ಜಾರ್ಖಂಡ್, ಜುಲೈ 14: ದೇಶಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮೂಹ ರಾಷ್ಟ್ರೀಯ ಸ್ವಯಂಸೇವಕ ಸಂಘ (Rashtriya Swayamsevak Sangh) ವನ್ನು ಸೇರುತ್ತಿದ್ದಾರೆ. ಪ್ರತಿ ವರ್ಷ ಒಂದು ಲಕ್ಷಕ್ಕೂ ಹೆಚ್ಚು ಜನರು ಆರ್‌ಎಸ್‌ಎಸ್ ಸೇರುವ ಮೂಲಕ ಸಂಪರ್ಕ ಸಾಧಿಸುತ್ತಿದ್ದಾರೆ ಎಂದು ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನೀಲ್ ಅಂಬೇಕರ್ (Sunil Ambekar) ಹೇಳಿದ್ದಾರೆ. ರಾಂಚಿಯಲ್ಲಿ ನಡೆದ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷದಲ್ಲಿ ಜೂನ್ ಅಂತ್ಯದವರೆಗೆ ಒಟ್ಟು 66, 529 ಜನರು ಸಂಪರ್ಕಿಸುವ ಮೂಲಕ ಸಂಘಕ್ಕೆ ಸೇರಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘವು 2012ರಲ್ಲಿ ‘ಜಾಯಿನ್ ಆರ್‌ಎಸ್‌ಎಸ್’ ಅಡಿಯಲ್ಲಿ ಆನ್ಲೈನ್ ವೆಬ್ಸೈಟ್ ಆರಂಭಿಸಿತ್ತು. ಆ ಮೂಲಕ ಪ್ರತಿ ವರ್ಷ 1 ರಿಂದ 1.25 ಲಕ್ಷ ಜನರು ಆನ್ ಲೈನ್ ಮೂಲಕ ಸಂಘದ ವಿವಿಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈ ವರ್ಷದಿಂದ ಸಂಘ ತರಬೇತಿಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ದೇಶಾದ್ಯಂತ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸ್ವಯಂಸೇವಕರಿಗಾಗಿ ಈ ವರ್ಷ ಒಟ್ಟು 72 ವರ್ಗಗಳು (ಸಂಘ ಶಿಕ್ಷಾ ವರ್ಗ-60, ಕಾರ್ಯಕರ್ತ ವಿಕಾಸ ವರ್ಗ-1-11, ಕಾರ್ಯಕರ್ತ ವಿಕಾಸ ವರ್ಗ-2-1) ನಡೆಸಲಾಗಿದ್ದು, ಇದರಲ್ಲಿ ಒಟ್ಟು 20,615 ಜನರು ತರಬೇತಿ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Mohan Bhagwat: ಮಣಿಪುರಕ್ಕೆ ಆದ್ಯತೆ ನೀಡಬೇಕು, ಹಿಂಸೆ ನಿಲ್ಲಿಸಬೇಕು; ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
40 ರಿಂದ 65 ವರ್ಷ ವಯಸ್ಸಿನವರಿಗಾಗಿ ನಡೆಸಿದ 18 ವರ್ಗಗಳಲ್ಲಿ 3335 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಳೆದ ವರ್ಷ ನಡೆದ ಪ್ರಾಥಮಿಕ ಶಿಕ್ಷಣ ವರ್ಗಗಳಲ್ಲಿ ಒಂದು ಲಕ್ಷ ಹೊಸ ಜನರು ತರಬೇತಿ ಪಡೆದುಕೊಂಡಿದ್ದಾರೆ. ಇಂತಹ ಹೊಸ ಸಂಯೋಜನೆಯಲ್ಲಿ ಮೊದಲ ಬಾರಿಗೆ, ದೇಶಾದ್ಯಂತ ಸಾಮಾನ್ಯ ಸ್ವಯಂಸೇವಕರಿಗೆ ಮೂರು ದಿನಗಳ ಪೂರ್ವಸಿದ್ಧತಾ ವರ್ಗವನ್ನು ಆಯೋಜಿಸಲಾಗುತ್ತಿದೆ. ಇದರಲ್ಲಿ ಪ್ರಾಥಮಿಕದಿಂದ ಎರಡು ಪಟ್ಟು ಯುವಕರು ಭಾಗವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
2025 ರ ವಿಜಯದಶಮಿಯ ವೇಳೆಗೆ ಸಂಘಕ್ಕೆ 100 ವರ್ಷಗಳು ಪೂರ್ಣಗೊಳ್ಳುತ್ತವೆ. ದೇಶದಲ್ಲಿ ಸಂಘ ಕಾರ್ಯವನ್ನು ವಿಸ್ತರಿಸಲು ನಾವು ಗ್ರಾಮೀಣ ಪ್ರದೇಶಗಳಲ್ಲಿನ ಎಲ್ಲಾ ಮಂಡಲಗಳಲ್ಲಿ ಮತ್ತು ನಗರ ಪ್ರದೇಶಗಳಲ್ಲಿನ ಎಲ್ಲಾ ವಸತಿಗಳಲ್ಲಿ ದೈನಂದಿನ ಶಾಖೆಗಳ ಗುರಿಯನ್ನು ಹೊಂದಿದ್ದೇವೆ.
ಮಾರ್ಚ್ 2024 ರ ಹೊತ್ತಿಗೆ, ದೇಶದ 58981 ಮಂಡಲಗಳಲ್ಲಿ, 36823 ಮಂಡಲಗಳಲ್ಲಿ ದೈನಂದಿನ ಶಾಖೆಗಳನ್ನು ಹೊಂದಿದ್ದು, ನಗರ ಪ್ರದೇಶಗಳಲ್ಲಿನ 23649 ವಸತಿಗಳಲ್ಲಿ, 14645 ವಸತಿಗಳಲ್ಲಿ ಸಂಘ ಕಾರ್ಯವನ್ನು ಹೊಂದಿದೆ. ಪ್ರಸ್ತುತ, ದೇಶದಲ್ಲಿ 73117 ದೈನಂದಿನ ಶಾಖೆಗಳು ಮತ್ತು 27717 ಸಾಪ್ತಾಹಿಕ ಮಿಲನಗಳಿವೆ.
ಇದನ್ನೂ ಓದಿ: ವಿಜಯಪುರದ ಇಂಚಗೇರಿ ಮಠಕ್ಕೆ ಭೇಟಿ ನೀಡಿದ ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್
ಎಲ್ಲಿ ಯಾವುದೇ ಶಾಖೆಯ ಕೆಲಸ ಅಥವಾ ಸಂಪರ್ಕವಿಲ್ಲವೂ ಅಂತಹ 158532 ಗ್ರಾಮಗಳಲ್ಲಿ, ಸಂಘವು ಸಕಾರಾತ್ಮಕ ಸಂದೇಶಗಳನ್ನು, ಆಧ್ಯಾತ್ಮಿಕ ಆಲೋಚನೆಗಳನ್ನು, ಸಂತರ ಸಂದೇಶವನ್ನು ಜಾಗರಣ್ ನಿಯತಕಾಲಿಕೆಗಳ ಮೂಲಕ ಜನರಿಗೆ ಹರಡುತ್ತಿದೆ. ಶ್ರೀ ರಾಮ ಜನ್ಮಭೂಮಿ ಅಕ್ಷತ್ ವಿತರಣಾ ಅಭಿಯಾನದ ಸಮಯದಲ್ಲಿ, ಸ್ವಯಂಸೇವಕರು 15 ದಿನಗಳಲ್ಲಿ ದೇಶದ 45 ಲಕ್ಷ ಗ್ರಾಮಗಳಿಗೆ ಭೇಟಿ ನೀಡಿದ್ದರು.
ಮುಂಬರುವ ಯೋಜನೆಯ ಬಗ್ಗೆ ಮಾತನಾಡಿದ ಅವರು, ಈ ವರ್ಷ ಪುಣ್ಯಶ್ಲೋಕ್ ಅಹಿಲ್ಯಾ ದೇವಿ ಹೋಳ್ಕರ್ ಅವರ ತ್ರಿಶತಮಾನೋತ್ಸವದ ವರ್ಷವಾಗಿದೆ. ಪುಣ್ಯಶ್ಲೋಕ್ ಅಹಿಲ್ಯಾ ದೇವಿ ತನ್ನ ಜೀವನದಲ್ಲಿ ಪ್ರತಿಕೂಲ ಪರಿಸ್ಥಿತಿಗಳ ಹೊರತಾಗಿಯೂ ಆದರ್ಶವನ್ನು ಸ್ಥಾಪಿಸಿದವರು. ಅವರ ಜೀವನ ಸಂದೇಶ ಮತ್ತು ಜೀವನ ಆದರ್ಶಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸ್ವಯಂಸೇವಕರು ವರ್ಷವಿಡೀ ಸಮಾಜದಲ್ಲಿ ಕೆಲಸ ಮಾಡುತ್ತಾರೆ. ಇದು ಮೇ 31ರಂದು ಇಂದೋರ್ನಿಂದ ಪ್ರಾರಂಭವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಂಚಿಯಲ್ಲಿ ನಡೆದ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಸಭೆಯಲ್ಲಿ ಸಂಘಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ. ಜಾರ್ಖಂಡ್ ಪ್ರದೇಶ ಕಾಂಗ್ರೆಸ್ ಸಮಿತಿ (ಜೆಪಿಸಿ) ಮುಖ್ಯಸ್ಥ ಪ್ರದೀಪ್ ಜೋಶಿ, ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪ್ರಧಾನ ಕಾರ್ಯದರ್ಶಿ ರಾಜ್ಯ ಉಸ್ತುವಾರಿ ನರೇಂದ್ರ ಸಿಂಗ್ ತೋಮರ್ ಮತ್ತು ಪಕ್ಷದ ಇತರ ಹಿರಿಯ ನಾಯಕರು ಭಾಗವಹಿಸಿದ್ದರು.
ಅಖಿಲ ಭಾರತೀಯ ಪ್ರಾಂತ ಪ್ರಚಾರಕ್ ಬೈಠಕ್ (ಜುಲೈ 12,13,14) ರಾಂಚಿಯ ಸರಲಾ ಬಿರ್ಲಾ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿತ್ತು. ಪರಸ್ಪರ ಚರ್ಚೆಗಾಗಿ ವಿವಿಧ ಸಂಸ್ಥೆಗಳ ಸಮನ್ವಯ ಸಭೆ ಆಗಸ್ಟ್ 31, ಸೆಪ್ಟೆಂಬರ್ 1, 2024 ರಂದು ಕೇರಳದ ಪಾಲಕ್ಕಾಡ್ಲ್ಲಿ ನಡೆಯಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:26 pm, Sun, 14 July 24