 20) ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಮತ್ತು ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಎರಡು ಸ್ಪೆಷಲ್ ಲೈವ್ ಟ್ರೇಡಿಂಗ್ ಸೆಷನ್ಸ್ ನಡೆಸುತ್ತಿವೆ. ಈ ಲೈವ್ ಸೆಷನ್ಸ್ ಮೂಲಕ ಡಿಆರ್ ಸೈಟ್​ಗೆ ವರ್ಗಾಯಿಸುವ ಉದ್ದೇಶ ಇದೆ.

ಮೊದಲ ಸೆಷನ್ ಬೆಳಗ್ಗೆ 9:15ಕ್ಕೆ ಆರಂಭವಾಗಿ 10 ಗಂಟೆಗೆ ಮುಗಿಯುತ್ತದೆ. ಎರಡನೇ ಸೆಷನನ್ 11:30ರಿಂದ 12:30ರವರೆಗೂ ಇರುತ್ತದೆ.

ಇದನ್ನೂ ಓದಿ: 10 Years of India: ಕಳೆದ 10 ವರ್ಷದಲ್ಲಿ ದೇಶದ ಆರ್ಥಿಕ, ಹಣಕಾಸು ವ್ಯವಸ್ಥೆಯಲ್ಲಿ ಆದ ಮಹತ್ವದ ಪರಿವರ್ತನೆಗಳಿವು…

2024ರಲ್ಲಿ ಷೇರು ಮಾರುಕಟ್ಟೆಗೆ ಇರುವ ರಜಾ ದಿನಗಳು

ಶನಿವಾರ ಮತ್ತು ಭಾನುವಾರ ಷೇರು ಮಾರುಕಟ್ಟೆಗೆ ನಿಯಮಿತವಾಗಿ ರಜೆ ಇರುತ್ತದೆ. ಅದು ಬಿಟ್ಟು ಈ ವರ್ಷ ಇನ್ನೂ ಹಲವು ರಜೆಗಳಿವೆ. ಅವುಗಳ ಪಟ್ಟಿ ಇಲ್ಲಿದೆ:

  1. ಜನವರಿ 26: ಗಣರಾಜ್ಯೋತ್ಸವ
  2. ಮಾರ್ಚ್ 8: ಮಹಾಶಿವರಾತ್ರಿ
  3. ಮಾರ್ಚ್ 25: ಹೋಳಿ ಹಬ್ಬ
  4. ಮಾರ್ಚ್ 29: ಗುಡ್ ಫ್ರೈಡೇ
  5. ಏಪ್ರಿಲ್ 11: ಈದ್ ಉಲ್ ಫಿತರ್ ಹಬ್ಬ
  6. ಏಪ್ರಿಲ್ 17: ರಾಮ ನವಮಿ
  7. ಮೇ 1: ಕಾರ್ಮಿಕರ ದಿನ
  8. ಜೂನ್ 17: ಬಕ್ರೀದ್
  9. ಜುಲೈ 17: ಮೊಹರಂ
  10. ಆಗಸ್ಟ್ 15: ಸ್ವಾತಂತ್ರ್ಯ ದಿನ
  11. ಅಕ್ಟೋಬರ್ 2: ಗಾಂಧಿ ಜಯಂತಿ
  12. ನವೆಂಬರ್ 1: ದೀಪಾವಳಿ ಹಬ್ಬ
  13. ನವೆಂಬರ್ 15: ಗುರುನಾನಕ್ ಜಯಂತಿ
  14. ಡಿಸೆಂಬರ್ 25: ಕ್ರಿಸ್ಮಸ್ ಹಬ್ಬ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ